ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Monday, November 1, 2010

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಲ್ಮೆಯ ಒಲುಮೆಯ ಕನ್ನಡ ಬಂಧುಗಳಿಗೆ "ಕನ್ನಡ ಹಬ್ಬ " ದ ಶುಭಾಶಯಗಳು.



ಕನ್ನಡ, ಕರ್ನಾಟಕ, ಕನ್ನಡ ಜನ ನಮ್ಮ ಆಸ್ತಿ. ಇಂದು ದೇಶ ವಿದೇಶಗಳಲ್ಲಿ ಕನ್ನಡದ ಕೀರ್ತಿ ಮುಗಿಲೆತ್ತರಕ್ಕೆ ಹಬ್ಬುತ್ತಿದೆ. ಅಂತರ್ಜಾಲದ ಕನ್ನಡ ಮನಸ್ಸುಗಳೆಲ್ಲ ಒಂದಾಗಿವೆ. ಭಾಷೆ ಭಾವನೆಗಳನ್ನು ಬೆಸೆಯುವ ಸಾಧನ. ಅದರಲ್ಲೂ ಕನ್ನಡಕ್ಕಿರುವ ಕಿಮ್ಮತ್ತೆ ಚಂದ. ಸವಿಯಾದ , ಸಿಹಿಯಾದ ಭಾಷೆ, ನಮ್ಮ ಭಾಷೆ. ಕನ್ನಡ , ಕರುನಾಡು ನಮ್ಮ ಹೆಮ್ಮೆ. ಕನ್ನಡಾಂಬೆಗೆ ನಮ್ಮೆಲ್ಲರ ನಮನ.



ಕನ್ನಡ ರಾಜ್ಯೋತ್ಸವದ ಶುಭಾಶಯಗಳು.



ಜೈ ಕರ್ನಾಟಕ ಮಾತೆ.



ಲಿಂಗೆಶ್ ಹುಣಸೂರು.

ಬಿಂದುವಿನಿಂದ ಅನಂತದೆಡೆಗೆ...



ನನ್ನ ಘೋಷ ವಾಕ್ಯ ನನ್ನ ಕರುನಾಡಿಗಾಗಿ .. " ಕನ್ನಡ ಉಸಿರಾಗಲಿ, ಕರುನಾಡು ಹಸಿರಾಗಲಿ"

Monday, October 18, 2010

-+- ಅಲರ್ಜಿ ಮಹಾತ್ಮೆ -+-

ಪ್ರಿಯ ಸ್ನೇಹಿತರೆ,  " ಅಲರ್ಜಿ "  ಯಾತನಮಯವಾದುದು. ಯಾವುದಕ್ಕೂ ಚಿಂತೆ ಮಾಡದೆ ಎಗ್ಗಿಲ್ಲದೆ ಬೆಳೆದ ದೇಹಕ್ಕೆ , ಆಸೆಯ ಮನಸ್ಸಿಗೆ ಅಲರ್ಜಿ ಪೂರ್ಣ ವಿರಾಮ ಇದುವ ದಿವ್ಯಾಸ್ತ್ರ. ಮೊನ್ನೆ ಇದುವರೆಗೂ ಯಾವುದೇ ಅಲರ್ಜಿ ಇಲ್ಲದ ನಾ ಕೂಡ ಇದಕ್ಕೆ ಮುಗ್ಗರಿಸಿಬಿಟ್ಟೆ . ಆ ಸಮಯದಲ್ಲಿ ಅಲರ್ಜಿ ಬಗ್ಗೆ ನನಗನಿಸಿದ್ದು ಹೀಗೆ. ....ಓ ಅಪ್ರಿಯ  ಅಲರ್ಜಿ,  ಏನು ನಿನ್ನ ಲೀಲೆ ?!

ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!


ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ,
ಕಟ್ಟು ನಿಟ್ಟು ಗಳ ಬದಿಗೆ ಸರಿಸಿದ್ದೆ/


ನೀ ಬಂದೆ ಎಲ್ಲಿಂದ,
ಅಹಿತ ಸುಖದ ರೂವಾರಿ, ತುರಿಕೆಯ ರಾಯಭಾರಿ/


ರೋಗ ಬಂದರೆ ದೇಹದ ಒಂದು ಅಂಗಕ್ಕೆ,
ನಿನ್ನ ಲೀಲೆಯೋ ಸರ್ವಾಂಗಕ್ಕೆ/


ಕಡಿತ ಬಂದರೆ ಪರ, ಪರವೇ ಸುಖ,
ಪರ, ಪರ ವೆ ಕಾಯಕವಾದರೆ , ಎಲ್ಲೇ ಇಲ್ಲದ ನರಕ/


ಇನ್ನಾದರೂ ನಡೆಸುವೆ ಶಿಸ್ತುಬದ್ದ ಬದುಕು,
ನಿನ್ನಿಂದ ಕಲಿತೆ ಮಿತಿಯ  ಬಯಕೆ/


ಓ ಅಪ್ರಿಯ  ಅಲರ್ಜಿ,
ಏನು ನಿನ್ನ ಲೀಲೆ ?!

- ಲಿಂಗೆಶ್ ಹುಣಸೂರು (ಚುಕ್ಕಿ )
ಅಲರ್ಜಿಗೆ ಎರಡು ದಿನ ಬಲಿಯಾದ ನಿಮ್ಮ ಗೆಳೆಯ....

Sunday, October 3, 2010

//ಜಾಗೋ ಹಿಂದೂ, ಜಾಗೋ ಭಾರತ್//


ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /

ಚರಿತ್ರೆಯ ಶೋಷಣೆಗಳಿಗೆ
ತಿಲಾಂಜಲಿ ಇಟ್ಟು ,
ಜಾತಿ - ಉಪಜಾತಿ
ಗೋಡೆಗಳ ಮೆಟ್ಟಿ,
ಉಳಿಸಬೇಕು ಸನಾತನ ಧರ್ಮ /

"ನಾವು" ಎಂದರೆ "ಹಿಂದೂ " ಅನಬೇಕು,
ನಮ್ಮ ಒಡೆವ ಕಿಡಿಗೇಡಿಗಳ ಮೇಲೆ ,
ರಣಕಹಳೆ ಮೊಳಗಿಸಬೇಕು,
ಧರ್ಮ ಬೆಳೆಸಬೇಕು/

ನೆನ್ನೆ ಮೊನ್ನೆಯದಲ್ಲ
ನಮ್ಮ ಸಂಸ್ಕೃತಿ,
ಹಿಂದುಸ್ತಾನದ ಜೀವ ಶ್ರುತಿ/

ಹಬ್ಬಬೇಕು ಮುಗಿಲೆತ್ತರಕ್ಕೆ,
ಹರಡಬೇಕು ಜಗದಗಲಕ್ಕೆ ,

ಅದಕ್ಕೆ ಮೊದಲು............

ಬೆಳೆಸಬೇಕು ಏಕತಾಭಾವ,
ಕಿತ್ತೊಗೆಯಬೇಕು ಅಸ್ಪೃಶ್ಯತೆಯ ಜಾಲ,
ಒಂದಾಗಬೇಕು,
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ,
ಮೊಳಗಬೇಕು ಶ್ರೀ ರಾಮ ನಾಮ /

ನಾವೆಲ್ಲರೂ ಹಿಂದೂ,
ಒಂದೆಂದು ಸಾರಬೇಕು ಎಂದೆಂದೂ /



ಜೈ ಶ್ರೀರಾಮ್ , ಜೈ ಹಿಂದ್ (ದು )

ಲಿಂಗೆಶ್ ಹುಣಸೂರು,
ಬಿಂದುವಿನಿಂದ ಅನಂತದೆಡೆಗೆ.....

Friday, October 1, 2010

/-ನಮ್ಮ ಹೆಮ್ಮೆಯ ಗಾಂಧೀ ತಾತ- /

ಗಾಂಧೀಜಿ  ಹಾದಿಯಲ್ಲಿ ನಿಮ್ಮ ಗೆಳೆಯ .
ತಾತ, ತಾತ,ತಾತ,
ನಮ್ಮ ಹೆಮ್ಮೆಯ ಗಾಂಧಿ   ತಾತ /

ಕೋಲನು ಹಿಡಿದು ನಡೆಯುವ ತಾತ,
ಕೋಮಲ ಹೃದಯದ ಶಾಂತಿ ಧೂತ/

ಹಸಿವು ಕಲಿಸುತ್ತದೆ, ಬದುಕಿನ ಪಾಠ ,
ಉಪವಾಸದ ಮುಖೇನ, ನೀ ಬೋದಿಸಿದೆ  ವಿಜಯದ ಪಾಠ /

ಹಿಂಸೆಯ ಜಗಕೆ  ತಿಳಿಸಿದೆ ನೀ , ಶಾಂತಿಮಂತ್ರ,
ಅಹಿಂಸೆಯ ಮೂಲಕ ಗಳಿಸಿದೆ ನೀ , ಸ್ವಾತಂತ್ರ್ಯ /

ಸಪ್ತ ಪಾಪಗಳ ತಿಳಿಸಿದೆ ಜಗಕೆ,
ಎಲ್ಲಾ ಪಾಪಗಳ ಮೆಟ್ಟಿ ನಿಂತೆ /

ಸಾರಿದೆ ನೀ, ಎಲ್ಲಾ ಜಾತಿಗಳ ಒಂದೇ ಎಂದು ,
ವಿಶ್ವಧರ್ಮವ ನೀ ಪಾಲಿಸಿದೆ/


ರಾಮರಾಜ್ಯದ ಕನಸನು ಕಂಡೆ,
ಗಾಂಧಿ ಜಯಂತಿಯ ಶುಭಾಶಯಗಳು
ಭಾರತ ಮಾತೆಯ ಉನ್ನತಿಗೆ, ಹೊಸ ದೃಷ್ಟಿ ಕೋನವ  ಕೊಟ್ಟೆ/

