ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, October 18, 2010

-+- ಅಲರ್ಜಿ ಮಹಾತ್ಮೆ -+-

ಪ್ರಿಯ ಸ್ನೇಹಿತರೆ,  " ಅಲರ್ಜಿ "  ಯಾತನಮಯವಾದುದು. ಯಾವುದಕ್ಕೂ ಚಿಂತೆ ಮಾಡದೆ ಎಗ್ಗಿಲ್ಲದೆ ಬೆಳೆದ ದೇಹಕ್ಕೆ , ಆಸೆಯ ಮನಸ್ಸಿಗೆ ಅಲರ್ಜಿ ಪೂರ್ಣ ವಿರಾಮ ಇದುವ ದಿವ್ಯಾಸ್ತ್ರ. ಮೊನ್ನೆ ಇದುವರೆಗೂ ಯಾವುದೇ ಅಲರ್ಜಿ ಇಲ್ಲದ ನಾ ಕೂಡ ಇದಕ್ಕೆ ಮುಗ್ಗರಿಸಿಬಿಟ್ಟೆ . ಆ ಸಮಯದಲ್ಲಿ ಅಲರ್ಜಿ ಬಗ್ಗೆ ನನಗನಿಸಿದ್ದು ಹೀಗೆ. ....ಓ ಅಪ್ರಿಯ  ಅಲರ್ಜಿ,  ಏನು ನಿನ್ನ ಲೀಲೆ ?!

ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!


ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ,
ಕಟ್ಟು ನಿಟ್ಟು ಗಳ ಬದಿಗೆ ಸರಿಸಿದ್ದೆ/


ನೀ ಬಂದೆ ಎಲ್ಲಿಂದ,
ಅಹಿತ ಸುಖದ ರೂವಾರಿ, ತುರಿಕೆಯ ರಾಯಭಾರಿ/


ರೋಗ ಬಂದರೆ ದೇಹದ ಒಂದು ಅಂಗಕ್ಕೆ,
ನಿನ್ನ ಲೀಲೆಯೋ ಸರ್ವಾಂಗಕ್ಕೆ/


ಕಡಿತ ಬಂದರೆ ಪರ, ಪರವೇ ಸುಖ,
ಪರ, ಪರ ವೆ ಕಾಯಕವಾದರೆ , ಎಲ್ಲೇ ಇಲ್ಲದ ನರಕ/


ಇನ್ನಾದರೂ ನಡೆಸುವೆ ಶಿಸ್ತುಬದ್ದ ಬದುಕು,
ನಿನ್ನಿಂದ ಕಲಿತೆ ಮಿತಿಯ  ಬಯಕೆ/


ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!

- ಲಿಂಗೆಶ್ ಹುಣಸೂರು (ಚುಕ್ಕಿ )
ಅಲರ್ಜಿಗೆ ಎರಡು ದಿನ ಬಲಿಯಾದ ನಿಮ್ಮ ಗೆಳೆಯ....

Sunday, October 3, 2010

//ಜಾಗೋ ಹಿಂದೂ, ಜಾಗೋ ಭಾರತ್//


ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /

ಚರಿತ್ರೆಯ ಶೋಷಣೆಗಳಿಗೆ
ತಿಲಾಂಜಲಿ ಇಟ್ಟು ,
ಜಾತಿ - ಉಪಜಾತಿ
ಗೋಡೆಗಳ ಮೆಟ್ಟಿ,
ಉಳಿಸಬೇಕು ಸನಾತನ ಧರ್ಮ /

"ನಾವು" ಎಂದರೆ "ಹಿಂದೂ " ಅನಬೇಕು,
ನಮ್ಮ ಒಡೆವ ಕಿಡಿಗೇಡಿಗಳ ಮೇಲೆ ,
ರಣಕಹಳೆ ಮೊಳಗಿಸಬೇಕು,
ಧರ್ಮ ಬೆಳೆಸಬೇಕು/

ನೆನ್ನೆ ಮೊನ್ನೆಯದಲ್ಲ
ನಮ್ಮ ಸಂಸ್ಕೃತಿ,
ಹಿಂದುಸ್ತಾನದ ಜೀವ ಶ್ರುತಿ/

ಹಬ್ಬಬೇಕು ಮುಗಿಲೆತ್ತರಕ್ಕೆ,
ಹರಡಬೇಕು ಜಗದಗಲಕ್ಕೆ ,

ಅದಕ್ಕೆ ಮೊದಲು............

