ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "
Showing posts with label ಕವಿತೆಗಳು. Show all posts
Showing posts with label ಕವಿತೆಗಳು. Show all posts

Thursday, March 31, 2016

ವಿನಮ್ರ ಮನವಿ

ಸಾಹಿತ್ಯ  ಪ್ರಿಯರೇ , ಸಹೃದಯ ಗೆಳೆಯರೇ , ನಿಮ್ಮೆಲ್ಲರಿಗೂ ನಿಮ್ಮ ಪ್ರೀತಿಯ ಗೆಳೆಯ ಲಿಂಗೇಶ್ ಹುಣಸೂರು  ಮಾಡುವ ನಮಸ್ಕಾರಗಳು ಹಾಗು ವಿನಮ್ರ ಮನವಿ .

* ನನ್ನ  ಬದುಕಿನ  ಈವರೆವಿಗಿನ ಅನುಭವಗಳು , ಕನಸುಗಳು ,ನೆನಪುಗಳು  ಎಲ್ಲವನ್ನು ಒಟ್ಟುಗೂಡಿಸಿ "ಬಿಂದುವಿನಿಂದ ಅನಂತದೆಡೆಗೆ " ಕವನ ಸಂಕಲ ರೂಪುಗೊಂಡಿದೆ .

* ನಿಮ್ಮಿಂದ ಹೊರತಾದ ನೆನಪುಗಳು , ಕನಸುಗಳು , ಕಲ್ಪನೆಗಳು  ನನ್ನ ಬದುಕಿನಲ್ಲಿ ಯಾವುದೂ  ಇಲ್ಲ . ಹಾಗಾಗೆ ನನ್ನೆಲ್ಲಾ ಗೆಳೆಯರ ಅಧಮ್ಯ ಪ್ರೀತಿಗೆ ಕೃತಿಯನ್ನು  ಸಮರ್ಪಿಸಿದ್ದೇನೆ .

* ಇಲ್ಲಿ ಬಿಟ್ಟು ಹೋದವರ ಬಗೆಗೆ ಕಾಡುವ ನೆನಪುಗಳಿವೆ., ಉಳಿದು ಕೊಂಡವರ ಬಗೆಗೆ ಪ್ರೀತಿ ಇದೆ , ಗೆಳೆಯರ ಬಗೆಗೆ ಕಾಳಜಿ ಇದೆ , ಸಮಾಜದ ಬಗೆಗೆ ಕಳಕಳಿ ಇದೆ , ಪ್ರೀತಿಯ ಪಿಸುಮಾತುಗಳಿವೆ , ಬದುಕಿಗೆ ಸ್ಪೂರ್ತಿಯ ಸಾಲುಗಳಿವೆ , ಸುಂದರ ಕಲ್ಪನೆಗಳಿವೆ , ಕನಸುಗಳ ಚಿತ್ತಾರವಿದೆ ... ಒಟ್ಟಿನಲ್ಲಿ ನೀವು ನಿಮ್ಮನ್ನೊಮ್ಮೆ ಕವಿತೆಗಳ ಕನ್ನಡಿಯಲ್ಲಿ ಅನಾರಣ ಮಾಡಿಕೊಳ್ಳಬಹುದು .

*ನಾಡಿನ ಖ್ಯಾತ ವಿಮರ್ಶಕರಾದ ಡಾ//ಬೈರಮಂಗಲ ರಾಮೇಗೌಡ ಅವರು ಮುನ್ನುಡಿ ಬರೆದಿದ್ದಾರೆ , ಖ್ಯಾತ ಸಾಹಿತಿ ಶ್ರೀ ದ್ವಾರನಕುಂಟೆ  ಪಾತಣ್ಣ ಅವರು ಬೆನ್ನುಡಿ ಬರೆದಿದ್ದಾರೆ .

* ಇವೆಲ್ಲದಕ್ಕೂ ಒಂದು ಬೆಲೆ ಇದೆ  ಅದು ನಿಮ್ಮ ಪ್ರೀತಿ. ನಿಮ್ಮಗಳ ಪ್ರೀತಿಗೆ , ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ?!ಆದರೂ  ನಮ್ಮ ಮುಂದಿನ ಸಮಾಜಮುಖಿ ಕನಸುಗಳ ಸಾಕಾರಕ್ಕೆ ೧೦೦ ರೂ  ಎಂದು ನಿಗಧಿ ಮಾಡಿದ್ದೇವೆ .


