ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Saturday, July 17, 2010

"ಅನನ್ಯ" ..ನನ್ನ ಸಂತೋಷಕ್ಕಿರುವ ಒಂದೇ ಒಂದು ಕಾರಣ

ಹಾಯ್ ಪ್ರೀತಿಯ ಹುಡುಗಿ,

                         ಹೇಗಿದ್ದೀಯ..? ಅಪ್ಪ, ಅಮ್ಮ, ಮುದ್ದು ತಂಗಿ, ಪೆದ್ದು ಭಾವಿ ಪತಿ, ನಿನ್ನ ಕನಸು, ಕನವರಿಕೆ, ಇತ್ಯಾದಿ, ಇತ್ಯಾದಿ..ಎಲ್ಲಾ ಹೇಗಿದ್ದಾರೆ, ಹೆಂಗಿವೆ? ಎಲ್ರಿಗೂ ನಿನ್ನ ಅನಂತ್ ನ ಹೃದಯ ಪೂರ್ವಕ ಶುಭ ಹಾರೈಕೆಗಳು.  ನಾನ್ ಹೇಗಿದ್ದೀನಿ ಅಂತ ಕೇಳ್ತಿದ್ದೀಯ?! . ಸರ್ಕಾರದ ಕೆಲಸದ ಜಂಜಾಟ, ಬದುಕಿನ ಜೂಟಾಟ, ಏಕಾಂಗಿ ಬದುಕಿನ ಸಂಸಾರ , ಗುರಿ ಇರದ ಸಂಚಾರ, ನಾನೇ ತಂದುಕೊಂಡ   ಕೆಲವು ಸಂಚಕಾರ, ಅಪೂರ್ಣವಾಗಿರೋ ಕನಸುಗಳು, ಪೂರ್ಣಗೋಳಿಸಬೇಕಾಗಿರೋ  ಜವಾಬ್ದಾರಿಗಳು....ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪುಟ್ಟ ಹೃದಯದಲ್ಲಿ ಪ್ರತಿಸ್ಟಾಪಿಸಿಕೊಂಡಿರೋ  "ಅನನ್ಯ " ಅನ್ನೋ ಮೂರುವರೆ ಅಕ್ಷರಗಳ ಮುದ್ದು ಹುಡುಗಿಯ ಪ್ರೀತಿ ಸ್ಮಾರಕ ..ಎಲ್ಲದರೋಟ್ಟಿಗೆ ಆರಾಮಾಗಿದ್ದೀನಿ ಹುಡುಗಿ...........!!!!!! 
             

