ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Sunday, September 21, 2008

"ತರಗತಿ...?!

ಕೂಡಿ ಹಾಕುವರು ಕೊಠಡಿಯೊಳಗೆ,
ಪಾಠದ ನೆಪದಲಿ,
ಇದರ ಹೆಸರು ತರಗತಿ,
ವಾರ್ಷಿಕ ಪರೀಕ್ಷೆಗಳಿಗೆ ತರಭೇತಿ,
ಹಾಜರಾತಿ ಖಡ್ಡಾಯ , ಕುರ್ಚಿ, ಬೆಂಚುಗಳ ಮೇಲೆ,
ಕಪ್ಪು ಹಲಗೆಯ ಮೇಲೆ ಪುಸ್ತಕದ ಪಡಿಯಚ್ಚು ,
ಕಂಡದ್ದು, ನೋಡಿದ ಘಟನೆಗಳ ಮೆಲಕು ಮನಸ್ಸಿನ ಒಳಗೆ,
ಮನಸ್ಸೋ, ಶಿಕಾರಿಗೆ ಹೊರಟ ಅಲೆಮಾರಿ,
ನೆನಪಾಗುವಳು ಪುಟ್ಟ ಜಡೆಯ ಹುಡುಗಿ,
ತಲೆಗೆ ಹತ್ತದು ಮೇಡಂ ನ ತ್ರಿಪದಿ..... !


ಕುದುರೆಯ ಕಣ್ ಪಟ್ಟಿಯಂತಲ್ಲ ,ಹರೆಯದ ಬದುಕು,
ಆ ಕಡೆ , ಈ ಕಡೆ ಹೊರಳುವುದು ಕಣ್ಣು ,
ಕಲಿಯಲಾಗಲಿಲ್ಲ ತರಗತಿಯ ಗೋಡೆಗಳ ಒಳಗೆ,
ಕಲಿಸಿದೆ ಆಚೆಗಿನ ಬದುಕು,
ಪರೀಕ್ಷೆಯಲಿ ಬರೆಯಬೇಕಿರುವುದು,
ಅರ್ಥ ಮಾಡಿಕೊಳ್ಳುವ ಹಂಗಿಲ್ಲ,
ಪರೀಕ್ಷೆಗೆ ಈಡಾಗುವುದು ,ನಿರಂತರ ತಪ್ಪಿದ್ದಲ್ಲ,
ಕಲಿಯುವುದು ಹಾಗೆ, ನಿರಂತರ,
ನೆವಗಳು, ನೆಪಗಳು ಸಮರ್ಥನೆಗಳೇ ಅಲ್ಲ......!

ತರಗತಿಯ ಒಳಗೆ, ಹೀಗೆಲ್ಲ ಅನಿಸುವುದೇ ಇಲ್ಲ ,
ಯೋಚಿಸುತ್ತಾ ಕುಳಿತರೆ, , ಮತ್ತೊಂದು ಕ್ಲಾಸು, ಮತ್ತೊಂದು ವರ್ಷ,
ಈಗ ಕಪ್ಪು ಹಲಗೆ ನನ್ನೆದುರಿಗೆ ಇದೆ,
ಕೈ ಬೆರಳುಗಳ ನಡುವೆ ಸೀಮೆಸುಣ್ಣ,
ಅದಲು ಬದಲಾಗಿದೆ , ತರಗತಿಯ ಸ್ಥಾನ ಮಾನ ,
ಬದಲಾಗಿವೆ ಅಭಿನಯಿಸಿದ ಪಾತ್ರಗಳು ,
ನೆನಪಾಗುತಿದೆ, ಇದೆ ಗೋಡೆಗಳ ನಡುವೆ ,
ಕಳೆದ ಕಾಲಮಾನ, ಕಳೆಯಬೇಕಿರುವ ವರ್ತಮಾನ...!

(ನಮಸ್ತೆ ಸ್ನೇಹಿತರೇ, ತರಗತಿಯಲ್ಲಿ ಕಳೆದ ಕ್ಷಣಗಳ ಮಧುರ ಸ್ಮೃತಿಯ ನೆನಪಿನ ಅಲೆಯಲ್ಲಿ ತೇಲಿ ಬಂದ ಭಾವ ಬಿಂದು...ಈ "ತರಗತಿ")






ಕವಿತೆಗಳು



3 comments:

Santhosh Rao said...

Chennagide ..

Unknown said...

Super agide kandri, Ilike you kandri,

ಸೀತಾರಾಮ. ಕೆ. / SITARAM.K said...

ತುಂಬಾ ಚೆಂದದ ಬರವಣಿಗೆ.