ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Wednesday, March 26, 2008

ವಿಮಾನ ಇಳಿಯುವ ಊರು...

ಆಗಸದ ಮರೆಯಲ್ಲಿ,
ಮೋಡಗಳನ್ನು ಸೀಳಿಕೊಂಡು ಬರುವ,
ಪ್ರತಿ ವಿಮಾನದ ಮೇಲೂ ,
ನನ್ನ ನೀರಿಕ್ಷೆಯ ಸಾವಿರ ಕಣ್ಣು,
ಅವಳು ಬಂದಾಲೆಂದು....!!!!!!!

ನನ್ನಿಂದ , ನನ್ನೂರಿನಿನ್ದ
ಬಲು ದೂರ ಹಾರಿಬಿಟ್ಟೆಯಲ್ಲ ಹುಡುಗಿ,
ಕಾಲ ಹೇಗಿದೆ ನೋಡು,
ಕಳೆದು ಹೋದ ನೆನಪುಗಳ
ಸಂಮಿಲನಕ್ಕೊಂದು ಸುವರ್ಣ ಅವಕಾಶ....!

ಜಗತ್ತಿನ ಯಾವ ಮೂಲೆಯಿನ್ದಾದರು ಸರಿ,
ನಿನ್ನೂರಿಗೆ ಹೋಗಲು ನನ್ನನ್ನು ಸಂದಿಸಲೇಬೇಕು,
ಈ ದೇಶದಲ್ಲಿ ನನ್ನುರಿನಿಂದಲೇ ನಿನ್ನ ಯಾತ್ರೆ ಆರಂಭ,
ಬರುವಾಗಲೂ ಮತ್ತೂ ಹೋಗುವಾಗಲೂ,
ಯಾಕೆಂದರೆ.................
ನಿನ್ನ ಹೊತ್ತು ತರುವ ಆ ಧೂತ
ಇಳಿಯುವುದು ನನ್ನೂರಿನಲ್ಲೆ ಮತ್ತೂ ಹಾರುವುದೂ....!

ನಿನಗೆ ಗೊತ್ತು,
ನಿನ್ನ ತಲೆ ಕೂದಲು ನೆರೆತು , ಚರ್ಮ ಸುಕ್ಕಾದರೂ,
ಈ ಹುಡುಗ ನಸ್ತು ,ನಿನ್ನನ್ನು,
ಜಗತ್ತಿನಲ್ಲಿ , ಯಾರೂ ಪ್ರೀತಿಸಲಾರರೆಂದು,
ಅದರೂ, ಹಾರಿ ಬಿಟ್ಟೆ,
ಬದುಕಿನಿಂದ ಬಲು ದೂರ....ಗಡಿಗಳನ್ನು ದಾಟಿ.....!

ಈಗಲೂ ಎಂತದೋ ನೀರಿಕ್ಷೆ......
ಈ ಹುಡುಗನ ಪ್ರೀತಿಸುವ ಕಂಗಳಲಿ,
ಬದುಕಿನ ಯಾವುದಾದರು ತಿರುವಿನಲ್ಲಿ,
ನಾವು ಜೊತೆ ಯಾಗಬಹುದೆಂದು...
ಭವಿಷ್ಯ ಹೇಗೂ ಇರಬಹುದು,
ಆದರೆ, ನಿರಿಕ್ಷೆಗಳಲ್ಲವೇ ಜೀವನ ಸ್ಪೂರ್ತಿ,
ಇರಲಿ ಬಿಡು , ಭ್ರಮೆಗಳು ಜೀವಂತವಾಗಿ...!

ನನ್ನೂರಿನಲ್ಲಿ ಹೆಜ್ಜೆ ಇಟ್ಟಾಗ, ಮರೆಯದಿರು,
kಅನ್ನಾಡಿಸು ಒಮ್ಮೆ, ಅತ್ತಿತ್ತ ,
ಆಸು ಪಾಸಿನಲ್ಲಿ ನೀನು ಕಳೆದುಕೊಂಡ
olaviruttade ಅಲ್ಲಿ..........
ಯಾಕೆಂದರೆ............
ವಿಮಾನ ಇಳಿಯುವ ಊರು ............ನನ್ನೂರು...........!

(ಬಹಳ ಪ್ರೀತಿಸುತ್ತಿದ್ದ ಅವಳು ಬದುಕಿನಿಂದ ಬಲು ದೂರ ಹೋಗಿಬಿಟ್ಟಳು.........ನನ್ನ ಪ್ರಿಯ ಭಾರತda gadiyannu daati......ಬೆಂಗಳೂರಿನ ಕೃತಕತೆ, ಯಾಂತ್ರಿಕತೆ ಯನ್ನು ದ್ವೇಷಿಸುತ್ತಿದ್ದ ನಾನು ಬೆಂಗಳೂರಿನ ಗಡಿಯನ್ನು ದಾಟಿ ಬಂದುಬಿಟ್ಟೆ... ಈಗ ವಿಮಾನ ಇಳಿಯುವ ಊರು ನನ್ನೂರು.........ದೇವನಹಳ್ಳಿ.......)







Saturday, March 22, 2008

ಸರ್ಕಾರಿ ಸಂಬಳ.......


