ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, September 27, 2010

ಶ್ರೀಮತಿ

ಇವಳೇ ನನ್ನ ಶ್ರೀಮತಿ,
ಸಂಸಾರ ಯಾನದ ಜೊತೆಗಾತಿ/

ನನ್ನ ಮನಸಿನ ಮಾತು ಇವಳು,
ನನ್ನ ಕನಸಿನ ಕಣ್ಣು ಇವಳು/

ಇವಳೇ ನನ್ನ ಶ್ರೀಮತಿ,
ಜನುಮ,ಜನುಮದ ಆತ್ಮ ಸಂಗಾತಿ/

ನನ್ನ ಮೌನದ ಮಾತು ಇವಳು,
ನನ್ನ ಮಾತಿನ ಭಾಷೆ ಇವಳು/

ಇವಳೇ ನನ್ನ ಶ್ರೀಮತಿ,
ದೈವ ನೀಡಿದ ಸಂಗಾತಿ/

ನನ್ನ ಬದುಕಿನ ಪ್ರೇಮ ಕಾವ್ಯ,
ಕಾವ್ಯದೊಳಗಣ ಮದುರ ಭಾವ /

ಇವಳೇ ನನ್ನ ಶ್ರೀಮತಿ,
ಸುಂದರ ಬದುಕಿನ ದಿಕ್ಸೂಚಿ/

ನನ್ನ ಮುದ್ದಿನ ಮಡದಿ, ನನ್ನೆಲ್ಲ ಕನಸುಗಳ ಒಟ್ಟು ಮೊತ್ತ, ಭಾವ, ಬದುಕು ಎಲ್ಲವೂ ಆಗಿರುವ " ಲಕ್ಷ್ಮಿ " ಗಾಗಿ ಈ ಕವಿತೆ ಅರ್ಪಣೆ.

Thursday, September 16, 2010

ಪ್ರೀತಿಯ ಅಕ್ಕ, ಪೆದ್ದು ತಮ್ಮ ಮತ್ತು ಮೋಸದ ಹುಡುಗಿ ...!!!!!!

  (  ಓದುವ ಮುನ್ನ :  ಅನಂತ್ ನ ಅಕ್ಕ ಸುಲೇಖ , ಅನಂತ್ ಮತ್ತು ಬಿಂದು ವಿನ ನಡುವಿನ ಪ್ರೀತಿಗೆ ಸೇತುವಾಗಿದ್ದಳು, ಸಾಕ್ಷಿಯಾಗಿದ್ದಳು. ಬದುಕಿನ ತಿರುವಿನಲ್ಲಿ ಬಿಂದು ಅನಂತ್ ನ ಹಾದಿಯ ವಿರುದ್ದ ದಿಕ್ಕಿನಲ್ಲಿ ಹೆಜ್ಜೆ ಹಾಕಿದಳು. ಆ ಸಂದರ್ಭದಲ್ಲಿ ಸುಲೇಖ ಮೌನವಾಗಿದ್ದಳು. ವಿಧಿಯ ನ್ಯಾಯಾಲಯದಲ್ಲಿ ಅನಂತ್ ಅಪರಾಧಿ ಸ್ಥಾನದಲ್ಲಿ ನಿಂತಿದ್ದ. ದಿನಗಳು ಉರುಳಿದ ಹಾಗೆ ಸುಲೇಖ ರಕ್ಷಾಬಂಧನ ಹಬ್ಬಕ್ಕೆ  ಅನಂತ್ ಗೆ ರಾಖಿ ಕಳುಹಿಸಿದಳು. ಆ ಸಂದರ್ಭದಲ್ಲಿ ಅನಂತ್ ತನ್ನ ಅಕ್ಕಾಳಿಗೆ ಬರೆದ ಪತ್ರ. ಇದರಲ್ಲಿ ಎಲ್ಲವೂ ಇದೆ. ಓದುವ ತಾಳ್ಮೆ ನಿಮಗಿರಲಿ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ .)