                            ಮತ್ತೆ ಏನು ವಿಶೇಷ ? ಕೆಲಸ ಹೇಗಿದೆ ? ಬಹಳ ಅದ್ರುಸ್ಟವಂತಳು ನೀನು. ನಿನಗೆ ಎರಡೆರಡು ಜವಾಬ್ದಾರಿ..ಒಂದು ಸರ್ಕಾರದ್ದು, ಮತ್ತೊಂದು ಬದುಕಿನದ್ದು. ನನ್ನ ಬದುಕಿನ ಸ್ಪ್ರೂರ್ಥಿಯ ಸೆಲೆ  ಅನನ್ಯ , ಕೆಲವೇ ದಿನಗಳಲ್ಲಿ ಶ್ರೀಮತಿ ಅನನ್ಯ ಅನೂಪ್ ಆಗ್ತಿದ್ದಾರೆ. ಮತ್ತಸ್ಟು ದಿನಗಳಲ್ಲೇ ಅನನ್ಯ " ಅಮ್ಮ " ಆಗ್ತಾಳೆ . " ಮಗುವಿನೋಳಗೊಂದು ಮಗು" , ನಂತರ ಅತ್ತೆ, ಅಜ್ಜಿ, ಬದುಕಿನ ವಿಭಿನ್ನ ಆಯಾಮಗಳು ...ಅಬ್ಬಾ! ನೆನೆಸಿಕೊಂಡರೆ ಮೈ ಮನ ರೋಮಾಂಚನ..! ಅದೆಷ್ಟು ಬೇಗ ನಾವು (ನೀನು ಮಾತ್ರ, ನಿನ್ನೋಬ್ಬಳಿಂದ ಮಾತ್ರ ಸಾಧ್ಯ ) ಬದುಕಿನ ಬದಲಾವಣೆಗಳನ್ನು ಸ್ವೀಕರಿಸಿಕೊಂಡುಬಿಡುತ್ತೇವೆ  , ಅರಗಿಸಿಕೊಂಡುಬಿಡುತ್ತೇವೆ ಅಲ್ವಾ ??????  ನೀನು ನನ್ನ ಬದುಕಿನೊಳಗೆ ಬಂದದ್ದೂ ಕೂಡ ಅಂತಹ ಮಹತ್ತರ ಬದಲಾವಣೆಯೇ ಅಲ್ವಾ ?!  ಆದ್ಯಾಗ್ಗ್ಯು ನಿನ್ನೇನೋ ಕೆಲವೇ ದಿನಗಳಲ್ಲಿ ಬದುಕಿನ ಮತ್ತೊಂದು ಮಧುರ ಘಟ್ಟಕ್ಕೆ ಕಾಲಿರಿಸಲು  ಹಿರಿಯರೆಲ್ಲ ಕೂಡಿ "ಒಡಂಬಡಿಕೆ" ಗೆ ಸಹಿ , ಆಂಗ್ಲ ಭಾಷೆಯಲ್ಲಿ ಅದಕ್ಕೆ "ಯೆನ್ಗೆಜೆಮೆಂಟ್" ಅಂತ ಕರಿತಾರೆ, ಅಲ್ಲಿಂದಾಚೆಗೆ ಬರಿ " ಕಮಿಟ್ಮೆಂಟ್ " ಗಳ ಸಂತೆ. ಈ ಸಂತೆಯ ಸಾಗರದಲ್ಲಿ ಮುಳುಗದೇ ಈಜಿ ಜಯಿಸಿ, ಸಂತೋಷದ ದೋಣಿ ಯಲ್ಲಿ ತೇಲಿ ನೆಮ್ಮದಿಯ ದಾದಾ ಸೇರು ಜೀವವೇ, ಅದೇ ನನ್ನ ಎದೆಯಾಳದ ಹಾರೈಕೆ.....

                                     " ಚೆನ್ದಾದ್ಲು ಕಣೆ, ಮುದ್ದಾದ್ಲು ಕಣೆ , ಮಧು ಮಗಳಾದ್ಲು ಕಣೆ , ನಮ್ ತುಂಟ್ ಹುಡುಗಿ ..." ಅಲ್ವಾ ?! ನಿನ್ನ ಬದುಕಿನ ಸಡಗರ ನೋಡ್ಲಿಕ್ಕೆ ನಿನ್ನ ಅನಂತ್ ನಿನ್ನೆದುರು ಇರಲ್ವಲ್ಲ ಮನಸೇ, (ನಾನ್ ಅಲ್ಲಿದ್ರೆ ನಿನ್ನ ಭಾವಿ ಪತಿ , ಭಾವಿಗ್ ಬಿದ್ಬಿಡ್ತಾನೆ , ನಂಗ್ ನೀನ್ ಚೆನ್ನಾಗಿರಬೇಕು ) , ಅದಕ್ಕೇನಂತೆ ಮಾನಸಿಕವಾಗಿ ಸದಾ ನಾನ್ ನಿನ್ ಜೋತೆಗಿರ್ತೀನಿ, ನೀ ಎಲ್ಲೇ ಇರು , ಹೇಗೆ ಇರು , ಈ  ಅನಂತ್ ನ ಹೃದಯ ನಿನ್ನ ಒಳಿತಿಗೋಸ್ಕರ  ಸದಾ ಮಿಡಿಯುತ್ತಿರುತ್ತದೆ...ಅದ್ ಸರಿ ಮಾರಾಯ್ತಿ , ಮದ್ವೆ ಆದ್ ಮೇಲೆ ನನ್ನ ಮರೆತ ಬಿಡ್ತಿಯೇನು?!  ಹಂಗೆನಾದ್ರು ಮಾಡಿದ್ರೆ ಈ ಅನಂತ ಹುಚ್ಚ ಆಗಿಬಿಡ್ತಾನೆ   ( ಈಗ ಆಗಿರೋದಾದ್ರೂ   ಏನು , ನನಗರ್ಥ ಆಗ್ತಿಲ್ಲ ) . ಮದುವೆ ಅನ್ನೋದು ಒಂದು ಕಮಿಟ್ಮೆಂಟು, ಅಂದೊಂದು ಅಗ್ರಿಮೆಂಟು  , ನಿಜವಾಗಿ ಪ್ರೀತಿಸೋ ಹೃದಯಗಳಿಗೆ ಇಂತ ಯಾವ ಬೆಸುಗೆಯು ಬೇಕಾಗಿಲ್ಲ , ಅದು ಬೇಕಾಗಿರೋದು  ಹೃದಯವಿಲ್ಲದ ಈ ಸಮಾಜಕ್ಕೆ ... ( That is blind and worst ) . ಆದ್ರೆ ಸತ್ಯ ಹೇಳ್ತೀನಿ ಕೇಳು, ನನ್ನ ಪ್ರೀತಿ ನಿನ್ನಿಂದ ಯಾವತ್ತೂ , ಏನನ್ನೂ ಬಯಸೋದಿಲ್ಲ , ಅಂಗೈ ಅಗಲ ಪ್ರೀತಿ ಹೊರತು..! ,  ಅದು ಕೂಡ ಯಾವಾಗಲು ಇದ್ದೆ ಇರುತ್ತದೆ ಅಂದುಕೊಂಡು ಉಸಿರಾಡ್ತಾ ಇರ್ತೀನಿ. ನನ್ನ ನಂಬಿಕೆ ಸದಾ ಚಾಲ್ತಿಯಲ್ಲಿರಲಿ ಹುಡುಗಿ....

