ಕೆಲವು ನೆನಪುಗಳೇ ಹಾಗೆ.......!!!!!!!!!!.ಹುಣ್ಣಿಮೆಯ ಬೆಳದಿಂಗಳಂತೆ. ..ಉಕ್ಕೆರಿದ ಸಮುದ್ರದ ಅಲೆಯಂತೆ. ಬೇಸಿಗೆಯಲ್ಲಿ ಬೀಸುವ ತಂಗಾಲಿಯಂತೆ, ಬರಗಾಲದಲ್ಲಿ ಮಳೆಯ ಸಿಂಚನ ದಂತೆ................ಹೀಗೆ..........ಒಮ್ಮೆಮ್ಮೆ ಒಂದೊಂದು ರೀತಿಯಲ್ಲಿ ಮನಕ್ಕೆ ಲಗ್ಗೆಯಿಟ್ಟು,ಕಚಗುಳಿ ನೀಡಿ ಮುದ ನೀಡಿದರೆ, ಮತ್ತೊಮ್ಮೆ ನಿಟ್ಟುಸಿರು ಬರುವಂತೆ ಕಾದಿಸುತ್ತವೆ.......ಕೆಲವು ನೆನಪುಗಳು ಹೃದಯದ ಹನ್ದರದಲ್ಲ್ಲಿ ಮಿಂದು, ತುಟಿಯಂಚಿನಲ್ಲಿ ನಗು ಉಕ್ಕಿಸಿದರೆ , ಕೆಲವು ಹೃದಯವನ್ನು ಹಿಂದಿ ಕಣ್ಣಂಚಿನಲ್ಲಿ ಅಮೃತ ಧಾರೆ ಮಿನುಕಿಸುತ್ತವೆ........ ಬಹುಶಃ ಮನಸ್ಸು ನನ್ನ ಕೆಲವು ದಿವ್ಯವಾದ ನೆನಪುಗಳನ್ನು ಮೆಲುಕು ಹಾಕುವಾಗ ಅಳದೆ ಇರಳದ್ರಾದು, ತುಟಿ ಅಂಚಲ್ಲಿ ನಗು ಬರಲಾರದೆ ಇರದು.........ಏಕೆಂದರೆ ಅವು ಯಾವುದೊ ಕಾಲ್ಪನಿಕ ಚಿತ್ರ ನಿರೂಪನೆ ಗಳಲ್ಲ್ಲ ....ಕಾದಂಬರಿಯ ಪಾತ್ರಗಳಲ್ಲ.........ದಾರಿ ಹೋಕನ ಬಾಯಿ ಬದುಕುತನವಲ್ಲ .......ಅವೆಲ್ಲ ನನ್ನ ನಿಜ ಜೀವನದ ವಾಸ್ತವ ಘಟನೆಗಳು...........ಕೆಲವು ಸತ್ತು ಹೋದ ಕನಸುಗಳು......ಬತ್ತದ ಬದುಕಿನ ಸ್ಪೂರ್ತಿ .......ಇತ್ಯಾದಿ......ಇತ್ಯಾದಿ.....
ನಿಜ......ನೆನಪುಗಲ್ಲನ್ನ್ನು ನೆನೆಸಿಕೊಲ್ಲಬೇಕಾದರೆ, ದೇಹಕ್ಕೆ ವಯಸ್ಸಾಗಿರಬೇಕು......ಅವರವರು ಕಂಡಂತಹ ಅನುಬವಗಳು ನೆನಪಾಗಿ ಪರಿವರ್ತನೆ ಹೊಂದುತ್ತವೆ... ದುರದ್ರುಸ್ತವಶಾತ್ ನೆನ್ನೆ -ಮೊನ್ನೆ ಯಾ ಘಟನೆಗಳೇ ಇವತ್ತಿನ ಹೊತ್ತಿಗೆ ನೆನಪಾಗಿ ಉಳಿದುಬಿದುತ್ತವೆ.......ಈ ಕ್ಷಣದ ಸತ್ಯ ಮರುಕ್ಷನ್ಕ್ಕೆ ಇಲ್ಲವಾಗುತ್ತದೆ...ಹಾಗೆ ನೆನಪಾಗಿ ಹೋದ ಘಟನೆಗಳು, ಸಂಬಂದಗಳು, ವ್ಯಕ್ತಿಗಳು, ಕ್ಷಣಗಳು ನನ್ನ ಜೀವನದಲ್ಲಿ ಕಾಣ ಸಿಗುತ್ತಾರೆ.........ಅಂತಹ ದಿವ್ಯವಾದ ಅನೇಕ ನೆನಪುಗಳು ನನ್ನನ್ನು ಹಿಮ್ಬಲಿಸುತ್ತಲೇ ಇರುತ್ತವೆ....ಜಡಿಮಲೆಯಲ್ಲೂ ಕಾಣುವ ನೆರಳಿನಂತೆ............!!!!