ಸರ್ಕಾರಿ ಸಂಬಳ
ಹುಣ್ಣಿಮೆ, ಅಮವಾಸ್ಯೆಯ ಹಾಗೆ,
ಸಂಬಳದ ದಿನ ಪೂರ್ಣಚಂದಿರ,
ಕರಗುತ್ತದೆ...ದಿನ ಕಳೆದ ಹಾಗೆ,
ಅಮಾವಾಸೆಯ ಛಾಯೆ/

 
ಮತ್ತೆ ಎನೊ ಹೊಸ ಹುರುಪು,
ಹತ್ತಿರ ಬರುತ್ತಿರುತ್ತದ,ಸಂಬಳದ ದಿನ/

ಹೀಗೆ ಕತ್ತಲು  ಬೆಳಕಿನ ನಡುವೆ
ಬದುಕು ಕಳೆಯುತ್ತಿರುತ್ತದೆ/

ಬೋನಸ್ಸು, ಪ್ರೋಮಷನ್ನುಗಳೋ  ,
ಆಗೊಮ್ಮೆ ಈಗೊಮ್ಮೆ  ಸಂಭವಿಸುವ
ಗ್ರಹಣಗಳು/
ಅವುಗಳಿಗೂ ಮುನ್ನ ಪ್ರತಿನಿತ್ಯ
ಮನೆಯಲ್ಲಿ, ಮಡದಿಯ
ಜ್ವಾಲಾಮುಖಿ ಉಲ್ಕಾಪಾತ ....!


ಇನ್ನ ಕೇಂದ್ರ ಸರ್ಕಾರಿ ಸಂಬಳವೋ
ಸಾಲ ಮಾಡಲು ಬಲು ಧೈರ್ಯ,
ಯಾಕೆಂದರೆ , ಬಂದೆ ಬರುತ್ತದೆ ಸಂಬಳ,
ತೀರಿಸಬಹುದು ಕಡ್ಡಾಯ ದಿನದಂದೇ ಕೈಗಡ/

 
ಇನ್ನ ರಾಜ್ಯ ಸರ್ಕರದ್ದೋ....

ನಮ್ಮೂರಿನ ಬಸ್ಸಿಗೆ ಕಾದಂಗೆ...
ನಡೆದುಕೊಂಡು ಹೋಗುವುದೇ ವಾಸಿ/

 ಎಲ್ಲರೂ ಹೇಳುವರು,

ಸರ್ಕಾರಿ ಸಂಬಳ ಸುಖದ ಸೋಪಾನವಂತೆ,
ಕಸ್ಟದ ಪರದೆಗಳು ಅವೆಸ್ಟಿವೆಯೋ ,
ಯಾರಿಗೂ ಕಾಣಿಸುವುದಿಲ್ಲ..
ಆದರು ಇವರು ಸುಖಿಗಳು/

ಈ ಸಂಬಳದ ಕಿಮ್ಮತ್ತೆ ಹಾಗೆ...
ಅಮವಾಸೆ ಇರಲಿ, ಹುಣ್ಣಿಮೆ ಇರಲಿ,
ಸುನಾಮಿಯಿರಲಿ ,  ಸಂಕಟವಿರಲಿ,
ಇದು ಕೈ ಬಿಡುವುದಿಲ್ಲ/

 
 ಪ್ರಾಮಾಣಿಕತೆ ಇರುವ ತನಕ,
ಅವಧಿ ಮುಗಿಯುವ ತನಕ,
ಬದುಕು ಮುಳುಗುವ ತನಕ,

ಕೊನೆತನಕ............/

Thursday, March 13, 2008

ಕೆಲವು ನೆನಪುಗಳೇ ಹಾಗೆ..........

ಕೆಲವು ನೆನಪುಗಳೇ ಹಾಗೆ.......!!!!!!!!!!.ಹುಣ್ಣಿಮೆಯ ಬೆಳದಿಂಗಳಂತೆ. ..ಉಕ್ಕೆರಿದ ಸಮುದ್ರದ ಅಲೆಯಂತೆ. ಬೇಸಿಗೆಯಲ್ಲಿ ಬೀಸುವ ತಂಗಾಲಿಯಂತೆ, ಬರಗಾಲದಲ್ಲಿ ಮಳೆಯ ಸಿಂಚನ ದಂತೆ................ಹೀಗೆ..........ಒಮ್ಮೆಮ್ಮೆ ಒಂದೊಂದು ರೀತಿಯಲ್ಲಿ ಮನಕ್ಕೆ ಲಗ್ಗೆಯಿಟ್ಟು,ಕಚಗುಳಿ ನೀಡಿ ಮುದ ನೀಡಿದರೆ, ಮತ್ತೊಮ್ಮೆ ನಿಟ್ಟುಸಿರು ಬರುವಂತೆ ಕಾದಿಸುತ್ತವೆ.......ಕೆಲವು ನೆನಪುಗಳು ಹೃದಯದ ಹನ್ದರದಲ್ಲ್ಲಿ ಮಿಂದು, ತುಟಿಯಂಚಿನಲ್ಲಿ ನಗು ಉಕ್ಕಿಸಿದರೆ , ಕೆಲವು ಹೃದಯವನ್ನು ಹಿಂದಿ ಕಣ್ಣಂಚಿನಲ್ಲಿ ಅಮೃತ ಧಾರೆ ಮಿನುಕಿಸುತ್ತವೆ........ ಬಹುಶಃ ಮನಸ್ಸು ನನ್ನ ಕೆಲವು ದಿವ್ಯವಾದ ನೆನಪುಗಳನ್ನು ಮೆಲುಕು ಹಾಕುವಾಗ ಅಳದೆ ಇರಳದ್ರಾದು, ತುಟಿ ಅಂಚಲ್ಲಿ ನಗು ಬರಲಾರದೆ ಇರದು.........ಏಕೆಂದರೆ ಅವು ಯಾವುದೊ ಕಾಲ್ಪನಿಕ ಚಿತ್ರ ನಿರೂಪನೆ ಗಳಲ್ಲ್ಲ ....ಕಾದಂಬರಿಯ ಪಾತ್ರಗಳಲ್ಲ.........ದಾರಿ ಹೋಕನ ಬಾಯಿ ಬದುಕುತನವಲ್ಲ .......ಅವೆಲ್ಲ ನನ್ನ ನಿಜ ಜೀವನದ ವಾಸ್ತವ ಘಟನೆಗಳು...........ಕೆಲವು ಸತ್ತು ಹೋದ ಕನಸುಗಳು......ಬತ್ತದ ಬದುಕಿನ ಸ್ಪೂರ್ತಿ .......ಇತ್ಯಾದಿ......ಇತ್ಯಾದಿ.....

