ಆಗಸದ ಮರೆಯಲ್ಲಿ,
ಮೋಡಗಳನ್ನು ಸೀಳಿಕೊಂಡು ಬರುವ,
ಪ್ರತಿ ವಿಮಾನದ ಮೇಲೂ ,
ನನ್ನ ನೀರಿಕ್ಷೆಯ ಸಾವಿರ ಕಣ್ಣು,
ಅವಳು ಬಂದಾಲೆಂದು....!!!!!!!
ನನ್ನಿಂದ , ನನ್ನೂರಿನಿನ್ದ
ಬಲು ದೂರ ಹಾರಿಬಿಟ್ಟೆಯಲ್ಲ ಹುಡುಗಿ,
ಕಾಲ ಹೇಗಿದೆ ನೋಡು,
ಕಳೆದು ಹೋದ ನೆನಪುಗಳ
ಸಂಮಿಲನಕ್ಕೊಂದು ಸುವರ್ಣ ಅವಕಾಶ....!
ಜಗತ್ತಿನ ಯಾವ ಮೂಲೆಯಿನ್ದಾದರು ಸರಿ,
ನಿನ್ನೂರಿಗೆ ಹೋಗಲು ನನ್ನನ್ನು ಸಂದಿಸಲೇಬೇಕು,
ಈ ದೇಶದಲ್ಲಿ ನನ್ನುರಿನಿಂದಲೇ ನಿನ್ನ ಯಾತ್ರೆ ಆರಂಭ,
ಬರುವಾಗಲೂ ಮತ್ತೂ ಹೋಗುವಾಗಲೂ,
ಯಾಕೆಂದರೆ.................
ನಿನ್ನ ಹೊತ್ತು ತರುವ ಆ ಧೂತ
ಇಳಿಯುವುದು ನನ್ನೂರಿನಲ್ಲೆ ಮತ್ತೂ ಹಾರುವುದೂ....!
ನಿನಗೆ ಗೊತ್ತು,
ನಿನ್ನ ತಲೆ ಕೂದಲು ನೆರೆತು , ಚರ್ಮ ಸುಕ್ಕಾದರೂ,
ಈ ಹುಡುಗ ನಸ್ತು ,ನಿನ್ನನ್ನು,
ಜಗತ್ತಿನಲ್ಲಿ , ಯಾರೂ ಪ್ರೀತಿಸಲಾರರೆಂದು,
ಅದರೂ, ಹಾರಿ ಬಿಟ್ಟೆ,
ಬದುಕಿನಿಂದ ಬಲು ದೂರ....ಗಡಿಗಳನ್ನು ದಾಟಿ.....!
ಈಗಲೂ ಎಂತದೋ ನೀರಿಕ್ಷೆ......
ಈ ಹುಡುಗನ ಪ್ರೀತಿಸುವ ಕಂಗಳಲಿ,
ಬದುಕಿನ ಯಾವುದಾದರು ತಿರುವಿನಲ್ಲಿ,
ನಾವು ಜೊತೆ ಯಾಗಬಹುದೆಂದು...
ಭವಿಷ್ಯ ಹೇಗೂ ಇರಬಹುದು,
ಆದರೆ, ನಿರಿಕ್ಷೆಗಳಲ್ಲವೇ ಜೀವನ ಸ್ಪೂರ್ತಿ,
ಇರಲಿ ಬಿಡು , ಭ್ರಮೆಗಳು ಜೀವಂತವಾಗಿ...!
ನನ್ನೂರಿನಲ್ಲಿ ಹೆಜ್ಜೆ ಇಟ್ಟಾಗ, ಮರೆಯದಿರು,
kಅನ್ನಾಡಿಸು ಒಮ್ಮೆ, ಅತ್ತಿತ್ತ ,
ಆಸು ಪಾಸಿನಲ್ಲಿ ನೀನು ಕಳೆದುಕೊಂಡ
olaviruttade ಅಲ್ಲಿ..........
ಯಾಕೆಂದರೆ............
ವಿಮಾನ ಇಳಿಯುವ ಊರು ............ನನ್ನೂರು...........!
(ಬಹಳ ಪ್ರೀತಿಸುತ್ತಿದ್ದ ಅವಳು ಬದುಕಿನಿಂದ ಬಲು ದೂರ ಹೋಗಿಬಿಟ್ಟಳು.........ನನ್ನ ಪ್ರಿಯ ಭಾರತda gadiyannu daati......ಬೆಂಗಳೂರಿನ ಕೃತಕತೆ, ಯಾಂತ್ರಿಕತೆ ಯನ್ನು ದ್ವೇಷಿಸುತ್ತಿದ್ದ ನಾನು ಬೆಂಗಳೂರಿನ ಗಡಿಯನ್ನು ದಾಟಿ ಬಂದುಬಿಟ್ಟೆ... ಈಗ ವಿಮಾನ ಇಳಿಯುವ ಊರು ನನ್ನೂರು.........ದೇವನಹಳ್ಳಿ.......)
No comments:
Post a Comment