ಹಗಲು - ಇರುಳೆನ್ನದೆ ದುಡಿದೆ ನೀ , ಈ ದೇಶಕಾಗಿ,
ನಿನ್ನಾದರ್ಷದಿಂದಲೇ ಈ ದೇಶ ಉಳಿದಿದೆ/

ವಿಶ್ವಮಾನ್ಯ ವ್ಯಕ್ತಿ ನೀನು,
ಸರ್ವ ಕಾಲಕೂ  ಸಲ್ಲುವ ಚೇತನ ನೀನು /

ಭಾರತಾಂಬೆಯ ಹೆಮ್ಮೆಯ ತನುಜ,
ನಿನಗಿದೋ  ನಮ್ಮ ನಮನ /

Monday, September 27, 2010

ಶ್ರೀಮತಿ

ಇವಳೇ ನನ್ನ ಶ್ರೀಮತಿ,
ಸಂಸಾರ ಯಾನದ ಜೊತೆಗಾತಿ/

ನನ್ನ ಮನಸಿನ ಮಾತು ಇವಳು,
ನನ್ನ ಕನಸಿನ ಕಣ್ಣು ಇವಳು/

ಇವಳೇ ನನ್ನ ಶ್ರೀಮತಿ,
ಜನುಮ,ಜನುಮದ ಆತ್ಮ ಸಂಗಾತಿ/

ನನ್ನ ಮೌನದ ಮಾತು ಇವಳು,
ನನ್ನ ಮಾತಿನ ಭಾಷೆ ಇವಳು/

ಇವಳೇ ನನ್ನ ಶ್ರೀಮತಿ,
ದೈವ ನೀಡಿದ ಸಂಗಾತಿ/

ನನ್ನ ಬದುಕಿನ ಪ್ರೇಮ ಕಾವ್ಯ,
ಕಾವ್ಯದೊಳಗಣ ಮದುರ ಭಾವ /

ಇವಳೇ ನನ್ನ ಶ್ರೀಮತಿ,
ಸುಂದರ ಬದುಕಿನ ದಿಕ್ಸೂಚಿ/

ನನ್ನ ಮುದ್ದಿನ ಮಡದಿ, ನನ್ನೆಲ್ಲ ಕನಸುಗಳ ಒಟ್ಟು ಮೊತ್ತ, ಭಾವ, ಬದುಕು ಎಲ್ಲವೂ ಆಗಿರುವ " ಲಕ್ಷ್ಮಿ " ಗಾಗಿ ಈ ಕವಿತೆ ಅರ್ಪಣೆ.

Thursday, September 16, 2010

ಪ್ರೀತಿಯ ಅಕ್ಕ, ಪೆದ್ದು ತಮ್ಮ ಮತ್ತು ಮೋಸದ ಹುಡುಗಿ ...!!!!!!

  (  ಓದುವ ಮುನ್ನ :  ಅನಂತ್ ನ ಅಕ್ಕ ಸುಲೇಖ , ಅನಂತ್ ಮತ್ತು ಬಿಂದು ವಿನ ನಡುವಿನ ಪ್ರೀತಿಗೆ ಸೇತುವಾಗಿದ್ದಳು, ಸಾಕ್ಷಿಯಾಗಿದ್ದಳು. ಬದುಕಿನ ತಿರುವಿನಲ್ಲಿ ಬಿಂದು ಅನಂತ್ ನ ಹಾದಿಯ ವಿರುದ್ದ ದಿಕ್ಕಿನಲ್ಲಿ ಹೆಜ್ಜೆ ಹಾಕಿದಳು. ಆ ಸಂದರ್ಭದಲ್ಲಿ ಸುಲೇಖ ಮೌನವಾಗಿದ್ದಳು. ವಿಧಿಯ ನ್ಯಾಯಾಲಯದಲ್ಲಿ ಅನಂತ್ ಅಪರಾಧಿ ಸ್ಥಾನದಲ್ಲಿ ನಿಂತಿದ್ದ. ದಿನಗಳು ಉರುಳಿದ ಹಾಗೆ ಸುಲೇಖ ರಕ್ಷಾಬಂಧನ ಹಬ್ಬಕ್ಕೆ  ಅನಂತ್ ಗೆ ರಾಖಿ ಕಳುಹಿಸಿದಳು. ಆ ಸಂದರ್ಭದಲ್ಲಿ ಅನಂತ್ ತನ್ನ ಅಕ್ಕಾಳಿಗೆ ಬರೆದ ಪತ್ರ. ಇದರಲ್ಲಿ ಎಲ್ಲವೂ ಇದೆ. ಓದುವ ತಾಳ್ಮೆ ನಿಮಗಿರಲಿ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ .)


Dear   ಅಕ್ಕ,

ಹೆಂಗಿದ್ದೀಯ ? ಹೇಗಿದೆ ಹೊಸ ಬದುಕು, ಹೊಸ ಭಾವನೆಗಳು , ಹೊಸ ಜನರು, ಹೊಸತಾದ ಎಲ್ಲವುಗಳು?! ಇವುಗಳೆಲ್ಲವುಗಳ ಮಧ್ಯೆ ಹಳತಾದ ಈ ನಿನ್ನ ತಮ್ಮನನ್ನು ನೆನಪಿಸಿಕೊಳ್ಳುವಸ್ಟು    ಸಮಯ ನಿನಗಿದ್ದರೆ, ಅದೇ "ಧನ್ಯ" ನನಗೆ. Any how ನೀನು ಚೆನ್ನಾಗಿಯೇ ಇದ್ದೀಯ ಎಂದು ಭಾವಿಸಿರುತ್ತೇನೆ. ಅಂದಂಗೆ ನಾನು ಕೂಡ ಚೆನ್ನಾಗಿದ್ದೀನಿ. ನಿಜವಾಗಲೂ..... ಹೆಂಗೆ ಅಂತ ಕೇಳ್ತೀಯ ?ಯಾವುದಾದರೂ ಭಯಂಕರ ಗಾಯ ಆಗಿ, ಅದು ಮಾಗಿದ ಮೇಲೆ ಸ್ವಲ್ಪ ತುರಿಕೆ ಉಂಟಾಗುತ್ತದಲ್ಲ, ಅದನ್ನ ಕೆರೆದುಕೊಳ್ಳುವಾಗ  , ಒಂತರಾ ಖುಷಿ ಸಿಗುತ್ತದಲ್ವಾ , ಹಾಗೆ ?! Ofcourse ಏನಿದೆ ನನ್ನ ಪಾಲಿಗೆ ...ವಾಸಿಯಾಗದ ಗಾಯ, ಮರೆಯಲಾಗದ ನೋವು... But you Know , ರೋಗಿಯೂ ನಾನೇ, ವೈದ್ಯನೂ ನಾನೇ. ರೋಗ ಬರೋದಿಕ್ಕೆ ಸ್ವಲ್ಪ contribution ಕೊಟ್ಟವ್ರಲ್ಲಿ ನೀನು ಕೂಡ ಒಬ್ಬಳಾಗಿರಬಹುದಲ್ವಾ  ಅಕ್ಕ ?! ಥ್ಯಾಂಕ್ಸ್ ಅದಕ್ಕೆ. ಯಾಕಂದ್ರೆ ಮನುಷ್ಯನಿಗೆ ದುಃಖವೇ ಇಲ್ಲದಿದ್ದರೆ ಸುಖದ  ಬೆಲೆ ಗೊತ್ತಾಗ್ತಿರ್ಲಿಲ್ಲ, ಕಷ್ಟಗಳೇ  ಇಲ್ಲದಿದ್ದರೆ ಅವನು ಬಲಿಸ್ಟನಾಗ್ತಿರ್ಲಿಲ್ಲ. ಎಲ್ಲಾ ಬಗೆಯ ಸಂಕೊಲೆಗಳ  ಸರಮಾಲೆಯಲ್ಲಿಯೇ  ಯಶಸ್ಸಿನ ಶಿಖರ  ಮುಟ್ಟಬೇಕು. ಅದೇ ಬದುಕು....ಆದರೂ....ಪ್ರೀತಿಸಿದ ಜೀವಗಳು ನೀಡೋ ದುಃಖಗಳನ್ನ, ನಯವಾದ ವಂಚನೆಗಳನ್ನ ಸಹಿಸೋಕಾಗಲ್ಲ. ಅದಕ್ಕೆ ಕಾರಣ ಯಾರೇ ಆಗಿರಬಹುದು, ಸಂದರ್ಭಗಳು ಎಂತಹವೇ ಇರಬಹುದು..ಅಲ್ವಾ?!
                           
