ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, May 26, 2008

ನನ್ನೂರಿನ ಸೂರಿನ ಮೇಲೆ....!!!!!!!!

ವಿಮಾನ...ವಿಮಾನ.....!!!
ನನ್ನೂರಿನ ಸೂರಿನ ಮೇಲೆ , ವಿಮಾನಗಳದ್ದೇ ವಿಹಾರ...
ಗಗನದ ತುಂಬಾ ಮಿಂಚಿನ ಸಂಚಾರ.
ಇಲ್ಲಿಂದಲೇ ಹಾರುತ್ತವೆ, ಎಲ್ಲಿಂದಲೋ ಇಳಿಯುತ್ತವೆ..
ಜಾಗತೀಕರಣ ಜಾತ್ರೆಯ ಸರಕುಗಳು...!!

"ವಿಶ್ವ ಗ್ರಾಮ " ದ ರಾಯಭಾರಿಗಳು....

ಭರವಸೆ ಮೂಡಿಸುವ "ಚುಕ್ಕಿ" ಗಳೇ ಮಾಯ, ಆಗಸದಲ್ಲಿ..
ರೈತರ ಬದುಕಲ್ಲಿ ರಜನಿಯ ಆಕ್ರಮಣ,
ಅನ್ನ ನೀಡುವ ರೈತನ ಬದುಕು ಬಲು ದುಸ್ತರ,
ಉಳುವ ಯೋಗಿಯ ನೆಲವೀಗ "ವಿಮಾನ ನಿಲ್ದಾಣ"
ಹಕ್ಕಿಗಳು ಹಾರುವಂತಿಲ್ಲ, ಕಾಗೆಗಳು ಕಿರುಚುವಂತಿಲ್ಲ..

ಚಿಟ್ಟೆಗಳ ಚಿತ್ತಾರವಿಲ್ಲ, ಕನ್ನಡಿಗರಿಗೆ ಕೆಲಸವಿಲ್ಲ...

ಊರ ತುಂಬೆಲ್ಲ "ರಿಯಲ್ estatu" ,
ಉಳ್ಳವರ ಜೇಬಲ್ಲಿ ಕೋಟಿ , ಕೋಟಿ ನೋಟು,
ಬದಲಾಗಿದೆ ಜನರ statassu,
ಬಡವರ ಬದುಕು ಬಾರಿ taitu,
ಬಲಿಯಾಗುತ್ತಿವೆ ಸತ್ಯ, ಸಂಸ್ಕೃತಿ , ಸಹಜತೆಗಳು....

ಬದಲಾಗಿವೆ ಬದುಕಿನ ದಿಕ್ಕುಗಳು...

ವಿಮಾನಗಳ ಅಬ್ಬರದಲಿ ನೆಮ್ಮದಿಯ ನಿದ್ರೆಯಿಲ್ಲ,
ಹಸು ಕಂದಮ್ಮಗಳು ಬೆಚ್ಚುತಿವೆ,
ಈಗ ಇಲ್ಲಿ ಎಲ್ಲವೂ ದುಬಾರಿ,
ಆಧುನಿಕತೆಯ ಆವಿಷ್ಕಾರಗಳಿಗೆ,
ಬಡವ ತೆರಬೇಕಾಗಿದೆ, ದುಬಾರಿ ತೆರಿಗೆ,
ಸರ್ಕಾರಿ ನೌಕರರಿಗೂ ಬಾರಿ ಬಾರಿ ಕಿರಿ, ಕಿರಿ...

ಪ್ರಪಂಚವೇ ಬರುತಲಿದೆ, ಈ ಪುಟ್ಟ ಊರಿಗೆ,
ಯಾವ ಧೂತ ಬಂದಾನು ಇಳಿದು?!
ಕೋಟೆ ಕಟ್ಟಿ ಮೆರೆದಾಡಿದ, ವೀರ ಯೋಧನಿಗೆ ಜನುಮ ನೀಡಿದ,
ಈ ಊರಿನ ಸೂರಿನ ಮೇಲೆ, ಅಭಿವೃದ್ದಿಯ ಧ್ವಜ ಹಾರಿಸಲು,
ನೀರಿಕ್ಷೆಗಳು ಹುಸಿಯಾಗದಿರಲಿ, ವಿಮಾನದೂರಿನಲ್ಲಿ,
ನನ್ನೂರಿನ ಸೂರಿನ ಮೇಲೆ "ಚುಕ್ಕಿ" ಗಳು ಮಿನುಗಲಿ...


1 comment:

ಸೀತಾರಾಮ. ಕೆ. / SITARAM.K said...

ಅಭಿವೃಧ್ಧಿ ವಿಶೇಷ ವಿತ್ತ ವಲಯ ಕೈಗಾರೀಕರಣ ಅದು ಇದು ಎಂದು ರೈತನನ್ನು ಮತ್ತು ಕ್ರುಶಿಯನ್ನು ಮೂಲೆಗುಂಪು ಮಾಡಿ ಭಸ್ಮಾಸುರನಂತೆ ಮೆರೆದು ಒಂದು ದಿನ ನಮ್ಮ ತಲೆಯ ಮೇಲೆ ಕೈಯಿತ್ತುಕೊಳ್ಳುವ ಕಾಲ ದೂರವಿಲ್ಲ.
ಲೇಖನ ಚೆನ್ನಾಗಿದೆ.