(ರವಿಕುಮಾರ್, ಲಕ್ಷ್ಮಿಕಾಂತ್ ಕಲ್ಕುಣಿಕೆ ,ಭಾನು, ಗಿರೀಶ್ ಹಳೆಮನೆ, ಮಾದೇಶ್ ಹೊಸೂರ್, ರಾಘವೇಂದ್ರ ) |
( ನನ್ನ ಬದುಕಿನಲ್ಲಿ " ಗೆಳೆಯ " ಎಂಬ ಪದಕ್ಕೆ ಮಹತ್ವದ ಸ್ಥಾನವಿದೆ...ವಿಶ್ವದ ಲಿಪಿಕಾರ ನನ್ನ ಬದುಕಿನ ಬಹುತೇಕ ಪುಟಗಳನ್ನು ಗೆಳೆಯರಿಗಾಗಿಯೇ ಮೀಸಲಿಟ್ಟಿದ್ದಾನೆ.. ಗೆಳೆತನದಲ್ಲಿ ಒಂದು ವಿಶಿಷ್ಟವಾದ ಬೆಸುಗೆ ಇದೆ...ಹಾಗಾಗಿಯೇ ನನ್ನಂತಹವರು ಗೆಳೆತನಕ್ಕಾಗಿ ಪ್ರತಿ ಕ್ಷಣ ಹಂಬಲಿಸುತ್ತಾರೆ....ಒಂದು ಪಕ್ಷ ನನಗೆ ಸಾವು ಬರುವುದು ಗೊತ್ತಾದರೆ, ಆ ಕ್ಷಣದಲ್ಲಿ ನಾನು ನನ್ನ ಆತ್ಮಿಯ ಗೆಳೆಯರ ಸಂಗದದಲ್ಲೇ ಪ್ರಾಣ ಬಿಡಲು ಬಯಸುತ್ತೇನೆ....ಗೆಳೆತನವೇ ನನ್ನ ಬದುಕಿನ ಶಕ್ತಿ....ಯೋಗೀಶ್ ಪ್ರಭು ಹಾಗು ಯತೀಶ್ ರಂತೆ ಪ್ರೀತಿಸುವ ಸಾವಿರಾರು ಗೆಳೆಯರಿಗಾಗಿ ಈ ಪುಟ್ಟ ಕವಿತೆ ಅರ್ಪಣೆ....ಬಡ ಗೆಳೆಯನ ಒಲವಿನ ಉಡುಗೊರೆ, ನನ್ನ ಪ್ರೀತಿಯ ಗೆಳೆಯರಿಗೆ...ಒಪ್ಪಿಸಿಕೊಳ್ಳಿ...)
ಗೆಳೆಯ....
ಗೆಳೆಯ ,
ನನ್ನೆದೆಯ ದುಃಖದ ಕಡಲಿಗೆ,
ನಗುವಿನ ಅಣೆಕಟ್ಟು ಕಟ್ಟಿದವನು/
ಗೆಳೆಯ,
ಬದುಕು ಹಾದಿಯ ಕಹಿಗೆ,
ಸಾಂತ್ವಾನದ ಸಿಹಿ ಉಣಿಸಿ ದವನು/
ಗೆಳೆಯ,
ಸೋತಾಗ, ಸಾಯಬೇಕೆಂದಾಗ,
ಹೊಸ ಬದುಕಿಗೆ "ಚೆಯರ್ಸ್" ಹೇಳಿದವನು/
ಗೆಳೆಯ,
ಅಲೆಮಾರಿ ದಿನದ ಏಕಾಂಗಿತನದಲ್ಲಿ,
ನೆಲೆಯೂರಲು ಜೋತೆಯಾದವನು/
ಗೆಳೆಯ,
ಹುಚ್ಚು ಮನಸ್ಸಿಗೆ ಕನ್ನಡಿ ಹಿಡಿದು,
"ನನ್ನೊಳಗಿನ ಮನುಷ್ಯ" ನನ್ನು ತೋರಿಸಿದವನು/
ಗೆಳೆಯ,
ಸ್ಪೂರ್ತಿಯ ಚಿಲುಮೆಯಂತೆ, ಒಲವಿನ ಗಣಿ ಯಂತೆ,
ಬರಿದಾದ ಬದುಕಲ್ಲಿ ಬೆಳಕ ತಂದವನು/
ಗೆಳೆಯ,
ವರ್ತಮಾದಲ್ಲಿ ಜೋತೆಗಿರುವವನು,
ನನ್ನ ನಾಳೆಗಳಲ್ಲಿ ನಂಬಿಕೆ ಬರಿಸುವವನು/
ಇವನ ಹೆಸರು ಗೆಳೆಯ,
ನನ್ನ ಮನಸಿನ ಇನಿಯ/
1 comment:
ಚೆನ್ನಾಗಿದೆ .. Friendship ಬೆಗ್ಗೆ ತುಂಬಾ ಚೆನ್ನಾಗ್ ಹೇಳಿದಿರಾ
Post a Comment