* ಕೃತಿಯಿಂದ ಬರುವ ಹಣದಲ್ಲಿ " ನಾವು ಮತ್ತು ನಮ್ಮೂರು " ಎಂಬ ಪುಸ್ತಕ ಸರಣಿಯನ್ನು ಗೆಳೆಯರೆಲ್ಲಾ ಕೂಡಿ ಪ್ರಾರಂಭಿಸುತ್ತಿದ್ದೇವೆ. ಪುಸ್ತಕಗಳನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ನೀಡಲಾಗುವುದು .

* ರಾಜ್ಯದ ಅಂಧ ವಿಧ್ಯಾರ್ಥಿಗಳ ಸಾಹಿತ್ಯಿಕ ಆಸಕ್ತಿಯನ್ನು ಉತ್ತೇಜಿಸಲು ಕವನ ಸಂಕಲನದ  ಮತ್ತು  ಪ್ರಕಟಗೊಳ್ಳುವ ಉಚಿತ ಪುಸ್ತಕ ಧ್ವನಿ ಪಟ್ಯ   ಮಾಡಿ ಉಚಿತವಾಗಿ ಅಂಧ ಮಕ್ಕಳ ಶಾಲೆಗಳಿಗೆ ಒದಗಿಸಿ , ಸಂವಾದ ಕ್ಕೆ ಅವಕಾಶ ಕಲ್ಪಿಸುವುದು .



* ಮೊದಲಿಗೆ ಕರ್ನಾಟಕ ನಾಡು ನುಡಿ  ಬಗೆಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ೧೦೦೦ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಪ್ರಕಟಣೆ .

*ಅತಿ ಹೆಚ್ಚು ಪುಸ್ತಕ ಕೊಂಡು  ಜ್ಞಾನ ದಾಸೋಹ ಕನಸಿನಲ್ಲಿ ಪಾಲ್ಗೊಂಡು , ಅಂಧ ಮಕ್ಕಳ ಸಾಹಿತ್ಯ ಪ್ರೀತಿಗೆ ಉಚಿತ ದ್ವನಿ ಪಟ್ಯ  ಉಡುಗೊರೆ ಕೊಡುವ ಸಹೃದಯರ ಹೆಸರನ್ನು   , ಉಚಿತ ಪುಸ್ತಕ ಹಾಗು ಸಿಡಿ ಯಲ್ಲಿ ಮುದ್ರಿಸಿ , ಅವರ ಸೇವೆಯನ್ನು ನೆನೆಯಲಾಗುವುದು .

* ಪ್ರತಿ ವರ್ಷ ಒಂದು ಪುಸ್ತಕವನ್ನು ಯೋಜನೆ ಯಡಿಯಲಿ  ಪ್ರಕಟಿಸಲಾಗುವುದು 

* ಆತ್ಮಿಯರೇ ಹೆಚ್ಹು ಹೆಚ್ಚು ಪುಸ್ತಕ ಕೊಂಡುಕೊಳ್ಳಿ , ನಿಮ್ಮ ಗೆಳೆಯರಿಗೂ ತಿಳಿಸಿ , ಉಡುಗೊರೆ ನೀಡಿ , ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಮ್ಮ ಕನ್ನಡ ಮಕ್ಕಳ ಜ್ಞಾನ ವೃದ್ದಿಸುವ  ನಮ್ಮ ಪುಟ್ಟ ಪ್ರಯತ್ನದಲ್ಲಿ , ನೀವೂ ಪಾಲ್ಗೊಳ್ಳಿ , ಮೂಲಕ ಕನ್ನಡ  ಕೆಲಸ, ಸಮಾಜ ಸೇವೆ ಯಲ್ಲಿ ನಿಮ್ಮದು ಹೆಜ್ಜೆ ಗುರುತಿರಲಿ .

* ನಮ್ಮ ಕನಸುಗಳ ಬಗೆಗೆ ನಿಮ್ಮ ಅಭಿಪ್ರಾಯ , ಸಲಹೆ ಗಳನ್ನು ತಪ್ಪದೇ ತಿಳಿಸಿ .

