ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Wednesday, June 12, 2013

ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?

ನಾನು ಬರೆಯುತ್ತೇನೆ,
ಕವಿತೆ...../

ಕಾಡುವ ನೆನಪುಗಳ ಪೋಣಿಸಿ,
ಅನುಭವ ಕುಲುಮೆಯಲಿ ಹದಗೊಳಿಸಿ,
ಕನಸು-ಕಲ್ಪನೆಗಳಲಿ ಸಂಭ್ರಮಿಸಿ,
ಎದೆಯ ಗೂಡಿನಲಿ ಆರಾಧಿಸಿ,
ಭಾವಗಳನು ಭಟ್ಟಿ ಇಳಿಸಿ,
ಅಕ್ಷರಗಳಲಿ ಚಿತ್ರಿಸುತ್ತೇನೆ...../

ನೀವು ಕರೆಯುವಿರಿ ಇದನು
ಕವಿತೆ ಎಂದು,

ಪ್ರತಿ ಸಾಲುಗಳಲಿ ಇದೆ ಒಂದೊಂದು ಕಥೆ..../

ಬರೆದು ಹಗುರಾಗುತ್ತೇನೆ,
ಮತ್ತೆ ಸಿದ್ದಗೊಳ್ಳುತ್ತೇನೆ,
ಮತ್ತೊಂದು ಕವಿತೆಗೆ, ನೆನಪಿಗೆ, ಕಲ್ಪನೆಗೆ.../

ಆದರೂ ಉತ್ತರೆ ಸಿಕ್ಕಿಲ್ಲ,
ನಾನೇಕೆ ಬರೆಯುತ್ತೇನೆ..?

Monday, June 10, 2013

ನಾನೇಕೆ ಬರೆಯುತ್ತೇನೆ?



"ನಮಸ್ಕಾರ ಕರುನಾಡಿಗೆ

ನಾನೇಕೆ ಬರೆಯುತ್ತೇನೆ?

ಗೆಳೆಯರೊಬ್ಬರು ಕರೆ ಮಾಡಿ ಹೇಳಿದರು. ಬ್ಲಾಗ್ ನಲ್ಲಿ ನಿಮ್ಮ ಕವಿತೆ ಓದಿದೆ. ಬಹಳ ಖುಷಿಯಾಯಿತು. ಹೀಗೆ ಬರೆಯುತ್ತಿರಿ ಮತ್ತು ಪತ್ರಿಕೆ, ಮ್ಯೆಗಾಜಿನ್ ಗಳೀಗೂ ಕಳುಹಿಸಿ ಅಂತ. ನಿಮ್ಮ ಅಭಿಮಾನಕ್ಕೆ , ಅಕ್ಕರೆಗೆ ಥ್ಯಾಂಕ್ಸ್ ಅಂದೆ.

ತಕ್ಷಣ ನೆನಪಾದದ್ದು ಅಂತರ್ಜಾಲದ ಅನೇಕ ಕವಿ ಮನಸ್ಸುಗಳು. ಮೆಚ್ಚುಗೆ,ಪ್ರತಿಕ್ರಿಯೆ, ವಿಮರ್ಶಿಸುವ ಅನೇಕ ಗೆಳೆಯರು. ನಿಮ್ಮೆಲ್ಲರಿಗು ನನ್ನ ಬಿಗ್ ಥ್ಯಾಂಕ್ಸ್.

ತದನಂತರ ನನಗೆ ಕಾಡಿದ ಪ್ರಶ್ನೆ...ನಾನೇಕೆ ಬರೆಯುತ್ತೇನೆ?

ಉತ್ತರ ಹುಡುಕಿದಾಗ ಮನದಲ್ಲಿ ದಿವ್ಯ ಮೌನ...

ನಿಮ್ಮಿಂದ ಸಿಗಬಹುದೇ ನನ್ನ ಮನದ ಪ್ರಶ್ನೆಗೆ ಉತ್ತರ...

ಶುಭ ದಿನ.

ನಿಮ್ಮವ,

ಚುಕ್ಕಿ



Thursday, June 6, 2013

//ಕನಸಿನ ಗೆಳತಿ//

//ಕನಸಿನ ಗೆಳತಿ//




ಗೆಳತಿ ಹೇಗೆ ಮುದ್ದಿಸಲಿ ನಿನ್ನ,
ನೂರಾರು ಮೈಲು ದೂರದ ಪಯಣ,
ಕಛೇರಿಯಲಿ ರಜೆ ಇಲ್ಲ,
ಕೆಲಸಗಳಿಗೆ ಬಿಡುವಿಲ್ಲ,
ಕನಸೊಂದೆ ದಾರಿ ನಿನ್ನ ಸಮೀಪಿಸಲು,
ಮನದ ಕಿಟಕಿ ತೆರೆದಿಡು,
ರಾತ್ರಿಯ ಬೆಳದಿಂಗಳಲಿ,
ಕನಸ ದಾರಿ ಹಿಡಿದು ಬರುವೆ,
ಮನ ಒಂದಾಗಿರೆ,
ಒಲವಿಗಿಲ್ಲ , ಮೈಲು ದೂರದ ಚಿಂತೆ.