ನಿಜ......ನೆನಪುಗಲ್ಲನ್ನ್ನು ನೆನೆಸಿಕೊಲ್ಲಬೇಕಾದರೆ, ದೇಹಕ್ಕೆ ವಯಸ್ಸಾಗಿರಬೇಕು......ಅವರವರು ಕಂಡಂತಹ ಅನುಬವಗಳು ನೆನಪಾಗಿ ಪರಿವರ್ತನೆ ಹೊಂದುತ್ತವೆ... ದುರದ್ರುಸ್ತವಶಾತ್ ನೆನ್ನೆ -ಮೊನ್ನೆ ಯಾ ಘಟನೆಗಳೇ ಇವತ್ತಿನ ಹೊತ್ತಿಗೆ ನೆನಪಾಗಿ ಉಳಿದುಬಿದುತ್ತವೆ.......ಈ ಕ್ಷಣದ ಸತ್ಯ ಮರುಕ್ಷನ್ಕ್ಕೆ ಇಲ್ಲವಾಗುತ್ತದೆ...ಹಾಗೆ ನೆನಪಾಗಿ ಹೋದ ಘಟನೆಗಳು, ಸಂಬಂದಗಳು, ವ್ಯಕ್ತಿಗಳು, ಕ್ಷಣಗಳು ನನ್ನ ಜೀವನದಲ್ಲಿ ಕಾಣ ಸಿಗುತ್ತಾರೆ.........ಅಂತಹ ದಿವ್ಯವಾದ ಅನೇಕ ನೆನಪುಗಳು ನನ್ನನ್ನು ಹಿಮ್ಬಲಿಸುತ್ತಲೇ ಇರುತ್ತವೆ....ಜಡಿಮಲೆಯಲ್ಲೂ ಕಾಣುವ ನೆರಳಿನಂತೆ............!!!!

ಒಂದು ವಿಷಯವನ್ನು, ವ್ಯಕ್ತಿಯನ್ನು, ಸಂದರ್ಬವನ್ನು, ಅಥವಾ ಮತ್ತಿನ್ನೇನನ್ನೋ ಜ್ನಾಪಿಸಿಕೊಲ್ಲಬೇಕಾದರೆ.,ಮರೆಯಲೆ ಬೇಕು, ಎನ್ನುವುದು ವಾಸ್ತವಾಂಶ ...ಆದರೆ ನನ್ನ ಬದುಕಿನ ದಿವ್ಯವಾದ ಪುಟಗಳಲ್ಲಿ ಚಿತ್ರಿಸುತ್ತಿರುವ ಕೆಲವು ನೆನಪುಗಳನ್ನು ನಾನು ಜ್ನಾಪಿಸಿಕೊಲ್ಲುತ್ತಿಲ್ಲಾ.......ಯಾಕೆಂದರೆ ಅವೆಲ್ಲ ಮರೆಯಳರದನ್ತಹುವು....ಅದಕ್ಕಿಂತ ಹೆಚ್ಚಾಗಿ ಯಾಕೆ ಮರೆಯಬೇಕು? ಎಂಬ ಪ್ರಶ್ನೆ ಆಗಾಗ್ಗೆ ನನ್ನನ್ನು ಕಾಡುತ್ತಲೇ ಇರುತ್ತದೆ... ಆ ನೆನಪಿನ ನೆನಕೆ ಯಲ್ಲಿ "ಮರೆತರೆ ತಾನೆ ಜ್ನಾಪಿಸಿಕೊಳ್ಳಲು.........!!!!!!! ಎಂಬುದು ಪುತಿದೆಳುತ್ತಲೇ ಇರುತ್ತದೆ....ಆದರೆ ನನ್ನ ಬದುಕಿನ ಜನ್ಜಾತಗಳ ಮಧ್ಯೆ ,ನನ್ನವೇ ಆದ ಕನಸುಗಳ ಮಧ್ಯೆ, ಸಾಧನೆಯ ಹಾದಿಯ ದೀರ್ಘ ಪಯಣದಲ್ಲಿ.......ಸ್ವಾರ್ಥಗಳ ಮದ್ಯೆ ........ಕೆಲವು ನೆನಪುಗಳು ಮಾಸಿಹೊಗುತ್ತವೆ , ಎಲ್ಲಿ ಮರೆಯಾಗಿ ಬಿದುತ್ತವೆಯೋ ಎಂಬ ಆತಂಕದಿಂದ............ನನ್ನ ಮನದ ಅಪ್ಪಣೆ ಪಡೆದು,ಒಂದು ಕಡೆ ಚಿತ್ರಿಸಿ ಇಡುವ ಪ್ರಯತ್ನ ಮಾಡುತ್ತಿದ್ದೇನೆ........ಆ ಕೆಲವು ನೀನಪುಗಳು ನನ್ನ ಬದುಕಿನ ಪುಟಗಳಲ್ಲಾದರು ಸದಾ ಹಸಿರಾಗಿರಲಿ ಎಂಬುದೇ ನನ್ನ ತುಡಿತ............