                             ಇಂದು ನನಗೆ ನನ್ನ ಬಗ್ಗೆ ಯೇ ಗುರುತು ಇಲ್ಲದ   ಹಾಗೆ ಮಾಡಿ ಬಿಟ್ಟಿದೆ ಈ ಬದುಕು! ಗೊತ್ತಿಲ್ಲದೇ ಇರೋ ಊರಿನಲ್ಲಿ, ಪುಟ್ಟದೊಂದು ಗೂಡು  ಮಾಡಿ ಕೊಂಡು , ಜೊತೆಗೆ ನಿನ್ನ ಪ್ರೀತಿಯನ್ನು ಬೆನ್ನಿಗೆ ಕಟ್ಟಿಕೊಂಡು ಬದುಕ್ತಿದ್ದೀನಿ . ಬಿಡುವು ಇಲ್ಲದ ಬದುಕು . ನಿನ್ನ  ಮದುವೆ ಶಾಸ್ತ್ರಕ್ಕೆ ಶುಭ ಹಾರೈಸಲು ಚೆಂದದೊಂದು ಉಡುಗೊರೆ ತರಲಿಕ್ಕೂ ಸಮಯ ಇಲ್ಲದಿರುವಸ್ಟು ಜಂಜಾಟ. ಇರೋದ್ರಲ್ಲೇ ಚೆಂದದೊಂದು ಗಿಪ್ಟ್  ಕಲಿಸಿದ್ದೀನಿ, ಬೇಜಾರು ಮಾಡ್ಕೋಬ್ಯಾಡ. ( ನೀ ನನ್ನೊಟ್ಟಿಗಿದ್ದಿದ್ದರೆ ನನ್ನ ಇಡೀ ಬದುಕನ್ನೇ ನಿನಗೆ ಉಡುಗೊರೆ ಯಾಗಿ ಕೊಡುತ್ತಿದ್ದೆ ) ನೆನಪಿನ ಮನೆಗೆ ಈ ಗಿಫ್ಟ್ ಗಳು ಅಲಂಕಾರ ಸಾಮಗ್ರಿಗಳು.

