ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Tuesday, February 14, 2012

ಪ್ರೀತಿ ....... ನಿನಗೆಲ್ಲಿಯ ವ್ಯಾಖ್ಯಾನ ?!

ಆತ್ಮೀಯ ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭ ಹಾರೈಕೆಗಳು. 

ಪ್ರೀತಿ ಎಂದರೆ ಅದು ಒಂದು ದಿನದ ಸಂಭ್ರಮವಲ್ಲ, ಒಂದು ದಿನದ ಆಚರಣೆಯಲ್ಲ. ಅದು ನಿತ್ಯ ನಿರಂತರ ಸ್ಪೂರ್ತಿ,
ಸ್ನೇಹ, ನಂಬಿಕೆ,ಆಸರೆ,ಅಕ್ಕರೆ,ಆದರ , ಅಭಿಮಾನ ಗಳ ಚೈತನ್ಯ ,ಅದಮ್ಯ ಚೇತನ. ನನಗನಿಸಿದ ಹಾಗೆ, ನಾನು 
ಅನುಭವಿಸಿದ ಹಾಗೆ ಪ್ರೀತಿಯೆಂದರೆ ಭಾಷೆಗೆ ನಿಲುಕದ ಭಾವ ದೀಪ್ತಿ. ಎಲ್ಲಾ ಅರ್ಥಗಳ ಆಚೆಗಿನ ಅರ್ಥ ,
ಬದುಕಿನ ಚೈತನ್ಯ.



ಪ್ರೀತಿ .......
ನಿನಗೆಲ್ಲಿಯ  ವ್ಯಾಖ್ಯಾನ ?!
ಎಂದೂ ಮುಗಿಯದ ಮಧುರ ಗೀತೆ,
ಅನಂತ ಅರ್ಥಗಳ ಆಗಸ ನೀನು//


ಬಯಸುವ ಹೃದಯಗಳ,
ಮಹೋನ್ನತ ಭಾವ ನೀನು . 
ಮನಸು-ಹೃದಯ -ಆತ್ಮಗಳ,
ಸಮ್ಮಿಲನದ ಭಾಷೆ ನೀನು //




ಹೃದಯದ ಗರ್ಭದಲ್ಲಿ,
ಅಡಗಿಸಿಟ್ಟ ಮುತ್ತು ನೀನು/
ಪ್ರತಿ ಘಳಿಗೆ, ಪ್ರತಿ ಘಂಟೆ, ಪ್ರತಿ ದಿನ,
ಭಾವಿಸುವ ಭಾಂದವ್ಯ  ನೀನು //  

ಭಾಹುಗಳ ಬೆಚ್ಚನೆಯ ಸ್ಪರ್ಶ, 
ತೋಳುಗಳ ಮಧುರ ಅಪ್ಪುಗೆ.
ಎದೆಯ ಬಡಿತ, ನಾಡಿಗಳ ಮಿಡಿತ/
ಕಣ್ಣುಗಳ ಸೆಳೆತ, ಹರೆಯದ ಹರಿತ //  

ಏನಲ್ಲ ನೀನು,ಏನಿಲ್ಲ ನಿನ್ನಲಿ....?!

 

ಆಶಿರ್ವದಿಸಿದ ಎರಡು ಆತ್ಮಗಳು,
ಹಂಚಿಕೊಳ್ಳುವ ಅದ್ಬುತ ಉಡುಗೊರೆ/
ಸ್ವರ್ಗವನ್ನೇ ಭುವಿ ಮೇಲೆ ತೆರೆದಿಡುವ 
ಮಧುರ,ಅಮರ ಅನುಭವ//
  
ನಿಮಗೇನನ್ನಿಸುತ್ತದೆ . ದಯವಿಟ್ಟು ತಿಳಿಸಿ. ಪ್ರೀತಿಯೆಂದರೆ ಹಂಚಿಕೊಳ್ಳುವುದು ಅಲ್ವಾ? 


ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಅಮರವಾಗಲಿ , ನಿಮ್ಮೆಲ್ಲರ ಬದುಕಿನಲ್ಲಿ ಪ್ರೀತಿ ಸದಾ ಚಾಲ್ತಿಯಲ್ಲಿರಲಿ. 

ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ..................ನಿಮ್ಮೆಲ್ಲರ ಪ್ರೀತಿಯಿಂದ........ 



Thursday, February 9, 2012

:" ನಿನ್ನ ಹೆಸರು ....................."

ಡಿಯರ್ ಪ್ರೆಂಡ್ಸ್ ನನ್ನ ಮತ್ತು ನನ್ನ ಸಮಕಾಲಿನ ಸ್ನೇಹಿತರ ವಯಸ್ಸು ಕಾಲು ಶತಮಾನ ವನ್ನು ದಾಟಿಯಾಗಿದೆ. ಬ್ರಹ್ಮಚರ್ಯ ದ 
ಹಂತ ವನ್ನು ದಾಟಿ ಒಬ್ಬೊಬ್ಬರಾಗಿ ಎಲ್ಲರೂ ದಾಂಪತ್ಯ ಪರ್ವಕ್ಕೆ ಕಾಲಿಡುತ್ತಿದ್ದಾರೆ. ನನ್ನ ಮಗನಿಗೋ ಬರೋಬ್ಬರಿ 2  ವರ್ಷ 
ಮುಂದಿನ ಫೆಬ್ರವರಿ 25   ಕ್ಕೆ .  ಈ ಕವಿತೆ ಅವನಿಗೆ ನಾಮಕರಣ  (ಹಿಮಘನ  ತೇಜಸ್ ) ಮಾಡುವ ವೇಳೆ  ನನ್ನೊಳಗೆ 
ಮೂಡಿದ ಭಾವ . ಅಪ್ ಕೋರ್ಸ್ ಪ್ರತಿಯೊಬ್ಬ ತಂದೆಯ  ಅಥವಾ ಪೋಷಕರ ಆಶಯ ಇದೆ ಆಗಿರುತ್ತದೆ. ಹಾಗಾಗಿಯೇ ಈ 
ಕವಿತೆಯನ್ನು ಈಗಾಗಲೇ ಜನ್ಮಿಸಿರುವ ಹಾಗು ಮುಂದೆ ಹುಟ್ಟುವ ಎಲ್ಲಾ ನನ್ನ ಗೆಳೆಯ/ತಿ ಯರ ಮಕ್ಕಳಿಗೆ ಸಮರ್ಪಿಸುತ್ತೇನೆ. 
ಹಾಗೆಯೇ ಆರ್ಕುಟ್ ನ ಆತ್ಮಿಯರಾದ ದೀಪ ಮತ್ತು ಹರೀಶ್ ದಂಪತಿಗಳಿಗೆ ಹಾಗು ನನ್ನ ನಲ್ಮೆಯ ಅಕ್ಕ ಸುಲಕ್ಷಣ ಳಿಗೆ 
 ಮಗು ಜನ್ಮಿಸಿವೆ , ಅವರಿಗೂ ನನ್ನ  ಶುಭಾಶಯಗಳು . 

:" ನಿನ್ನ ಹೆಸರು ....................."

 




