ಸಾಹಿತ್ಯ ಪ್ರಿಯರೇ , ಸಹೃದಯ ಗೆಳೆಯರೇ , ನಿಮ್ಮೆಲ್ಲರಿಗೂ ನಿಮ್ಮ ಪ್ರೀತಿಯ ಗೆಳೆಯ ಲಿಂಗೇಶ್ ಹುಣಸೂರು ಮಾಡುವ ನಮಸ್ಕಾರಗಳು ಹಾಗು ವಿನಮ್ರ ಮನವಿ .
* ನನ್ನ ಬದುಕಿನ ಈವರೆವಿಗಿನ ಅನುಭವಗಳು
, ಕನಸುಗಳು ,ನೆನಪುಗಳು ಎಲ್ಲವನ್ನು ಒಟ್ಟುಗೂಡಿಸಿ "ಬಿಂದುವಿನಿಂದ ಅನಂತದೆಡೆಗೆ " ಕವನ ಸಂಕಲ ರೂಪುಗೊಂಡಿದೆ .
* ನಿಮ್ಮಿಂದ ಹೊರತಾದ ನೆನಪುಗಳು
, ಕನಸುಗಳು , ಕಲ್ಪನೆಗಳು ನನ್ನ ಬದುಕಿನಲ್ಲಿ ಯಾವುದೂ ಇಲ್ಲ . ಹಾಗಾಗೆ ನನ್ನೆಲ್ಲಾ ಗೆಳೆಯರ ಅಧಮ್ಯ ಪ್ರೀತಿಗೆ ಈ ಕೃತಿಯನ್ನು ಸಮರ್ಪಿಸಿದ್ದೇನೆ .
* ಇಲ್ಲಿ ಬಿಟ್ಟು ಹೋದವರ ಬಗೆಗೆ ಕಾಡುವ ನೆನಪುಗಳಿವೆ.,
ಉಳಿದು ಕೊಂಡವರ ಬಗೆಗೆ ಪ್ರೀತಿ ಇದೆ , ಗೆಳೆಯರ ಬಗೆಗೆ ಕಾಳಜಿ ಇದೆ , ಸಮಾಜದ ಬಗೆಗೆ ಕಳಕಳಿ ಇದೆ , ಪ್ರೀತಿಯ ಪಿಸುಮಾತುಗಳಿವೆ , ಬದುಕಿಗೆ ಸ್ಪೂರ್ತಿಯ ಸಾಲುಗಳಿವೆ , ಸುಂದರ ಕಲ್ಪನೆಗಳಿವೆ , ಕನಸುಗಳ ಚಿತ್ತಾರವಿದೆ ... ಒಟ್ಟಿನಲ್ಲಿ ನೀವು ನಿಮ್ಮನ್ನೊಮ್ಮೆ ಈ ಕವಿತೆಗಳ ಕನ್ನಡಿಯಲ್ಲಿ ಅನಾರಣ ಮಾಡಿಕೊಳ್ಳಬಹುದು .
*ನಾಡಿನ ಖ್ಯಾತ ವಿಮರ್ಶಕರಾದ ಡಾ//ಬೈರಮಂಗಲ ರಾಮೇಗೌಡ ಅವರು ಮುನ್ನುಡಿ ಬರೆದಿದ್ದಾರೆ , ಖ್ಯಾತ ಸಾಹಿತಿ ಶ್ರೀ ದ್ವಾರನಕುಂಟೆ ಪಾತಣ್ಣ ಅವರು ಬೆನ್ನುಡಿ ಬರೆದಿದ್ದಾರೆ .
* ಇವೆಲ್ಲದಕ್ಕೂ ಒಂದು ಬೆಲೆ ಇದೆ ಅದು
ನಿಮ್ಮ ಪ್ರೀತಿ. ನಿಮ್ಮಗಳ ಪ್ರೀತಿಗೆ , ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ?!ಆದರೂ ನಮ್ಮ ಮುಂದಿನ ಸಮಾಜಮುಖಿ ಕನಸುಗಳ ಸಾಕಾರಕ್ಕೆ ೧೦೦ ರೂ ಎಂದು ನಿಗಧಿ ಮಾಡಿದ್ದೇವೆ
.
*ಈ
ಕೃತಿಯಿಂದ ಬರುವ ಹಣದಲ್ಲಿ " ನಾವು ಮತ್ತು ನಮ್ಮೂರು
" ಎಂಬ ಪುಸ್ತಕ ಸರಣಿಯನ್ನು ಗೆಳೆಯರೆಲ್ಲಾ ಕೂಡಿ ಪ್ರಾರಂಭಿಸುತ್ತಿದ್ದೇವೆ. ಪುಸ್ತಕಗಳನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ನೀಡಲಾಗುವುದು .
