ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, May 26, 2008

ನನ್ನೂರಿನ ಸೂರಿನ ಮೇಲೆ....!!!!!!!!

ವಿಮಾನ...ವಿಮಾನ.....!!!
ನನ್ನೂರಿನ ಸೂರಿನ ಮೇಲೆ , ವಿಮಾನಗಳದ್ದೇ ವಿಹಾರ...
ಗಗನದ ತುಂಬಾ ಮಿಂಚಿನ ಸಂಚಾರ.
ಇಲ್ಲಿಂದಲೇ ಹಾರುತ್ತವೆ, ಎಲ್ಲಿಂದಲೋ ಇಳಿಯುತ್ತವೆ..
ಜಾಗತೀಕರಣ ಜಾತ್ರೆಯ ಸರಕುಗಳು...!!

"ವಿಶ್ವ ಗ್ರಾಮ " ದ ರಾಯಭಾರಿಗಳು....

ಭರವಸೆ ಮೂಡಿಸುವ "ಚುಕ್ಕಿ" ಗಳೇ ಮಾಯ, ಆಗಸದಲ್ಲಿ..
ರೈತರ ಬದುಕಲ್ಲಿ ರಜನಿಯ ಆಕ್ರಮಣ,
ಅನ್ನ ನೀಡುವ ರೈತನ ಬದುಕು ಬಲು ದುಸ್ತರ,
ಉಳುವ ಯೋಗಿಯ ನೆಲವೀಗ "ವಿಮಾನ ನಿಲ್ದಾಣ"
ಹಕ್ಕಿಗಳು ಹಾರುವಂತಿಲ್ಲ, ಕಾಗೆಗಳು ಕಿರುಚುವಂತಿಲ್ಲ..

ಚಿಟ್ಟೆಗಳ ಚಿತ್ತಾರವಿಲ್ಲ, ಕನ್ನಡಿಗರಿಗೆ ಕೆಲಸವಿಲ್ಲ...

ಊರ ತುಂಬೆಲ್ಲ "ರಿಯಲ್ estatu" ,
ಉಳ್ಳವರ ಜೇಬಲ್ಲಿ ಕೋಟಿ , ಕೋಟಿ ನೋಟು,
ಬದಲಾಗಿದೆ ಜನರ statassu,
ಬಡವರ ಬದುಕು ಬಾರಿ taitu,
ಬಲಿಯಾಗುತ್ತಿವೆ ಸತ್ಯ, ಸಂಸ್ಕೃತಿ , ಸಹಜತೆಗಳು....

ಬದಲಾಗಿವೆ ಬದುಕಿನ ದಿಕ್ಕುಗಳು...

ವಿಮಾನಗಳ ಅಬ್ಬರದಲಿ ನೆಮ್ಮದಿಯ ನಿದ್ರೆಯಿಲ್ಲ,
ಹಸು ಕಂದಮ್ಮಗಳು ಬೆಚ್ಚುತಿವೆ,
ಈಗ ಇಲ್ಲಿ ಎಲ್ಲವೂ ದುಬಾರಿ,
ಆಧುನಿಕತೆಯ ಆವಿಷ್ಕಾರಗಳಿಗೆ,
ಬಡವ ತೆರಬೇಕಾಗಿದೆ, ದುಬಾರಿ ತೆರಿಗೆ,
ಸರ್ಕಾರಿ ನೌಕರರಿಗೂ ಬಾರಿ ಬಾರಿ ಕಿರಿ, ಕಿರಿ...

ಪ್ರಪಂಚವೇ ಬರುತಲಿದೆ, ಈ ಪುಟ್ಟ ಊರಿಗೆ,
ಯಾವ ಧೂತ ಬಂದಾನು ಇಳಿದು?!
ಕೋಟೆ ಕಟ್ಟಿ ಮೆರೆದಾಡಿದ, ವೀರ ಯೋಧನಿಗೆ ಜನುಮ ನೀಡಿದ,
ಈ ಊರಿನ ಸೂರಿನ ಮೇಲೆ, ಅಭಿವೃದ್ದಿಯ ಧ್ವಜ ಹಾರಿಸಲು,
ನೀರಿಕ್ಷೆಗಳು ಹುಸಿಯಾಗದಿರಲಿ, ವಿಮಾನದೂರಿನಲ್ಲಿ,
ನನ್ನೂರಿನ ಸೂರಿನ ಮೇಲೆ "ಚುಕ್ಕಿ" ಗಳು ಮಿನುಗಲಿ...


Wednesday, May 21, 2008

ಗೆಳೆಯ....