 ನನಗೆ ಗೊತ್ತು ನಾ ಬರೆಯುತ್ತಿರುವ ಈ ಪತ್ರದ ಕೆಲವು ಸಾಲುಗಳನ್ನ ಓದುವಾಗ ನಿನಗೆ ಖಂಡಿತ ಕೋಪ ಬರುತ್ತೆ ಅಂತ?! ಆದರೂ ಕ್ಷಮಿಸಿಬಿಡು, hurt ಆದ್ರೆ! ಅದೆ ತಾನೇ ಎಲ್ರಿಗೂ ಉಳಿದಿರೋದು..ಕ್ಷಮೆ..........ಆದ್ರೆ ಕ್ಷಮೆಗಳೆಲ್ಲಾ ಆದ ದುಃಖಗಳನ್ನ ಮರೆಸ್ತಾವ? ಇಲ್ಲ...ಯಾದರೂ ಕ್ಷಮಿಸಿಬಿಡು.......sorry .......sorry .......sorry ........../


                                                     ಈಗಷ್ಟೆ ಕೊರಿಯರ್ ನವ ನಮ್ಮ ಕಚೇರಿಗೆ ಬಂದು "ಅನಂತ್"  ಅಂತ  ಕರೆದದ್ದೇ ತಡ, ನೀನೆ ಕರೆದ ಹಾಗೆ ಆಯಿತು. ನಿಜ ಹೇಳಲಾ..ನನ್ನ ಕಣ್ಣಲ್ಲಿ ನೀರು, ಹೃದಯದಲ್ಲಿ ಆವೇಗ ಬಿಟ್ಟರೆ ಏನೂ ಇರ್ಲಿಲ್ಲ. ಮನಸು ಮೂಖವಾಗಿ ಹೋಯ್ತು. ಮೂರು ವರ್ಷಗಳ ಹಿಂದೆ ನನ್ನ ಆಟೋಗ್ರಾಪ್ ಪುಸ್ತಕದಲ್ಲಿ ಬರೆದ ಅವೇ ಅಕ್ಷರಗಳು. ಅದೆ phrase .

" what is really value is what you miss ,
not what you have .."

ನೀ ಇದನ್ನ ಆಗಾಗ್ಗೆ ಹೇಳ್ತಿದ್ದೆ. ಆಗ ನಾನು ಬೈತಿದ್ದೆ. ನಿನ್ನಲ್ಲಿ ಸ್ಪೂರ್ತಿ ತುಂಬಿದ್ದೆ, ಸಕಾರಾತ್ಮಕವಾಗಿ ಚಿಂತಿಸು ಎಂದು ಹೇಳುತ್ತಿದ್ದೆ. ಆದರೆ ಈವತ್ತು ನಾನೇ ಸೋತು ನಿಂತಿದ್ದೇನೆ. ನಿನ್ನದೇ ಮಾತುಗಳನ್ನ ಅನುಭವದಲ್ಲಿ ಕಂಡಿದ್ದೇನೆ. 'ಬಿಂದು' ಇರುವವರೆಗೂ ನಾನು ಏನನ್ನೂ miss ಮಾಡ್ಕೊಂಡಿರ್ಲಿಲ್ಲ  ಅಕ್ಕ. ಅವಳು ಸಿಕ್ಕಿದ ಮೇಲೆ I have missed me , I have missed ಅನಂತ್ .  ತದನಂತರ ಕೆಲಸ ಸಿಗ್ತು,ಆದ ಗಾಯಗಳನ್ನ ಮರೆಯಲಿಕ್ಕೆ..., ಅನನ್ಯ ಸಿಕ್ಕಿದಳು, ಮಿಸ್ ಮಾಡ ಕೊಲ್ತಿದ್ದ ನನ್ನ ಮುಂದಿನ ಬದುಕಿನಲ್ಲಿ ಸಂತೋಷ ತರಲಿಕ್ಕೆ...What a great change ?! .." ಬದಲಾವಣೆಯೊಂದಿಗೆ ಬೆಳವಣಿಗೆ"...ಜೋರಾಗಿ ನಗಬೇಕನಿಸ್ತಿದೆ. ........ನಿಟ್ಟುಸಿರಿನೊಂದಿಗೆ...........!!!
      

                       ಬಿಂದು  ನನ್ನ  ಜೊತೆಗಿದ್ದರೆ, ನಾನು ಈ ದಿನ ಭಾರತದ ರಾಜಧಾನಿ ಯಲ್ಲಿರುತ್ತಿದ್ದೆ. ಐಎಎಸ್ ಗೆ ಓದುತ್ತಾ ಮುಂದಿನ ಬದುಕಿಗೆ ಅಡಿಪಾಯ ಹಾಕ್ತಾ ತಪಸ್ಸು ಮಾಡಿ ,ಯಶಸ್ಸಿನ ಹಾದು ಹೇಳುತ್ತಿದೆ. ಈ ಕೆಲಸಕ್ಕೆ ಖಂಡಿತ ಬರುತ್ತಿರಲಿಲ್ಲ. Now i am a clerck ..!..ಹೌದು ವಾಸ್ತವಗಳನ್ನ ಅರಗಿಸಿಕೊಳ್ಳಲೆ  ಬೇಕು, ಆದ ಅವಮಾನಗಳನ್ನ , ತಿರಸ್ಕಾರಗಳನ್ನ ಮೆಟ್ಟಿಲು ಮಾಡಿಕೊಂಡು ಮೇಲೆರಲೇಬೇಕು, ಬದುಕಿ, ಸಾಧಿಸಿ ತೋರಿಸಬೇಕು, ಸಾರ್ಥಕವಾಗಿ ಸಾಯಬೇಕು...!
                        

ಬಿಡು, let it forget , what is done is done . ಗತ  ಕಾಲದ ಘಟನೆಗಳಿಗೆ ಘೋರಿ ಕಟ್ಟಿ, ಅದರ ಮೇಲೆ ಮರೆವಿನ ಬಂಗಲೆ ಕಟ್ಟಿ ವಾಸ ಮಾಡಬೇಕು. ನಾನೊಬ್ಬ ಹುಚ್ಚ , ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತೇನೆ, ನಗ್ತೇನೆ, ಅಳ್ತೇನೆ. ಹಂಗಂತ ಸುಮ್ಮನೆ ಕೂರುವ ಜಾಯಮಾನವೂ ನನ್ದಲ್ಲ. ಮುಂದಿನ ಬದುಕಿಗೆ, ಬದಲಾವಣೆ ಗಳಿಗೆ ಅಣಿ ಯಾಗುತ್ತೇನೆ. " ಸೈನಿಕ ಆಯುಧಗಳನ್ನು ಕೆಲಗಿಳಿಸಲೇಬಾರದು, ಸದಾ ಹೋರಾಡುತ್ತಲೇ, ಜಾಗೃಥನಾಗಿಯೇ ಇರಬೇಕು " ಅಲ್ವಾ ?! so keep  smile ..." ನಗಬೇಕಮ್ಮಾ ನಗಬೇಕು, ಏನೆ ಬರಲಿ ನಗಬೇಕು, ನಗುತಾ, ನಗುತಾ ಬಾಳಬೇಕು ...................!

ಮತ್ತೆ , ಅದೆ ಗೋಳಿನ ಕಥೆ ನಂದು, ನೀ ಹೆಂಗಿದ್ದಿ ? ಬದುಕು ಹೇಗಿದೆ?!!ನಂಗೊತ್ತು , ಏನೂ ಹೇಳಿಕೊಳ್ಳುವಸ್ಟು  ನಂಬಿಕೆ, ಪ್ರೀತಿ ನನ್ನ ಮೇಲಿಲ್ಲ , ಆದರೂ ಕೇಳ್ತೇನೆ. Any how , ಎಲ್ಲೇ ಇರು, ಹೇಗೆ ಇರು, ಬದುಕು ಚೆನ್ನಾಗಿರಲಿ. ಯಾವುದೇ ಸಂದರ್ಭದಲ್ಲೂ ಸ್ವಾರ್ಥಕ್ಕೋಸ್ಕರ ಸಂಬಂದಗಳನ್ನ, ಸ್ನೇಹ, ಪ್ರೀತಿಯನ್ನ ಯವಾತ್ತೂ ಬಳಸ್ಕೋಬ್ಯಾಡ . ಬಿಂದು ಮಾಡ್ದಂಗೆ....! Give the world the best , you have any way ..ಖುಷಿಯಾಗಿರೋದಿಕ್ಕೆ ಪ್ರಯತ್ನಿಸು. ನಿನ್ನ ಮನಸ್ಸಿನ ದುಃಖದ ಕಡಲೂ ಕೂಡ ನಿನ್ನ ತಮ್ಮನಿಗೆ ಪರಿಚಯವಿದೆ. ಹಳೆಯ ಕೆಟ್ಟ ನೆನಪುಗಳಿಗೆ ಡೈವೋರ್ಸ್ ಕೊಟ್ಟು, ಹೊಸ ಸಂತೋಷವನ್ನು ತಂದು ಕೊಳ್ಳೋಕೆ ಪ್ರಯತ್ನಿಸು. ಜಗತ್ತು ಬೆರಗಾಗುವಂತ ಸಾಧನೆ ಮಾಡು. ಮಾಡುವ ಪ್ರತಿ ಕೆಲಸದಲ್ಲೂ " ಆತ್ಮ ತೃಪ್ತಿ" ಇರಲಿ, ಅದು ಇಂತದ್ದೆ ಆಗಿರಲಿ.