Dear   ಅಕ್ಕ,

ಹೆಂಗಿದ್ದೀಯ ? ಹೇಗಿದೆ ಹೊಸ ಬದುಕು, ಹೊಸ ಭಾವನೆಗಳು , ಹೊಸ ಜನರು, ಹೊಸತಾದ ಎಲ್ಲವುಗಳು?! ಇವುಗಳೆಲ್ಲವುಗಳ ಮಧ್ಯೆ ಹಳತಾದ ಈ ನಿನ್ನ ತಮ್ಮನನ್ನು ನೆನಪಿಸಿಕೊಳ್ಳುವಸ್ಟು    ಸಮಯ ನಿನಗಿದ್ದರೆ, ಅದೇ "ಧನ್ಯ" ನನಗೆ. Any how ನೀನು ಚೆನ್ನಾಗಿಯೇ ಇದ್ದೀಯ ಎಂದು ಭಾವಿಸಿರುತ್ತೇನೆ. ಅಂದಂಗೆ ನಾನು ಕೂಡ ಚೆನ್ನಾಗಿದ್ದೀನಿ. ನಿಜವಾಗಲೂ..... ಹೆಂಗೆ ಅಂತ ಕೇಳ್ತೀಯ ?ಯಾವುದಾದರೂ ಭಯಂಕರ ಗಾಯ ಆಗಿ, ಅದು ಮಾಗಿದ ಮೇಲೆ ಸ್ವಲ್ಪ ತುರಿಕೆ ಉಂಟಾಗುತ್ತದಲ್ಲ, ಅದನ್ನ ಕೆರೆದುಕೊಳ್ಳುವಾಗ  , ಒಂತರಾ ಖುಷಿ ಸಿಗುತ್ತದಲ್ವಾ , ಹಾಗೆ ?! Ofcourse ಏನಿದೆ ನನ್ನ ಪಾಲಿಗೆ ...ವಾಸಿಯಾಗದ ಗಾಯ, ಮರೆಯಲಾಗದ ನೋವು... But you Know , ರೋಗಿಯೂ ನಾನೇ, ವೈದ್ಯನೂ ನಾನೇ. ರೋಗ ಬರೋದಿಕ್ಕೆ ಸ್ವಲ್ಪ contribution ಕೊಟ್ಟವ್ರಲ್ಲಿ ನೀನು ಕೂಡ ಒಬ್ಬಳಾಗಿರಬಹುದಲ್ವಾ  ಅಕ್ಕ ?! ಥ್ಯಾಂಕ್ಸ್ ಅದಕ್ಕೆ. ಯಾಕಂದ್ರೆ ಮನುಷ್ಯನಿಗೆ ದುಃಖವೇ ಇಲ್ಲದಿದ್ದರೆ ಸುಖದ  ಬೆಲೆ ಗೊತ್ತಾಗ್ತಿರ್ಲಿಲ್ಲ, ಕಷ್ಟಗಳೇ  ಇಲ್ಲದಿದ್ದರೆ ಅವನು ಬಲಿಸ್ಟನಾಗ್ತಿರ್ಲಿಲ್ಲ. ಎಲ್ಲಾ ಬಗೆಯ ಸಂಕೊಲೆಗಳ  ಸರಮಾಲೆಯಲ್ಲಿಯೇ  ಯಶಸ್ಸಿನ ಶಿಖರ  ಮುಟ್ಟಬೇಕು. ಅದೇ ಬದುಕು....ಆದರೂ....ಪ್ರೀತಿಸಿದ ಜೀವಗಳು ನೀಡೋ ದುಃಖಗಳನ್ನ, ನಯವಾದ ವಂಚನೆಗಳನ್ನ ಸಹಿಸೋಕಾಗಲ್ಲ. ಅದಕ್ಕೆ ಕಾರಣ ಯಾರೇ ಆಗಿರಬಹುದು, ಸಂದರ್ಭಗಳು ಎಂತಹವೇ ಇರಬಹುದು..ಅಲ್ವಾ?!
                           