ಚುಕ್ಕಿ ಗೆಳೆಯರ ಬಳಗದ ಪರವಾಗಿ ,

ನಿಮ್ಮವ
ಲಿಂಗೇಶ್ ಹುಣಸೂರ್
ಮಿಂಚೆ :lingeshkc9@gmail.com
ವೆಬ್ :http://lingeshhunsur.blogspot.in
ನಿಸ್ತಂತು ದೂ :9964438393

ಅಂಚೆ ವಿಳಾಸ : ಲಿಂಗೇಶ್ ಹುಣಸೂರು ,
ಅಂಚೆ ಸಹಾಯಕ , ಎಸ ವಿ ವಿ ಏನ್ ಭವನ ,
ಎಸ .ಬಿ ಎಂ ಪ್ರಧಾನ ಕಚೇರಿ ಎದುರು ,
ಬೆಂಗಳೂರು -೫೬೦೦೦೯

ಅಂಚೆ ಮೂಲಕ ಪ್ರತಿಗೆ ೧೨೦ ರು ಗಳನ್ನೂ -ಎಂ ಮಾಡಿ ಮಾಹಿತಿ ನೀಡಿ .

ಧನ್ಯವಾದಗಳು

ಚುಟುಕಗಳು

ಚುಟುಕಗಳು
                                - ಲಿಂಗೇಶ್ ಹುಣಸೂರು


೦೧. ಹಾರೈಕೆ

ಹರಸುವವರು ಹಲವರಿರಲಿ ,
ಹಾರೈಕೆ ಶುಭವ ತರಲಿ ,
ಪ್ರಾರ್ಥನೆ ಫಲಿಸುವುದು ಕಾಣ
ಒಳಗಿನ ಕಣ್ತೆರೆದು ನೋಡಾ
                               

೦೨. ಬೋನಸ್ಸು

ನಮಗೆ ಕೊಡದಿದ್ದರೂ
ನೀವು ಬೋನಸ್ಸು
ಮಾಡಬೇಡಿ ಬರುವ
ಸಂಬಳದಲಿ ಮೈನಸ್ಸು

೦೩. ಹೂ ಮಾರುವ ಹುಡುಗಿ

ಮಾರು ಮಾರು
ಹೂ ಮಾರುವ
ಹುಡುಗಿಯ ಮುಡಿಯಲ್ಲಿ
ಮಲ್ಲಿಗೆ ಗಾತ್ರದ ಹೂ  ಮಾಲೆಯಿಲ್ಲ .

೪. ಕನ್ನಡಿ ಸತ್ಯ

ಅಂತರಂಗದ ಸೌಂದರ್ಯ
ಬಚ್ಚಿಟ್ಟು  , ಹೊರಗಿನ
ನಗು ಮುಖ ತೋರಿಸಿ
ಕನ್ನಡಿ ನಿಜವನ್ನು ನುಂಗಿದೆ .

೫. ಮುತ್ತು -ಮತ್ತು -ಅಪತ್ತು

ಸಾರಾಯಿಯ ಮತ್ತು
ಆರೋಗ್ಯಕ್ಕೆ ತರುವುದು ಕುತ್ತು ,
ಮಡದಿಯ ಮುತ್ತು ,
ದೂರವಾಗಿಸುವುದು ಎಲ್ಲಾ ಅಪತ್ತು.