ಒಂದು ವಿಷಯವನ್ನು, ವ್ಯಕ್ತಿಯನ್ನು, ಸಂದರ್ಬವನ್ನು, ಅಥವಾ ಮತ್ತಿನ್ನೇನನ್ನೋ ಜ್ನಾಪಿಸಿಕೊಲ್ಲಬೇಕಾದರೆ.,ಮರೆಯಲೆ ಬೇಕು, ಎನ್ನುವುದು ವಾಸ್ತವಾಂಶ ...ಆದರೆ ನನ್ನ ಬದುಕಿನ ದಿವ್ಯವಾದ ಪುಟಗಳಲ್ಲಿ ಚಿತ್ರಿಸುತ್ತಿರುವ ಕೆಲವು ನೆನಪುಗಳನ್ನು ನಾನು ಜ್ನಾಪಿಸಿಕೊಲ್ಲುತ್ತಿಲ್ಲಾ.......ಯಾಕೆಂದರೆ ಅವೆಲ್ಲ ಮರೆಯಳರದನ್ತಹುವು....ಅದಕ್ಕಿಂತ ಹೆಚ್ಚಾಗಿ ಯಾಕೆ ಮರೆಯಬೇಕು? ಎಂಬ ಪ್ರಶ್ನೆ ಆಗಾಗ್ಗೆ ನನ್ನನ್ನು ಕಾಡುತ್ತಲೇ ಇರುತ್ತದೆ... ಆ ನೆನಪಿನ ನೆನಕೆ ಯಲ್ಲಿ "ಮರೆತರೆ ತಾನೆ ಜ್ನಾಪಿಸಿಕೊಳ್ಳಲು.........!!!!!!! ಎಂಬುದು ಪುತಿದೆಳುತ್ತಲೇ ಇರುತ್ತದೆ....ಆದರೆ ನನ್ನ ಬದುಕಿನ ಜನ್ಜಾತಗಳ ಮಧ್ಯೆ ,ನನ್ನವೇ ಆದ ಕನಸುಗಳ ಮಧ್ಯೆ, ಸಾಧನೆಯ ಹಾದಿಯ ದೀರ್ಘ ಪಯಣದಲ್ಲಿ.......ಸ್ವಾರ್ಥಗಳ ಮದ್ಯೆ ........ಕೆಲವು ನೆನಪುಗಳು ಮಾಸಿಹೊಗುತ್ತವೆ , ಎಲ್ಲಿ ಮರೆಯಾಗಿ ಬಿದುತ್ತವೆಯೋ ಎಂಬ ಆತಂಕದಿಂದ............ನನ್ನ ಮನದ ಅಪ್ಪಣೆ ಪಡೆದು,ಒಂದು ಕಡೆ ಚಿತ್ರಿಸಿ ಇಡುವ ಪ್ರಯತ್ನ ಮಾಡುತ್ತಿದ್ದೇನೆ........ಆ ಕೆಲವು ನೀನಪುಗಳು ನನ್ನ ಬದುಕಿನ ಪುಟಗಳಲ್ಲಾದರು ಸದಾ ಹಸಿರಾಗಿರಲಿ ಎಂಬುದೇ ನನ್ನ ತುಡಿತ............
"something and something ....but.......nothing...." ಎನೊ ಇದೆ..........ಕಂಡಿತ ಎನೊ ಇದೆ.........ಆದರೆ.........ಏನೂ ಇಲ್ಲ.......ಅಲ್ಲಿ ಏನೂ ಇಲ್ಲಾ, ಎಂದು ಗೊತ್ತಾಗುವ ಹೊತ್ತಿಗೆ ಬದುಕಿನ ಅರ್ಧ ಪಯಣ ಮುಗಿದಿರುತ್ತದೆ........ಹೌದಲ್ವೆ....?! ಪಣನ ಮುಗಿದ ಮೇಲೆ...ಎನೊ ಇದೆ ಅನ್ನಿಸುತ್ತದೆ... ಆದರೆ ಕಾಲ ಕನ್ಮರೆಯಾಗಿರುತ್ತದೆ....ಇದೆ ಬದುಕಿನ ಸಂಘರ್ಷ....ನನ್ನ ಬದುಕಿನ ಈ ದಿವ್ಯವಾದ ನೆನಪುಗಳ ಮೆಳುಕಿನಲ್ಲಿ ಎನೊ ಇದೆ ಅನ್ನುವ ಗುಮಾನಿ ಹುಟ್ಟುತ್ತದೆ.;.. ಹಾಗೆ ಏನೂ ಇಲ್ಲ ಎಂಬುದು ಸ್ಪಸ್ತವಾಗಬಹುದು...ಅದು ನೋಡುವ ದ್ರುಸ್ತಿ ಯನ್ನು ಅವಲಂಬಿಸಿರುತ್ತದೆ...................ಈ ಇರು, ಮತ್ತು ಇಲ್ಲದಿರುವಿಕೆಯ ನಿರಂತರ ಸಂಘರ್ಷದಲ್ಲಿ ಬದುಕಿನ ಗಾಳಿ ಚಲಿಸುತ್ತಿರುತ್ತದೆ....ಅದನ್ನು ಹುಡುಕುವ ಒಂದು ದಿವ್ಯವಾದ ಪ್ರಯತ್ನ ನನ್ನದು..........ಬರಿ ನನಗಾಗಿ...........ನಾನು ಉತ್ತರ kandukollakikkagi ..................ನೆನಪಾಗುವೆಯ ನೆನಪೇ.....?!
ಅಂದಂಗೆ. ಈ ನೆನಪುಗಳ ಗುಚ್ಚಕ್ಕೆ " ದಿವ್ಯ ಧಾರೆ" ಎಂದು ಹೆಸರಿಟ್ಟಿದ್ದೇನೆ......... something and something ..... but .......nothing...........!!!!!!!!!!!!!!
ನಿಮ್ಮವ.........
ಚುಕ್ಕಿ............
ಬಿಂದು ವಿನಿಂದ ಅನಂತ ದೆಡೆಗೆ................
2 comments:
ಪ್ರಿಯ ಲಿಂಗೇಶ್,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
namaskara tamage.......internet lokadolakke kelavu dinagalinda barlikaglilla ....hagagi vishaya muttalilla .....dayavittu kshameyirali.........
Post a Comment