 ನನಗೆ ಗೊತ್ತು ನಾ ಬರೆಯುತ್ತಿರುವ ಈ ಪತ್ರದ ಕೆಲವು ಸಾಲುಗಳನ್ನ ಓದುವಾಗ ನಿನಗೆ ಖಂಡಿತ ಕೋಪ ಬರುತ್ತೆ ಅಂತ?! ಆದರೂ ಕ್ಷಮಿಸಿಬಿಡು, hurt ಆದ್ರೆ! ಅದೆ ತಾನೇ ಎಲ್ರಿಗೂ ಉಳಿದಿರೋದು..ಕ್ಷಮೆ..........ಆದ್ರೆ ಕ್ಷಮೆಗಳೆಲ್ಲಾ ಆದ ದುಃಖಗಳನ್ನ ಮರೆಸ್ತಾವ? ಇಲ್ಲ...ಯಾದರೂ ಕ್ಷಮಿಸಿಬಿಡು.......sorry .......sorry .......sorry ........../


                                                     ಈಗಷ್ಟೆ ಕೊರಿಯರ್ ನವ ನಮ್ಮ ಕಚೇರಿಗೆ ಬಂದು "ಅನಂತ್"  ಅಂತ  ಕರೆದದ್ದೇ ತಡ, ನೀನೆ ಕರೆದ ಹಾಗೆ ಆಯಿತು. ನಿಜ ಹೇಳಲಾ..ನನ್ನ ಕಣ್ಣಲ್ಲಿ ನೀರು, ಹೃದಯದಲ್ಲಿ ಆವೇಗ ಬಿಟ್ಟರೆ ಏನೂ ಇರ್ಲಿಲ್ಲ. ಮನಸು ಮೂಖವಾಗಿ ಹೋಯ್ತು. ಮೂರು ವರ್ಷಗಳ ಹಿಂದೆ ನನ್ನ ಆಟೋಗ್ರಾಪ್ ಪುಸ್ತಕದಲ್ಲಿ ಬರೆದ ಅವೇ ಅಕ್ಷರಗಳು. ಅದೆ phrase .

" what is really value is what you miss ,
not what you have .."

ನೀ ಇದನ್ನ ಆಗಾಗ್ಗೆ ಹೇಳ್ತಿದ್ದೆ. ಆಗ ನಾನು ಬೈತಿದ್ದೆ. ನಿನ್ನಲ್ಲಿ ಸ್ಪೂರ್ತಿ ತುಂಬಿದ್ದೆ, ಸಕಾರಾತ್ಮಕವಾಗಿ ಚಿಂತಿಸು ಎಂದು ಹೇಳುತ್ತಿದ್ದೆ. ಆದರೆ ಈವತ್ತು ನಾನೇ ಸೋತು ನಿಂತಿದ್ದೇನೆ. ನಿನ್ನದೇ ಮಾತುಗಳನ್ನ ಅನುಭವದಲ್ಲಿ ಕಂಡಿದ್ದೇನೆ. 'ಬಿಂದು' ಇರುವವರೆಗೂ ನಾನು ಏನನ್ನೂ miss ಮಾಡ್ಕೊಂಡಿರ್ಲಿಲ್ಲ  ಅಕ್ಕ. ಅವಳು ಸಿಕ್ಕಿದ ಮೇಲೆ I have missed me , I have missed ಅನಂತ್ .  ತದನಂತರ ಕೆಲಸ ಸಿಗ್ತು,ಆದ ಗಾಯಗಳನ್ನ ಮರೆಯಲಿಕ್ಕೆ..., ಅನನ್ಯ ಸಿಕ್ಕಿದಳು, ಮಿಸ್ ಮಾಡ ಕೊಲ್ತಿದ್ದ ನನ್ನ ಮುಂದಿನ ಬದುಕಿನಲ್ಲಿ ಸಂತೋಷ ತರಲಿಕ್ಕೆ...What a great change ?! .." ಬದಲಾವಣೆಯೊಂದಿಗೆ ಬೆಳವಣಿಗೆ"...ಜೋರಾಗಿ ನಗಬೇಕನಿಸ್ತಿದೆ. ........ನಿಟ್ಟುಸಿರಿನೊಂದಿಗೆ...........!!!
      

