ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Wednesday, April 23, 2008

ನಿನ್ನ ಹೆಸರು ನವಿಲು ತಾನೆ?!

(ಅರ್ಪಣೆ:// ನನ್ನ ಆರ್ಕುಟ್ ಲೋಕದ "ತಿರುಗಿ ನೋಡದವಳು  ,ಮತ್ತೆ ಬಾರದವಳು" ಭಾವಚಿದ್ರದ ಅಡಿಬರಹವನ್ನ ಮೆಚ್ಚಿದ  ಗೆಳೆಯ ,ಸ್ನೇಹದ ಹಿಮಾಲಯ ಹೇಮಂತ್ ಗಾಗಿ ಬರೆದ ಕವನ........ಪ್ರೀತಿಯಿಂದ)

ತಿರು ತಿರುಗಿ ಮತ್ತೆ ನೋಡಿ,
ಮರೆಯಾಗಿ ನನ್ನನು ಕಾಡಿ,
ಮನವನ್ನು ಜಾರಿಸಿದವಳು,
ಮನದಲ್ಲಿ ನೆಲೆಸಿರುವವಳು,
ನಿನ್ನ ಹೆಸರು ನವಿಲು ತಾನೆ?!
ನನ್ನ ಒಲವು ನೀನೆ ತಾನೆ,
ನಿನಗಾಗಿ ಕಾಯುತಿಹೆನು ,
ನೀ ಬಂದು ಸೇರು ಜಾಣೆ,
ನುಡಿಸೋಣ ಒಲವಿನಾ ವೀಣೆ ,
ಸಾಗಲಿ ಪ್ರೀತಿಯಾ ನಾವೆ,
ಸೇರಲಿ ನಲಿವಿನ ನಾಳೆ................

ಪ್ರೀತಿಯಿಂದ,
ಚುಕ್ಕಿ.....

Saturday, April 19, 2008

ಗೆಲಬೇಕೋ ....ತಮ್ಮ...ಗೆಲಬೇಕೋ....

(:- ಪ್ರೀತಿಯಿಂದ ಕರೆ ಮಾಡಿ,"ಸರ್ ನೀವು ಯಾಕೋ ತುಂಬ ಇಸ್ಟ ಅಗ್ಬಿತ್ರಿ ಸಾರ್" ಅಂತ ಅಭಿಮಾನ ತೋಡಿಕೊಂಡ, ನಾನು ಇದುವರೆಗೂ ನೋಡಿರದ ಅಂತರ್ಜಾಲ ಗೆಳೆಯ, ಹೃದಯದ ಮಿತ್ರ "ವಿನಯ್" ನಂತಹ ನೂರಾರು ತಮ್ಮಂದಿರಿಗೆ....ಹಾಗು ನನ್ನ ಎಲ್ಲ ಅಂತರ್ಜಾಲ ಮಿತ್ರ ಬಳಗಕ್ಕೆ....ಪ್ರೀತಿಯಿಂದ....)


ಗೆಲಬೇಕೋ ....ತಮ್ಮ...ಗೆಲಬೇಕೋ,
ಮೋಹ, ದಾಹದ ಬಳೆಯಲಿ ಬೀಳದೆ,
ಬದುಕಿನ ಮರ್ಮವ ನೀ ಅರಿಬೇಕೋ..//ಪ//

ಸ್ವಾರ್ಥವೇ ತುಂಬಿದೆ ...ಈ.. ಜಗದಲ್ಲಿ,
ತ್ಯಾಗಕೆ ಎಲ್ಲಿದೆ ಬೆಲೆ.. ನಿನ್ನೀ ..ಪ್ರೀತಿಯಲ್ಲಿ..//

