ಡಿಯರ್ ಪ್ರೆಂಡ್ಸ್ ನನ್ನ ಮತ್ತು ನನ್ನ ಸಮಕಾಲಿನ ಸ್ನೇಹಿತರ ವಯಸ್ಸು ಕಾಲು ಶತಮಾನ ವನ್ನು ದಾಟಿಯಾಗಿದೆ. ಬ್ರಹ್ಮಚರ್ಯ ದ
ಹಂತ ವನ್ನು ದಾಟಿ ಒಬ್ಬೊಬ್ಬರಾಗಿ ಎಲ್ಲರೂ ದಾಂಪತ್ಯ ಪರ್ವಕ್ಕೆ ಕಾಲಿಡುತ್ತಿದ್ದಾರೆ. ನನ್ನ ಮಗನಿಗೋ ಬರೋಬ್ಬರಿ 2 ವರ್ಷ
ಮುಂದಿನ ಫೆಬ್ರವರಿ 25 ಕ್ಕೆ . ಈ ಕವಿತೆ ಅವನಿಗೆ ನಾಮಕರಣ (ಹಿಮಘನ ತೇಜಸ್ ) ಮಾಡುವ ವೇಳೆ ನನ್ನೊಳಗೆ
ಮೂಡಿದ ಭಾವ . ಅಪ್ ಕೋರ್ಸ್ ಪ್ರತಿಯೊಬ್ಬ ತಂದೆಯ ಅಥವಾ ಪೋಷಕರ ಆಶಯ ಇದೆ ಆಗಿರುತ್ತದೆ. ಹಾಗಾಗಿಯೇ ಈ
ಕವಿತೆಯನ್ನು ಈಗಾಗಲೇ ಜನ್ಮಿಸಿರುವ ಹಾಗು ಮುಂದೆ ಹುಟ್ಟುವ ಎಲ್ಲಾ ನನ್ನ ಗೆಳೆಯ/ತಿ ಯರ ಮಕ್ಕಳಿಗೆ ಸಮರ್ಪಿಸುತ್ತೇನೆ.
ಹಾಗೆಯೇ ಆರ್ಕುಟ್ ನ ಆತ್ಮಿಯರಾದ ದೀಪ ಮತ್ತು ಹರೀಶ್ ದಂಪತಿಗಳಿಗೆ ಹಾಗು ನನ್ನ ನಲ್ಮೆಯ ಅಕ್ಕ ಸುಲಕ್ಷಣ ಳಿಗೆ
ಮಗು ಜನ್ಮಿಸಿವೆ , ಅವರಿಗೂ ನನ್ನ ಶುಭಾಶಯಗಳು .
:" ನಿನ್ನ ಹೆಸರು ....................."
ಜಗದ ಚರಿತ್ರೆಯಲಿ,
ಯುಗದ ಮಾತುಗಳಲಿ,
ಹಸಿರಾಗಲಿ ನಿನ್ನ ಹೆಸರು\
ಹಡೆದವರ ಖುಷಿಯಾಗಿ,
ಸಾಧನೆಯಲಿ ಋಷಿ ಯಾಗಿ ,
ಹೆಸರಾಗಲಿ ನಿನ್ನ ಹೆಸರು.\
ಮುಗ್ದ ನಗುವಿನ ಮೊಗವಾಗಿ,
ಮುದ್ದು ಚೆಲುವಿನ ಸಿರಿಯಾಗಿ,
ಮೆರೆದಾಡಲಿ ನಿನ್ನ ಹೆಸರು\
ಸವಿ ನುಡಿಯ ದೊರೆಯಾಗಿ,
ಹರಿದಾಡಲಿ ನಿನ್ನ ಹೆಸರು\
ಕರುನಾಡ ಕನ್ನಡಿಯಾಗಿ,
ಈ ಮಣ್ಣಿನ ಕಣ್ಮಣಿಯಾಗಿ,
ಜಗದಲಿರಲಿ ನಿನ್ನ ಹೆಸರು \
1 comment:
ಸುಂದರ ಕವನ.......ಶಿಶುವಿಗೆ ಶುಭವಾಗಲಿ....
Post a Comment