ಬಿಂದುವಿನಿಂದ ಅನಂತದೆಡೆಗೆ...
"ಸರಸವೇ ಜೀವನ, ವಿರಸವೆ ಮರಣ "
Saturday, March 22, 2008
ಸರ್ಕಾರಿ ಸಂಬಳ.......
ಸರ್ಕಾರಿ ಸಂಬಳ
ಹುಣ್ಣಿಮೆ, ಅಮವಾಸ್ಯೆಯ ಹಾಗೆ,
ಸಂಬಳದ ದಿನ ಪೂರ್ಣಚಂದಿರ,
ಕರಗುತ್ತದೆ...ದಿನ ಕಳೆದ ಹಾಗೆ,
ಅಮಾವಾಸೆಯ ಛಾಯೆ/
ಮತ್ತೆ ಎನೊ ಹೊಸ ಹುರುಪು,
ಹತ್ತಿರ ಬರುತ್ತಿರುತ್ತದ,ಸಂಬಳದ ದಿನ/
ಹೀಗೆ ಕತ್ತಲು ಬೆಳಕಿನ ನಡುವೆ
ಬದುಕು ಕಳೆಯುತ್ತಿರುತ್ತದೆ/
ಬೋನಸ್ಸು, ಪ್ರೋಮಷನ್ನುಗಳೋ ,
ಆಗೊಮ್ಮೆ ಈಗೊಮ್ಮೆ ಸಂಭವಿಸುವ
ಗ್ರಹಣಗಳು/
ಅವುಗಳಿಗೂ ಮುನ್ನ ಪ್ರತಿನಿತ್ಯ
ಮನೆಯಲ್ಲಿ, ಮಡದಿಯ ಜ್ವಾಲಾಮುಖಿ ಉಲ್ಕಾಪಾತ ....!
ಇನ್ನ ಕೇಂದ್ರ ಸರ್ಕಾರಿ ಸಂಬಳವೋ
ಸಾಲ ಮಾಡಲು ಬಲು ಧೈರ್ಯ,
ಯಾಕೆಂದರೆ , ಬಂದೆ ಬರುತ್ತದೆ ಸಂಬಳ,
ತೀರಿಸಬಹುದು ಕಡ್ಡಾಯ ದಿನದಂದೇ ಕೈಗಡ/
ಇನ್ನ ರಾಜ್ಯ ಸರ್ಕರದ್ದೋ....
ನಮ್ಮೂರಿನ ಬಸ್ಸಿಗೆ ಕಾದಂಗೆ...
ನಡೆದುಕೊಂಡು ಹೋಗುವುದೇ ವಾಸಿ/
ಎಲ್ಲರೂ ಹೇಳುವರು,
ಸರ್ಕಾರಿ ಸಂಬಳ ಸುಖದ ಸೋಪಾನವಂತೆ,
ಕಸ್ಟದ ಪರದೆಗಳು ಅವೆಸ್ಟಿವೆಯೋ ,
ಯಾರಿಗೂ ಕಾಣಿಸುವುದಿಲ್ಲ..
ಆದರು ಇವರು ಸುಖಿಗಳು/
ಈ ಸಂಬಳದ ಕಿಮ್ಮತ್ತೆ ಹಾಗೆ...
ಅಮವಾಸೆ ಇರಲಿ, ಹುಣ್ಣಿಮೆ ಇರಲಿ,
ಸುನಾಮಿಯಿರಲಿ , ಸಂಕಟವಿರಲಿ,
ಇದು ಕೈ ಬಿಡುವುದಿಲ್ಲ/
ಪ್ರಾಮಾಣಿಕತೆ ಇರುವ ತನಕ,
ಅವಧಿ ಮುಗಿಯುವ ತನಕ,
ಬದುಕು ಮುಳುಗುವ ತನಕ,
ಕೊನೆತನಕ............/
Subscribe to:
Post Comments (Atom)
No comments:
Post a Comment