೬. ಮಧ್ಯಮ ವರ್ಗ

ಆರಕ್ಕೇರದೆ , ಮೂರಕ್ಕಿಳಿಯದೆ
ಅರವತ್ತರ ಆಚೆಗೆ
ಕನಸು ಕಾಣೋ
ಬಹುಸಂಖ್ಯಾತರ ವರ್ಗ

೭. ಕೈ ಕೊಡು

ಕೆಲವರಿಗೆ ಸಮಯವಿಲ್ಲ
ಮನಪುರ್ತಿ ಮಾತನಾಡಲು
ಹಾಗಾಗಿ ಕೊಡುತ್ತಾರೆ
ಕೈಯನ್ನು ಬರಿ ಕುಲುಕಲು

೮. ಪ್ರೀತಿ

ಆಶಿರ್ವದಿಸಿದ
ಎರಡು ಆತ್ಮಗಳು
ಹಂಚಿಕೊಳ್ಳುವ
ಅಧ್ಬುತ ಉಡುಗೊರೆ

೯. ಬಗೆ -ನಗೆ

ಯುಗ ಯುಗ ಕಳೆದರು
ಯುಗಾದಿ  ಮಾತ್ರ ಹೊಸ ಬಗೆ ,
ತರುವುದು ಅನುದಿನ
 ಮಾಸದ ಹೊಸ ನಗೆ

೧೦. ಶಿರಸ್ತ್ರಾಣ

 ತಲೆ ಕುತ್ತಿಗೆಯ ಮೇಲಿದ್ದರೆ
ಜೀವಕ್ಕೆ ತ್ರಾಣ
ಹಾಗಿರಲು ಧರಿಸಬೇಕು ಸದಾ
ಸವಾರಿಯಲ್ಲಿ ಶಿರ ಸ್ತ್ರಾಣ.

೧೧. ವರ್ಕ್ ಲೋಡ್

ಮನೆಯಲ್ಲಿ ಗೃಹಿಣಿಯ
ಕೆಲಸದ ವರ್ಕ್ ಲೋಡು ,
ಎಂದೂ ಮುಗಿಯದ
ಧಾರಾವಾಹಿಯ ಎಪಿಸೋಡು

೧೨. ಬೆಳೆ

ರೈತ
ಬೆಳೆ (ಕೃಷಿ )ದರೆ ,
ದೇಶ
ಬೆಳೆ (ಏಳ್ಗೆ )ಯುತ್ತದೆ

೧೩. ಸಹೃದಯವಂತರು

ಉದ್ಘಾಟನೆಗೆ
ಸಾಲು  ಸಾಲು ಜನರು ,
ಮಧ್ಯ ದಲ್ಲೇ ಕಾಲ್ಕಿತ್ತರು
ಗಣ್ಯ ಮಹಾಶಯರು
ಕೊನೆಯಲ್ಲಿ  ಉಳಿದವರೇ
ಸಹೃದಯವಂತರು

                                - ಲಿಂಗೇಶ್ ಹುಣಸೂರು


*********************************

Monday, May 27, 2013

ಆದರೂ ಹಣತೆ ಹಚ್ಚಬೇಕು,


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//





ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//



ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//


Saturday, July 28, 2012

* ಆತ್ಮಾವಲೋಕನ *

* ಆತ್ಮಾವಲೋಕನ *



ಓ ಮನಸೇ, ನನ್ನ ಕನಸೇ,



ಏನಾಗಬೇಕೆಂದು ಬಯಸಿದ್ದೆ ನಾನು,

ಏನಾಗಿ ಹೋದೆ..?!!!



ನಾನೇ ಬರೆದ ಕವನಗಳು

ನನ್ನನ್ನ ಅಣಕಿಸುತ್ತಿವೆ/



ಬದುಕು-ಪ್ರೀತಿ-ಸಾಧನೆ ಗಳ ಬಗೆಗೆ,

ನಾ ಬರೆದ ಸಾಲುಗಳನ್ನು ತೋರಿಸಿ//



ಏನಾಗಬೇಕಿತ್ತು, ಈಗೇನಾಗಿದ್ದೇನೆ?!!!



ಓರಗೆಯವರು ಬೆಳೆದರು,

ಮೂರನೆಯವರು ಮೆರೆದರು/



ಸೋಮಾರಿತನ ಮೈ ಸೇರಿತು,

ಪ್ರೇಮ ಮನಸ್ಸೊಡೆಯಿತು/



ಕನಸುಗಳು ತಿರುಗಿಬಿದ್ದವು,

ಆಸೆಗಳು ಓಡಿಹೋದವು/



ಹಾಸಿಗೆ ಕೈ ಸೆರೆಯಾಯಿತು,

ನಿದಿರೆಯಲಿ ಜಗ ಮರೆಯಿತು/





ಈಗೇನಾಗಿದ್ದೇನೆ, ಮುಂದೇನಾಗಬೇಕು..?!!!



