ಡಿಯರ್ ಪ್ರೆಂಡ್ಸ್ ನಮಸ್ತೆ,
ಮಾರ್ಚ್ 24, ಸಾವಿರದ ಎಂಬತೈದನೆ ಯ ಇಸವಿ(1985). ಅಂದು 23 ಕ್ಕೆ ಯುಗಾದಿ ಹಬ್ಬ ಬಂದಿತ್ತು. ಮಾರನೆಯ ದಿನ ಸಾಮಾನ್ಯವಾಗಿ ವಿಶೇಷ ಅಡುಗೆ ಮಾಡುತ್ತಾರೆ. ಆ ವರ್ಶದ ಆ ದಿನ ನಮ್ಮ ಮನೆಯಲ್ಲಿ ವಿಶೇಷ ಸಂಭ್ರಮ. ಆ ವಿಶೇಷವೆ " ನಾನು". ಲಿಂಗೇಶ್ ಅಂತ ಅಪ್ಪ ಇಟ್ಟ ಹೆಸರು ಮತ್ತು "ಚುಕ್ಕಿ...ಬಿಂದುವಿನಿಂದ ಅನಂತದೆಡೆಗೆ..." ಅಂತಾ ನನಗೆ ನಾನೆ ಇಟ್ಟುಕೊಂಡ ಹೆಸರು.
2014 ಮಾರ್ಚ್ ಮಾಸಕ್ಕೆ ಸರಿಯಾಗಿ ಬರೊಬ್ಬರಿ ನನ್ನ ಬದುಕಿನ 29 ವರ್ಶಗಳು ಕಳೆದುಹೋಗುತ್ತವೆ . ಮುವತ್ತರ ಹೊಸ ಸೂರ್ಯ ಮಾರ್ಚ್24 ಕ್ಕೆ ಉದಯಿಸುತ್ತಾನೆ, ಕಳೆದ ಬದುಕಿನ ಹಗಲು-ರಾತ್ರಿಗಳ ನೆನಪಿಸಿಕೊಂಡು, ಹೊಸ ದಿನ, ಹೊಸ ಭಾವ, ಹೊಸಕನಸು, ಹೊಸ ಕನವರಿಕೆಗಳಿಗೆ ಬದುಕನ್ನ ತೆರೆದುಕೊಳ್ಳಲು ಮೌನವಾಗಿ ನಾನು ಆ ದಿನವನ್ನು ಬರಮಾಡಿಕೊಳ್ಳುತ್ತೇನೆ ಮತ್ತು ನೀವು ಕರೆ ಮಾಡಿ ಹೇಳುತ್ತೀರಿ, ಸಂದೇಶ ಕಳುಹಿಸುತ್ತೀರಿ. "ಹುಟ್ಟು ಹಬ್ಬದ ಶುಭಾಷಯಗಳು ಗೆಳೆಯ" ಮತ್ತು ನಾನು ತಿಳಿಸುತ್ತೇನೆ , ನನ್ನ ಮೌನ ಕೃತಘ್ಜ್ನತೆಗಳು ಎಲ್ಲರಿಗೂ , ಎಲ್ಲವಕ್ಕೂ ..., ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.
ಇನ್ನೇನೊ ಕೆಲವೇ ದಿನಗಳಲ್ಲಿ ಯುಗಾದಿ ಅರಸಿ ಬರುತ್ತಿದೆ ನಮ್ಮಗಳ ನಲಿವಿಗೆ...
ಯುಗ ಯುಗಗಳು ಕಳೆದರು ಯುಗಾದಿ ಮರಳಿ ಬರುತಿದೆ, ಹೊಸ ವರ್ಷ, ಹೊಸ ಸಂತಸ, ಉಲ್ಲಾಸ, ಉತ್ಸಾಹ, ಹೊಸ ಕನಸು, ಹೊಸ ವಸಂತ. ಎಲ್ಲವು ಹೊಸತು, ನಿತ್ಯ ನೂತನ ವಿನೂತನ ಸಂತಸದ ಹೂರಣ, ಜೊತೆಗೆ ನೋವು- ನಲಿವುಗಳ ಸಮ್ಮಿಲನ, ಬೇವು - ಬೆಲ್ಲದ ಸವಿಗಾನ.