"something and something ....but.......nothing...." ಎನೊ ಇದೆ..........ಕಂಡಿತ ಎನೊ ಇದೆ.........ಆದರೆ.........ಏನೂ ಇಲ್ಲ.......ಅಲ್ಲಿ ಏನೂ ಇಲ್ಲಾ, ಎಂದು ಗೊತ್ತಾಗುವ ಹೊತ್ತಿಗೆ ಬದುಕಿನ ಅರ್ಧ ಪಯಣ ಮುಗಿದಿರುತ್ತದೆ........ಹೌದಲ್ವೆ....?! ಪಣನ ಮುಗಿದ ಮೇಲೆ...ಎನೊ ಇದೆ ಅನ್ನಿಸುತ್ತದೆ... ಆದರೆ ಕಾಲ ಕನ್ಮರೆಯಾಗಿರುತ್ತದೆ....ಇದೆ ಬದುಕಿನ ಸಂಘರ್ಷ....ನನ್ನ ಬದುಕಿನ ಈ ದಿವ್ಯವಾದ ನೆನಪುಗಳ ಮೆಳುಕಿನಲ್ಲಿ ಎನೊ ಇದೆ ಅನ್ನುವ ಗುಮಾನಿ ಹುಟ್ಟುತ್ತದೆ.;.. ಹಾಗೆ ಏನೂ ಇಲ್ಲ ಎಂಬುದು ಸ್ಪಸ್ತವಾಗಬಹುದು...ಅದು ನೋಡುವ ದ್ರುಸ್ತಿ ಯನ್ನು ಅವಲಂಬಿಸಿರುತ್ತದೆ...................ಈ ಇರು, ಮತ್ತು ಇಲ್ಲದಿರುವಿಕೆಯ ನಿರಂತರ ಸಂಘರ್ಷದಲ್ಲಿ ಬದುಕಿನ ಗಾಳಿ ಚಲಿಸುತ್ತಿರುತ್ತದೆ....ಅದನ್ನು ಹುಡುಕುವ ಒಂದು ದಿವ್ಯವಾದ ಪ್ರಯತ್ನ ನನ್ನದು..........ಬರಿ ನನಗಾಗಿ...........ನಾನು ಉತ್ತರ kandukollakikkagi ..................ನೆನಪಾಗುವೆಯ ನೆನಪೇ.....?!
ಅಂದಂಗೆ. ಈ ನೆನಪುಗಳ ಗುಚ್ಚಕ್ಕೆ " ದಿವ್ಯ ಧಾರೆ" ಎಂದು ಹೆಸರಿಟ್ಟಿದ್ದೇನೆ......... something and something ..... but .......nothing...........!!!!!!!!!!!!!!
ನಿಮ್ಮವ.........
ಚುಕ್ಕಿ............
ಬಿಂದು ವಿನಿಂದ ಅನಂತ ದೆಡೆಗೆ................

Wednesday, March 12, 2008

ನನ್ನವಳ ನಗು.....

ನನ್ನ ಇರುಳ ಬದುಕ
ಬೆಳಕಾಗಿಸಬಲ್ಲದು,
ನಿನ್ನ ನಗುವಿನ ಒಲುಮೆ...
ಅದೆಂತ ಪ್ರಭೆ ನಿನ್ನ ತುಟಿಗಳ ನಡುವೆ,
ನಕ್ಷತ್ರಗಳೇ ನಾಚಿ ನೀರಗುವಂತಹ ಸೆಲೆ,
ವ್ಯಕ್ತಿತ್ವದಲ್ಲೂ ಹಾಗೆ.........

ತೆಲಿಬಿಡು ಗೆಳತಿ.......
ನನ್ನೆದೆಯ ದುಕ್ಕದ ಕಡಲಿನಲ್ಲಿ,
ನಿನ್ನ ನಗುವಿನ ದೋಣಿ.,
ಸಾಗಲಿ ಬಲು ದೂರ...
ಸೇರಲಿ ಪ್ರೇಮ ತೀರ...

ಒಮ್ಮೆ ಬೆಟ್ಟಿ ಕೊಟ್ಟು ಬರೋಣ,
ಚಂದ್ರನೂ ನಾಚಿಕೊಳ್ಳಲಿ,
ನಮ್ಮೊಲವ ನಲಿವ ಕಂಡು,
ನಿನ್ನ ನಗುವಿನ ಅಲೆಯಲ್ಲಿ,
ಅವನು ತೇಲಿ ಹೋಗಲಿ.........
ಬದುಕು ಮುಳುಗದಿರಲಿ.........

( ಪ್ರೀತಿಸೋ ಜೀವದ ನಗುವಿನಲ್ಲಿ ಅದೆಂತ ಶಕ್ತಿ ಇದೆಯಲ್ವ.......ಅವಳ ನಗು ನಮ್ಮೆದೆಯ ದುಕ್ಕವನ್ನೆಲ್ಲ ಹೇಳ ಹೆಸರಿಲ್ಲದಂತೆ ಮಾಯ ಮಾಡಿಬಿಡುತ್ತೆ.........ಆ ನಗುವಿಗೊಂದು ಸಾಲಂ.........ಪ್ರೀತಿಸೋ ಜೀವಗಳಿಗೆ ನನ್ನ ತಂಪಾದ ಶುಭ ಹಾರೈಕೆಗಳು........)

ನಾವು ಮತ್ತು ನಮ್ಮ ಊರು.........

(ಮೊನ್ನೆ ಯಾರೋ ಗೆಳೆಯರು ಸಂವಾದಕ್ಕೆ ಕರೆದಿದ್ರು, ಅಲ್ಲಿ ಮಂಡಿಸಿದ ಮಹಾ ಪ್ರೌಢ ಪ್ರಬಂಧ ........????????!!!!!!!!!!!)