Monday, September 6, 2010

ಒಲವ ರಕ್ಷೆ

ನಿನ್ನ   ಪ್ರೀತಿಯೇ ನನಗೆ ಶ್ರೀರಕ್ಷೆ,
ಭೀತಿಯ ಮಾತೇಕೆ /

ನೀನೆ ಜ್ಯೋತಿ ನನ್ನ ಬಾಳಿಗೆ,
ಕತ್ತಲೆಯ ಭಯವೇಕೆ/

ನೀ ಜೊತೆಗಿದ್ದರೆ ನಾ ಸೈನಿಕ,
ಒಲವ ರಾಜ್ಯದಲಿ/

ಒಲವು ಕಾಯಲಿ ನಮ್ಮ,
ನಾವಾಗುವ ಒಲವಿಗೆ ಅರ್ಥ /

Friday, September 3, 2010

ನಾನೆಂಬ ಪ್ರಶ್ನೆ ?



ನಾನು ಏನು ?!
ಅನ್ನುವ ಪ್ರಶ್ನೆಗೆ,
ಉತ್ತರ ಗೋಚರಿಸುವುದು,
ನನ್ನೆದೆರು ನಿಂತಿರುವ,
ಕನ್ನಡಿಯ ಪ್ರತಿಬಿಂಬಕ್ಕೆ ಮಾತ್ರ /





"ನೀನು " ಎಂದು ,                       
ಬೆರಳು ತೋರಿಸುವ ಜನಗಳಿಗೆ,
'ನಾನು ಏನು' ಅನ್ನುವ ಪ್ರಶ್ನೆಗೆ ,
ಉತ್ತರವೇ ಇರುವುದಿಲ್ಲ/


ನಾನು ಏನೂ ಅಲ್ಲ,
ನಾನು ಯಾರೂ ಅಲ್ಲ,
ನನ್ನದೆಂದುಕೊಳ್ಳುವ ಯಾವೂದೂ ನನ್ನದಲ್ಲ,
ಈ ಸತ್ಯ ತಿಳಿದಿದ್ದರೂ,
ಜಗದ ಜಾತ್ರೆಯ ಜಂಜಾಟ ತಪ್ಪಿದ್ದಲ್ಲ,
ನಾನು , ನೀನು ಗಳ ಕದನ ನಿಲ್ಲುವುದೇ ಇಲ್ಲ /




                                                                       
 ಶ್ರೀ ಕೃಷ್ಣ ನೆನಪಾಗುತ್ತಾನೆ,
ಕೈಯಲ್ಲಿ ಭಗವದ್ಗೀತೆ ಹಿಡಿದು,
" ಪರಿವರ್ತನೆ ಪ್ರಕೃತಿ ನಿಯಮ",
ಆದುದೆಲ್ಲಾ ಒಳ್ಳೆಯದಕ್ಕಾಗಿ,
ಕನ್ನಡಿಯ ಪ್ರತಿಬಿಂಬ ಪಿಸುಗುಟ್ಟುತ್ತದೆ,
ಎಲ್ಲರೊಳಗೊಂದಾಗು ಮಂಕುತಿಮ್ಮ/

Monday, August 30, 2010

ಅರ್ಥಪೂರ್ಣ ಸಂದೇಶಗಳು

  1. ಅಂದು 1947 ರಲ್ಲಿ, ಗಾಂಧೀಜಿ ದುಡಿದಿದ್ದರು ದೇಶಕ್ಕಾಗಿ, ಇಂದು 2010 ಎಲ್ಲರೂ ದುಡಿಯುವರು ಗಾಂಧೀಜಿ ನೋಟಿಗಾಗಿ.!
  2. ನೀನು ಎಷ್ಟು ಶ್ರೀಮಂತ ಎಂಬುದನ್ನು ಪರೀಕ್ಷಿಸಬೇಕಾದರೆ, ನೀನು ನಿನ್ನ ಬಳಿ ಇರುವ ಹಣವನ್ನು ಎಣಿಸಬೇಡ, ಬದಲಿಗೆ ಒಂದು ಹನಿ ಕಣ್ಣೀರು ಹೊರ ಹಾಕು ಮತ್ತು ಎಷ್ಟು ಮಂದಿ ಆ ಕಣ್ಣೀರನ್ನು ಒರೆಸಲು ತಮ್ಮ ಹಸ್ತ ಚಾಚುತ್ತವೆ ಎಂಬುದನ್ನು ಏಣಿಸು.

ನನ್ನುಸಿರೇ ......>>>>>

ಉಸಿರೇ,   ನೀನೆ ನನ್ನುಸಿರು,
ಉಸಿರೇ , ನೀನೆ ಒಲವಿನ ತವರು/

ನಲಿವಿನ   ನಾಯಕಿ ನೀನು,
ಗೆಲುವಿನ ದಿಕ್ಸೂಚಿ ನೀನು/

ಭಾವಯಾನದ ಜೊತೆಗಾತಿ,
ಮಧುರ ಪ್ರಣಯದ ಸಂಗಾತಿ/

ಸದಾ ಹದಿನೆಂಟರ ಹರೆಯ,
ಮುಪ್ಪೆನ್ನುವುದೇ ಇಲ್ಲ ನಮ್ಮೊಲವಿಗೆ/

ಇದು ಅಮರ, ಮಧುರ,
ಅನಂತ ಪ್ರೇಮ ಕಾವ್ಯ/

ಉಸಿರು, ಉಸಿರಿನಾಚೆಗಿನ ಬಂಧನ,
ಇದು ನನ್ನುಸಿರಿನ ಕಥನ/

Friday, August 20, 2010

ಅಂಚೆ ಇಲಾಖೆಯಲ್ಲಿ ಕೆಲಸ

ಕರ್ನಾಟಕ ಅಂಚೆ ವಲಯ ವು ಪೋಸ್ಟಲ್ ಹಾಗು ಸಾರ್ಟಿಂಗ್ ಸಹಾಯಕರ ಹುದ್ದೆಗೆ ಅರ್ಜಿ ಗಳನ್ನು ಕರೆದಿದೆ. ಕರ್ನಾಟಕದ ಎಲ್ಲಾ ಪ್ರಧಾನ ಅಂಚೆ ಕಛೇರಿಗಳು ಹಾಗು ಮುಖ್ಯ ವಾದ  ತಾಲೂಕು ಕೇಂದ್ರ ಗಳ ಉಪ ಅಂಚೆ ಕಛೇರಿಗಳಲ್ಲಿ ಆಗಸ್ಟ್ 20 ,2010 ರಂದು ಅರ್ಜಿಗಳು ದೊರೆಯುತ್ತವೆ. ಕೊನೆಯ ದಿನಾಂಕ : ಅಕ್ಟೋಬರ್  5 ,2010.  

ಹೆಚ್ಚಿನ  ಮಾಹಿತಿಗೆ http ://chukkisamsthe.blogspot.com  ನೋಡಿ .




    Monday, August 16, 2010

    ದಿನದ ಸಂದೇಶಗಳು

    ೦೧.ಅದ್ಭುತವಾದ ಗಾಳಿ , ಸುಂದರವಾದ ಸೂರ್ಯ, ಹಾಡುತ್ತಿರುವ ಪಕ್ಷಿಗಳು, ಉತ್ತಮವಾದ ದಿನ. ಇವೆಲ್ಲ ನಿಮ್ಮ ಮನೆ ಬಾಗಿಲಿನಲ್ಲಿ ಕಾಯುತ್ತಿವೆ. ನಿಮಗೆ "ಸಂತೋಷದ ಶುಭದಿನ " ಹೇಳಲು, ದಯವಿಟ್ಟು ಬಾಗಿಲು ತೆಗೆಯಿರಿ.

    ದುಃಖದ ಸಂದೇಶಗಳು

    01 . ಹೊರಗೆ ಅಳುವುದಕ್ಕಿಂತ ಹೃದಯದ ಒಳಗೆ ಅಳುವುದು ತುಂಬಾ ಅಪಾಯಕಾರಿ. ಕೆನ್ನೆ  ಮೇಲೆ ಸುರಿಸುವ ಕಣ್ಣೀರನ್ನು ಅಳಿಸಬಹುದು. ಆದರೆ  ಕೆಲವು ಗುಪ್ತವಾದ ಕಣ್ಣೀರುಗಳು ಎಂದೂ ಕೊನೆ ಗೊಳ್ಳದ ಗಾಯಗಳನ್ನು ಮಾಡುತ್ತವೆ.

    02. ಕೆಲವರನ್ನ ಕಾಯುವುದು ಕಷ್ಟ  , ಹಾಗೆ ಕೆಲವರನ್ನ ಮರೆಯುವುದು ಕೂಡ  ಕಷ್ಟ .  ಆದರೆ ತುಂಬಾ ಕಷ್ಟದ ಕೆಲಸ ಎಂದರೆ, ಆ ಕೆಲವರನ್ನು ಮರೆಯುವುದೋ ಅಥವಾ ಕಾಯುವುದೋ ಎಂಬ ನಿರ್ದಾರ ತೆಗೆದುಕೊಳ್ಳುವುದು.