ಆತ್ಮಿಯರೇ, ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಜೊತೆಗೆ ಯುಗಾದಿಯ ಬೆನ್ನಲ್ಲೇ ನನ್ನ ಬದುಕಿನ ಹೊಸ ವರ್ಷ ಪ್ರಾರಂಭ . ಮಾರ್ಚ್ ೨೪ ರಂದು ನನ್ನ ಬದುಕಿನ ಮತ್ತೊಂದು ಹೊಸ ವಸಂತ ನನ್ನ ಬದುಕಿನ ಅಂಗಳಕ್ಕೆ ಬಂದು ನಿಂತಿದೆ.
ದಿನಗಳು, ವರ್ಷಗಳು ಅದೆಷ್ಟು ಬೇಗ ಸರಿದುಹೊಗುತ್ತಿವೆ ಅನ್ನಿಸುತ್ತಿದೆ.
ನನಗೀಗ ಬರೋಬ್ಬರಿ ೨೯ ವರ್ಷಗಳು, ಜೊತೆಗೆ ಒಬ್ಬಳು ಮಡದಿ, ಮುದ್ದಾದ ಈರ್ವರು ಮಕ್ಕಳು, ವೃತ್ತಿಗೆ ಅಂಚೆ ಇಲಾಖೆ, ಪ್ರವೃತ್ತಿಗೆ ಸಾಹಿತ್ಯ, ಸಮಾಜಮುಖಿಯಾದ ಕೆಲವೊಂದಿಷ್ಟು ಕೆಲಸಗಳು, ಅಪ್ಪ , ಅಮ್ಮ, ತಮ್ಮ, ಗೆಳೆತನಕ್ಕೆ ನಿಮ್ಮಂತ ಸಾವಿರಾರು ಸಹೃದಯ ಹೃದಯಗಳು.
ಬದುಕು ಧನ್ಯ. ಜೊತಗೆ ಅನಂತದೆಡೆಗೆ ನನ್ನ ಹೆಜ್ಜೆಗಳು.....
ಈ ಸಂದರ್ಭದಲ್ಲಿ ನನ್ನ ಇಷ್ಟು ವರ್ಷದ ಬದುಕಿನ ಅಂಗಳಕ್ಕೆ ಕಾಲಿರಿಸಿದ , ನನ್ನ ಬದುಕಿನ ಹಾದಿಯಲ್ಲಿ ಎದುರಾದ ಎಲ್ಲಾ ಸಹೃದಯರನ್ನು, ಘಟನೆಗಳನ್ನು ನೆನೆಸಿಕೊಳ್ಳುವುದು ನನ್ನ ಕರ್ತವ್ಯ.
ಮುಂದಿನ ದಿನಗಳಲ್ಲೂ ನನ್ನ ಕನಸುಗಳೊಟ್ಟಿಗೆ ನೀವಿರುತ್ತೀರೆಂಬ ಆಶಯದೊಂದಿಗೆ ನಿಮ್ಮೆಲ್ಲರಿಗೂ ಹೊಸ ವಸಂತದ ಶುಭಾಶಯಗಳು.
ಕನಸುಗಳೋಟ್ಟಿಗೆ ಕೈ ಜೋಡಿಸಿ ,
ತಾರೆಗಳನ್ನು ಎಟುಕಿಸೋಣ....................
ನಿಮ್ಮವ ,ನಿಮ್ಮಲ್ಲೊಬ್ಬ,
--
* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)

ಎಲ್ಲರಿಗೂ , ಎಲ್ಲವಕ್ಕೂ ನನ್ನ ಕೃತಜ್ಞತೆಗಳು, ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.
ಮುಂದಿನ ದಿನಗಳಲ್ಲೂ ನನ್ನ ಕನಸುಗಳೊಟ್ಟಿಗೆ ನೀವಿರುತ್ತೀರೆಂಬ ಆಶಯದೊಂದಿಗೆ ನಿಮ್ಮೆಲ್ಲರಿಗೂ ಹೊಸ ವಸಂತದ ಶುಭಾಶಯಗಳು.
ಕನಸುಗಳೋಟ್ಟಿಗೆ ಕೈ ಜೋಡಿಸಿ ,
ತಾರೆಗಳನ್ನು ಎಟುಕಿಸೋಣ....................
ನಿಮ್ಮವ ,ನಿಮ್ಮಲ್ಲೊಬ್ಬ,
--
* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)
No comments:
Post a Comment