ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, February 13, 2014

ಪ್ರೀತಿ.....ಕನಸು.....ಕನವರಿಕೆ....ಮತ್ತು ಇನ್ನು ಹಲವು........!!!

ಆತ್ಮೀಯ ಪ್ರೀತಿ ಪಾತ್ರ ಎಲ್ಲಾ  ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭಾಷಯಗಳು.


ನಾನು ಪ್ರೀತಿಸಿದ್ದೆ................!!!

ಎಂದು ನನ್ನ ಮಡದಿಯ ಮುಂದೆ ಆತ್ಮನಿವೇದನೆ ಮಾಡಿಕೊಳ್ಳುವಾಗ ನನ್ನಲ್ಲಿ ದೀರ್ಘ ನಿಟ್ಟುಸಿರು. ಎಲ್ಲವನ್ನು ಕೇಳಿದೆ ಆಕೆ ಹೇಳಿದ್ದು. " ರೀ ನೀವು ನನಗೆ ೬ ವರ್ಷದ ಕೆಳಗೆ ಸಿಗಬೇಕಿತ್ತು. ನೀವು ಪ್ರೀತಿಸುತ್ತಿದ್ದ ಆ ಹುಡುಗಿ ಗ ಜಾಗದಲ್ಲಿ ನಾನಿರಬೇಕಿತ್ತು. ಆದರೆ ಆಕೆಯ ಹಾಗೆ ನಿಮ್ಮನ್ನ ನಾನು ಬಿಟ್ಟುಹೋಗ್ತಿರಲಿಲ್ಲ. ಎನೇ ಬಂದರು ಎದುರಿಸಿ ನಿಮ್ಮನ್ನೆ ಮದುವೆ ಆಗುತ್ತಿದ್ದೆ". ಅವಳ ಮಾತು ಕೇಳುತ್ತಿದ್ದ ಹಾಗೆ ನನ್ನ ಕಣ್ಣಂಚುಗಳು ಒದ್ದೆಯಾದವು. ಆಕೆಯ ಹಣೆಗೊಂದು ಹೂ ಮುತ್ತು ಕೋಟ್ಟೆ. ಕಣ್ಣೀರು ಕೆನ್ನೆಗಿಳಿಯುತ್ತಿತ್ತು. ಹರೆಯದ ದಿವ್ಯವಾದ ನೆನಪುಗಳು ಮೌನದ ಮೊರೆ ಹೋಗಿದ್ದವು. ಕಣ್ಣೆದುರಿಗಿನ ಪ್ರೀತಿ ಧನ್ಯತೆ ಮೆರೆದಿತ್ತು.


ಮುದ್ದಿನ ಮಡದಿಯ ವಿಶಾಲ ಮನೋಭಾವ, ಪರಸ್ಪರ ಅರ್ಥಮಾಡಿಕೊಳ್ಳುವ, ಆಗಿ ಹೋದ ಘಟನೆಗಳನ್ನು ಕ್ಷಮಿಸುವ ಉದಾರ ಮನಸ್ಸು, ಇರುವುದನ್ನು ಇರುವ ಹಾಗೆ ಒಪ್ಪಿಕೋಳ್ಳುವ ಹೃದಯ ವೈಶಾಲ್ಯ, ಮಗುವಿನ ಮುಗ್ಢತೆ, ಪ್ರೀತಿಯಲ್ಲಿನ ನಂಬಿಕೆ ಇವೆಲ್ಲವು ಗಳು ನಮ್ಮ ಒಲವನ್ನು ಗಟ್ಟಿಗೊಳಿಸಿವೆ. ನಮ್ಮ ಬದುಕಿನಲ್ಲಿ ಧನ್ಯತೆ ಮೂಡಿಸಿದೆ.


ಹರೆಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿಯ ಸಿಹಿ ಗಾಳಿ ಬೀಸಿಯೆ ಇರುತ್ತದೆ. ಅದು ಹೃದಯದಿಂದ ಮೊಡಿದ್ದೆ ಆಗಿದ್ದರೆ ಸುಂದರ ಬದುಕಿಗೆ ಮುನ್ನುಡಿಯಾಗುತ್ತದೆ. ಕೆಲವು ವೇಳೆ ಇನ್ಪ್ಯಾಚುಯೇಶನ್, ಜಾತಿಯ ಒಳಸುಳಿ, ಪೋಷಕರ ಮೇಲಿನ ವ್ಯಾಮೋಹ , ನಮ್ಮಗಳ ಅಹಂಕಾರ ಇತ್ಯಾದಿ ಕಾರಣಗಳಿಗೆ ಬಿರುಗಾಳಿಯಾಗಿ ಪರಿವರ್ತನೆಯಾಗಿಬಿಡುತ್ತದೆ.