ಹುಟ್ಟುವ ಸೂರ್ಯ ,ಯೋಚಿಸೋದಿಲ್ಲ,
ಮುಳುಗುವ ಚಂದ್ರ , ಚಿಂತಿಸೋದಿಲ್ಲ//

ಪ್ರಕೃತಿ ಚಕ್ರ ನಿಲ್ಲುವುದಿಲ್ಲ,
ooduva ಕಾಲವ ಹಿಡಿಯೋರಿಲ್ಲ//

ನಿಂತ ನೀರಲ್ಲ.....ಈ...ಬದುಕು,
ಮರೆಯಲೆ ಬೇಕು , ನಿನ್ನ ಹೇಳೇ ನೆನಪು//ಪ//

ಅಪ್ಪ ಅಮ್ಮಾರ ಕನಸನು ಮಾಡಿ ನನಸು,
ಬುದ್ದ , ಬಸವ, ವಿವೇಕ ರಂತೆ, ನಿನಾಗಬೇಕು ಈ ಜಗದ ಬೆಳಕು//

ಚಿಂತಿಸು , ಜಗದ ಆಗು ಹೋಗುಗಳ,
ಯೋಜಿಸು, ನಿನ್ನ ಕೆಲಸ, ಕೊಡುಗೆ ಗಳ //

ಜಗದಲಿ ಇರುವರು, ಸಾವಿರ ಸಾವಿರ ಜನರು,
ನಿನ್ನಂತೆ ಇರರು, ಯಾರು ಅವರು//

ದೀಕ್ಷೆಯ todu ನೀ ಜಗದ ಉಳಿವಿಗೆ ,
ನಿನ್ನಿಂದಾಗಲಿ ಅವರ ಬದುಕು, ನಲಿವು//

ಸಾಯುವ ಮುನ್ನ ಒಲಿತನು ಮಾಡು,
"ಚುಕ್ಕಿ" ಯಂತೆ ,ನೀ ಸದಾ ಮಿನುಗು//ಪ//


ಗೆಲಬೇಕೋ ...ತಮ್ಮ...ಗೆಲಬೇಕೋ...

Thursday, April 17, 2008

ಭಾವಿಸು ನನ್ನೋಲವನ್ನು......

FEEL MY LOVE.....!!
ಬಾವಿಸು ನನ್ನೋಲವನ್ನು............!!
ಪ್ರೀತಿಸು, ಈ ಜೀವವನ್ನು.........!!

ನಿನ್ನ ಪ್ರೀತಿಲಿ ಕೋಪವೇ ಇರಲಿ,
ನಿನ್ನ ಪ್ರೀತಿಲಿ ದ್ವೇಶವೇ ಇರಲಿ,
ನಿನ್ನ ಪ್ರೀತಿಲಿ ಶಾಪವೇ ಇರಲಿ,
ಒಲವೆ, ಫೀಲ್ ಮೈ ಲವ್../ಪ/

ನಿನ್ನ ಪ್ರೀತಿಲಿ ಬಾರವೇ ಇರಲಿ,
ನಿನ್ನ ಪ್ರೀತಿಲಿ ದೂರವೇ ಇರಲಿ,
ನಿನ್ನ ಪ್ರೀತಿಲಿ ತಪ್ಪೇ ಇರಲಿ,
ಒಲವೆ, ಪೀಲ್ ಮೈ ಲವ್//

ನಿನ್ನ ಪ್ರೀತಿಲಿ ಮೌನವೇ ಇರಲಿ,
ನಿನ್ನ ಪ್ರೀತಿಲಿ ಮುಜುಗರ ಇರಲಿ,
ನಿನ್ನ ಪ್ರೀತಿಲಿ ಶೂನ್ಯವೇ ಇರಲಿ,
ಇದು ಇದೆಯೋ, ಇಲ್ವೋ, ಏನೋ ,ಅರಿಯೆ,
ಫೀಲ್ ...........ಮೈ.................ಲವ್..............
ಫೀಲ್ ಮೈ ಲವ್......ಫೀಲ್ ಮೈ ಲವ್.....
ಲಾ.............ಲಾ.............ಲಾ.............
ಲ................ಲಾ..............ಲಾ..........//ಪ//

