ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Saturday, April 12, 2008

ತಾಜ್ ಗೊನ್ದು ಭಿನ್ನಹ....

ಪ್ರೀತಿಯ ತಾಜ್,
ಜಗತ್ತಿನೆಲ್ಲರಿಗೂ ನೀನು ಅದ್ಭುತ,..!
ಆದರೆ ನೀ ನನಗೆ ನನ್ನ ಪ್ರೀತಿಯ "ಪಾರಿವಾಳದ ಗುಡ್ಡ",
ಚಿಕ್ಕವನಿದ್ದಾಗ ಕಟ್ಟಿದ್ದೆ ಮರಳಿನ ಮಹಲು, ನಿನ್ನನ್ನೇ ಹೋಲುವಂತೆ
ದೊಡ್ದವನಾದಾಗ ತಂದು ಕೂರಿಸಿದೆ, ಪ್ರೀತಿಯ ಎಸಳು,
ಅಪ್ಪ ಕೊಟ್ಟ ಅಪರೂಪದ ಉಡುಗೊರೆ ನೀನು,
ಅವಳು ಹಾಡಿದ ಒಲವ ರಾಗ ನೀನು,
ಅವಲಿದ್ದಸ್ಟು ಕಾಲ ನೀನೆ ತಾನೆ,ನಮ್ಮ ಕನಸಿನ ತಾಣ...
ಈಗ ಅವಳಿಲ್ಲ,ಅವಲಿಲ್ಲದ ನಾನು ಬದುಕಿದ್ದೇನೆ,
ತಾಜ್, ನಿನ್ನಲ್ಲೀಗ ಸೂತಕದ ಛಾಯೆ...
ಬಿಟ್ಟರು ಬಿದವು,ನೆನಪುಗಳು.........

ಪ್ರೀತಿಯ ತಾಜ್,
ಅದೆಸ್ತು ಪ್ರೀತಿಗಳಿಗೆ ಕುರುಹು ನೀನು,
ಅದೆಸ್ತು ಪ್ರೇಮಿಗಳ ಕನಸು ನೀನು,
ಮಗುವಿನ ನಗು, ಹಾಲಿನ ಹೊಳಪು..ಏನಲ್ಲ ನೀ...
ಯಾರದೋ ಪ್ರೀತಿಯ ನೆನಪಿನ ಗೋರಿ,
ಅಮೃತ ಶಿಲೆಯದಿಯಲ್ಲಿ ಸತ್ತು ಮಲಗಿರುವೆ,
ನಮ್ಮೆದೆಗಳಲ್ಲಿ ಒಲುಮೆಯ ಜೀವಂತ ಸಾಕ್ಷಿಯಾಗಿ...!

ನದಿಯಂತೆ ಪ್ರೀತಿಸಿದ ಅವಳು ,ದೂರ ಹೋದಳು ತಾಜ್,
ನಾ ಏನ kattali ...?!...ಒಲವ ನೆನಪಿಗೆ....
ಶಹಜಾಹನನಲ್ಲ ನಾನು,
ಒಲವಿನ ಅರಮನೆಯ ಬಡವ ರಾಜಕುಮಾರ,
ಅವಲಿಲ್ಲದ ನಿನ್ನನ್ಗಳದಲ್ಲಿ ,ನಾನು ,ಅನಾಥ ಕೂಸು,

ಪ್ರೀತಿಯ ತಾಜ್,
ಅವಲಿಲ್ಲದ ನಾ ಹೇಗೆ ಬದುಕಲಿ....
ಅವಲಿಲ್ಲದ ನಾಳೆಗಳನ್ನ ಹೇಗೆ ಕಳೆಯಲಿ...
ಅವಳನ್ನ ಬರಮಾಡಿಸು, ಇಲ್ಲ, ನನ್ನ ಕೊನೆಗಾನಿಸು...
ಅವಲೋತ್ತಿಗೆ ಮತ್ತೆ ಹುಟ್ಟಿ ಬರುತ್ತೇನೆ, ಒಲವ ದೀಕ್ಷೆ ಪಡೆದು,
ಪ್ರೀತಿಯ ಪಕ್ಷಿಗಳಾಗಿ ,ಮರು ಹುಟ್ಟು ಪಡೆದು,
ನೆನಪಿತ್ತಿರು ಅಲ್ಲಿಯವರೆಗೆ,
ನಿನ್ನ ಪ್ರೀತಿಯ ಗೂದಲ್ಲಿ ಜಾಗ bekide ನಮಗೆ,
ಹಾರಾದಬೇಕಿದೆ ಪ್ರೀತಿಯ ಗರಿ ಬಿಚ್ಚಿ....
ಹಾರಿಸುವ ಹೊಣೆ ನಿನ್ನದು....
ಎತ್ತರ, ಎತ್ತರಕ್ಕೆ, ದಿಗಂತದಾಚೆಗೆ,
ಮತ್ತೆ ಸಮಾದಿಯಾಗಿ ನಿನ್ನ ಮಡಿಲ ಸೇರುವೆವು,
ಅಮರ ಪ್ರೇಮದ ಕುರುಹಾಗಿ....
ನಿನ್ನ ಪ್ರತಿಸ್ಪರ್ದಿಯಾಗಿ......!

ಹಾರಿಸು ನಮ್ಮ ಎತ್ತರ ಎತ್ತರಕ್ಕೆ............!



1 comment:

Unknown said...

CHENNAGIDE KELEYA --- Prakasha SK