    ಪ್ರೀತಿ ಸಂದೇಶಗಳು

    ೦೧. ಬಂಗಾರದ ಬೆಲೆ ದಿನದಿಂದ ದಿನಕ್ಕೆ , ಏರುತ್ತಿದೆ ಕಣೆ. ನನಗೆ ಯಾಕೋ ನಿನ್ನದೇ ಚಿಂತೆ. ನಿನ್ನನ್ನು ಯಾರಾದರು ಅಪಹರಿಸಿಕೊಂಡು ಹೋದಾರು ಎಂದು. ಯಾಕೆಂದರೆ ನಾಳೆ ನಿನ್ನಲ್ಲಿ " ಚಿನ್ನದಂತ ಹೃದಯ " ಇದೆ.

    ಸ್ನೇಹ ಸಂದೇಶಗಳು

    01. ನಾವು ಕೆಲವು ವೇಳೆ ಉತ್ತಮ ಸ್ನೇಹಿತರನ್ನು  ಕಳೆದುಕೊಳ್ಳುತ್ತೇವೆ. ಯಾಕೆಂದರೆ ಅವರು ನಮಗೆ ಎಷ್ಟು ವಿಶೇಷ ಎಂಬುದನ್ನು ವ್ಯಕ್ತಪಡಿಸಲು ನಾವು ವಿಫಲರಾಗಿರುತ್ತೇವೆ. ಅಂತ ಸ್ನೇಹಿತರಿಗಾಗಿ ಈ ಸಂದೇಶ, ಯಾಕೆಂದರೆ ನಾನು ಅವರನ್ನು ಯಾವಾಗಲು ಕಳೆದುಕೊಳ್ಳಲು ಬಯಸುವುದಿಲ್ಲ.

    02. ಮನಸ್ಸು ಎಂಬ ಮಂದಿರದಲ್ಲಿ, ಕನಸು ಎಂಬ ಸಾಗರದಲ್ಲಿ, ನೆನಪು ಎಂಬ ಅಲೆಗಳಲಿ,  ಕತ್ತಲೆಯ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ನನ್ನ ಸ್ನೇಹ.

    Saturday, August 14, 2010

    ++++ಸ್ವಾತಂತ್ರ ದಿನ ++++

    ಜೈ ಭಾರತ ಮಾತೆ
    ಸ್ವಾತಂತ್ರ ದಿನವಿದು, 
    ತ್ಯಾಗ ಬಲಿದಾನ/ 
    ನಿಸ್ವಾರ್ಥ ದೇಶ ಪ್ರೇಮ, 
    ಸಹನೆ ಶೌರ್ಯದ  
    ಫಲವಿದು..../
    ಸುಭಾಶ್ , ಭಗತ್ , ಆಜಾದ್ ,
    ಹಲವು ವೀರರ, ಛಲದಂಕಮಲ್ಲರ,
    ತೋಳ ಬಲಗಳು...../
    ಗಾಂಧಿ , ನೆಹರು, ತಿಲಕರು ,
    ಹಲವರನೇಕರ, ಶಾಂತಿ ಧೂತರ,
    ಸ್ನೇಹ ಫಲಗಳು..../
     
    ನಾವೆಲ್ಲರೂ ಒಂದೇ ಭಾರತೀಯರು



    ಪ್ರತಿ ಭಾರತೀಯನ,
    ದೇಶ ಭಕ್ತಿಯ ಮಿಡಿತ..../


    ಸ್ವಾತಂತ್ರಕಾಗಿ  ಹಂಬಲಿಸಿದ,
    ಹೃದಯಗಳ ತುಡಿತ....../







    ಹೋರಾಟಗಳಿಗೆ ಸಿಕ್ಕ ಜಯ,
    ಚಳುವಳಿಗಳಿಗೆ ದೊರೆತ ನ್ಯಾಯ ../

    ಮಾನವತೆಯ ಕಿರೀಟ  ಪ್ರಾಯ,
    ಸ್ವತಂತ್ರ ಭಾರತದ ಪುಣ್ಯ ದಿನವಿದು /

    ಸ್ವಾತಂತ್ರ ದಿನವಿದು,
    ಜನರ ದೇಶದ ಹಿರೆಮೆ ಗರಿಯಿದು/
    ಪ್ರಜಾ ರಾಜ್ಯದ
    ಚೈತನ್ಯ ಚಿಲುಮೆಯಿದು/
     
    - ಚುಕ್ಕಿ ಹುಣಸೂರು .


      ****                        ಸ್ವಾತಂತ್ರ   ದಿನದ ಶುಭಾಶಯಗಳು                                ****

    Sunday, August 8, 2010

    ಹಾಸ್ಯ ಸಂದೇಶಗಳು

     ಡಿಯರ್ ಪ್ರೆಂಡ್ಸ್ ನಮಸ್ತೆ,

    "ನಗು ಎಂದಿದೆ ಮಂಜಿನ ಬಿಂದು.........",

    "ನಕ್ಕರೆ ಅದೇ ಸ್ವರ್ಗ",

    "ನಗುವವರು ಹೆಚ್ಚು ವರ್ಷ ಬದುಕುತ್ತಾರೆ",

    "ಎಲ್ಲವನ್ನು ಮರೆತೊಮ್ಮೆ ನಕ್ಕುಬಿಡು" ....................................

    ಹೀಗೆ ನಗುವಿನ ಬಗ್ಗೆ ಹಲವರು ಬರೆದಿದ್ದಾರೆ, ಹಾಡಿದ್ದಾರೆ, ಸಲಹೆ ನೀಡಿದ್ದಾರೆ, ನಗು
    ಗೋಸ್ಟಿ    ಗಳನ್ನೇ ನಡೆಸಿ ಕೊಡುವವರು ಇದ್ದಾರೆ.ಡಾಕ್ಟರು "ನಗಿ" ಎಂದು ಚಿಕಿತ್ಸೆ  ಸೂಚಿಸುತ್ತಾರೆ.

    ದಿನನಿತ್ಯದಲ್ಲಿ ನಮ್ಮ "ಜಂಘಮ ಘಂಟೆಗೆ" ಹಲವು ಮೇಘ ಸಂದೇಶಗಳು ನಗುವನ್ನು ಹೊತ್ತು ತರುತ್ತವೆ. ಅವೆಲ್ಲವನ್ನು ಕ್ರೋಡಿಕರಿಸಿ, ಕೆಲವನ್ನು ಕನ್ನಡಕ್ಕೆ ಅನುವಾದಿಸಿ, ನಿಮ್ಮ ಮುಂದಿಟ್ಟಿದ್ದೇನೆ. 

    ಕೆಲವು ಹಾಸ್ಯಗಳಲ್ಲಿ "ಸರ್ದಾರ್ಜಿ" ಎಂಬ ನಾಮಧೇಯವನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಭಾರತೀಯರನ್ನು ಅವಮಾನ ಮಾಡಲು ಆಂಗ್ಲಿಗಳು ಬಳಸಿದ ತಂತ್ರ. ಅದನ್ನೇ ನಾವು ಅನುಕರಿಸುತ್ತಿರುವುದು ತರವಲ್ಲ. ನಮ್ಮ ದೇಶ ವನ್ನ ಕಾಯುತ್ತಿರುವ ಹೆಚ್ಚಿನ ಯೋಧರು ಸರ್ದಾರ್ಜಿ ಗಳು . ಹಾಸ್ಯ ಗಳಿಗೆ ಅವರ ಹೆಸರನ್ನು ಬಳಸುವುದು , ಅವರಿಗೆ ಮಾಡಿದ ಅವಮಾನ. ಇದು ತರವಲ್ಲ. ಹಾಗಾಗಿ ನಾನು ಸರ್ದಾರ್ಜಿ ಎಂಬ ಹೆಸರಿನ ಬದಲು " ಆಂಗ್ಲಿಗ " ಎಂಬ ಪದ ಬಳಸಿದ್ದೇನೆ. ಬುದ್ದಿಯಲ್ಲಿ ನಮ್ಮ ಭಾರತೀಯರಿಗಿಂತ ಬುದ್ದಿವಂತರು ಯಾರಿಹರು ಜಗದಲ್ಲಿ ?!

    ಎಲ್ಲರು ನಗು ನಗುತ ಬಾಳಿ. ..ಎಲ್ಲರಿಗೂ ಒಳ್ಳೆಯದಾಗಲಿ...ಬದುಕಿನಲ್ಲಿ  ನಗುವಿರಲಿ.....ನಗುವಿನೊಟ್ಟಿಗೆ   ನಲಿವಿರಲಿ...

    ನಿಮ್ಮ ಪ್ರೀತಿಯ 

    ಲಿಂಗೆಶ್ ಹುಣಸೂರು.

    ನಿಮ್ಮ ಅನಿಸಿಕೆಗಳಿಗೆ ಸ್ವಾಗತ ...