ನಾ ಕೊಟ್ಟ ಪ್ರತ್ರಗಳನ್ನ...
ಹರಿಯುತ್ತ....ಫೀಲ್ ಮೈ ಲವ್...
ನಾ ಕೊಟ್ಟ ಹುವುಗಳನ್ನ......
ಎಸೆಯುತ್ತ........ಫೀಲ್ ಮೈ ಲವ್..
ನಾ ಹೇಳೋ ಕವನಗಳನ್ನ...
ಛೀ ಹೇಳ್ತಾ .....ಫೀಲ್ ಮೈ ಲವ್...

ನಾ ಮಾಡೋ ಚೆಸ್ತೆ ಗಳನ್ನ...
ಬೇಜಾರೂ.... ಮಾಡ್ಕೊಂದ್ರುನೂ.......
ಫೀಲ್..............ಮೈ............ಲವ್..................//

ನನ್ನ ರೀತಿ ಬೇರೆ ಆದ್ರೂ...
ನನ್ನ ಊಹೆ ಬರದೆ ಇದ್ರೂ..
ನ ನಿನಗೆ ಸರಿಯಾಗ್ ದಿದ್ರೂ..
ನನ್ನ ಮಾತು ಬೇಡದೆ ಇದ್ರೂ..
ನೀ ನನ್ನ ಸೇರದೆ ಇದ್ರೂ..

ಇದ್ರೂ ,ಇದ್ರೂ, ...ಇಲ್ದನೆ...ಇದ್ರೂ...
ನೆನೆಸಿ...ನೆನೆಸಿ...ನೆನೆಸಿ ಕೊಳ್ತಾ....
ಫೀಲ್.........ಮೈ...........ಲವ್.......................//
ಲಾ............ಲಾ...........ಲಾ....................

ಕೋಪದಿಂದ ನೋಡ್ತಿದ್ರೂ,
ಕಣ್ಣಲ್ಲೇ ಫೀಲ್ ಮೈ ಲವ್...
ಏನೇನೊ, ಬಯ್ತಿದ್ರೂ,
ಬಯಿಂದ್ಲೆ, ಫೀಲ್ ಮೈ ಲವ್..
ಕೈಯಿಂದ ಎದೆಗೆ ಹೊಡೆದರೂ,
ಕೈಯಲ್ಲೇ ,ಫೀಲ್ ಮೈ ಲವ್...
ನನ್ನ ಬಿಟ್ಟ್ ನಡೆವಾಗ್ಲೂ,
ಕಾಲಲ್ಲೇ....ಫೀಲ್ .......ಮೈ.........ಲವ್..............//

ನಡೆವಾಗ ಆಯಾಸ ಆದ್ರೆ,
ಕೈಯಿಗೆ ನೋವು ಆದ್ರೆ,
ಕಣ್ಣಿಗೆ ಮಂಪರು ಆದ್ರೆ,
ತುಟಿಗಳು ಮೌನ ಆದ್ರೆ,
ಫೀಲ್.........ಮೈ..........ಲವ್...........//

aamele ................ಒಂದು ಸಾರಿ..........
ಹೃದಯ ಅಂತ..........ನಿನಗೆ ಇದ್ರೆ..................
ಫೀಲ್..............ಮೈ...................ಲವ್...................
ಫೀಲ್..................ಮೈ..................ಲವ್.......................