ಅಂದುಕೋಂಡಿದ್ದು ಆಗಲೇಬೇಕು,

ಆಗುವವರೆವಿಗೂ ದಣಿಯಲೇಬೇಕು/



ಕಂಡ ಕನಸುಗಳು ನನಸಾಗಲೇಬೇಕು,

ರಾತ್ರಿಗಳನು ಸುಟ್ಟು ಸಾಧಿಸಲೇಬೇಕು/



ನನ್ನ ಮಗು ನೆಮ್ಮದಿಯಾಗಿ ನಿದ್ರೆ ಮಾಡಬೇಕು,

ಯಶಸ್ಸು ನನ್ನ ಹುಡುಕಿಕೋಂಡು ಬರಬೇಕು/



ಬದುಕಲೇಬೇಕು ಸಾರ್ಥಕವಾಗಿ,

ಜಯಿಸಲೇಬೇಕು ಕನ್ನಡಿಗನಾಗಿ/



ನಾ ಬಯಸಿದ ಬದುಕು,

ನನ್ನದಾಗಲೇಬೇಕು/



-ಲಿಂಗೇಶ್ ಹುಣಸೂರು,

ಬಿಂದುವಿನಿಂದ ಅನಂತದೆಡೆಗೆ...

Tuesday, February 14, 2012

ಪ್ರೀತಿ ....... ನಿನಗೆಲ್ಲಿಯ ವ್ಯಾಖ್ಯಾನ ?!

ಆತ್ಮೀಯ ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭ ಹಾರೈಕೆಗಳು. 

ಪ್ರೀತಿ ಎಂದರೆ ಅದು ಒಂದು ದಿನದ ಸಂಭ್ರಮವಲ್ಲ, ಒಂದು ದಿನದ ಆಚರಣೆಯಲ್ಲ. ಅದು ನಿತ್ಯ ನಿರಂತರ ಸ್ಪೂರ್ತಿ,
ಸ್ನೇಹ, ನಂಬಿಕೆ,ಆಸರೆ,ಅಕ್ಕರೆ,ಆದರ , ಅಭಿಮಾನ ಗಳ ಚೈತನ್ಯ ,ಅದಮ್ಯ ಚೇತನ. ನನಗನಿಸಿದ ಹಾಗೆ, ನಾನು 
ಅನುಭವಿಸಿದ ಹಾಗೆ ಪ್ರೀತಿಯೆಂದರೆ ಭಾಷೆಗೆ ನಿಲುಕದ ಭಾವ ದೀಪ್ತಿ. ಎಲ್ಲಾ ಅರ್ಥಗಳ ಆಚೆಗಿನ ಅರ್ಥ ,
ಬದುಕಿನ ಚೈತನ್ಯ.



ಪ್ರೀತಿ .......
ನಿನಗೆಲ್ಲಿಯ  ವ್ಯಾಖ್ಯಾನ ?!
ಎಂದೂ ಮುಗಿಯದ ಮಧುರ ಗೀತೆ,
ಅನಂತ ಅರ್ಥಗಳ ಆಗಸ ನೀನು//


ಬಯಸುವ ಹೃದಯಗಳ,
ಮಹೋನ್ನತ ಭಾವ ನೀನು . 
ಮನಸು-ಹೃದಯ -ಆತ್ಮಗಳ,
ಸಮ್ಮಿಲನದ ಭಾಷೆ ನೀನು //




ಹೃದಯದ ಗರ್ಭದಲ್ಲಿ,
ಅಡಗಿಸಿಟ್ಟ ಮುತ್ತು ನೀನು/
ಪ್ರತಿ ಘಳಿಗೆ, ಪ್ರತಿ ಘಂಟೆ, ಪ್ರತಿ ದಿನ,
ಭಾವಿಸುವ ಭಾಂದವ್ಯ  ನೀನು //  

ಭಾಹುಗಳ ಬೆಚ್ಚನೆಯ ಸ್ಪರ್ಶ, 
ತೋಳುಗಳ ಮಧುರ ಅಪ್ಪುಗೆ.
ಎದೆಯ ಬಡಿತ, ನಾಡಿಗಳ ಮಿಡಿತ/
ಕಣ್ಣುಗಳ ಸೆಳೆತ, ಹರೆಯದ ಹರಿತ //  

ಏನಲ್ಲ ನೀನು,ಏನಿಲ್ಲ ನಿನ್ನಲಿ....?!