    01.  ನೀವು ನಿದ್ರೆ ಮಾಡಲು ಹೋಗ್ತಿದ್ದೀರ  ? ಅದಕ್ಕೂ ಮುಂಚೆ ನಾನು ನಿಮಗೆ ಒಂದು ತುಂಬಾ ಮಹತ್ವದ ವಿಷಯ ಹೇಳಬೇಕಿತ್ತು . ನಾನು ಕೂಡ ನಿದ್ರೆ ಮಾಡಲು ಹೋಗ್ತಿದ್ದೀನಿ . ಶುಭ ರಾತ್ರಿ.

    02.  ಹುಡುಗ  : ಪ್ರಿಯತಮೆ ಮುತ್ತಿನಂತ ಒಂದು ಮಾತನ್ನು ಹೇಳು. ಅದರಲ್ಲಿ ಸುಖವು  ಇರಬೇಕು, ದುಃಖವು  ಇರಬೇಕು. 
      ಹುಡುಗಿ : ಐ ಲವ್ ಯೂ .......ಅಣ್ಣ.....!!

    03. ಹುಡ್ಗಿಗೆ ಗಿಫ್ಟ್ ಕೊಡು ,ಸ್ಮೈಲ್ ಕೊಡು , ಹಾರ್ಟ್ ಕೊಡು, ಪ್ರೀತಿ ಕೊಡು,ಮನಸ್ಸು ಕೊಡು, ಚಾಕ್ಲೆಟ್ ಕೊಡು, ಆದ್ರೆ ಆಗಸ್ಟ್ 24 ರಂದು ಕೈ ಕೊಡಬೇಡ . ಯಾಕಂದ್ರೆ ರಾಖಿ  ಕಟ್ತಾರೆ.

    04 ಯಮ: ಚಿತ್ರಗುಪ್ತ ಇವರು ಏನು ಕೆಲಸ  ಮಾಡ್ತಿದ್ದರು ?
       ಚಿತ್ರಗುಪ್ತ :ಮಹಾ ಪ್ರಭುಗಳೇ ಇವರು ಅಂಚೆ ಕಚೇರಿ ಯಲ್ಲಿ ಕೆಲಸ ಮಾಡುತ್ತಿದ್ದರು .
      ಯಮ : ಹಾಗಿದ್ರೆ ಇವರನ್ನು ನೇರ ಸ್ವರ್ಗಕ್ಕೆ ಕಳುಹಿಸು. ಇವರು ಈಗಾಗಲೇ ನರಕ ಅನುಭವಿಸಿ ಆಗಿದೆ. 

    05. ಒಳ್ಳೆಯ ಜನರಿಗಾಗಿ ಪ್ರಪಂಚಾದಾದ್ಯಂತ ಹುಡುಕಬೇಡ . ಯಾಕಂದ್ರೆ ...........ನಾನು ಮನೆಯಲ್ಲಿ ಇದ್ದೇನೆ.

    06. ಎಷ್ಟು ಸಲ ಹೇಳಬೇಕು. ಇಂತ ಸಂದೇಶ ಕಳುಹಿಸಬೇಡಿ ಅಂತ. ಈಗ ನೋಡಿ ನನ್ನ ಮೊಬೈಲ್ ನ ಇರುವೆ ಎತ್ತಿಕೊಂಡು ಹೋಗ್ತಿದೆ. ಯಾಕಂದ್ರೆ ನಿಮ್ಮ ಸಂದೇಶ ಅಸ್ಟು  ಸ್ವೀಟ್ ಆಗಿದೆ ಕಣ್ರೀ. 

    07.  ಆಂಗ್ಲಿಗ : ನಮ್ಮ ಆಜ್ಜ  ಯುದ್ದದಲ್ಲಿ  50 ಜನರ ಕಾಲು ಕಡಿದಿದ್ದಾರೆ. 
       ಗುಂಡ : ತಲೆ ಯಾಕೆ ಕಡಿಯಲಿಲ್ಲ   .
       ಆಂಗ್ಲಿಗ : ಅದನ್ನು ಮೊದಲೇ ಯಾರೋ ಕಡಿದಿದ್ದರು. 

    08. "ನೀವು ಪ್ರತಿನಿತ್ಯ  "CHANGE"  ತರಬೇಕು". ಈ ಮಹತ್ವದ ಸಾಲನ್ನು ಹೇಳಿದವರು , ನಮ್ಮೂರ ಬಸ್ ಕಂಡಕ್ಟರ್ರು.

    09 . ಕುತುಬ್ ಮಿನಾರ್ ನ ಉದ್ದ ಎಷ್ಟು ?
    ?
    ?
    ?
    ?
    ?
    ?
    ನಾನ್ ಹೇಳಲ್ಲ , ಏನ್ ಮಾಡ್ತೀರ ?

    10 . ಅಮೃತ ಬಳ್ಳಿ ಮತ್ತು ತುಳಸಿ ರಸ ಒಟ್ಟಿಗೆ ಮಾಡಿ , ಪ್ರತಿ ನಿತ್ಯ 3 ಸಲ ಕುಡಿದರೆ, ಕಂಜೂಸ್ ರೋಗ ದೂರ ಆಗುತ್ತೆ, ಸಂದೇಶ ಕಳುಹಿಸಬೇಕು ಅನಿಸುತ್ತದೆ. (100 % ಆಯುರ್ವೇದಿಕ್, ಅಡ್ಡ ಪರಿಣಾಮಗಳಿಲ್ಲ  )

    11 . ಬಾಸ್: ಯಾಕೋ ದಿನಾಲೂ ಆಫಿಸ್ ಗೆ ತಡವಾಗಿ ಬರ್ತೀಯ ?
    ಗುಮಾಸ್ತ: ಅಡುಗೆ ಮಾಡಿ ಹೆಂಡತಿಗೆ ತಿಂಡಿ  ಕೊಟ್ಟು ಬಂದೆ ಸರ್.
    ಬಾಸ್: ನಾಚಿಕೆ ಆಗಲ್ವಾ?ನಾನು ಕೂಡ ಅಡುಗೆ ಮಾಡಿ , ಪಾತ್ರೆ ತೊಳೆದು ಬೇಗ ಬರಲ್ವ ?!!!!!

    12 . 100 ಮೀಟರ್ ಓಡುವ ಸ್ಪರ್ಧೆ. ಸಿದ್ದರಾಗಿ...ಒಂದು, ಎರಡು , ಮೂರು......ಓಡಿ. 
    ಎಲ್ಲರೂ ಓಡಿದರು. ಆದರೆ ಆಂಗ್ಲಿಗ ಮಾತ್ರ ಅಲ್ಲೇ ನಿಂತಿದ್ದ. ಶಿಕ್ಷಕರು ಕೇಳಿದರು , ಯಾಕೆ ನೀನು ಓಡ್ಲಿಲ್ಲ ?!,ಆಂಗ್ಲಿಗ ಹೇಳಿದ , " ನಂದು  ನಂಬರ್ರು ನಾಲ್ಕು ಸರ್. 

    13 . ಡಾಕ್ಟ್ರು: ನಿಮಗೆ ಮಂಡೆ (ಮಂಡೇ, ಸೋಮವಾರ ) ಶಸ್ತ್ರಚಿಕಿತ್ಸೆ ಮಾಡ್ತೇನೆ .
    ಉಡುಪಿ ಭಟ್ರು :ಇದು ಎಂತದು ಮಾರಾಯ್ರೇ. ನನ್ನ ಹೊತ್ತಿ ನೋವಿಗೆ ನೀವು ನನ್ನ ಮಂಡೆ (ತಲೆ ) ಶಸ್ತ್ರಚಿಕಿತ್ಸೆ ಮಾಡುವುದಾ?!!

    14 . ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಬ್ಬಳು ಚಿಕ್ಕ ಹುಡುಗಿ ಭಾರತದ ಭಾವುಟವನ್ನು ತನ್ನ ಗಲ್ಲದ ಮೇಲೆ ಬಿಡಿಸಿಕೊಂಡಿದ್ದಳು. ಒಬ್ಬ ಹುಡುಗ ಅವಳ ಗಲ್ಲಕ್ಕೆ ಮುತ್ತು ಕೊಟ್ಟು ಹೇಳಿದ ," ನಾನು ಭಾರತವನ್ನು ಪ್ರೀತಿಸುತ್ತೇನೆ".

    15. ಎಲ್ಲಾ ಹುಡುಗಿಯರು ನಿಮ್ಮನ್ನೇ ನೋಡುತ್ತಾರೆ. ಎಲ್ಲಾ ಹುಡುಗಿಯರು ನಿಮಗೆ ಕರೆಯುತ್ತಾರೆ. ಎಲ್ಲಾ ಹುಡುಗಿಯರಲ್ಲಿ ನಿಮ್ಮದೇ ನೆನಪು. ಯಾಕಂದ್ರೆ  ಇವತ್ತು " ರಕ್ಷಾ ಬಂಧನ " .

    16 . ಪೋಲಿಸ್ : ಸಾರ್ ನೆನ್ನೆ ಜೈಲ್ನಲ್ಲಿ ಕೈದಿಗಳು " ರಾಮಾಯಣ" ನಾಟಕ ಮಾಡ್ತಿದ್ದರು.
           ಎಸ. ಪಿ. : ಅದಕ್ಕೇನು?
           ಪೋಲಿಸ್: ಹನುಮಂತ ಸಂಜೀವಿನಿ ತರೋಕೆ ಕಾಂಪೌಂಡ್ ಹಾರಿ ಹೋದವನು ಇನ್ನು ಬಂದಿಲ್ಲ.

