ತಾತ, ತಾತ,ತಾತ,
ನಮ್ಮ ಹೆಮ್ಮೆಯ ಗಾಂಧಿ ತಾತ /
ಕೋಲನು ಹಿಡಿದು ನಡೆಯುವ ತಾತ,
ಕೋಮಲ ಹೃದಯದ ಶಾಂತಿ ಧೂತ/
ಹಸಿವು ಕಲಿಸುತ್ತದೆ, ಬದುಕಿನ ಪಾಠ ,
ಉಪವಾಸದ ಮುಖೇನ, ನೀ ಬೋದಿಸಿದೆ ವಿಜಯದ ಪಾಠ /
ಹಿಂಸೆಯ ಜಗಕೆ ತಿಳಿಸಿದೆ ನೀ , ಶಾಂತಿಮಂತ್ರ,
ಅಹಿಂಸೆಯ ಮೂಲಕ ಗಳಿಸಿದೆ ನೀ , ಸ್ವಾತಂತ್ರ್ಯ /
ಸಪ್ತ ಪಾಪಗಳ ತಿಳಿಸಿದೆ ಜಗಕೆ,
ಎಲ್ಲಾ ಪಾಪಗಳ ಮೆಟ್ಟಿ ನಿಂತೆ /
ಸಾರಿದೆ ನೀ, ಎಲ್ಲಾ ಜಾತಿಗಳ ಒಂದೇ ಎಂದು ,
ವಿಶ್ವಧರ್ಮವ ನೀ ಪಾಲಿಸಿದೆ/
ರಾಮರಾಜ್ಯದ ಕನಸನು ಕಂಡೆ,
ಹಗಲು - ಇರುಳೆನ್ನದೆ ದುಡಿದೆ ನೀ , ಈ ದೇಶಕಾಗಿ,
ನಿನ್ನಾದರ್ಷದಿಂದಲೇ ಈ ದೇಶ ಉಳಿದಿದೆ/
ವಿಶ್ವಮಾನ್ಯ ವ್ಯಕ್ತಿ ನೀನು,
ಸರ್ವ ಕಾಲಕೂ ಸಲ್ಲುವ ಚೇತನ ನೀನು /
ಭಾರತಾಂಬೆಯ ಹೆಮ್ಮೆಯ ತನುಜ,
ನಿನಗಿದೋ ನಮ್ಮ ನಮನ /
1 comment:
ನೈಸ್
Post a Comment