ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Tuesday, February 14, 2012

ಪ್ರೀತಿ ....... ನಿನಗೆಲ್ಲಿಯ ವ್ಯಾಖ್ಯಾನ ?!

ಆತ್ಮೀಯ ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭ ಹಾರೈಕೆಗಳು. 

ಪ್ರೀತಿ ಎಂದರೆ ಅದು ಒಂದು ದಿನದ ಸಂಭ್ರಮವಲ್ಲ, ಒಂದು ದಿನದ ಆಚರಣೆಯಲ್ಲ. ಅದು ನಿತ್ಯ ನಿರಂತರ ಸ್ಪೂರ್ತಿ,
ಸ್ನೇಹ, ನಂಬಿಕೆ,ಆಸರೆ,ಅಕ್ಕರೆ,ಆದರ , ಅಭಿಮಾನ ಗಳ ಚೈತನ್ಯ ,ಅದಮ್ಯ ಚೇತನ. ನನಗನಿಸಿದ ಹಾಗೆ, ನಾನು 
ಅನುಭವಿಸಿದ ಹಾಗೆ ಪ್ರೀತಿಯೆಂದರೆ ಭಾಷೆಗೆ ನಿಲುಕದ ಭಾವ ದೀಪ್ತಿ. ಎಲ್ಲಾ ಅರ್ಥಗಳ ಆಚೆಗಿನ ಅರ್ಥ ,
ಬದುಕಿನ ಚೈತನ್ಯ.



ಪ್ರೀತಿ .......
ನಿನಗೆಲ್ಲಿಯ  ವ್ಯಾಖ್ಯಾನ ?!
ಎಂದೂ ಮುಗಿಯದ ಮಧುರ ಗೀತೆ,
ಅನಂತ ಅರ್ಥಗಳ ಆಗಸ ನೀನು//


ಬಯಸುವ ಹೃದಯಗಳ,
ಮಹೋನ್ನತ ಭಾವ ನೀನು . 
ಮನಸು-ಹೃದಯ -ಆತ್ಮಗಳ,
ಸಮ್ಮಿಲನದ ಭಾಷೆ ನೀನು //




ಹೃದಯದ ಗರ್ಭದಲ್ಲಿ,
ಅಡಗಿಸಿಟ್ಟ ಮುತ್ತು ನೀನು/
ಪ್ರತಿ ಘಳಿಗೆ, ಪ್ರತಿ ಘಂಟೆ, ಪ್ರತಿ ದಿನ,
ಭಾವಿಸುವ ಭಾಂದವ್ಯ  ನೀನು //  

ಭಾಹುಗಳ ಬೆಚ್ಚನೆಯ ಸ್ಪರ್ಶ, 
ತೋಳುಗಳ ಮಧುರ ಅಪ್ಪುಗೆ.
ಎದೆಯ ಬಡಿತ, ನಾಡಿಗಳ ಮಿಡಿತ/
ಕಣ್ಣುಗಳ ಸೆಳೆತ, ಹರೆಯದ ಹರಿತ //  

ಏನಲ್ಲ ನೀನು,ಏನಿಲ್ಲ ನಿನ್ನಲಿ....?!

 

ಆಶಿರ್ವದಿಸಿದ ಎರಡು ಆತ್ಮಗಳು,
ಹಂಚಿಕೊಳ್ಳುವ ಅದ್ಬುತ ಉಡುಗೊರೆ/
ಸ್ವರ್ಗವನ್ನೇ ಭುವಿ ಮೇಲೆ ತೆರೆದಿಡುವ 
ಮಧುರ,ಅಮರ ಅನುಭವ//
  
ನಿಮಗೇನನ್ನಿಸುತ್ತದೆ . ದಯವಿಟ್ಟು ತಿಳಿಸಿ. ಪ್ರೀತಿಯೆಂದರೆ ಹಂಚಿಕೊಳ್ಳುವುದು ಅಲ್ವಾ? 


ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಅಮರವಾಗಲಿ , ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಸದಾ ಚಾಲ್ತಿಯಲ್ಲಿರಲಿ. 

ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ..................ನಿಮ್ಮೆಲ್ಲರ ಪ್ರೀತಿಯಿಂದ........