 

ಆಶಿರ್ವದಿಸಿದ ಎರಡು ಆತ್ಮಗಳು,
ಹಂಚಿಕೊಳ್ಳುವ ಅದ್ಬುತ ಉಡುಗೊರೆ/
ಸ್ವರ್ಗವನ್ನೇ ಭುವಿ ಮೇಲೆ ತೆರೆದಿಡುವ 
ಮಧುರ,ಅಮರ ಅನುಭವ//
  
ನಿಮಗೇನನ್ನಿಸುತ್ತದೆ . ದಯವಿಟ್ಟು ತಿಳಿಸಿ. ಪ್ರೀತಿಯೆಂದರೆ ಹಂಚಿಕೊಳ್ಳುವುದು ಅಲ್ವಾ? 


ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಅಮರವಾಗಲಿ , ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಸದಾ ಚಾಲ್ತಿಯಲ್ಲಿರಲಿ. 

ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ..................ನಿಮ್ಮೆಲ್ಲರ ಪ್ರೀತಿಯಿಂದ........ 



Thursday, February 9, 2012

:" ನಿನ್ನ ಹೆಸರು ....................."

ಡಿಯರ್ ಪ್ರೆಂಡ್ಸ್ ನನ್ನ ಮತ್ತು ನನ್ನ ಸಮಕಾಲಿನ ಸ್ನೇಹಿತರ ವಯಸ್ಸು ಕಾಲು ಶತಮಾನ ವನ್ನು ದಾಟಿಯಾಗಿದೆ. ಬ್ರಹ್ಮಚರ್ಯ ದ 
ಹಂತ ವನ್ನು ದಾಟಿ ಒಬ್ಬೊಬ್ಬರಾಗಿ ಎಲ್ಲರೂ ದಾಂಪತ್ಯ ಪರ್ವಕ್ಕೆ ಕಾಲಿಡುತ್ತಿದ್ದಾರೆ. ನನ್ನ ಮಗನಿಗೋ ಬರೋಬ್ಬರಿ 2  ವರ್ಷ 
ಮುಂದಿನ ಫೆಬ್ರವರಿ 25   ಕ್ಕೆ .  ಈ ಕವಿತೆ ಅವನಿಗೆ ನಾಮಕರಣ  (ಹಿಮಘನ  ತೇಜಸ್ ) ಮಾಡುವ ವೇಳೆ  ನನ್ನೊಳಗೆ 
ಮೂಡಿದ ಭಾವ . ಅಪ್ ಕೋರ್ಸ್ ಪ್ರತಿಯೊಬ್ಬ ತಂದೆಯ  ಅಥವಾ ಪೋಷಕರ ಆಶಯ ಇದೆ ಆಗಿರುತ್ತದೆ. ಹಾಗಾಗಿಯೇ ಈ 
ಕವಿತೆಯನ್ನು ಈಗಾಗಲೇ ಜನ್ಮಿಸಿರುವ ಹಾಗು ಮುಂದೆ ಹುಟ್ಟುವ ಎಲ್ಲಾ ನನ್ನ ಗೆಳೆಯ/ತಿ ಯರ ಮಕ್ಕಳಿಗೆ ಸಮರ್ಪಿಸುತ್ತೇನೆ. 
ಹಾಗೆಯೇ ಆರ್ಕುಟ್ ನ ಆತ್ಮಿಯರಾದ ದೀಪ ಮತ್ತು ಹರೀಶ್ ದಂಪತಿಗಳಿಗೆ ಹಾಗು ನನ್ನ ನಲ್ಮೆಯ ಅಕ್ಕ ಸುಲಕ್ಷಣ ಳಿಗೆ 
 ಮಗು ಜನ್ಮಿಸಿವೆ , ಅವರಿಗೂ ನನ್ನ  ಶುಭಾಶಯಗಳು . 

:" ನಿನ್ನ ಹೆಸರು ....................."

 