ಮೊದಲನೆಯದಾಗಿ "ಸಂವಾದ" ಬಳಗದ ಬಂಧುಗಳಿಗೆ ನನ್ನ ಸವಿಯಾದ ಶುಭ ಹಾರೈಕೆಗಳು. ಯುವ ಜನರನ್ನೆಲ್ಲಾ ಒಗ್ಗೂಡಿಸಿ, ಅವರ ಮೆದುಳುಗಳಿಗೆ ಚಿಂತನೆಯ ಕೆಲಸ ಹಚ್ಚಿ, ಜದ್ದುಗತ್ತುತ್ತಿರುವ ಬದುಕಿನಲ್ಲಿ ಚಲನಾತ್ಮಕ, ಅಭಿವ್ರುದ್ದಿಯುತ ಬದಲಾವನೆಯನ್ನ ತರಲು "ಸಂವಾದ" ಒಂದು ವೇದಿಕೆ ಸೃಸ್ತಿಸಿರುವುದು ನಿಜಕ್ಕೂ ಶ್ಲಾಘನೀಯ.... ಹಾಗು ಸ್ವಾಗತಾರ್ಹ.........
ನಾವು ಇಡೀ ಜಗತ್ತಿನ ಬಗ್ಗೆ ಮಾತಡ್ತ್ಹೇವೆ . ಸಚ್ಚಿನ್ ಬ್ಯಾಟಿಂಗ್ ,ಐಶ್ ಬೇಬಿ ಸ್ಮೈಲಿಂಗ್ , ಮೋಡಿ ರಾಜಕಾರಣ, ದೆವೆಗೌದ್ರ ದರ್ಬಾರು, ಟಾಟಾ ಬಿರ್ಲಾ ರ ತಾರ್ಗೆತ್, ಪಕ್ಕದ್ಮನೆ ಪಂಕಜ ಓಡಿ ಹೋಗಿದ್ದು, ಯಾರೋ ಬದುಕಿನಲ್ಲಿ ಸೋತಿದ್ದು, ಸತ್ತಿದ್ದು,,,,,,ಹೀಗೆ.........ಬೇರೆಯವರ ಭಜನೆಯೇ ....?!


ಆದ್ರೆ ಯಾವತ್ತದ್ರು ನಮ್ ಬಗ್ಗೆ , ನಮ್ ಮನೆಯವರ ಬಗ್ಗೆ, ನಾವು ನಡೆದ ಹಾದಿಯ ಬಗ್ಗೆ ,ನಮ್ಮೂರಿನ ಬಗ್ಗೆ ಒಂದಿಸ್ತು ಚಿಂತಿಸಿದ್ದಿವಾ.........ofcourse time ಆದ್ರೂ ಎಲ್ಲಿದೆ ಅಂತಿರಾ.........ಅದಕ್ಕೆ ನಮ್ಮ ಮನೆಗೆ ಬನ್ನಿ ಮಾತಾಡೋಣ ಅಂತಾ ಸಂವಾದ ಬಳಗ ಪ್ರೀತಿಯಿಂದ ಆಮಂತ್ರಣ ನೀಡಿದ್ದಾರೆ.........ಈ ಮಾತುಕತೆಯ ವಿಷಯ ನಿಜಕ್ಕೂ ಚಿಂತನೆಗೆ ಹಚ್ಚುವನ್ತದ್ದು........ವ್ಯಕ್ತಿತ್ವದ, ಬದುಕಿನ ರೀತಿಯ ಸ್ವಯಂ ಮೌಲ್ಯಮಾಪನಕ್ಕೆ ಈ ಮಾತುಕತೆ ಅನುಕುಲವಾಗುತ್ತೆ.

ನಾನು.......?!