ಜಗದ ಚರಿತ್ರೆಯಲಿ,
ಯುಗದ ಮಾತುಗಳಲಿ, 
ಹಸಿರಾಗಲಿ ನಿನ್ನ ಹೆಸರು\ 

ಹಡೆದವರ ಖುಷಿಯಾಗಿ, 
ಸಾಧನೆಯಲಿ ಋಷಿ ಯಾಗಿ ,
ಹೆಸರಾಗಲಿ ನಿನ್ನ ಹೆಸರು.\

ಮುಗ್ದ  ನಗುವಿನ ಮೊಗವಾಗಿ,
ಮುದ್ದು ಚೆಲುವಿನ ಸಿರಿಯಾಗಿ,
ಮೆರೆದಾಡಲಿ ನಿನ್ನ ಹೆಸರು\

ಸಿಹಿ ನುಡಿಯ ಜೇನಾಗಿ,
ಸವಿ ನುಡಿಯ ದೊರೆಯಾಗಿ,
ಹರಿದಾಡಲಿ ನಿನ್ನ ಹೆಸರು\


ಕರುನಾಡ ಕನ್ನಡಿಯಾಗಿ,
ಈ ಮಣ್ಣಿನ ಕಣ್ಮಣಿಯಾಗಿ,
ಜಗದಲಿರಲಿ ನಿನ್ನ ಹೆಸರು \




Monday, November 1, 2010

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಲ್ಮೆಯ ಒಲುಮೆಯ ಕನ್ನಡ ಬಂಧುಗಳಿಗೆ "ಕನ್ನಡ ಹಬ್ಬ " ದ ಶುಭಾಶಯಗಳು.



ಕನ್ನಡ, ಕರ್ನಾಟಕ, ಕನ್ನಡ ಜನ ನಮ್ಮ ಆಸ್ತಿ. ಇಂದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿ ಮುಗಿಲೆತ್ತರಕ್ಕೆ ಹಬ್ಬುತ್ತಿದೆ. ಅಂತರ್ಜಾಲದ ಕನ್ನಡ ಮನಸ್ಸುಗಳೆಲ್ಲ ಒಂದಾಗಿವೆ. ಭಾಷೆ ಭಾವನೆಗಳನ್ನು ಬೆಸೆಯುವ ಸಾಧನ. ಅದರಲ್ಲೂ ಕನ್ನಡಕ್ಕಿರುವ ಕಿಮ್ಮತ್ತೆ ಚಂದ. ಸವಿಯಾದ , ಸಿಹಿಯಾದ ಭಾಷೆ, ನಮ್ಮ ಭಾಷೆ. ಕನ್ನಡ , ಕರುನಾಡು ನಮ್ಮ ಹೆಮ್ಮೆ. ಕನ್ನಡಾಂಬೆಗೆ ನಮ್ಮೆಲ್ಲರ ನಮನ.



ಕನ್ನಡ ರಾಜ್ಯೋತ್ಸವದ ಶುಭಾಶಯಗಳು.



ಜೈ ಕರ್ನಾಟಕ ಮಾತೆ.



ಲಿಂಗೆಶ್ ಹುಣಸೂರು.

ಬಿಂದುವಿನಿಂದ ಅನಂತದೆಡೆಗೆ...



ನನ್ನ ಘೋಷ ವಾಕ್ಯ ನನ್ನ ಕರುನಾಡಿಗಾಗಿ .. " ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ"

Monday, October 18, 2010

-+- ಅಲರ್ಜಿ ಮಹಾತ್ಮೆ -+-

ಪ್ರಿಯ ಸ್ನೇಹಿತರೆ,  " ಅಲರ್ಜಿ "  ಯಾತನಮಯವಾದುದು. ಯಾವುದಕ್ಕೂ ಚಿಂತೆ ಮಾಡದೆ ಎಗ್ಗಿಲ್ಲದೆ ಬೆಳೆದ ದೇಹಕ್ಕೆ , ಆಸೆಯ ಮನಸ್ಸಿಗೆ ಅಲರ್ಜಿ ಪೂರ್ಣ ವಿರಾಮ ಇದುವ ದಿವ್ಯಾಸ್ತ್ರ. ಮೊನ್ನೆ ಇದುವರೆಗೂ ಯಾವುದೇ ಅಲರ್ಜಿ ಇಲ್ಲದ ನಾ ಕೂಡ ಇದಕ್ಕೆ ಮುಗ್ಗರಿಸಿಬಿಟ್ಟೆ . ಆ ಸಮಯದಲ್ಲಿ ಅಲರ್ಜಿ ಬಗ್ಗೆ ನನಗನಿಸಿದ್ದು ಹೀಗೆ. ....ಓ ಅಪ್ರಿಯ  ಅಲರ್ಜಿ,  ಏನು ನಿನ್ನ ಲೀಲೆ ?!

ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!


ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ,
ಕಟ್ಟು ನಿಟ್ಟು ಗಳ ಬದಿಗೆ ಸರಿಸಿದ್ದೆ/


ನೀ ಬಂದೆ ಎಲ್ಲಿಂದ,
ಅಹಿತ ಸುಖದ ರೂವಾರಿ, ತುರಿಕೆಯ ರಾಯಭಾರಿ/


ರೋಗ ಬಂದರೆ ದೇಹದ ಒಂದು ಅಂಗಕ್ಕೆ,
ನಿನ್ನ ಲೀಲೆಯೋ ಸರ್ವಾಂಗಕ್ಕೆ/


ಕಡಿತ ಬಂದರೆ ಪರ, ಪರವೇ ಸುಖ,
ಪರ, ಪರ ವೆ ಕಾಯಕವಾದರೆ , ಎಲ್ಲೇ ಇಲ್ಲದ ನರಕ/


ಇನ್ನಾದರೂ ನಡೆಸುವೆ ಶಿಸ್ತುಬದ್ದ ಬದುಕು,
ನಿನ್ನಿಂದ ಕಲಿತೆ ಮಿತಿಯ  ಬಯಕೆ/


ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!

- ಲಿಂಗೆಶ್ ಹುಣಸೂರು (ಚುಕ್ಕಿ )
ಅಲರ್ಜಿಗೆ ಎರಡು ದಿನ ಬಲಿಯಾದ ನಿಮ್ಮ ಗೆಳೆಯ....

Sunday, October 3, 2010

//ಜಾಗೋ ಹಿಂದೂ, ಜಾಗೋ ಭಾರತ್//


ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /

ಚರಿತ್ರೆಯ ಶೋಷಣೆಗಳಿಗೆ
ತಿಲಾಂಜಲಿ ಇಟ್ಟು ,
ಜಾತಿ - ಉಪಜಾತಿ
ಗೋಡೆಗಳ ಮೆಟ್ಟಿ,
ಉಳಿಸಬೇಕು ಸನಾತನ ಧರ್ಮ /

"ನಾವು" ಎಂದರೆ "ಹಿಂದೂ " ಅನಬೇಕು,
ನಮ್ಮ ಒಡೆವ ಕಿಡಿಗೇಡಿಗಳ ಮೇಲೆ ,
ರಣಕಹಳೆ ಮೊಳಗಿಸಬೇಕು,
ಧರ್ಮ ಬೆಳೆಸಬೇಕು/

ನೆನ್ನೆ ಮೊನ್ನೆಯದಲ್ಲ
ನಮ್ಮ ಸಂಸ್ಕೃತಿ,
ಹಿಂದುಸ್ತಾನದ ಜೀವ ಶ್ರುತಿ/

ಹಬ್ಬಬೇಕು ಮುಗಿಲೆತ್ತರಕ್ಕೆ,
ಹರಡಬೇಕು ಜಗದಗಲಕ್ಕೆ ,

ಅದಕ್ಕೆ ಮೊದಲು............

ಬೆಳೆಸಬೇಕು ಏಕತಾಭಾವ,
ಕಿತ್ತೊಗೆಯಬೇಕು ಅಸ್ಪೃಶ್ಯತೆಯ ಜಾಲ,
ಒಂದಾಗಬೇಕು,
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ,
ಮೊಳಗಬೇಕು ಶ್ರೀ ರಾಮ ನಾಮ /

ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /



ಜೈ ಶ್ರೀರಾಮ್ , ಜೈ ಹಿಂದ್ (ದು )

ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ.....