* ರಾಜ್ಯದ ಅಂಧ
ವಿಧ್ಯಾರ್ಥಿಗಳ ಸಾಹಿತ್ಯಿಕ ಆಸಕ್ತಿಯನ್ನು ಉತ್ತೇಜಿಸಲು ಈ ಕವನ ಸಂಕಲನದ ಮತ್ತು ಪ್ರಕಟಗೊಳ್ಳುವ ಉಚಿತ ಪುಸ್ತಕ ದ ಧ್ವನಿ ಪಟ್ಯ ಮಾಡಿ ಉಚಿತವಾಗಿ ಅಂಧ ಮಕ್ಕಳ ಶಾಲೆಗಳಿಗೆ ಒದಗಿಸಿ ,
ಸಂವಾದ ಕ್ಕೆ ಅವಕಾಶ ಕಲ್ಪಿಸುವುದು .
* ಮೊದಲಿಗೆ ಕರ್ನಾಟಕ ನಾಡು ನುಡಿ ಬಗೆಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ೧೦೦೦ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಪ್ರಕಟಣೆ .
*ಅತಿ
ಹೆಚ್ಚು ಪುಸ್ತಕ ಕೊಂಡು ಈ ಜ್ಞಾನ ದಾಸೋಹ ಕನಸಿನಲ್ಲಿ ಪಾಲ್ಗೊಂಡು , ಅಂಧ ಮಕ್ಕಳ ಸಾಹಿತ್ಯ ಪ್ರೀತಿಗೆ ಉಚಿತ ದ್ವನಿ ಪಟ್ಯ ಉಡುಗೊರೆ ಕೊಡುವ ಸಹೃದಯರ ಹೆಸರನ್ನು , ಉಚಿತ ಪುಸ್ತಕ ಹಾಗು ಸಿಡಿ ಯಲ್ಲಿ ಮುದ್ರಿಸಿ , ಅವರ ಸೇವೆಯನ್ನು ನೆನೆಯಲಾಗುವುದು .
* ಪ್ರತಿ ವರ್ಷ ಒಂದು ಪುಸ್ತಕವನ್ನು ಈ
ಯೋಜನೆ ಯಡಿಯಲಿ ಪ್ರಕಟಿಸಲಾಗುವುದು
* ಆತ್ಮಿಯರೇ ಹೆಚ್ಹು ಹೆಚ್ಚು ಪುಸ್ತಕ ಕೊಂಡುಕೊಳ್ಳಿ
, ನಿಮ್ಮ ಗೆಳೆಯರಿಗೂ ತಿಳಿಸಿ , ಉಡುಗೊರೆ ನೀಡಿ , ಆ
ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಮ್ಮ ಕನ್ನಡ ಮಕ್ಕಳ ಜ್ಞಾನ ವೃದ್ದಿಸುವ ಈ ನಮ್ಮ ಪುಟ್ಟ ಪ್ರಯತ್ನದಲ್ಲಿ , ನೀವೂ ಪಾಲ್ಗೊಳ್ಳಿ , ಆ ಮೂಲಕ ಕನ್ನಡ ಕೆಲಸ, ಸಮಾಜ ಸೇವೆ ಯಲ್ಲಿ ನಿಮ್ಮದು ಹೆಜ್ಜೆ ಗುರುತಿರಲಿ .
* ನಮ್ಮ ಈ
ಕನಸುಗಳ ಬಗೆಗೆ ನಿಮ್ಮ ಅಭಿಪ್ರಾಯ , ಸಲಹೆ ಗಳನ್ನು ತಪ್ಪದೇ ತಿಳಿಸಿ .
ಚುಕ್ಕಿ ಗೆಳೆಯರ ಬಳಗದ ಪರವಾಗಿ ,
ನಿಮ್ಮವ
ಲಿಂಗೇಶ್ ಹುಣಸೂರ್
ಮಿಂಚೆ :lingeshkc9@gmail.com
ವೆಬ್ :http://lingeshhunsur.blogspot.in
ನಿಸ್ತಂತು ದೂ
:9964438393
ಅಂಚೆ ವಿಳಾಸ : ಲಿಂಗೇಶ್ ಹುಣಸೂರು ,
ಅಂಚೆ ಸಹಾಯಕ , ಎ ಎಸ ವಿ ವಿ ಏನ್ ಭವನ ,
ಎಸ .ಬಿ ಎಂ ಪ್ರಧಾನ ಕಚೇರಿ ಎದುರು ,
ಬೆಂಗಳೂರು -೫೬೦೦೦೯
ಅಂಚೆ ಮೂಲಕ ಪ್ರತಿಗೆ ೧೨೦ ರು ಗಳನ್ನೂ ಈ -ಎಂ ಓ ಮಾಡಿ ಮಾಹಿತಿ ನೀಡಿ .
ಧನ್ಯವಾದಗಳು