ಬಿಂದುವಿನಿಂದ ಅನಂತದೆಡೆಗೆ...
"ಸರಸವೇ ಜೀವನ, ವಿರಸವೆ ಮರಣ "
Thursday, March 6, 2008
ಬಿಟ್ಟು ಹೋದವಳಿಗೊಂದು ಥ್ಯಾಂಕ್ಸ್.......!!
ಥ್ಯಾಂಕ್ಸ್.......!!
ನಿನ್ನ ಪ್ರೀತಿಯ ಗರ್ಭದಲ್ಲಿ,
ಮಗುವಾಗಿ ಮರುಜನ್ಮ ತಳೆಯಬೇಕೆಂದಿದ್ದೆ ,
ನಿನ್ನ ಮೋಜಿನಾಟಕ್ಕೆ,
ಜಾತಿಯ ಜಂಜಾಟಕ್ಕೆ ,
ಬಲವಂತದ ಗರ್ಭಪಾತ ಮಾಡಿ ಬಿಟ್ಟೆಯಲ್ಲಾ, ಹುಡುಗಿ,
ತಾಯ್ತನಕ್ಕೆ ದ್ರೋಹ ..........?!
ಪ್ರತಿಯೊಬ್ಬ ಗಂಡಿಗೂ ,
ಎರಡೆರಡು ಜನುಮ,
ಒಂದು, ಅಮ್ಮಾಳ ಅಕ್ಕರೆಯ ಮಡಿಲಿನಲ್ಲಿ,
ಮತ್ತೊಂದು, ಸಂಗಾತಿಯ ಸಂಪ್ರೀತಿಯ ಸಾಂಗತ್ಯದಲ್ಲಿ,
ಇಂದು ನೀನಿಲ್ಲ, ಯಾಕೋ, ಅಮ್ಮ ನೆನಪಾಗ್ತಿದ್ದಾಳೆ,
ಅದುವೇ ಅಲ್ಲವೇ ಶಾಶ್ವತ ,
ನೀನು..........?!...........ಮರೀಚಿಕೆಯೇ ...........?!
ಈಗಲೂ ಒಪ್ಪಿಕೊಳ್ಳಲು ಕಸ್ಟ,
ಯಾಕೆಂದರೆ ಆ ಪರಿ ಪ್ರೀತಿಸಿದ್ದೆ,
ನೀನೂ ಕೂಡ .....ಅದೇ ವಿಪರ್ಯಾಸ...........!!
ನೀನು ಬಿಟ್ಟು ಹೋಗಿದ್ದೇ ,
ನಾನು ಬೆಳೆಯುವುದಕ್ಕೆನೋ ಅನಿಸುತ್ತಿದೆ ,
ಗೂಡಿನಿಂದ ಆಚೆ ಬಂದ ಮರಿ ಹಾರಲು ಕಲಿಯುವಂತೆ/
ಆಗ ನೀನಿದ್ದೆ , ನನಗೆ ನಿದ್ರೆ,
ಕಳೆದುಕೊಂಡಿದ್ದರ ಪರಿವೆಯೇ ಇಲ್ಲಾ,
ಈಗ ನೀನಿಲ್ಲ, ಆದರೂ
ಸರಾಗ ಉಸಿರಾಟ !
ಇದು ದುರಂತವೇ......?!
ಇಲ್ಲಾ, ಇದುವೆ ಸತ್ಯ!
ಬದುಕುವುದ ಕಲಿತಿದ್ದೇನೆ, ಕಲಿಸಿದೆ ಬದುಕು,
ನೀ ಸತ್ತೆ, ನಿನ್ನ ಷಡ್ಯಂತ್ರಗಳ ಜಾಲದಲ್ಲಿ ಪ್ರೀತಿ ಸತ್ತಿತು,
ಆದರೆ, ಬದುಕಿಸಿಬಿಟ್ಟವು ನನ್ನ,
ನನ್ನ ಕನಸುಗಳು/
ನೋಡುತ್ತಿರು ಹುಡುಗಿ, ಹಾರುತ್ತೇನೆ ದೂರ,
ನಿನ್ನ ನೆನಪುಗಳಿಂದ ಬಲು ದೂರ,
ವಾಸ್ತವ ಜಗತ್ತಿನೆಡೆಗೆ/
ಈಗ, ಅನಂತದೆಡೆಗೆ ನನ್ನ ಪಯಣ,
ಕಂಡ ಕನಸ ನನಸಿನಲ್ಲಿ ನನ್ನ ಅಸ್ತಿತ್ವ,
ನೀನು ಮತ್ತು ಕಾಲ ಬೆರಗಾಗುವಂತೆ ಬೆಳೆಯುವೆ.
ಬಾನಂಗಳದ ಚುಕ್ಕಿಯಾಗುವೆ...
ನಿನ್ನ ಮಕ್ಕಳಿಗೆ ತೋರಿಸು,
ಅದು ನನ್ನಿಸ್ಟದ ಚುಕ್ಕಿಯೆಂದು......!
ಮೊಮ್ಮಕ್ಕಳಿಗೆ ಪರಿಚಯಿಸು ,
ಅದು ನಿನ್ನ ತಾತ ನಾಗಬೇಕಿತ್ತೆಂದು/
ನೀನು ಬಿಟ್ಟು ಹೋಗಿದ್ದರಿಂದಲ್ಲವೇ ,
ನನಗೆ ,ಹೀಗೆ, ಅನ್ನಿಸ್ತಿರೋದು.............
ಥ್ಯಾಂಕ್ಸ್ ಕಣೆ,
ಬಿಟ್ಟು ಹೋಗಿದ್ದಕ್ಕೆ...???!!!
(ಯಾಕೋ ಮನದ ಮೂಲೆಯಲ್ಲಿ ಶವವಾಗಿದ್ದ "ಅವಳು" ನೆನಪಾದಳು.........!!
ನಾನು ಪ್ರೀತಿಸಿದ ಹುಡುಗಿ,ನನ್ನನ್ನ ಪ್ರೀತಿಸಿದ ಹುಡುಗಿ,,ಈಗ ಬೇರೆಯವನ ಹೆಂಡತಿ ಯಾಗಿರೋ ಹುಡುಗಿ, ಅವಳಿಗೊಂದು ಥ್ಯಾಂಕ್ಸ್ ಹೇಳಬೇಕನಿಸ್ತು........ಸುಮ್ಮನೆ ಬರೆದೆ.
ಇದು ಕವಿತೆಯ......? ಪುಟ್ಟ ಕಾದಂಬರಿಯ........? ನನ್ನ ಬದುಕಿನ ದುಃಖದ ಕಡಲೋ ..? ಆಶಾವಾದಿಯ ಗೆಲುವೋ ?...ಗೊತ್ತಿಲ್ಲ........
ಬಿಟ್ಟು ಹೋದವರ ನೆನಪಲ್ಲಿ, ಉಳಿದುಹೊದವರ ಬದುಕು ಬೋರಲು ಆಗದೆ, ಯಶಸ್ಸಿನ ಶಿಖರ ತಲುಪಿದರೆ, ಭಗ್ನ ಪ್ರೇಮವೂ ಸಾಧನೆಗೆ ಸ್ಪೂರ್ತಿಯಾದರೆ, ಈ ಕವನದ ಆಶಯ ಸಾರ್ಥಕ........ನಿಮ್ಮ ಅನಿಸಿಕೆಗಳಿಗೆ ಸ್ವಾಗತ)
Subscribe to:
Post Comments (Atom)
1 comment:
thumba cheennagidey sir,
Post a Comment