ನನ್ನ ಇರುಳ ಬದುಕ
ಬೆಳಕಾಗಿಸಬಲ್ಲದು,
ನಿನ್ನ ನಗುವಿನ ಒಲುಮೆ...
ಅದೆಂತ ಪ್ರಭೆ ನಿನ್ನ ತುಟಿಗಳ ನಡುವೆ,
ನಕ್ಷತ್ರಗಳೇ ನಾಚಿ ನೀರಗುವಂತಹ ಸೆಲೆ,
ವ್ಯಕ್ತಿತ್ವದಲ್ಲೂ ಹಾಗೆ.........
ತೆಲಿಬಿಡು ಗೆಳತಿ.......
ನನ್ನೆದೆಯ ದುಕ್ಕದ ಕಡಲಿನಲ್ಲಿ,
ನಿನ್ನ ನಗುವಿನ ದೋಣಿ.,
ಸಾಗಲಿ ಬಲು ದೂರ...
ಸೇರಲಿ ಪ್ರೇಮ ತೀರ...
ಒಮ್ಮೆ ಬೆಟ್ಟಿ ಕೊಟ್ಟು ಬರೋಣ,
ಚಂದ್ರನೂ ನಾಚಿಕೊಳ್ಳಲಿ,
ನಮ್ಮೊಲವ ನಲಿವ ಕಂಡು,
ನಿನ್ನ ನಗುವಿನ ಅಲೆಯಲ್ಲಿ,
ಅವನು ತೇಲಿ ಹೋಗಲಿ.........
ಬದುಕು ಮುಳುಗದಿರಲಿ.........
( ಪ್ರೀತಿಸೋ ಜೀವದ ನಗುವಿನಲ್ಲಿ ಅದೆಂತ ಶಕ್ತಿ ಇದೆಯಲ್ವ.......ಅವಳ ನಗು ನಮ್ಮೆದೆಯ ದುಕ್ಕವನ್ನೆಲ್ಲ ಹೇಳ ಹೆಸರಿಲ್ಲದಂತೆ ಮಾಯ ಮಾಡಿಬಿಡುತ್ತೆ.........ಆ ನಗುವಿಗೊಂದು ಸಾಲಂ.........ಪ್ರೀತಿಸೋ ಜೀವಗಳಿಗೆ ನನ್ನ ತಂಪಾದ ಶುಭ ಹಾರೈಕೆಗಳು........)
No comments:
Post a Comment