ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರ
ಭಾವಗೀತೆಗಳು ಬೆಳಗ್ಗಿನಿಂದಲೂ ಮನದಲ್ಲಿ ಜಿನುಗುಡುತ್ತಿವೆ.
ಮೈಸೂರಿನ
ಮಹಾರಾಜ ಕಾಲೇಜಿನ
ಅಂಗಳದಲ್ಲಿ ಸಾಹಿತ್ಯದ
ಕಂಪಿದೆ. ಕನ್ನಡ
ನಾಡಿನ ಹಲವಾರು
ಸಾಹಿತ್ಯ ಬ್ರಹ್ಮರು
ಓದಿದ, ಅಧ್ಯಾಪಕರಾಗಿದ್ದ
ಕಾಲೇಜು ಅದು.
ಸಾಹಿತ್ಯ-ಸಂಸ್ಕೃತಿ-ಕಲೆ ಗಳು
ಮೇಳೈಸುವ ಸಕಲ
ಕಲಾ ವಲ್ಲಭರು
ಇರುವಂತಹ ನೆಲೆ
ಅದು. ಅಂತಹ
ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಭಾಗ್ಯ ನನ್ನದು.
ಹಾಗಾಗಿಯೆ ನನ್ನ
ಭಾವಲೋಕದ ಜೊತೆಗೆ
ಸಾಹಿತ್ಯದ ನಂಟು
ಅವಿನಾಭವವಾಗಿದೆ.
ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ
ಮಾಡುವಾಗಿ ನಾನು
ನನ್ನ ಗೆಳೆಯ
ದೇವರಾಜು ಕಪ್ಪಸೋಗೆ
(ಚಾಮರಾಜನಗರ ಜಿಲ್ಲೆ ಕನ್ನಡಪ್ರಭದಲ್ಲಿ ಈಗ ವೃತ್ತಿ) ಯ ಅಭಿಲಾಷೆಯ ಮೇರೆಗೆ ಜೆ.ಎಸ್.ಎಸ್
ಆಸ್ಪತ್ರೆ ಬಳಿ
ಅಗ್ರಹಾರ ದಲ್ಲಿ
, ೮ ನೇ
ಕ್ರಾಸ್ ನಲ್ಲಿ
೧೦*೧೦
ಅಳತೆಯ ರೂಂ
ನಲ್ಲಿ ಬಾಡಿಗೆ
ಯಲ್ಲಿದ್ದೆ. ಮನೆಯ ಮುಂದೆ ವಿಶಾಲವಾದ ಜಾಗ.
" ಕನಸು" ಅಂತ ಆ ಗೂಡಿಗೆ ಹೆಸರಿಟ್ಟಿದ್ದೆ.
ತದನಂತರ ಆ
ಗೂಡಿಗೆ ರಾಘವೇಂದ್ರ
(ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಗಳ ರೂವಾರಿ) ಎಂಬ
ನನ್ನ ಊರಿನ
ದೋಸ್ತಿ, ಹೈಸ್ಕೂಲ್
ನಲ್ಲಿ, ಪಿ.ಯು.ಸಿ ಯಲ್ಲಿ ನನ್ನ
ಜೂನಿಯರ್, ಹೃದಯದ
ಗೆಳೆಯ ಬಂದು
ಸೇರಿಕೊಂಡ. ಅಲ್ಲಿಂದಾಚೆಗೆ
ನಮ್ಮ ಪಯಣ
ಭಾವಗೀತೆಗಳೋಂದಿಗೆ ಸಾಗಿತು. ನಾವು ಬಹುತೇಕ
ಇಸ್ಟಪಡುತ್ತಿದ್ದ, ಆಗಾಗ್ಗೆ ಜಿನುಗುಡುತ್ತಿದ್ದ ಹಾಡುಗಳು, ಜಿ.ಎಸ್.ಎಸ್
ರದ್ದಾಗಿತ್ತು. ಕಾಣದ ಕಡಲಿಗೆ ನಮ್ಮ ಮನ
ಹಂಬಲಿಸುತ್ತಿತ್ತು. ಆದರೂ ಹಣತೆ ಹಚ್ಚಬೇಕು
ಅನಿಸುತ್ತಿತ್ತು.
ಯಾರು ಕೇಳದಿದ್ದರೂ
ಎದೆ ತುಂಬಿ
ಹಾಡಬೇಕು ಅನಿಸುತ್ತಿತ್ತು.ಹಾಡು ಹಳೆಯದಾದರೇನು
ಭಾವ ನವನವೀನ
ಅನಿಸುತ್ತಿತ್ತು. ಅನಿಸುತ್ತಿದ್ದ ಭಾವಗಳಿಗೆ ಜಿ.ಎಸ್.