ಜಗದ ಚರಿತ್ರೆಯಲಿ,
ಯುಗದ ಮಾತುಗಳಲಿ, 
ಹಸಿರಾಗಲಿ ನಿನ್ನ ಹೆಸರು\ 

ಹಡೆದವರ ಖುಷಿಯಾಗಿ, 
ಸಾಧನೆಯಲಿ ಋಷಿ ಯಾಗಿ ,
ಹೆಸರಾಗಲಿ ನಿನ್ನ ಹೆಸರು.\

ಮುಗ್ದ  ನಗುವಿನ ಮೊಗವಾಗಿ,
ಮುದ್ದು ಚೆಲುವಿನ ಸಿರಿಯಾಗಿ,
ಮೆರೆದಾಡಲಿ ನಿನ್ನ ಹೆಸರು\

ಸಿಹಿ ನುಡಿಯ ಜೇನಾಗಿ,
ಸವಿ ನುಡಿಯ ದೊರೆಯಾಗಿ,
ಹರಿದಾಡಲಿ ನಿನ್ನ ಹೆಸರು\


ಕರುನಾಡ ಕನ್ನಡಿಯಾಗಿ,
ಈ ಮಣ್ಣಿನ ಕಣ್ಮಣಿಯಾಗಿ,
ಜಗದಲಿರಲಿ ನಿನ್ನ ಹೆಸರು \




Monday, October 18, 2010

-+- ಅಲರ್ಜಿ ಮಹಾತ್ಮೆ -+-

ಪ್ರಿಯ ಸ್ನೇಹಿತರೆ,  " ಅಲರ್ಜಿ "  ಯಾತನಮಯವಾದುದು. ಯಾವುದಕ್ಕೂ ಚಿಂತೆ ಮಾಡದೆ ಎಗ್ಗಿಲ್ಲದೆ ಬೆಳೆದ ದೇಹಕ್ಕೆ , ಆಸೆಯ ಮನಸ್ಸಿಗೆ ಅಲರ್ಜಿ ಪೂರ್ಣ ವಿರಾಮ ಇದುವ ದಿವ್ಯಾಸ್ತ್ರ. ಮೊನ್ನೆ ಇದುವರೆಗೂ ಯಾವುದೇ ಅಲರ್ಜಿ ಇಲ್ಲದ ನಾ ಕೂಡ ಇದಕ್ಕೆ ಮುಗ್ಗರಿಸಿಬಿಟ್ಟೆ . ಆ ಸಮಯದಲ್ಲಿ ಅಲರ್ಜಿ ಬಗ್ಗೆ ನನಗನಿಸಿದ್ದು ಹೀಗೆ. ....ಓ ಅಪ್ರಿಯ  ಅಲರ್ಜಿ,  ಏನು ನಿನ್ನ ಲೀಲೆ ?!

ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!


ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ,
ಕಟ್ಟು ನಿಟ್ಟು ಗಳ ಬದಿಗೆ ಸರಿಸಿದ್ದೆ/


ನೀ ಬಂದೆ ಎಲ್ಲಿಂದ,
ಅಹಿತ ಸುಖದ ರೂವಾರಿ, ತುರಿಕೆಯ ರಾಯಭಾರಿ/


ರೋಗ ಬಂದರೆ ದೇಹದ ಒಂದು ಅಂಗಕ್ಕೆ,
ನಿನ್ನ ಲೀಲೆಯೋ ಸರ್ವಾಂಗಕ್ಕೆ/


ಕಡಿತ ಬಂದರೆ ಪರ, ಪರವೇ ಸುಖ,
ಪರ, ಪರ ವೆ ಕಾಯಕವಾದರೆ , ಎಲ್ಲೇ ಇಲ್ಲದ ನರಕ/


ಇನ್ನಾದರೂ ನಡೆಸುವೆ ಶಿಸ್ತುಬದ್ದ ಬದುಕು,
ನಿನ್ನಿಂದ ಕಲಿತೆ ಮಿತಿಯ  ಬಯಕೆ/


ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!

- ಲಿಂಗೆಶ್ ಹುಣಸೂರು (ಚುಕ್ಕಿ )
ಅಲರ್ಜಿಗೆ ಎರಡು ದಿನ ಬಲಿಯಾದ ನಿಮ್ಮ ಗೆಳೆಯ....

Sunday, October 3, 2010

//ಜಾಗೋ ಹಿಂದೂ, ಜಾಗೋ ಭಾರತ್//


ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /

ಚರಿತ್ರೆಯ ಶೋಷಣೆಗಳಿಗೆ
ತಿಲಾಂಜಲಿ ಇಟ್ಟು ,
ಜಾತಿ - ಉಪಜಾತಿ
ಗೋಡೆಗಳ ಮೆಟ್ಟಿ,
ಉಳಿಸಬೇಕು ಸನಾತನ ಧರ್ಮ /

