ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Saturday, April 19, 2008

ಗೆಲಬೇಕೋ ....ತಮ್ಮ...ಗೆಲಬೇಕೋ....

(:- ಪ್ರೀತಿಯಿಂದ ಕರೆ ಮಾಡಿ,"ಸರ್ ನೀವು ಯಾಕೋ ತುಂಬ ಇಸ್ಟ ಅಗ್ಬಿತ್ರಿ ಸಾರ್" ಅಂತ ಅಭಿಮಾನ ತೋಡಿಕೊಂಡ, ನಾನು ಇದುವರೆಗೂ ನೋಡಿರದ ಅಂತರ್ಜಾಲ ಗೆಳೆಯ, ಹೃದಯದ ಮಿತ್ರ "ವಿನಯ್" ನಂತಹ ನೂರಾರು ತಮ್ಮಂದಿರಿಗೆ....ಹಾಗು ನನ್ನ ಎಲ್ಲ ಅಂತರ್ಜಾಲ ಮಿತ್ರ ಬಳಗಕ್ಕೆ....ಪ್ರೀತಿಯಿಂದ....)


ಗೆಲಬೇಕೋ ....ತಮ್ಮ...ಗೆಲಬೇಕೋ,
ಮೋಹ, ದಾಹದ ಬಳೆಯಲಿ ಬೀಳದೆ,
ಬದುಕಿನ ಮರ್ಮವ ನೀ ಅರಿಬೇಕೋ..//ಪ//

ಸ್ವಾರ್ಥವೇ ತುಂಬಿದೆ ...ಈ.. ಜಗದಲ್ಲಿ,
ತ್ಯಾಗಕೆ ಎಲ್ಲಿದೆ ಬೆಲೆ.. ನಿನ್ನೀ ..ಪ್ರೀತಿಯಲ್ಲಿ..//

ಹುಟ್ಟುವ ಸೂರ್ಯ ,ಯೋಚಿಸೋದಿಲ್ಲ,
ಮುಳುಗುವ ಚಂದ್ರ , ಚಿಂತಿಸೋದಿಲ್ಲ//

ಪ್ರಕೃತಿ ಚಕ್ರ ನಿಲ್ಲುವುದಿಲ್ಲ,
ooduva ಕಾಲವ ಹಿಡಿಯೋರಿಲ್ಲ//

ನಿಂತ ನೀರಲ್ಲ.....ಈ...ಬದುಕು,
ಮರೆಯಲೆ ಬೇಕು , ನಿನ್ನ ಹೇಳೇ ನೆನಪು//ಪ//

ಅಪ್ಪ ಅಮ್ಮಾರ ಕನಸನು ಮಾಡಿ ನನಸು,
ಬುದ್ದ , ಬಸವ, ವಿವೇಕ ರಂತೆ, ನಿನಾಗಬೇಕು ಈ ಜಗದ ಬೆಳಕು//

ಚಿಂತಿಸು , ಜಗದ ಆಗು ಹೋಗುಗಳ,
ಯೋಜಿಸು, ನಿನ್ನ ಕೆಲಸ, ಕೊಡುಗೆ ಗಳ //

ಜಗದಲಿ ಇರುವರು, ಸಾವಿರ ಸಾವಿರ ಜನರು,
ನಿನ್ನಂತೆ ಇರರು, ಯಾರು ಅವರು//

ದೀಕ್ಷೆಯ todu ನೀ ಜಗದ ಉಳಿವಿಗೆ ,
ನಿನ್ನಿಂದಾಗಲಿ ಅವರ ಬದುಕು, ನಲಿವು//

ಸಾಯುವ ಮುನ್ನ ಒಲಿತನು ಮಾಡು,
"ಚುಕ್ಕಿ" ಯಂತೆ ,ನೀ ಸದಾ ಮಿನುಗು//ಪ//


1 comment:

Anonymous said...

ಅಭಿನಂದನೆಗಳು ಗೆಳೆಯ ನನಂಥ ಒಬ್ಬ ಚಿಕ್ಕ ಸಾಮಾನ್ಯ ಮನುಷ್ಯನನ್ನು ನೀನು ತುಂಬಾ ಯೇತರಕ್ಕೆ ಬೆಳೆಸಿಬಿಟ್ಟೆ ನಾನು ನಿನಗೆ ಹೇಗೆ ಅಭಿನಂದನೆಗಳನು ತಿಳಿಸಬೇಕೋ ತಿಳಿಯುತ್ತಿಲ್ಲ