ಅಂದಂಗೆ ನನ್ನ ಹೆಸರು "ಲಿನ್ಗೆಶ್ .ಕೆ.ಸಿ". , ನನ್ನಪ್ಪ ಪ್ರೀತಿಯಿಂದ itta ಹೆಸರು. "ಚುಕ್ಕಿ" . ಇದು ನಾನು ಪ್ರೀತಿಯಿಂದ ಇಟ್ಟುಕೊಂಡ ಹೆಸರು ..ಭಾರತಿಯ ಅಪ್ಪಟ ಮಧ್ಯಮ ವರ್ಗದ ಕುಟುಂಬ ನನ್ನದು. ಅಪ್ಪ ಪ್ರೈಮರಿ ಸ್ಕೂಲ್ ಹೆಡ್ ಮಾಸ್ಟರ್ .. ಅಮ್ಮ ನಮ್ಮ ಪ್ರೀತಿಯ ಮನೆ "ಧನ್ಯ" ದ ಮಹಾರಾಣಿ... ಕರುಳ ಬಳ್ಳಿಯ ಗೆಳೆಯ ಇದ್ದಾನೆ, ನಂದೀಶ್ ಅಂತಾ ,ನನ್ನ ಪ್ರೀತಿಯ ತಮ್ಮ.......ಹಾಯ್ ಸ್ಕೂಲ್ ಮಾಸ್ತರಿಕೆಗೆ ಓದುತ್ತಿದ್ದಾನೆ.........ರಕ್ತ ಸಂಬಂದದ ಅಕ್ಕ - ತಂಗಿಯರಿಲ್ಲ.....ಅದ್ರೆ ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸೋ ಸಹೋದರಿಯರ ದೊಡ್ಡ ಬಳಗವೇ ಇದೆ ,ನನಗೆ,
ಓದ್ಕೊಂದಿರೋದು ಸ್ನಾತಕೋತ್ತರ ಅರ್ಥಶಾಸ್ತ್ರ ......ಶಾಲಾ ಕಾಲೇಜು ದಿನಗಳಲ್ಲಿ , ಎನ್,ಎಸ್,ಎಸ್. ಹಾಗು ಎನ್,ಸಿ,ಸಿ, ಗಳಲ್ಲಿ ಸಕ್ರೀಯ ಕಾರ್ಯಕರ್ತ ,ಹಲವಾರು ರಾಜ್ಯ ,ರಾಷ್ಟ್ರ ಮಟ್ಟದ ಶಿಬಿರಗಳಲ್ಲಿ ಬಾಗವಹಿಸಿದ್ದಿನಿ......ಹಲವಾರು ಶಿವಿರಗಳನ್ನ ಸಂಘಟಿಸಿದ್ದಿನಿ, ಸಮಾಜ ಸೇವೆ ಮಾಡ್ಲಿಕ್ಕೆ ಅಂತಾನೆ ಎಲ್ಲ ಯುವ ಮಿತ್ರರನ್ನ ಸಂಘಟಿಸಿ "ಚುಕ್ಕಿ" ಅನ್ನೋ ಸಂಸ್ಥೆ ಯನ್ನ ಹುಟ್ಟು ಹಾಕಿದ್ದೀನಿ.....ಮಾತಾಡೋ ಗೆಳೆಯರೆಲ್ಲ ಸೇರ್ಕೊಂಡು "ವಿವೇಕಾನಂದ ಯುವ ಚರ್ಚಪತು ಗಳ ವೇದಿಕೆ" ಕಟ್ಟಿ ಕೊಂಡಿದ್ದಿವಿ... ಎನ್ .ಸಿ.ಸಿ. ಯಲ್ಲಿ "ಸಿ" ಸರ್ಟಿಫಿಕೇಟ್ , ಮೈಸೂರ್ ನ ನಾಟಕ ರಂಗಾಯಣ ದಲ್ಲಿ ಒಂದು ವರ್ಷದ ನಾಟಕ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೋಮಾ ಇನ್ ಕಂಪ್ಯೂಟರ್ ಸಾಫ್ಟ್ವೇರ್, ಇಂಗ್ಲಿಷ್ ಟೈಪ್ ರೈಟಿಂಗ್ ಸೀನಿಯರ್..ಚರ್ಚಪತು ,ಇತ್ತೀಚೆಗೆ ಮೈಸೂರ್ ವಿಶ್ವ ವಿದ್ಯಾನಿಲಯ ದ ೮೮ ನೆ ಘಟಿಕೋತ್ಸವ ದಲ್ಲಿ ಎಕಾನೋಮಿಕ್ಸ್ ಗೆ ಎರಡು ಚಿನ್ನದ ಪದಕಗಳು...............ಇವು ನನ್ನ ವಿದ್ಯಾರ್ಥಿ ಜೀವನದ ಹಲವು ಗರಿಗಳು.............ಸದ್ಯ ಈಗ ನಾನು ಭಾರತ ಸರ್ಕಾರಿ ನೌಕರ............


ಇನ್ನು ಹೇಳಬೇಕೆನಿಸಿದ್ರೆ , ನಾನೊಬ್ಬ ಸ್ನೇಹ ಜೀವಿ....ಭಾವನ ಲೋಕದ ಪಯಣಿಗ.......ಅದಕ್ಕಿಂತ ಹೆಚ್ಚಾಗಿ ವಾಸ್ತವವಾದಿ ........ಸಾಮಾಜಿಕ ಕಳಕಳಿ ನನ್ನ ಉಸಿರು........ಸಮಾಜಕ್ಕೆ ಏನಾದ್ರು ಒಳ್ಳೇದು ಮಾಡಬೇಕು ಅಂತಾ ಪಣ ತೊಟ್ಟು ನಿಂತಿರೋ ಸೈನಿಕ ನಾನು........ನಮ್ ಬಗ್ಗೆ ಹೇಳ್ಕೊಲ್ಲೋಕೆ ಯೆನ್ ಸುಂಕ ಕೊಡಬೇಕಾ.......?! ಇಸ್ಟು ಸಾಕು.......ಅದ್ದ್ರೂ ನನಗೆ ಅನಿಸಿದ ಮಟ್ಟಿಗೆ ನಮ್ಮ ಬಗ್ಗೆ ಹೇಳಿಕೊಳ್ಳುವಾಗ ನಮ್ಮ ಅತ್ಮಭಿಮಾನ ಇಮ್ಮದಿಸಬೇಕು, ಅದು ಅಹಂಕಾರವಾಗಬಾರದು ....ಕಳೆದ ಬದುಕಿನ ಹಾದಿಯ ಮೌಲ್ಯಮಾಪನಕ್ಕೆ ಅವಕಾಶವಾಗಬೇಕು............... ಒಮ್ಮೆ ಬದುಕಿನ ಹಾದಿಯ ಹಿಂತುರುಗಿ ನೋಡಬೇಕು, ಮುಂದಿನ ಹಾದಿಯ ಕನಸು ಕಾಣಬೇಕು..........ನನ್ನ ಇಸ್ಟು ವರ್ಷದ ಬದುಕಿನ ಬಗ್ಗೆ ನನಗೆ ಹೆಮ್ಮೆ ಇದೆ...........ಅದಕ್ಕೆ ನನ್ನ ತಂದೆ, ತಾಯಿಗಳಿಗೆ, ಕಾಣದ ಶಕ್ತಿಗೆ,ಗುರುಗಳಿಗೆ, ಸ್ನೇಹಿತರ ಬಳಗಕ್ಕೆ ನಾನು ಸದಾ ಕೃತಜ್ಞ...................

