- ಅಂದು 1947 ರಲ್ಲಿ, ಗಾಂಧೀಜಿ ದುಡಿದಿದ್ದರು ದೇಶಕ್ಕಾಗಿ, ಇಂದು 2010 ಎಲ್ಲರೂ ದುಡಿಯುವರು ಗಾಂಧೀಜಿ ನೋಟಿಗಾಗಿ.!
- ನೀನು ಎಷ್ಟು ಶ್ರೀಮಂತ ಎಂಬುದನ್ನು ಪರೀಕ್ಷಿಸಬೇಕಾದರೆ, ನೀನು ನಿನ್ನ ಬಳಿ ಇರುವ ಹಣವನ್ನು ಎಣಿಸಬೇಡ, ಬದಲಿಗೆ ಒಂದು ಹನಿ ಕಣ್ಣೀರು ಹೊರ ಹಾಕು ಮತ್ತು ಎಷ್ಟು ಮಂದಿ ಆ ಕಣ್ಣೀರನ್ನು ಒರೆಸಲು ತಮ್ಮ ಹಸ್ತ ಚಾಚುತ್ತವೆ ಎಂಬುದನ್ನು ಏಣಿಸು.
ಬಿಂದುವಿನಿಂದ ಅನಂತದೆಡೆಗೆ...
"ಸರಸವೇ ಜೀವನ, ವಿರಸವೆ ಮರಣ "
Monday, August 30, 2010
ಅರ್ಥಪೂರ್ಣ ಸಂದೇಶಗಳು
ನನ್ನುಸಿರೇ ......>>>>>
ಉಸಿರೇ, ನೀನೆ ನನ್ನುಸಿರು,
ಉಸಿರೇ , ನೀನೆ ಒಲವಿನ ತವರು/
ನಲಿವಿನ ನಾಯಕಿ ನೀನು,
ಗೆಲುವಿನ ದಿಕ್ಸೂಚಿ ನೀನು/
ಭಾವಯಾನದ ಜೊತೆಗಾತಿ,
ಮಧುರ ಪ್ರಣಯದ ಸಂಗಾತಿ/
ಸದಾ ಹದಿನೆಂಟರ ಹರೆಯ,
ಮುಪ್ಪೆನ್ನುವುದೇ ಇಲ್ಲ ನಮ್ಮೊಲವಿಗೆ/
ಇದು ಅಮರ, ಮಧುರ,
ಅನಂತ ಪ್ರೇಮ ಕಾವ್ಯ/
ಉಸಿರು, ಉಸಿರಿನಾಚೆಗಿನ ಬಂಧನ,
ಇದು ನನ್ನುಸಿರಿನ ಕಥನ/
ಉಸಿರೇ , ನೀನೆ ಒಲವಿನ ತವರು/
ನಲಿವಿನ ನಾಯಕಿ ನೀನು,
ಗೆಲುವಿನ ದಿಕ್ಸೂಚಿ ನೀನು/
ಭಾವಯಾನದ ಜೊತೆಗಾತಿ,
ಮಧುರ ಪ್ರಣಯದ ಸಂಗಾತಿ/
ಸದಾ ಹದಿನೆಂಟರ ಹರೆಯ,
ಮುಪ್ಪೆನ್ನುವುದೇ ಇಲ್ಲ ನಮ್ಮೊಲವಿಗೆ/
ಇದು ಅಮರ, ಮಧುರ,
ಅನಂತ ಪ್ರೇಮ ಕಾವ್ಯ/
ಉಸಿರು, ಉಸಿರಿನಾಚೆಗಿನ ಬಂಧನ,
ಇದು ನನ್ನುಸಿರಿನ ಕಥನ/
Friday, August 20, 2010
ಅಂಚೆ ಇಲಾಖೆಯಲ್ಲಿ ಕೆಲಸ
ಕರ್ನಾಟಕ ಅಂಚೆ ವಲಯ ವು ಪೋಸ್ಟಲ್ ಹಾಗು ಸಾರ್ಟಿಂಗ್ ಸಹಾಯಕರ ಹುದ್ದೆಗೆ ಅರ್ಜಿ ಗಳನ್ನು ಕರೆದಿದೆ. ಕರ್ನಾಟಕದ ಎಲ್ಲಾ ಪ್ರಧಾನ ಅಂಚೆ ಕಛೇರಿಗಳು ಹಾಗು ಮುಖ್ಯ ವಾದ ತಾಲೂಕು ಕೇಂದ್ರ ಗಳ ಉಪ ಅಂಚೆ ಕಛೇರಿಗಳಲ್ಲಿ ಆಗಸ್ಟ್ 20 ,2010 ರಂದು ಅರ್ಜಿಗಳು ದೊರೆಯುತ್ತವೆ. ಕೊನೆಯ ದಿನಾಂಕ : ಅಕ್ಟೋಬರ್ 5 ,2010.
ಹೆಚ್ಚಿನ ಮಾಹಿತಿಗೆ http ://chukkisamsthe.blogspot.com ನೋಡಿ .
ಹೆಚ್ಚಿನ ಮಾಹಿತಿಗೆ http ://chukkisamsthe.blogspot.com ನೋಡಿ .