(ರವಿಕುಮಾರ್, ಲಕ್ಷ್ಮಿಕಾಂತ್ ಕಲ್ಕುಣಿಕೆ ,ಭಾನು, ಗಿರೀಶ್ ಹಳೆಮನೆ, ಮಾದೇಶ್ ಹೊಸೂರ್, ರಾಘವೇಂದ್ರ  )
( ನನ್ನ ಬದುಕಿನಲ್ಲಿ " ಗೆಳೆಯ " ಎಂಬ ಪದಕ್ಕೆ ಮಹತ್ವದ ಸ್ಥಾನವಿದೆ...ವಿಶ್ವದ ಲಿಪಿಕಾರ ನನ್ನ ಬದುಕಿನ ಬಹುತೇಕ ಪುಟಗಳನ್ನು ಗೆಳೆಯರಿಗಾಗಿಯೇ ಮೀಸಲಿಟ್ಟಿದ್ದಾನೆ.. ಗೆಳೆತನದಲ್ಲಿ ಒಂದು ವಿಶಿಷ್ಟವಾದ  ಬೆಸುಗೆ ಇದೆ...ಹಾಗಾಗಿಯೇ ನನ್ನಂತಹವರು ಗೆಳೆತನಕ್ಕಾಗಿ ಪ್ರತಿ ಕ್ಷಣ ಹಂಬಲಿಸುತ್ತಾರೆ....ಒಂದು ಪಕ್ಷ ನನಗೆ ಸಾವು ಬರುವುದು ಗೊತ್ತಾದರೆ,  ಆ ಕ್ಷಣದಲ್ಲಿ ನಾನು ನನ್ನ ಆತ್ಮಿಯ ಗೆಳೆಯರ ಸಂಗದದಲ್ಲೇ ಪ್ರಾಣ ಬಿಡಲು ಬಯಸುತ್ತೇನೆ....ಗೆಳೆತನವೇ ನನ್ನ ಬದುಕಿನ ಶಕ್ತಿ....ಯೋಗೀಶ್ ಪ್ರಭು ಹಾಗು ಯತೀಶ್ ರಂತೆ ಪ್ರೀತಿಸುವ ಸಾವಿರಾರು ಗೆಳೆಯರಿಗಾಗಿ ಈ ಪುಟ್ಟ ಕವಿತೆ ಅರ್ಪಣೆ....ಬಡ ಗೆಳೆಯನ ಒಲವಿನ ಉಡುಗೊರೆ, ನನ್ನ ಪ್ರೀತಿಯ ಗೆಳೆಯರಿಗೆ...ಒಪ್ಪಿಸಿಕೊಳ್ಳಿ...)
 
ಗೆಳೆಯ....

ಗೆಳೆಯ ,
ನನ್ನೆದೆಯ ದುಃಖದ   ಕಡಲಿಗೆ,
ನಗುವಿನ ಅಣೆಕಟ್ಟು ಕಟ್ಟಿದವನು/

 

ಗೆಳೆಯ,
ಬದುಕು ಹಾದಿಯ ಕಹಿಗೆ,
ಸಾಂತ್ವಾನದ ಸಿಹಿ ಉಣಿಸಿ ದವನು/

ಗೆಳೆಯ,
ಸೋತಾಗ, ಸಾಯಬೇಕೆಂದಾಗ,
ಹೊಸ ಬದುಕಿಗೆ "ಚೆಯರ್ಸ್" ಹೇಳಿದವನು/


ಗೆಳೆಯ,
ಅಲೆಮಾರಿ ದಿನದ ಏಕಾಂಗಿತನದಲ್ಲಿ,
ನೆಲೆಯೂರಲು ಜೋತೆಯಾದವನು/

ಗೆಳೆಯ,
ಹುಚ್ಚು ಮನಸ್ಸಿಗೆ ಕನ್ನಡಿ ಹಿಡಿದು,
"ನನ್ನೊಳಗಿನ ಮನುಷ್ಯ" ನನ್ನು ತೋರಿಸಿದವನು/

ಗೆಳೆಯ,
ಸ್ಪೂರ್ತಿಯ ಚಿಲುಮೆಯಂತೆ, ಒಲವಿನ ಗಣಿ ಯಂತೆ,
ಬರಿದಾದ ಬದುಕಲ್ಲಿ ಬೆಳಕ ತಂದವನು/


ಗೆಳೆಯ,
ವರ್ತಮಾದಲ್ಲಿ ಜೋತೆಗಿರುವವನು,
ನನ್ನ ನಾಳೆಗಳಲ್ಲಿ ನಂಬಿಕೆ ಬರಿಸುವವನು/

ಇವನ ಹೆಸರು ಗೆಳೆಯ,
ನನ್ನ ಮನಸಿನ ಇನಿಯ/