(ಸದ್ಯಕ್ಕೆ ಇಸ್ಟು ಸಾಕು ಮತ್ತೊಮ್ಮೆ ನನ್ನ ಕುಟುಂಬ ಹಾಗು ಊರಿನ ಬಗ್ಗೆ ಬರಿತೇನೆ...........ಅಂದಂಗೆ "ಸಂವಾದ" ಅನ್ನೋ ಸಂಘಟನೆ ಬೆಂಗಳೂರು ಸುತ್ತ ಮುತ್ತಾ , ಸಾಮಾಜಿಕ ಕಳಕಳಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ......ನನ್ ಬಗ್ಗೆ ಜಾಸ್ತಿ ಹೇಳಿಕೊಂಡ್ನ   ......... ಅದು ಅಹಂಕಾರ ಆಗದೆ ಇರಲಿ , ಸರಿ...........ಅದನ್ನ ನಾ ದ್ವೇಷಿಸುತ್ತೇನೆ ..................ಸಾದಿಸಬೇಕಾದ ದಾರಿ ತುಂಬ ದೊಡ್ಡದಿದೆ............ನೀವ್ ಜೋತೆಯಲ್ಲಿರಿ ಅಸ್ಟೆ ..........ಫುಲ್ ಸ್ಟಾಪ್ ಇದ್ಲಾ...............ಶುಬ ಮಸ್ತು.) 

Thursday, March 6, 2008

ಬಿಟ್ಟು ಹೋದವಳಿಗೊಂದು ಥ್ಯಾಂಕ್ಸ್.......!!




              ಬಿಟ್ಟು ಹೋದವಳಿಗೊಂದು 
ಥ್ಯಾಂಕ್ಸ್.......!!

ನಿನ್ನ ಪ್ರೀತಿಯ ಗರ್ಭದಲ್ಲಿ,
ಮಗುವಾಗಿ ಮರುಜನ್ಮ ತಳೆಯಬೇಕೆಂದಿದ್ದೆ ,
ನಿನ್ನ ಮೋಜಿನಾಟಕ್ಕೆ, 

ಜಾತಿಯ ಜಂಜಾಟಕ್ಕೆ ,
ಬಲವಂತದ ಗರ್ಭಪಾತ  ಮಾಡಿ ಬಿಟ್ಟೆಯಲ್ಲಾ, ಹುಡುಗಿ,
ತಾಯ್ತನಕ್ಕೆ ದ್ರೋಹ ..........?!


ಪ್ರತಿಯೊಬ್ಬ ಗಂಡಿಗೂ ,
ಎರಡೆರಡು ಜನುಮ,
ಒಂದು, ಅಮ್ಮಾಳ ಅಕ್ಕರೆಯ ಮಡಿಲಿನಲ್ಲಿ,
ಮತ್ತೊಂದು, ಸಂಗಾತಿಯ ಸಂಪ್ರೀತಿಯ ಸಾಂಗತ್ಯದಲ್ಲಿ,
ಇಂದು ನೀನಿಲ್ಲ, ಯಾಕೋ, ಅಮ್ಮ ನೆನಪಾಗ್ತಿದ್ದಾಳೆ,
ಅದುವೇ ಅಲ್ಲವೇ ಶಾಶ್ವತ ,
ನೀನು..........?!...........ಮರೀಚಿಕೆಯೇ ...........?!
ಈಗಲೂ ಒಪ್ಪಿಕೊಳ್ಳಲು  ಕಸ್ಟ,
ಯಾಕೆಂದರೆ ಆ ಪರಿ ಪ್ರೀತಿಸಿದ್ದೆ,
ನೀನೂ ಕೂಡ .....ಅದೇ ವಿಪರ್ಯಾಸ...........!!

ನೀನು ಬಿಟ್ಟು ಹೋಗಿದ್ದೇ  ,

ನಾನು ಬೆಳೆಯುವುದಕ್ಕೆನೋ  ಅನಿಸುತ್ತಿದೆ ,
 ಗೂಡಿನಿಂದ  ಆಚೆ ಬಂದ ಮರಿ ಹಾರಲು ಕಲಿಯುವಂತೆ/

                                     ಆಗ ನೀನಿದ್ದೆ , ನನಗೆ ನಿದ್ರೆ,
ಕಳೆದುಕೊಂಡಿದ್ದರ    ಪರಿವೆಯೇ ಇಲ್ಲಾ, 
ಈಗ ನೀನಿಲ್ಲ, ಆದರೂ 

ಸರಾಗ ಉಸಿರಾಟ  !
ಇದು ದುರಂತವೇ......?!
ಇಲ್ಲಾ, ಇದುವೆ ಸತ್ಯ!
ಬದುಕುವುದ ಕಲಿತಿದ್ದೇನೆ, ಕಲಿಸಿದೆ  ಬದುಕು,
ನೀ ಸತ್ತೆ,  ನಿನ್ನ ಷಡ್ಯಂತ್ರಗಳ   ಜಾಲದಲ್ಲಿ ಪ್ರೀತಿ ಸತ್ತಿತು,
ಆದರೆ, ಬದುಕಿಸಿಬಿಟ್ಟವು   ನನ್ನ, 

ನನ್ನ ಕನಸುಗಳು/
 

ನೋಡುತ್ತಿರು ಹುಡುಗಿ, ಹಾರುತ್ತೇನೆ  ದೂರ,
ನಿನ್ನ ನೆನಪುಗಳಿಂದ ಬಲು ದೂರ,
ವಾಸ್ತವ ಜಗತ್ತಿನೆಡೆಗೆ/

 