Monday, August 16, 2010
ದಿನದ ಸಂದೇಶಗಳು
೦೧.ಅದ್ಭುತವಾದ ಗಾಳಿ , ಸುಂದರವಾದ ಸೂರ್ಯ, ಹಾಡುತ್ತಿರುವ ಪಕ್ಷಿಗಳು, ಉತ್ತಮವಾದ ದಿನ. ಇವೆಲ್ಲ ನಿಮ್ಮ ಮನೆ ಬಾಗಿಲಿನಲ್ಲಿ ಕಾಯುತ್ತಿವೆ. ನಿಮಗೆ "ಸಂತೋಷದ ಶುಭದಿನ " ಹೇಳಲು, ದಯವಿಟ್ಟು ಬಾಗಿಲು ತೆಗೆಯಿರಿ.
ದುಃಖದ ಸಂದೇಶಗಳು
01 . ಹೊರಗೆ ಅಳುವುದಕ್ಕಿಂತ ಹೃದಯದ ಒಳಗೆ ಅಳುವುದು ತುಂಬಾ ಅಪಾಯಕಾರಿ. ಕೆನ್ನೆ ಮೇಲೆ ಸುರಿಸುವ ಕಣ್ಣೀರನ್ನು ಅಳಿಸಬಹುದು. ಆದರೆ ಕೆಲವು ಗುಪ್ತವಾದ ಕಣ್ಣೀರುಗಳು ಎಂದೂ ಕೊನೆ ಗೊಳ್ಳದ ಗಾಯಗಳನ್ನು ಮಾಡುತ್ತವೆ.
02. ಕೆಲವರನ್ನ ಕಾಯುವುದು ಕಷ್ಟ , ಹಾಗೆ ಕೆಲವರನ್ನ ಮರೆಯುವುದು ಕೂಡ ಕಷ್ಟ . ಆದರೆ ತುಂಬಾ ಕಷ್ಟದ ಕೆಲಸ ಎಂದರೆ, ಆ ಕೆಲವರನ್ನು ಮರೆಯುವುದೋ ಅಥವಾ ಕಾಯುವುದೋ ಎಂಬ ನಿರ್ದಾರ ತೆಗೆದುಕೊಳ್ಳುವುದು.
02. ಕೆಲವರನ್ನ ಕಾಯುವುದು ಕಷ್ಟ , ಹಾಗೆ ಕೆಲವರನ್ನ ಮರೆಯುವುದು ಕೂಡ ಕಷ್ಟ . ಆದರೆ ತುಂಬಾ ಕಷ್ಟದ ಕೆಲಸ ಎಂದರೆ, ಆ ಕೆಲವರನ್ನು ಮರೆಯುವುದೋ ಅಥವಾ ಕಾಯುವುದೋ ಎಂಬ ನಿರ್ದಾರ ತೆಗೆದುಕೊಳ್ಳುವುದು.
ಪ್ರೀತಿ ಸಂದೇಶಗಳು
೦೧. ಬಂಗಾರದ ಬೆಲೆ ದಿನದಿಂದ ದಿನಕ್ಕೆ , ಏರುತ್ತಿದೆ ಕಣೆ. ನನಗೆ ಯಾಕೋ ನಿನ್ನದೇ ಚಿಂತೆ. ನಿನ್ನನ್ನು ಯಾರಾದರು ಅಪಹರಿಸಿಕೊಂಡು ಹೋದಾರು ಎಂದು. ಯಾಕೆಂದರೆ ನಾಳೆ ನಿನ್ನಲ್ಲಿ " ಚಿನ್ನದಂತ ಹೃದಯ " ಇದೆ.
ಸ್ನೇಹ ಸಂದೇಶಗಳು
01. ನಾವು ಕೆಲವು ವೇಳೆ ಉತ್ತಮ ಸ್ನೇಹಿತರನ್ನು ಕಳೆದುಕೊಳ್ಳುತ್ತೇವೆ. ಯಾಕೆಂದರೆ ಅವರು ನಮಗೆ ಎಷ್ಟು ವಿಶೇಷ ಎಂಬುದನ್ನು ವ್ಯಕ್ತಪಡಿಸಲು ನಾವು ವಿಫಲರಾಗಿರುತ್ತೇವೆ. ಅಂತ ಸ್ನೇಹಿತರಿಗಾಗಿ ಈ ಸಂದೇಶ, ಯಾಕೆಂದರೆ ನಾನು ಅವರನ್ನು ಯಾವಾಗಲು ಕಳೆದುಕೊಳ್ಳಲು ಬಯಸುವುದಿಲ್ಲ.
02. ಮನಸ್ಸು ಎಂಬ ಮಂದಿರದಲ್ಲಿ, ಕನಸು ಎಂಬ ಸಾಗರದಲ್ಲಿ, ನೆನಪು ಎಂಬ ಅಲೆಗಳಲಿ, ಕತ್ತಲೆಯ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ನನ್ನ ಸ್ನೇಹ.
02. ಮನಸ್ಸು ಎಂಬ ಮಂದಿರದಲ್ಲಿ, ಕನಸು ಎಂಬ ಸಾಗರದಲ್ಲಿ, ನೆನಪು ಎಂಬ ಅಲೆಗಳಲಿ, ಕತ್ತಲೆಯ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ನನ್ನ ಸ್ನೇಹ.
Subscribe to:
Posts (Atom)