ಎಸ್. ತಮ್ಮ
ಭಾವಗೀತೆಗಳ ಮೂಲಕ
ರೂಪ ಕೊಟ್ಟಿದ್ದರು.
ಅವೇ ನಮ್ಮ
ಏಕಾಂತದ
ಸಂಗಾತಿಗಳು. ಸಂಜೆಯ ನಡಿಗೆಯ
ಸಾಥಿಗಳು. ರಾತ್ರಿ
ಕನಸುಗಳಿಗೆ ಕಾಡುವ
ಭಾವಗಳು. ಆಗಿನ
ದಿನಗಳಲ್ಲಿ ತಂತ್ರಜ್ಣಾನ
ಅಸ್ಟೊಂದು ಮುಂದುವರೆದಿರಲ್ಲಿಲ್ಲ.
ವಾಲ್ಕ್ ಮನ್
ಮಾತ್ರ ನಮ್ಮ
ಬಳಿಯಿತ್ತು. ಹೊಸ ಭಾವಗೀತೆಯ ಕ್ಯಾಸೆಟ್ ತಂದರೆ
ಆ ದಿನ
ನಮಗೆ ಸಂಭ್ರಮ
ನಾನು , ರಾಘು
ಸ್ಪರ್ದೆಯ ಮೇಲೆ
ಹಾಡುಗಳನ್ನು ಕೇಳುತ್ತಿದ್ದೇವು. ಈಗ ಎಲ್ಲಾ ಬದಲಾಗಿದೆ.
ನಾವು ದೊಡ್ದವರಾಗಿದ್ದೇವೆ.
ಅವೇ ಸಾಲುಗಳು
ಮನದಲ್ಲಿ ಜಿನುಗುಡುತ್ತಿವೆ.
ರಾಘು ದೊಡ್ದ
ಹೆಸರು ಮಾಡಿದ್ದಾನೆ.
ಜಿ.ಎಸ್.ಎಸ್. ಅಗಲಿದ್ದಾರೆ.
ಮನದಲ್ಲಿ ಶೂನ್ಯ
ಭಾವ. ಕಾಣದ
ಕಡಲು ಕಾಡುತ್ತಿದೆ.
ಅವರ ಪ್ರತಿಯೊಂದು ಕವಿತೆಗಳು ಜೀವನ
ಸ್ಪೂರ್ತಿ-ಪ್ರೀತಿಯನ್ನು ಒಳಗೊಂಡಿವೆ. ಅವಲ್ಲಾ ಎಂದೂ ಹಳೆಯದಾಗದ ಹಾಡುಗಳು, ಮತ್ತೆ ಮತ್ತೆ ಕೇಳಬೇಕಿನಿಸುವ
ನವನವೀನ ಭಾವಗಳು. ಅವರ ಆತ್ಮಕ್ಕೆ ನನ್ನ ಶ್ರದ್ದಾಂಜಲಿ.
ನನಗೆ ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ
ಅರ್ಥಶಾಸ್ತ್ರದಲ್ಲಿ ೦೨ ಚಿನ್ನದ ಪದಕಗಳನ್ನು ನೀಡಿದೆ. ಆ ಘಟಿಕೋತ್ಸವದ ಮುಖ್ಯ ಅಥಿತಿಯಾಗಿ ಜಿ.ಎಸ್.
ಎಸ್ ಬಂದಿದ್ದರು. ಅವರ ಸಮ್ಮುಖದಲ್ಲಿ ಚಿನ್ನದ ಪದಕಳನ್ನು ಪಡೆದೆ. ಇದು ನನ್ನ ಬದುಕಿನಲ್ಲಿ ಮರೆಯಲಾಗದ
ಅವಿಸ್ಮರಣೀಯ ಘಟನೆ.
ಜಿ.ಎಸ್.ಎಸ್ ರವರ ಹಣತೆ ಹಚ್ಚುತ್ತೇನೆ
ಎಂಬ ಕವಿತೆಯ ಸ್ಪೂರ್ತಿಯಿಂದ ನನ್ನಲ್ಲಿ ಈ ಕವಿತೆ ಮೂಡಿದೆ. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಈ ಕವಿತೆಯನ್ನು
ಶ್ರದ್ದಾಂಜಲಿಯಾಗಿ ಸಮರ್ಪಿಸುತ್ತಿದ್ದೇನೆ.
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
No comments:
Post a Comment