    17 .ಆಂಗ್ಲಿಗ: ನೀರಿನಿಂದ ಕರೆಂಟ್ ಯಾಕೆ ತೆಗಿತಾರೆ ?
         ಮತ್ತೊಬ್ಬ ಆಂಗ್ಲಿಗ: ಮಗನೆ , ನೀರಿನಿಂದ ಕರೆಂಟ್ ತೆಗಿಯದೆ ಇದ್ದರೆ , ನೀರು ಕುಡಿವಾಗ ಶಾಕ್ ಹೊಡೆದು ಸತ್ತು  ಹೋಗ್ತೀವಿ, ಅದಕ್ಕೆ!!! 

    18 . ಹಾರ್ಟ್ ಅಟ್ಟಾಕ್ ಅಂದ್ರೆ ಏನು ಗೊತ್ತಾ?
           ಸುಂದರವಾದ ಅಪ್ಸರೆಯಂತ ಹುಡುಗಿ, ನಿಮ್ಮ ನೋಡಿ, ಪಕ್ಕ ಬಂದು " ಬ್ರದರ್ , ಈ ಲವ್ ಲೆಟರ್  ನಾ ನಿಮ್ ಪ್ರೆಂಡ್ ಗೆ ಕೊಡಿ " 
           ಅಂದಾಗ ಆಗುತ್ತದಲ್ಲ ಅದೇ ....!

    19 . ಹಿಂದೆ ಒಳ್ಳೆಯ ಹಳೆಯ ದಿನಗಳಲ್ಲಿ, ಹುಡುಗಿಯರು ಅವರ ಅಮ್ಮನ ಹಾಗೆ ಅಡುಗೆ ಮಾಡುತ್ತಿದ್ದರು. ಆದರೆ    ಈಗ..............................................................................................
    .....................
    ....................................
    .......................
    .....................................................ಅವರು ಕುಡಿಯುತ್ತಾರೆ, ಅವರ ಅಪ್ಪನ ಹಾಗೆ ! ಎಂತ ಬೆಳವಣಿಗೆ....???!!!

    20 . ಹುಡುಗ: ಬಾ ಮನೆ ಬಿಟ್ಟು ದೂರ ಓಡಿ ಹೋಗೋಣ..
    ಹುಡುಗಿ: ಒಬ್ಬಳೇ ಓಡಿ ಬರೋಕೆ ಭಯ ಆಗ್ತಿದೆ.
    ಹುಡುಗ: ಭಯ ಆದ್ರೆ, ಜೊತೇಲಿ ನಿನ್ ತಂಗಿನೂ ಕರ್ಕೊಂಡ್ ಬಾ...!!!!

    ಸ್ಪೂರ್ತಿ ಸಂದೇಶಗಳು

     01 .  ಬೆಳವಣಿಗೆ ಎನ್ನುವುದು ಬೇಗ ಬೆಳೆದವರಿಂದ ಅಥವಾ ಕಷ್ಟ ಪಟ್ಟು ಕೆಲಸ ಮಾಡುವರಿಂದ ಆದುದಲ್ಲ . ಅದು ಸೋಮಾರಿ ಜನರಿಂದ ಆದುದು. ಯಾಕೆಂದರೆ ಅವರು ಕಷ್ಟ ದ ಕೆಲಸಗಳನ್ನು ಸುಲಭ ಮಾರ್ಗದಿಂದ ಮಾಡುವುದನ್ನು ಕಂಡು ಹಿಡಿಯುತ್ತಾರೆ.


    02 . ನೀವು ಏನನ್ನಾದರೂ  ಉಡುಗೊರೆ ಕೊಡಬೇಕು ಎನಿಸಿದರೆ , ನಿಮ್ಮ ಸಮಯ , ಗಮನ, ಗಮ್ಯ ವನ್ನು ಕೊಡಿ. ಪ್ರೀತಿಸುವ ಹೃದಯ ಇದಕ್ಕಿಂತ ಹೆಚ್ಚಿನದನ್ನು ಏನನ್ನೂ ಬಯಸುವುದಿಲ್ಲ . 

    03 .  ನನಗೊಂದು ಉಡುಗೊರೆ ಬೇಕೆಂದು ಎಲ್ಲಾ ಕಡೆ ಹುಡುಕಿದೆ. ಎಲ್ಲಾ ಅಂಗಡಿಯವರು ಒಂದೇ ಉತ್ತರ: ಅದಿಲ್ಲ,ಅದಿಲ್ಲ . ಏನಂತ ಗೊತ್ತಾ? ಅದು ನಿಮ್ಮ "ಮುದ್ದಿನ ನಗು" ಗೆಳೆಯ .



    04 . ಸಾಧನೆ ಎಂದರೆ ಏನು? 1988 ನೇ ವರ್ಷದಲ್ಲಿ ಸಚಿನ್ ತೆನ್ದೊಲ್ಕರ್ ಎಸ.ಎಸ.ಎಲ್ .ಸಿ. ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದರು. ಆದರೆ 2009 ನೇ ಇಸವಿಯಲ್ಲಿ ಮಹಾರಾಷ್ಟ್ರ ರಾಜ್ಯದ ಎಸ. ಎಸ. ಎಲ್. ಸಿ. ತರಗತಿಯ ಮೊದಲ ಪಾಠ ತೆಂಡೂಲ್ಕರ್ ಅವರನ್ನ ಕುರಿತಿದ್ದಾಗಿದೆ.  ಇದು ಜೀವನ ,ಸಾಧನೆ . 



    05 . ಜಗತ್ತಿನ ಅತ್ಯಂತ ಮಹತ್ವದ ವಿಷಯ ಎಂದರೆ " ನಾವು ಎಲ್ಲಿ ನಿಂತಿದ್ದೇವೆ " ಎನ್ನುವುದಲ್ಲ, "ನಾವು ಯಾವ ದಿಕ್ಕಿನೆಡೆಗೆ ಚಲಿಸುತ್ತಿದ್ದಿವಿ " ಎಂಬುದು. ನಿನಂತರ ಚಲನೆಯಿರಲಿ.



    06 . ಬದುಕು ಎನ್ನುವುದು , ಹಲವು ಬದಲಾವಣೆಗಳ ಸಂಗ್ರಹ. ಹಾಗಾಗಿ ಬದಲಾವಣೆಗಳನ್ನು ತಪ್ಪಿಸಿಕೊಳ್ಳಬೇಡಿ . ಪ್ರತಿ ಬದಲಾವಣೆಯನ್ನು ಸವಾಲಾಗಿ ಸ್ವೀಕರಿಸಿ. ಕೆಲವು ಯಶಸ್ಸನ್ನು ನೀಡಿದರೆ ಮತ್ತು ಕೆಲವು ಯಶಸ್ಸಿಗೆ ಅಡಿಗಲ್ಲಾಗಬಹುದು.



    07 . ಒಬ್ಬ ಸಾಮಾನ್ಯ ವ್ಯಕ್ತಿ ಪುಸ್ತಕದೊಟ್ಟಿಗೆ ಇರುತ್ತಾನೆ.   ಒಬ್ಬ ಅತಿ ಸಾಮಾನ್ಯ ವ್ಯಕ್ತಿ  ಆ ಪುಸ್ತಕದಲ್ಲಿ ಇರುತ್ತಾನೆ. ಯಶಸ್ಸು ನಿಮ್ಮದಾಗಲಿ.



    08 . ಪ್ರತಿ ಹೃದಯದಲ್ಲೂ ದುಃಖ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆ ಬೇರೆ ಆಗಿರುತ್ತದೆ. ಕೆಲವರು ಅದನ್ನು ಕಣ್ಣಿನಲ್ಲಿ  ಅದಗಿಸಿಕೊಂಡರೆ  , ಮತ್ತೆ ಕೆಲವರು ಮಂದಸ್ಮಿತ ನಗುವಿನಲ್ಲಿ ಅಡಗಿಸುತ್ತಾರೆ. ಇದೆ ಜೀವನ . 



    09 . ಚಾರ್ಲಿ ಚಾಪ್ಲಿನ್ ರ ಮುತ್ತಿನ ಹನಿಗಳು.



    " ನೀವು ಅಸಂತೋಷ ದಲ್ಲಿದ್ದಾಗ  , ಬದುಕು ನಿಮ್ಮನ್ನು ನೋಡಿ ನಗುತ್ತದೆ. ನೀವು ಖುಷಿಯಲ್ಲಿದ್ದಾಗ ಬದುಕು ನಿಮ್ಮತ್ತ ಕಿರುನಗೆ ಬೀರುತ್ತದೆ. ಆದರೆ ನೀವು ಬೇರೆಯವರ   ಸಂತೋಷಕ್ಕೆ ಕಾರಣರಾದಾಗ ಬದುಕು ನಿಮಗೆ ನಮಸ್ಕರಿಸುತ್ತದೆ. 