ಈ ಬದುಕೇ ಹೀಗೆ  ಜೀವವೇ, ಅನಿವಾರ್ಯತೆಗಳ ಸಂತೆ. ಬದುಕಿನ ಹೊಟ್ಟೆ ಯಲ್ಲಿಯ ಅನವರತವಾದ ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕು. " ಕಾಲದಲ್ಲಿ ಯಾರೂ, ಯಾವುದು ಶಾಶ್ವತವಲ್ಲ", ಗುಲ್ಜಾರ್ ಒಂದು ಕಡೆ ಹೇಳ್ತಾನೆ ," ಬರುತ್ತಿರುವ ಕಾಲ ಹೋಗುವುದರಲ್ಲಿದೆ, ಇದರಲ್ಲಿ ಜೀವನ ಕಳೆದು ಬಿಡು, ಈ ಕ್ಷಣ ಹೋಗಿಬಿದುವುದರಲ್ಲಿದೆ ", ಎಷ್ಟು ಸತ್ಯ ಅಲ್ವಾ ?! ನಾವಿಬ್ಬರು ಕಳೆದ ಭೂತಕಾಲವನ್ನು ಮೆಟ್ಟಿ  ಭವಿಷ್ಯದ  ಕನಸುಗಳೊಂದಿಗೆ ಬೆಳೆಯಬೇಕು.   ಆಗಿ ಹೋದ ಘಟನೆಗಳಿಗೆ ಹಲುಬಿ ಏನು ಪ್ರಯೋಜನ ಅಲ್ವಾ ?! ನಿನ್ನದು ಮಗುವಿನಂತಹ ಮನಸ್ಸು , ಅದಕ್ಕೆ ನಾನು ನಿನ್ನನ್ನು " ಪ್ರಭುದ್ದ ಮಗು " ಎಂದು ಕರೆಯುತ್ತಿದ್ದುದು . ಯಾವುದೇ ಮುಖವಾಡ ಇಲ್ಲದ ನಿಷ್ಕಲ್ಮಶ ಮನಸ್ಸು ನಿನ್ನದು. ನಿನಗೆ ಅಮ್ಮಳಂತಹ ಸಂಗಾತಿ ಬೇಕು. ಆತ ಅಪ್ಪ , ಅಮ್ಮ  ,ಗೆಳೆಯ,ಇನಿಯ   ಎಲ್ಲಾ ಆಗಿರಬೇಕು. ಅನೂಪ್ ಬಗ್ಗೆ ನನಗೆ ಏನು ಗೊತ್ತಿಲ್ಲ . ಆತ ನಿನ್ನ ಭಾಳ ಸಂಗಾತಿ  ಆಗುತ್ತಿದ್ದಾನೆ ಅನ್ನೋ ಒಂದೇ ಕಾರಣಕ್ಕೆ  ನಾನು ಅವನನ್ನು ಗೌರವಿಸುತ್ತೇನೆ. ಆತ ನಿನ್ನನ್ನು ಈ ಅನಂತ್ ನ ಹಾಗೆ ನೋಡಿಕೊಂಡರೆ ಅದೇ ನನಗೆ ನೆಮ್ಮದಿ ಯ ವಿಷಯ.

            ಎಲ್ಲಾ ಒಳ್ಳೆಯದಾಗಲಿ. ಚೆನ್ನಾಗಿರು ಜೀವವೇ , ಬದುಕು ನಿನ್ನನ್ನು ಪ್ರೀತಿಸಲಿ...
ನಿನ್ನ ನಗುವಿನ ಹಿಂದೆ ನನ್ನ ಬದುಕಿನ ಪಯಣವಿದೆ  , ನನ್ನ ಸಂತೋಷದ ಹಿಂದೆ ನಿನ್ನ ನಗುವಿದೆ. ಯಾಕಂದ್ರೆ ಅನಂದ್ಯ , ನನ್ನ ಸಂತೋಷಕ್ಕಿರುವ   ಒಂದೇ ಒಂದು ಕಾರಣ..ಹಿಂದೆ , ಇಂದು , ಎಂದೆಂದೂ.....

" ಪ್ರೀತಿಯ ಕಡಲಿನಲಿ,
ನಂಬಿಕೆಯ  ದೋಣಿಯಲಿ,
ಗೆಳೆತನದ ಸಿಂಚನದಲಿ....
ಸಾಗೋಣ ಸುಮ್ಮಾನೆ ಹೀಗೆ..............."

ನಿನ್ನವನೇ ಆಗಿದ್ದ,
ಸದಾ ನಿನ್ನ ಒಳಿತು ಬಯಸುವ........

ಅನಂತ್ ..............
.......................................................
.........................................................................
...........................................................................................!!...!