ನನ್ನ ಬದುಕಿನಲ್ಲಿ ಪ್ರೀತಿಯ ವಿವಿಧ ಮಜಲುಗಳನ್ನು ಅನುಭವಿಸಿದ್ದೇನೆ. ಹಲವು ಗೆಳೆಯರ ಬದುಕಿನ ಪ್ರೀತಿ ಚಿತ್ರಣಗಳನ್ನು ಕಣ್ಣಾರೆ ಕಂಡಿದ್ದೇನೆ. ಇವೆಲ್ಲದರ ಆಸರೆಯಿಂದಲೆ ಒಂದು ಕಾದಂಬರಿ ಬರೆಯಹೊರಟಿದ್ದೇನೆ. ಅದುವೇ " ಬಿಟ್ಟುಹೋದವಳಿಗೊಂದು ಥ್ಯಾಂಕ್ಸ್ ".  ಅವಳು ಬಿಟ್ಟು ಹೋಗಿದ್ದರಿಂಗಲೇ ನನಗೆ ನನ್ನ ಬದುಕಿನ ಸ್ಪೂರ್ಥಿಸೆಲೆ, ಜೀವ ಸಖಿ ಮಡದಿ ಲಕ್ಶ್ಮಿ ಸಿಕ್ಕಿದ್ದು. ಅದು ಕೂಡ ಪ್ರೀತಿಯಿಂದಲೆ ಅದಂತದ್ದು. ಬಹಶ: ಎಲ್ಲಾ ಪ್ರೀತಿಸುವ ಹುಡುಗಿ/ಹುಡುಗರು ಬಿಟ್ಟು ಹೋಗುವಾಗ " ನನಗಿಂದ ಒಳ್ಳೆಯ ಹುಡುಗ/ಹುಡುಗಿ ಸಿಗುತ್ತಾರೆ, ನನ್ನನ್ನು ಮರೆತುಬಿಡು " ಅಂತಲೇ ವಿಧಾಯದ ಬೀಳ್ಕ್ಕೊಡುಗೆ ಮಾತುಗಳನ್ನಾಡುತ್ತಾರೆ. ಬಹುಷ: ಆ ಹಾರೈಕೆ ನನ್ನ ಬದುಕಿನಲ್ಲಿ ನಿಜವಾಗಿದೆ. ಅದಕ್ಕೆ ಅವಳಿಗೆ ಥ್ಯಾಂಕ್ಸ್.


ವಿಪರ್ಯಾಸ ಎಂದರೆ ಪ್ರೀತಿಸುತ್ತಿದ್ದ ದಿನಗಳಲ್ಲಿ ಇದ್ದ ಇಲ್ಲಾ ಪಾತ್ರಗಳು ಬೆಂಗಳೂರಿನಲ್ಲಿಯೆ ನೆಲೆಸಿವೆ. ಪ್ರೀತಿಸಿದ್ದ ಹುಡುಗಿಗೆ ಮಧುವೆಯೂ ಆಗಿದೆ. ಮಕ್ಕಳೂ ಕೂಡ. ಆದರೆ ಆಕೆ ತಾನು ಪ್ರೀತಿಸಿದ್ದ ಹುಡುಗನನ್ನೆ ಅವಳ ಮಧುವೆಗೆ ಕರೆಯಲಿಲ್ಲ. ನಾನು ಕೂಡ ಅವಳು ಮಧುವೆಯಾದ ಕೆಲವೆ ದಿನಗಳಲ್ಲಿ ಸ್ಪರ್ಧೆಗೆ ಬಿದ್ದವನಂತೆ ಪ್ರೀತಿಸಿಯೆ ಮಧುವೆಯಾದೆ. ಅದು ಕೆಲವೇ ಕ್ಷಣಗಳ ಪ್ರೀತಿ, ಕೆಲವೆ ದಿನಗಳಲ್ಲಿ ಸಿಂಧು ವಾಯಿತು. ಈಗ ನನಗೆ ಇಬ್ಬರು ಮಕ್ಕಳು. ಸುಂದರ ಸಂಸಾರ. ಆದರೆ ನೆನಪುಗಳು ಸಾಗರ.


ಇನ್ನೋ ಹೇಳುವ ಭಾವಗಳು , ಆಡದ ಮಾತುಗಳು ಬಹಳಸ್ಟಿವೆ. ಬಟ್ ನಿಮಗು ಕೆಲವು ಸುಂದರ ನೆನಪುಗಳಿವೆ.ಪ್ರೀತಿಯ ಒಡನಾಟವಿದೆ. ಅವನ್ನು ಭಾವಿಸಿಕೊಳ್ಳಿ. ಮತ್ತೆ ಸಿಗುವ.

ನಿಮ್ಮ ಪ್ರೀತಿ ನಿಮ್ಮನ್ನು ಸದಾ ಸಂತಸದಿಂದಿರಿಸಲಿ.
ನಿಮ್ಮ ಒಲವು ನಗುವ ಪ್ರತಿ ದಿನವು ಪ್ರೀತಿ ದಿನವಾಗಲಿ.
ಸುಂದರ ಕ್ಷಣಗಳು ನಿಮ್ಮ ಬದುಕಿನಲ್ಲಿ ಸದಾ ತುಂಬಿರಲಿ.

ನಿಮ್ಮವ...

ಚುಕ್ಕಿ.....
ಬಿಂದುವಿನಿಂದ ಅನಂತದೆಡೆಗೆ......


3 comments:

Aniket said...

Namaskara sir... Chennagi bareetiri...
Aniket

Aniket said...

Post officeli meet aagidnala ivattu beligge....ade Aniket

*ಚುಕ್ಕಿ* said...

ಧನ್ಯವಾದಗಳು ಸರ್, ನಿಮ್ಮ ಅಕ್ಕರೆ ಹೀಗೆ ಇರಲಿ.