Friday, October 1, 2010

/-ನಮ್ಮ ಹೆಮ್ಮೆಯ ಗಾಂಧೀ ತಾತ- /

ಗಾಂಧೀಜಿ  ಹಾದಿಯಲ್ಲಿ ನಿಮ್ಮ ಗೆಳೆಯ .
ತಾತ, ತಾತ,ತಾತ,
ನಮ್ಮ ಹೆಮ್ಮೆಯ ಗಾಂಧಿ   ತಾತ /

ಕೋಲನು ಹಿಡಿದು ನಡೆಯುವ ತಾತ,
ಕೋಮಲ ಹೃದಯದ ಶಾಂತಿ ಧೂತ/

ಹಸಿವು ಕಲಿಸುತ್ತದೆ, ಬದುಕಿನ ಪಾಠ ,
ಉಪವಾಸದ ಮುಖೇನ, ನೀ ಬೋದಿಸಿದೆ  ವಿಜಯದ ಪಾಠ /

ಹಿಂಸೆಯ ಜಗಕೆ  ತಿಳಿಸಿದೆ ನೀ , ಶಾಂತಿಮಂತ್ರ,
ಅಹಿಂಸೆಯ ಮೂಲಕ ಗಳಿಸಿದೆ ನೀ , ಸ್ವಾತಂತ್ರ್ಯ /

ಸಪ್ತ ಪಾಪಗಳ ತಿಳಿಸಿದೆ ಜಗಕೆ,
ಎಲ್ಲಾ ಪಾಪಗಳ ಮೆಟ್ಟಿ ನಿಂತೆ /

ಸಾರಿದೆ ನೀ, ಎಲ್ಲಾ ಜಾತಿಗಳ ಒಂದೇ ಎಂದು ,
ವಿಶ್ವಧರ್ಮವ ನೀ ಪಾಲಿಸಿದೆ/


ರಾಮರಾಜ್ಯದ ಕನಸನು ಕಂಡೆ,
ಗಾಂಧಿ ಜಯಂತಿಯ ಶುಭಾಶಯಗಳು
ಭಾರತ ಮಾತೆಯ ಉನ್ನತಿಗೆ, ಹೊಸ ದೃಷ್ಟಿ ಕೋನವ  ಕೊಟ್ಟೆ/

ಹಗಲು - ಇರುಳೆನ್ನದೆ ದುಡಿದೆ ನೀ , ಈ ದೇಶಕಾಗಿ,
ನಿನ್ನಾದರ್ಷದಿಂದಲೇ ಈ ದೇಶ ಉಳಿದಿದೆ/

ವಿಶ್ವಮಾನ್ಯ ವ್ಯಕ್ತಿ ನೀನು,
ಸರ್ವ ಕಾಲಕೂ  ಸಲ್ಲುವ ಚೇತನ ನೀನು /

ಭಾರತಾಂಬೆಯ ಹೆಮ್ಮೆಯ ತನುಜ,
ನಿನಗಿದೋ  ನಮ್ಮ ನಮನ /

Monday, September 27, 2010

ಶ್ರೀಮತಿ

ಇವಳೇ ನನ್ನ ಶ್ರೀಮತಿ,
ಸಂಸಾರ ಯಾನದ ಜೊತೆಗಾತಿ/

ನನ್ನ ಮನಸಿನ ಮಾತು ಇವಳು,
ನನ್ನ ಕನಸಿನ ಕಣ್ಣು ಇವಳು/

ಇವಳೇ ನನ್ನ ಶ್ರೀಮತಿ,
ಜನುಮ,ಜನುಮದ ಆತ್ಮ ಸಂಗಾತಿ/

ನನ್ನ ಮೌನದ ಮಾತು ಇವಳು,
ನನ್ನ ಮಾತಿನ ಭಾಷೆ ಇವಳು/

ಇವಳೇ ನನ್ನ ಶ್ರೀಮತಿ,
ದೈವ ನೀಡಿದ ಸಂಗಾತಿ/

ನನ್ನ ಬದುಕಿನ ಪ್ರೇಮ ಕಾವ್ಯ,
ಕಾವ್ಯದೊಳಗಣ ಮದುರ ಭಾವ /

ಇವಳೇ ನನ್ನ ಶ್ರೀಮತಿ,
ಸುಂದರ ಬದುಕಿನ ದಿಕ್ಸೂಚಿ/

ನನ್ನ ಮುದ್ದಿನ ಮಡದಿ, ನನ್ನೆಲ್ಲ ಕನಸುಗಳ ಒಟ್ಟು ಮೊತ್ತ, ಭಾವ, ಬದುಕು ಎಲ್ಲವೂ ಆಗಿರುವ " ಲಕ್ಷ್ಮಿ " ಗಾಗಿ ಈ ಕವಿತೆ ಅರ್ಪಣೆ.