                       ಬಿಂದು  ನನ್ನ  ಜೊತೆಗಿದ್ದರೆ, ನಾನು ಈ ದಿನ ಭಾರತದ ರಾಜಧಾನಿ ಯಲ್ಲಿರುತ್ತಿದ್ದೆ. ಐಎಎಸ್ ಗೆ ಓದುತ್ತಾ ಮುಂದಿನ ಬದುಕಿಗೆ ಅಡಿಪಾಯ ಹಾಕ್ತಾ ತಪಸ್ಸು ಮಾಡಿ ,ಯಶಸ್ಸಿನ ಹಾದು ಹೇಳುತ್ತಿದೆ. ಈ ಕೆಲಸಕ್ಕೆ ಖಂಡಿತ ಬರುತ್ತಿರಲಿಲ್ಲ. Now i am a clerck ..!..ಹೌದು ವಾಸ್ತವಗಳನ್ನ ಅರಗಿಸಿಕೊಳ್ಳಲೆ  ಬೇಕು, ಆದ ಅವಮಾನಗಳನ್ನ , ತಿರಸ್ಕಾರಗಳನ್ನ ಮೆಟ್ಟಿಲು ಮಾಡಿಕೊಂಡು ಮೇಲೆರಲೇಬೇಕು, ಬದುಕಿ, ಸಾಧಿಸಿ ತೋರಿಸಬೇಕು, ಸಾರ್ಥಕವಾಗಿ ಸಾಯಬೇಕು...!
                        

ಬಿಡು, let it forget , what is done is done . ಗತ  ಕಾಲದ ಘಟನೆಗಳಿಗೆ ಘೋರಿ ಕಟ್ಟಿ, ಅದರ ಮೇಲೆ ಮರೆವಿನ ಬಂಗಲೆ ಕಟ್ಟಿ ವಾಸ ಮಾಡಬೇಕು. ನಾನೊಬ್ಬ ಹುಚ್ಚ , ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತೇನೆ, ನಗ್ತೇನೆ, ಅಳ್ತೇನೆ. ಹಂಗಂತ ಸುಮ್ಮನೆ ಕೂರುವ ಜಾಯಮಾನವೂ ನನ್ದಲ್ಲ. ಮುಂದಿನ ಬದುಕಿಗೆ, ಬದಲಾವಣೆ ಗಳಿಗೆ ಅಣಿ ಯಾಗುತ್ತೇನೆ. " ಸೈನಿಕ ಆಯುಧಗಳನ್ನು ಕೆಲಗಿಳಿಸಲೇಬಾರದು, ಸದಾ ಹೋರಾಡುತ್ತಲೇ, ಜಾಗೃಥನಾಗಿಯೇ ಇರಬೇಕು " ಅಲ್ವಾ ?! so keep  smile ..." ನಗಬೇಕಮ್ಮಾ ನಗಬೇಕು, ಏನೆ ಬರಲಿ ನಗಬೇಕು, ನಗುತಾ, ನಗುತಾ ಬಾಳಬೇಕು ...................!

ಮತ್ತೆ , ಅದೆ ಗೋಳಿನ ಕಥೆ ನಂದು, ನೀ ಹೆಂಗಿದ್ದಿ ? ಬದುಕು ಹೇಗಿದೆ?!!ನಂಗೊತ್ತು , ಏನೂ ಹೇಳಿಕೊಳ್ಳುವಸ್ಟು  ನಂಬಿಕೆ, ಪ್ರೀತಿ ನನ್ನ ಮೇಲಿಲ್ಲ , ಆದರೂ ಕೇಳ್ತೇನೆ. Any how , ಎಲ್ಲೇ ಇರು, ಹೇಗೆ ಇರು, ಬದುಕು ಚೆನ್ನಾಗಿರಲಿ. ಯಾವುದೇ ಸಂದರ್ಭದಲ್ಲೂ ಸ್ವಾರ್ಥಕ್ಕೋಸ್ಕರ ಸಂಬಂದಗಳನ್ನ, ಸ್ನೇಹ, ಪ್ರೀತಿಯನ್ನ ಯವಾತ್ತೂ ಬಳಸ್ಕೋಬ್ಯಾಡ . ಬಿಂದು ಮಾಡ್ದಂಗೆ....! Give the world the best , you have any way ..ಖುಷಿಯಾಗಿರೋದಿಕ್ಕೆ ಪ್ರಯತ್ನಿಸು. ನಿನ್ನ ಮನಸ್ಸಿನ ದುಃಖದ ಕಡಲೂ ಕೂಡ ನಿನ್ನ ತಮ್ಮನಿಗೆ ಪರಿಚಯವಿದೆ. ಹಳೆಯ ಕೆಟ್ಟ ನೆನಪುಗಳಿಗೆ ಡೈವೋರ್ಸ್ ಕೊಟ್ಟು, ಹೊಸ ಸಂತೋಷವನ್ನು ತಂದು ಕೊಳ್ಳೋಕೆ ಪ್ರಯತ್ನಿಸು. ಜಗತ್ತು ಬೆರಗಾಗುವಂತ ಸಾಧನೆ ಮಾಡು. ಮಾಡುವ ಪ್ರತಿ ಕೆಲಸದಲ್ಲೂ " ಆತ್ಮ ತೃಪ್ತಿ" ಇರಲಿ, ಅದು ಇಂತದ್ದೆ ಆಗಿರಲಿ.