( ಇದು ನನ್ನ ಹೊಸ ಬಗೆಯ ಪ್ರಯತ್ನ...ತುಂಬ ಇಸ್ತವಾದ ತೆಲಗು ಗೀತೆ...ಆರ್ಯ ಚಿತ್ರದ...ಫೀಲ್ ಮೈ ಲವ್...ಹಾಡನ್ನ ಕನ್ನಡಕ್ಕೆ ತರ್ಜುಮೆ ಮಾಡಿದ್ದೇನೆ....ಬಾವದಲ್ಲಿ ಏನು ಕೊರತೆ ಇದೆಯೋ, ಗೊತ್ತಿಲ್ಲ...ಅನಿಸಿತು....ಹಾಡಿದ್ದೇನೆ.........ಒಪ್ಪಿಸಿಕೊಳ್ಳಿ....)

ಭಾವಾನುವಾದ 

Saturday, April 12, 2008

ತಾಜ್ ಗೊನ್ದು ಭಿನ್ನಹ....

ಪ್ರೀತಿಯ ತಾಜ್,
ಜಗತ್ತಿನೆಲ್ಲರಿಗೂ ನೀನು ಅದ್ಭುತ,..!
ಆದರೆ ನೀ ನನಗೆ ನನ್ನ ಪ್ರೀತಿಯ "ಪಾರಿವಾಳದ ಗುಡ್ಡ",
ಚಿಕ್ಕವನಿದ್ದಾಗ ಕಟ್ಟಿದ್ದೆ ಮರಳಿನ ಮಹಲು, ನಿನ್ನನ್ನೇ ಹೋಲುವಂತೆ
ದೊಡ್ದವನಾದಾಗ ತಂದು ಕೂರಿಸಿದೆ, ಪ್ರೀತಿಯ ಎಸಳು,
ಅಪ್ಪ ಕೊಟ್ಟ ಅಪರೂಪದ ಉಡುಗೊರೆ ನೀನು,
ಅವಳು ಹಾಡಿದ ಒಲವ ರಾಗ ನೀನು,
ಅವಲಿದ್ದಸ್ಟು ಕಾಲ ನೀನೆ ತಾನೆ,ನಮ್ಮ ಕನಸಿನ ತಾಣ...
ಈಗ ಅವಳಿಲ್ಲ,ಅವಲಿಲ್ಲದ ನಾನು ಬದುಕಿದ್ದೇನೆ,
ತಾಜ್, ನಿನ್ನಲ್ಲೀಗ ಸೂತಕದ ಛಾಯೆ...
ಬಿಟ್ಟರು ಬಿದವು,ನೆನಪುಗಳು.........

ಪ್ರೀತಿಯ ತಾಜ್,
ಅದೆಸ್ತು ಪ್ರೀತಿಗಳಿಗೆ ಕುರುಹು ನೀನು,
ಅದೆಸ್ತು ಪ್ರೇಮಿಗಳ ಕನಸು ನೀನು,
ಮಗುವಿನ ನಗು, ಹಾಲಿನ ಹೊಳಪು..ಏನಲ್ಲ ನೀ...
ಯಾರದೋ ಪ್ರೀತಿಯ ನೆನಪಿನ ಗೋರಿ,
ಅಮೃತ ಶಿಲೆಯದಿಯಲ್ಲಿ ಸತ್ತು ಮಲಗಿರುವೆ,
ನಮ್ಮೆದೆಗಳಲ್ಲಿ ಒಲುಮೆಯ ಜೀವಂತ ಸಾಕ್ಷಿಯಾಗಿ...!

ನದಿಯಂತೆ ಪ್ರೀತಿಸಿದ ಅವಳು ,ದೂರ ಹೋದಳು ತಾಜ್,
ನಾ ಏನ kattali ...?!...ಒಲವ ನೆನಪಿಗೆ....
ಶಹಜಾಹನನಲ್ಲ ನಾನು,
ಒಲವಿನ ಅರಮನೆಯ ಬಡವ ರಾಜಕುಮಾರ,
ಅವಲಿಲ್ಲದ ನಿನ್ನನ್ಗಳದಲ್ಲಿ ,ನಾನು ,ಅನಾಥ ಕೂಸು,