ಬೆಳೆಸಬೇಕು ಏಕತಾಭಾವ,
ಕಿತ್ತೊಗೆಯಬೇಕು ಅಸ್ಪೃಶ್ಯತೆಯ ಜಾಲ,
ಒಂದಾಗಬೇಕು,
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ,
ಮೊಳಗಬೇಕು ಶ್ರೀ ರಾಮ ನಾಮ /

ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /



ಜೈ ಶ್ರೀರಾಮ್ , ಜೈ ಹಿಂದ್ (ದು )

ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ.....

Friday, October 1, 2010

/-ನಮ್ಮ ಹೆಮ್ಮೆಯ ಗಾಂಧೀ ತಾತ- /

ಗಾಂಧೀಜಿ  ಹಾದಿಯಲ್ಲಿ ನಿಮ್ಮ ಗೆಳೆಯ .
ತಾತ, ತಾತ,ತಾತ,
ನಮ್ಮ ಹೆಮ್ಮೆಯ ಗಾಂಧಿ   ತಾತ /

ಕೋಲನು ಹಿಡಿದು ನಡೆಯುವ ತಾತ,
ಕೋಮಲ ಹೃದಯದ ಶಾಂತಿ ಧೂತ/

ಹಸಿವು ಕಲಿಸುತ್ತದೆ, ಬದುಕಿನ ಪಾಠ ,
ಉಪವಾಸದ ಮುಖೇನ, ನೀ ಬೋದಿಸಿದೆ  ವಿಜಯದ ಪಾಠ /

ಹಿಂಸೆಯ ಜಗಕೆ  ತಿಳಿಸಿದೆ ನೀ , ಶಾಂತಿಮಂತ್ರ,
ಅಹಿಂಸೆಯ ಮೂಲಕ ಗಳಿಸಿದೆ ನೀ , ಸ್ವಾತಂತ್ರ್ಯ /

ಸಪ್ತ ಪಾಪಗಳ ತಿಳಿಸಿದೆ ಜಗಕೆ,
ಎಲ್ಲಾ ಪಾಪಗಳ ಮೆಟ್ಟಿ ನಿಂತೆ /

ಸಾರಿದೆ ನೀ, ಎಲ್ಲಾ ಜಾತಿಗಳ ಒಂದೇ ಎಂದು ,
ವಿಶ್ವಧರ್ಮವ ನೀ ಪಾಲಿಸಿದೆ/


ರಾಮರಾಜ್ಯದ ಕನಸನು ಕಂಡೆ,
ಗಾಂಧಿ ಜಯಂತಿಯ ಶುಭಾಶಯಗಳು
ಭಾರತ ಮಾತೆಯ ಉನ್ನತಿಗೆ, ಹೊಸ ದೃಷ್ಟಿ ಕೋನವ  ಕೊಟ್ಟೆ/

ಹಗಲು - ಇರುಳೆನ್ನದೆ ದುಡಿದೆ ನೀ , ಈ ದೇಶಕಾಗಿ,
ನಿನ್ನಾದರ್ಷದಿಂದಲೇ ಈ ದೇಶ ಉಳಿದಿದೆ/

ವಿಶ್ವಮಾನ್ಯ ವ್ಯಕ್ತಿ ನೀನು,
ಸರ್ವ ಕಾಲಕೂ  ಸಲ್ಲುವ ಚೇತನ ನೀನು /

ಭಾರತಾಂಬೆಯ ಹೆಮ್ಮೆಯ ತನುಜ,
ನಿನಗಿದೋ  ನಮ್ಮ ನಮನ /