Monday, September 6, 2010

ಒಲವ ರಕ್ಷೆ

ನಿನ್ನ   ಪ್ರೀತಿಯೇ ನನಗೆ ಶ್ರೀರಕ್ಷೆ,
ಭೀತಿಯ ಮಾತೇಕೆ /

ನೀನೆ ಜ್ಯೋತಿ ನನ್ನ ಬಾಳಿಗೆ,
ಕತ್ತಲೆಯ ಭಯವೇಕೆ/

ನೀ ಜೊತೆಗಿದ್ದರೆ ನಾ ಸೈನಿಕ,
ಒಲವ ರಾಜ್ಯದಲಿ/

ಒಲವು ಕಾಯಲಿ ನಮ್ಮ,
ನಾವಾಗುವ ಒಲವಿಗೆ ಅರ್ಥ /

Friday, September 3, 2010

ನಾನೆಂಬ ಪ್ರಶ್ನೆ ?



ನಾನು ಏನು ?!
ಅನ್ನುವ ಪ್ರಶ್ನೆಗೆ,
ಉತ್ತರ ಗೋಚರಿಸುವುದು,
ನನ್ನೆದೆರು ನಿಂತಿರುವ,
ಕನ್ನಡಿಯ ಪ್ರತಿಬಿಂಬಕ್ಕೆ ಮಾತ್ರ /





"ನೀನು " ಎಂದು ,                       
ಬೆರಳು ತೋರಿಸುವ ಜನಗಳಿಗೆ,
'ನಾನು ಏನು' ಅನ್ನುವ ಪ್ರಶ್ನೆಗೆ ,
ಉತ್ತರವೇ ಇರುವುದಿಲ್ಲ/


ನಾನು ಏನೂ ಅಲ್ಲ,
ನಾನು ಯಾರೂ ಅಲ್ಲ,
ನನ್ನದೆಂದುಕೊಳ್ಳುವ ಯಾವೂದೂ ನನ್ನದಲ್ಲ,
ಈ ಸತ್ಯ ತಿಳಿದಿದ್ದರೂ,
ಜಗದ ಜಾತ್ರೆಯ ಜಂಜಾಟ ತಪ್ಪಿದ್ದಲ್ಲ,
ನಾನು , ನೀನು ಗಳ ಕದನ ನಿಲ್ಲುವುದೇ ಇಲ್ಲ /




                                                                       
 ಶ್ರೀ ಕೃಷ್ಣ ನೆನಪಾಗುತ್ತಾನೆ,
ಕೈಯಲ್ಲಿ ಭಗವದ್ಗೀತೆ ಹಿಡಿದು,
" ಪರಿವರ್ತನೆ ಪ್ರಕೃತಿ ನಿಯಮ",
ಆದುದೆಲ್ಲಾ ಒಳ್ಳೆಯದಕ್ಕಾಗಿ,
ಕನ್ನಡಿಯ ಪ್ರತಿಬಿಂಬ ಪಿಸುಗುಟ್ಟುತ್ತದೆ,
ಎಲ್ಲರೊಳಗೊಂದಾಗು ಮಂಕುತಿಮ್ಮ/