ಪ್ರೀತಿಯ ತಾಜ್,
ಅವಲಿಲ್ಲದ ನಾ ಹೇಗೆ ಬದುಕಲಿ....
ಅವಲಿಲ್ಲದ ನಾಳೆಗಳನ್ನ ಹೇಗೆ ಕಳೆಯಲಿ...
ಅವಳನ್ನ ಬರಮಾಡಿಸು, ಇಲ್ಲ, ನನ್ನ ಕೊನೆಗಾನಿಸು...
ಅವಲೋತ್ತಿಗೆ ಮತ್ತೆ ಹುಟ್ಟಿ ಬರುತ್ತೇನೆ, ಒಲವ ದೀಕ್ಷೆ ಪಡೆದು,
ಪ್ರೀತಿಯ ಪಕ್ಷಿಗಳಾಗಿ ,ಮರು ಹುಟ್ಟು ಪಡೆದು,
ನೆನಪಿತ್ತಿರು ಅಲ್ಲಿಯವರೆಗೆ,
ನಿನ್ನ ಪ್ರೀತಿಯ ಗೂದಲ್ಲಿ ಜಾಗ bekide ನಮಗೆ,
ಹಾರಾದಬೇಕಿದೆ ಪ್ರೀತಿಯ ಗರಿ ಬಿಚ್ಚಿ....
ಹಾರಿಸುವ ಹೊಣೆ ನಿನ್ನದು....
ಎತ್ತರ, ಎತ್ತರಕ್ಕೆ, ದಿಗಂತದಾಚೆಗೆ,
ಮತ್ತೆ ಸಮಾದಿಯಾಗಿ ನಿನ್ನ ಮಡಿಲ ಸೇರುವೆವು,
ಅಮರ ಪ್ರೇಮದ ಕುರುಹಾಗಿ....
ನಿನ್ನ ಪ್ರತಿಸ್ಪರ್ದಿಯಾಗಿ......!

ಹಾರಿಸು ನಮ್ಮ ಎತ್ತರ ಎತ್ತರಕ್ಕೆ............!



Saturday, April 5, 2008

ಹೀಗೊಂದು ಕ(ಥೆ)ವಿತೆ...

ಇಬ್ಬರಿಗೂ ಮೊದಲ ಪ್ರೀತಿ,
ಗುಬ್ಬಚ್ಚಿಯಂತೆ ಗೂಡು ಕಟ್ಟುವ ಕನಸು ಕಂಡಿದ್ದೋ ಜೀವಗಳು...
ಅವಳ ಕಿವಿಯಲ್ಲಿ ಪಿಸುಗುಟ್ಟಿದ ಅವನು,
"ಕನಸು ಕಾಣು ಹುಡುಗಿ, ನನಸಾಗಿಸುವ ಕೆಲಸ ನನಗಿರಲಿ.."
ಅವಳು ಕನ್ನಿರಾಗಿದ್ದಳು, ಮತ್ತು ಹೇಳಿದಳು,
"ನಿನಗೆ ಕೊಡುವುದು ಏನೂ ಇಲ್ಲ ಗೆಳೆಯ,
ದೇವರ ಮುಂದೆ ಎಲ್ಲವನ್ನ ಸಮರ್ಪಿಸಿಕೊಂಡಿದ್ದೇನೆ,
ಉಳಿಸುವ , ಬೆಳೆಸುವ ಹೊಣೆ ನಿನ್ನದು..:
ಅವನು ಬಾಚಿ ತಬ್ಬಿದ, ಹಣೆಗೊಂದು ಹೂ ಮುತ್ತು,
ಎದೆಯ ಗೂದೊಲಗೆ ಗುಬ್ಬಚ್ಚಿ ಯಾದಳು ಅವಳು,
ಕನಸಿನ ಪ್ರೀತಿಯ ಪಸಲಿಗೆ ಹೆಸರಿಟ್ಟರು,
"ಸತ್ಯ" ಎಂದು,ತಮ್ಮ ಪ್ರೀತಿ ಸತ್ಯವಾದುದು ಎಂದು,
"ಸತ್ಯಮ್,ಶಿವಂ, ಸುಂದರಂ..."