"ನಾವು" ಎಂದರೆ "ಹಿಂದೂ " ಅನಬೇಕು,
ನಮ್ಮ ಒಡೆವ ಕಿಡಿಗೇಡಿಗಳ ಮೇಲೆ ,
ರಣಕಹಳೆ ಮೊಳಗಿಸಬೇಕು,
ಧರ್ಮ ಬೆಳೆಸಬೇಕು/

ನೆನ್ನೆ ಮೊನ್ನೆಯದಲ್ಲ
ನಮ್ಮ ಸಂಸ್ಕೃತಿ,
ಹಿಂದುಸ್ತಾನದ ಜೀವ ಶ್ರುತಿ/

ಹಬ್ಬಬೇಕು ಮುಗಿಲೆತ್ತರಕ್ಕೆ,
ಹರಡಬೇಕು ಜಗದಗಲಕ್ಕೆ ,

ಅದಕ್ಕೆ ಮೊದಲು............

ಬೆಳೆಸಬೇಕು ಏಕತಾಭಾವ,
ಕಿತ್ತೊಗೆಯಬೇಕು ಅಸ್ಪೃಶ್ಯತೆಯ ಜಾಲ,
ಒಂದಾಗಬೇಕು,
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ,
ಮೊಳಗಬೇಕು ಶ್ರೀ ರಾಮ ನಾಮ /

ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /



ಜೈ ಶ್ರೀರಾಮ್ , ಜೈ ಹಿಂದ್ (ದು )

ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ.....

Friday, October 1, 2010

/-ನಮ್ಮ ಹೆಮ್ಮೆಯ ಗಾಂಧೀ ತಾತ- /

ಗಾಂಧೀಜಿ  ಹಾದಿಯಲ್ಲಿ ನಿಮ್ಮ ಗೆಳೆಯ .
ತಾತ, ತಾತ,ತಾತ,
ನಮ್ಮ ಹೆಮ್ಮೆಯ ಗಾಂಧಿ   ತಾತ /

ಕೋಲನು ಹಿಡಿದು ನಡೆಯುವ ತಾತ,
ಕೋಮಲ ಹೃದಯದ ಶಾಂತಿ ಧೂತ/

ಹಸಿವು ಕಲಿಸುತ್ತದೆ, ಬದುಕಿನ ಪಾಠ ,
ಉಪವಾಸದ ಮುಖೇನ, ನೀ ಬೋದಿಸಿದೆ  ವಿಜಯದ ಪಾಠ /

ಹಿಂಸೆಯ ಜಗಕೆ  ತಿಳಿಸಿದೆ ನೀ , ಶಾಂತಿಮಂತ್ರ,
ಅಹಿಂಸೆಯ ಮೂಲಕ ಗಳಿಸಿದೆ ನೀ , ಸ್ವಾತಂತ್ರ್ಯ /

ಸಪ್ತ ಪಾಪಗಳ ತಿಳಿಸಿದೆ ಜಗಕೆ,
ಎಲ್ಲಾ ಪಾಪಗಳ ಮೆಟ್ಟಿ ನಿಂತೆ /

ಸಾರಿದೆ ನೀ, ಎಲ್ಲಾ ಜಾತಿಗಳ ಒಂದೇ ಎಂದು ,
ವಿಶ್ವಧರ್ಮವ ನೀ ಪಾಲಿಸಿದೆ/


ರಾಮರಾಜ್ಯದ ಕನಸನು ಕಂಡೆ,
ಗಾಂಧಿ ಜಯಂತಿಯ ಶುಭಾಶಯಗಳು
ಭಾರತ ಮಾತೆಯ ಉನ್ನತಿಗೆ, ಹೊಸ ದೃಷ್ಟಿ ಕೋನವ  ಕೊಟ್ಟೆ/

ಹಗಲು - ಇರುಳೆನ್ನದೆ ದುಡಿದೆ ನೀ , ಈ ದೇಶಕಾಗಿ,
ನಿನ್ನಾದರ್ಷದಿಂದಲೇ ಈ ದೇಶ ಉಳಿದಿದೆ/

ವಿಶ್ವಮಾನ್ಯ ವ್ಯಕ್ತಿ ನೀನು,
ಸರ್ವ ಕಾಲಕೂ  ಸಲ್ಲುವ ಚೇತನ ನೀನು /

ಭಾರತಾಂಬೆಯ ಹೆಮ್ಮೆಯ ತನುಜ,
ನಿನಗಿದೋ  ನಮ್ಮ ನಮನ /