ಈಗ, ಅನಂತದೆಡೆಗೆ ನನ್ನ ಪಯಣ,
ಕಂಡ ಕನಸ ನನಸಿನಲ್ಲಿ ನನ್ನ ಅಸ್ತಿತ್ವ,
ನೀನು ಮತ್ತು ಕಾಲ ಬೆರಗಾಗುವಂತೆ ಬೆಳೆಯುವೆ.
ಬಾನಂಗಳದ ಚುಕ್ಕಿಯಾಗುವೆ...
ನಿನ್ನ ಮಕ್ಕಳಿಗೆ ತೋರಿಸು,

ಅದು ನನ್ನಿಸ್ಟದ   ಚುಕ್ಕಿಯೆಂದು......!
ಮೊಮ್ಮಕ್ಕಳಿಗೆ ಪರಿಚಯಿಸು , 

ಅದು ನಿನ್ನ ತಾತ   ನಾಗಬೇಕಿತ್ತೆಂದು/
 


ನೀನು ಬಿಟ್ಟು ಹೋಗಿದ್ದರಿಂದಲ್ಲವೇ ,
ನನಗೆ ,ಹೀಗೆ, ಅನ್ನಿಸ್ತಿರೋದು.............
ಥ್ಯಾಂಕ್ಸ್ ಕಣೆ,

ಬಿಟ್ಟು ಹೋಗಿದ್ದಕ್ಕೆ...???!!!

(ಯಾಕೋ ಮನದ ಮೂಲೆಯಲ್ಲಿ ಶವವಾಗಿದ್ದ "ಅವಳು" ನೆನಪಾದಳು.........!!

ನಾನು ಪ್ರೀತಿಸಿದ ಹುಡುಗಿ,ನನ್ನನ್ನ ಪ್ರೀತಿಸಿದ ಹುಡುಗಿ,,ಈಗ ಬೇರೆಯವನ ಹೆಂಡತಿ ಯಾಗಿರೋ ಹುಡುಗಿ, ಅವಳಿಗೊಂದು ಥ್ಯಾಂಕ್ಸ್ ಹೇಳಬೇಕನಿಸ್ತು........ಸುಮ್ಮನೆ ಬರೆದೆ.
ಇದು ಕವಿತೆಯ......? ಪುಟ್ಟ ಕಾದಂಬರಿಯ........? ನನ್ನ  ಬದುಕಿನ ದುಃಖದ     ಕಡಲೋ ..? ಆಶಾವಾದಿಯ ಗೆಲುವೋ ?...ಗೊತ್ತಿಲ್ಲ........
ಬಿಟ್ಟು ಹೋದವರ ನೆನಪಲ್ಲಿ, ಉಳಿದುಹೊದವರ ಬದುಕು ಬೋರಲು ಆಗದೆ, ಯಶಸ್ಸಿನ
ಶಿಖರ   ತಲುಪಿದರೆ, ಭಗ್ನ ಪ್ರೇಮವೂ ಸಾಧನೆಗೆ  ಸ್ಪೂರ್ತಿಯಾದರೆ, ಈ ಕವನದ ಆಶಯ ಸಾರ್ಥಕ........ನಿಮ್ಮ ಅನಿಸಿಕೆಗಳಿಗೆ ಸ್ವಾಗತ)





ನನ್ನೆದೆಯ ಕವನ.......

Tuesday, March 4, 2008

ಪ್ರೀತಿಸುವೆ ಹೀಗೆ...........

ಪ್ರೀತಿಸುವೆ ಹೀಗೆ........

ನಿನ್ನ ನಾ ನೋಡದೆ,
ನಿನ್ನ ನಾ ಕೇಳದೆ,
ಎಂದೂ,ಎಂದೆಂದಿಗೂ,
ಪ್ರೀತಿಸುವೆ ಹೀಗೆ...........

ನೀ ನಡೆವ, ದಾರಿಯಲಿ,
ಇರಬರದೂ,ಬೇಗೆ........

ಮುಂಜಾನೆ ಮಂಜಿನಲಿ,
ಮುಸ್ಸಂಜೆ ಮಬ್ಬಿನಲಿ,
ಅನುರಾಗ ಮುದುವಲ್ಲೀ,
ನಿನಗಾಗಿ ನಾ ಬರೆವೆ ,ಕವಿತೆ,........

ಉಸಿರಲ್ಲಿ ಉಸಿರಾಗಿ,
ಬದುಕಲ್ಲಿ ಬೆಳಕಾಗಿ,
ಬರಿದಾದ ಬಾಳಲ್ಲಿ ...ನೀ........
ತರಬಾರದೇಕೆ, ಒಂದು ಹಣತೆ.......

ನನ್ನ ಜೀವ ನಿನಗಾಗಿ,
ನಿನ್ನ ಪ್ರೀತಿ ನನಗಾಗಿ,
ಈ ಬದುಕು,ನಮಗಾಗಿಯೇ,
ಕಟ್ಟೋಣ ಒಲವಿನಾ...ಗುಡಿಯ..........

ಪ್ರೀತಿಯ ಕದಲಿನಲೀ,
ನಂಬಿಕೆಯ ದೊನಿಯಲೀ,
ಗೆಳೆತನದ.........ಸಿನ್ಚನದಲ್ಲೀ..............
ಸಾಗೋಣ ಸುಮ್ಮಾನೆ................ಹೀಗೇ...................

(ಹೀಗೆ ಸುಮ್ಮನೆ........ಗೆಲೆಥನವು ಅಲ್ಲದ ಪ್ರೀತಿಯು ಅಲ್ಲದ ಮದ್ಯದ ಸ್ಥಿತಿಯಲ್ಲಿ ಸ್ಪೂರ್ತಿಯಾದ ಗೆಳತಿಗೆ ಬರೆದ ಕವನ..........ನನ್ನಲ್ಲೇ ಉಳಿದ ಕವನ...............)