ಇದು ಆ ಕ್ಷಣದ ಸತ್ಯ...?!
ಅರಿವಾಗುವ ಹೊತ್ತಿಗೆ ,ನೆನಪಾಗಿತ್ತು ಅವಳಿಗೆ ವಾಸ್ತವ...
ಕುಸಿದಿತ್ತು ಇವನ ಕನಸಿನ ಮಹಲು, ಅವರಿಬ್ಬರೂ ಕಟ್ಟಿದ್ದು..!!
ಅವಳ ಕುತ್ತಿಗೆ ಅಲಂಕರಿಸಿತ್ತು..ಒಡೆತನದ ಕುರುಹು.....
ಬದುಕಿನ ರೈಲು ಬಲು ದೂರ ಚಲಿಸಿತ್ತು,
ವಿಬಿನ್ನ ಧಿಕ್ಕಿನಲ್ಲಿ..........?!
ಯಾಕೆ ಅಂದಿರ.........
"ಸತ್ಯ" ಲ ಅಪ್ಪನನ್ನೇ ಬದಲಿಸಿದ್ದಳು " ಅವಳು"..........

(ಈ ನೆನಪುಗಳೇ ಹೀಗೆ...ಬಿಟ್ಟರು ಬಿದವು...ಯುಗಾದಿ ಬಂದಿದೆ...ಹೋದ ವರ್ಷ ಅವಲಿದ್ದಳು...ಮನೆಗೆ ಕರೆದುಕೊಂಡು ಹೋಗಿದ್ದೆ, ಅಮ್ಮ ಕೇಳಿದಳು,"ಯಾರೋ ಇವಳು;;?!...."ನಿನ್ನ ಮೊಮ್ಮಕ್ಕಳಿಗೆ ತಾಯಿ ಯಗುವವಳು" ಎಂದು ಮುಕ ಕೆಳಗೆ ಹಾಕಿ ರೂಮಿಗೆ ಹೋದೆ...ಅಪ್ಪ ಹೇಳಿದ..."ನಿನ್ನ ಬದುಕು..ಸವಾರ ನೀನು, ಹುಷರು,,"...ಆದರೆ ಅಮ್ಮಳಲ್ಲಿ ಆತಂಕ...ಸಂಜೆ "ಅವಳು" ಪುರಂದರ ಕೀರ್ತನೆ ಹೇಳಿದ್ದಳು...ಅಪ್ಪ, ಅಮ್ಮ, ನಾನು, ತಮ್ಮ,,ಜೊತೆಗೆ ಅವಳು, ಸುಂದರ ಸಂಜೆ...ಹತ್ತಿರದ "ಪಾರಿವಾಳದ ಗುಡ್ಡ" ಕ್ಕೆ ಕರೆದುಕೊಂಡು ಹೋದೆ, ಹಮಾರ ಬಜಾಜ್ ನಲ್ಲಿ...!!."ಗೂಡು ಕಟ್ಟುವ" ಕನಸು ಇಬ್ಬರ ಕಂಗಳಲಿ....ಬೆಟ್ಟದ ತುದಿಯಲ್ಲಿ ಆಡಿದ ಮಾತುಗಳು ಆಗ ಸುಂದರ ಕವಿತೆಗಳು.........ಈ ಉಗಾದಿಯ ಹೊತ್ತಿಗೆ ಕಥೆ galagive.......ಅದು ಈಗ ನಿಮ್ಮ ಮುಂದೆ.....nenapinagaladinda......
"yuga yuga ಕಳೆದರೂ yugaadi ಮರಳಿ baarali........ಆದರೆ baradirali.........ಆ nenapu galu........."
ಹಬ್ಬದ shubaashyagalu.........)