    10 . ಬದುಕಿನಲ್ಲಿ ನೀವು ಗಿಳಿಯಾಗಬೆಡಿ, ಹದ್ದಾಗಿ. ಗಿಳಿ ಮಾತನಾಡುತ್ತದೆ, ಆದರೆ ಎತ್ತರಕ್ಕೆ ಹಾರುವ ಶಕ್ತಿ ಇಲ್ಲ. ಆದರೆ ಹದ್ದು ಮೌನಿ ಆದರೆ ಅದಕ್ಕೆ  ನೀಲಿ ಆಗಸವನ್ನು  ಮುಟ್ಟುವ ಆತ್ಮಶಕ್ತಿ ಇದೆ. 



    11 . ಪ್ರಯತ್ನಗಳು ನಿರಾಸೆಯ ಪ್ರತಿಫಲಗಳಿಗೆ ಎಡೆ ಮಾಡಿಕೊಟ್ಟರೂ ಅವು ನಿಷ್ಪ್ರಯೋಜಕವಾಗುವುದಿಲ್ಲ. ಯಾಕೆಂದರೆ ಅವು ನಮ್ಮನ್ನೂ ಇನ್ನೂ ಹೆಚ್ಚು  ಶಕ್ತಿ ಶಾಲಿಗಳನ್ನಾಗಿ , ಸಾಮರ್ತ್ಯಶಾಲಿಗಳಾಗಿ, ಅನುಭವಶಾಲಿ ಗಳನ್ನಾಗಿ ಮಾಡುತ್ತವೆ. 

    12. ಈ ದಿನ ಒಳ್ಳೆಯ ಕೆಲಸ ಮಾಡುವ ವ್ಯಕ್ತಿ ನಾಳಿನ ಸಂತೋಷವನ್ನು ಖಾತರಿಗೊಳಿಸುತ್ತಿರುತ್ತಾನೆ.

    13 . ಬದುಕುವುದು ಬಹಳ ಸರಳ, ಪ್ರೀತಿಸುವುದು ಬಹಳ ಸರಳ, ನಗುವುದು, ಗೆಲ್ಲುವುದು, ಎಲ್ಲವೂ ಸರಳ , ಆದರೆ ಕಷ್ಟದ ಕೆಲಸ ಎಂದರೆ , ಸರಳ ವಾಗಿರುವುದು.







    Saturday, July 17, 2010

    "ಅನನ್ಯ" ..ನನ್ನ ಸಂತೋಷಕ್ಕಿರುವ ಒಂದೇ ಒಂದು ಕಾರಣ

    ಹಾಯ್ ಪ್ರೀತಿಯ ಹುಡುಗಿ,

                             ಹೇಗಿದ್ದೀಯ..? ಅಪ್ಪ, ಅಮ್ಮ, ಮುದ್ದು ತಂಗಿ, ಪೆದ್ದು ಭಾವಿ ಪತಿ, ನಿನ್ನ ಕನಸು, ಕನವರಿಕೆ, ಇತ್ಯಾದಿ, ಇತ್ಯಾದಿ..ಎಲ್ಲಾ ಹೇಗಿದ್ದಾರೆ, ಹೆಂಗಿವೆ? ಎಲ್ರಿಗೂ ನಿನ್ನ ಅನಂತ್ ನ ಹೃದಯ ಪೂರ್ವಕ ಶುಭ ಹಾರೈಕೆಗಳು.  ನಾನ್ ಹೇಗಿದ್ದೀನಿ ಅಂತ ಕೇಳ್ತಿದ್ದೀಯ?! . ಸರ್ಕಾರದ ಕೆಲಸದ ಜಂಜಾಟ, ಬದುಕಿನ ಜೂಟಾಟ, ಏಕಾಂಗಿ ಬದುಕಿನ ಸಂಸಾರ , ಗುರಿ ಇರದ ಸಂಚಾರ, ನಾನೇ ತಂದುಕೊಂಡ   ಕೆಲವು ಸಂಚಕಾರ, ಅಪೂರ್ಣವಾಗಿರೋ ಕನಸುಗಳು, ಪೂರ್ಣಗೋಳಿಸಬೇಕಾಗಿರೋ  ಜವಾಬ್ದಾರಿಗಳು....ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪುಟ್ಟ ಹೃದಯದಲ್ಲಿ ಪ್ರತಿಸ್ಟಾಪಿಸಿಕೊಂಡಿರೋ  "ಅನನ್ಯ " ಅನ್ನೋ ಮೂರುವರೆ ಅಕ್ಷರಗಳ ಮುದ್ದು ಹುಡುಗಿಯ ಪ್ರೀತಿ ಸ್ಮಾರಕ ..ಎಲ್ಲದರೋಟ್ಟಿಗೆ ಆರಾಮಾಗಿದ್ದೀನಿ ಹುಡುಗಿ...........!!!!!! 
                 

                                ಮತ್ತೆ ಏನು ವಿಶೇಷ ? ಕೆಲಸ ಹೇಗಿದೆ ? ಬಹಳ ಅದ್ರುಸ್ಟವಂತಳು ನೀನು. ನಿನಗೆ ಎರಡೆರಡು ಜವಾಬ್ದಾರಿ..ಒಂದು ಸರ್ಕಾರದ್ದು, ಮತ್ತೊಂದು ಬದುಕಿನದ್ದು. ನನ್ನ ಬದುಕಿನ ಸ್ಪ್ರೂರ್ಥಿಯ ಸೆಲೆ  ಅನನ್ಯ , ಕೆಲವೇ ದಿನಗಳಲ್ಲಿ ಶ್ರೀಮತಿ ಅನನ್ಯ ಅನೂಪ್ ಆಗ್ತಿದ್ದಾರೆ. ಮತ್ತಸ್ಟು ದಿನಗಳಲ್ಲೇ ಅನನ್ಯ " ಅಮ್ಮ " ಆಗ್ತಾಳೆ . " ಮಗುವಿನೋಳಗೊಂದು ಮಗು" , ನಂತರ ಅತ್ತೆ, ಅಜ್ಜಿ, ಬದುಕಿನ ವಿಭಿನ್ನ ಆಯಾಮಗಳು ...ಅಬ್ಬಾ! ನೆನೆಸಿಕೊಂಡರೆ ಮೈ ಮನ ರೋಮಾಂಚನ..! ಅದೆಷ್ಟು ಬೇಗ ನಾವು (ನೀನು ಮಾತ್ರ, ನಿನ್ನೋಬ್ಬಳಿಂದ ಮಾತ್ರ ಸಾಧ್ಯ ) ಬದುಕಿನ ಬದಲಾವಣೆಗಳನ್ನು ಸ್ವೀಕರಿಸಿಕೊಂಡುಬಿಡುತ್ತೇವೆ  , ಅರಗಿಸಿಕೊಂಡುಬಿಡುತ್ತೇವೆ ಅಲ್ವಾ ??????  ನೀನು ನನ್ನ ಬದುಕಿನೊಳಗೆ ಬಂದದ್ದೂ ಕೂಡ ಅಂತಹ ಮಹತ್ತರ ಬದಲಾವಣೆಯೇ ಅಲ್ವಾ ?!  ಆದ್ಯಾಗ್ಗ್ಯು ನಿನ್ನೇನೋ ಕೆಲವೇ ದಿನಗಳಲ್ಲಿ ಬದುಕಿನ ಮತ್ತೊಂದು ಮಧುರ ಘಟ್ಟಕ್ಕೆ ಕಾಲಿರಿಸಲು  ಹಿರಿಯರೆಲ್ಲ ಕೂಡಿ "ಒಡಂಬಡಿಕೆ" ಗೆ ಸಹಿ , ಆಂಗ್ಲ ಭಾಷೆಯಲ್ಲಿ ಅದಕ್ಕೆ "ಯೆನ್ಗೆಜೆಮೆಂಟ್" ಅಂತ ಕರಿತಾರೆ, ಅಲ್ಲಿಂದಾಚೆಗೆ ಬರಿ " ಕಮಿಟ್ಮೆಂಟ್ " ಗಳ ಸಂತೆ. ಈ ಸಂತೆಯ ಸಾಗರದಲ್ಲಿ ಮುಳುಗದೇ ಈಜಿ ಜಯಿಸಿ, ಸಂತೋಷದ ದೋಣಿ ಯಲ್ಲಿ ತೇಲಿ ನೆಮ್ಮದಿಯ ದಾದಾ ಸೇರು ಜೀವವೇ, ಅದೇ ನನ್ನ ಎದೆಯಾಳದ ಹಾರೈಕೆ.....

                                         " ಚೆನ್ದಾದ್ಲು ಕಣೆ, ಮುದ್ದಾದ್ಲು ಕಣೆ , ಮಧು ಮಗಳಾದ್ಲು ಕಣೆ , ನಮ್ ತುಂಟ್ ಹುಡುಗಿ ..." ಅಲ್ವಾ ?! ನಿನ್ನ ಬದುಕಿನ ಸಡಗರ ನೋಡ್ಲಿಕ್ಕೆ ನಿನ್ನ ಅನಂತ್ ನಿನ್ನೆದುರು ಇರಲ್ವಲ್ಲ ಮನಸೇ, (ನಾನ್ ಅಲ್ಲಿದ್ರೆ ನಿನ್ನ ಭಾವಿ ಪತಿ , ಭಾವಿಗ್ ಬಿದ್ಬಿಡ್ತಾನೆ , ನಂಗ್ ನೀನ್ ಚೆನ್ನಾಗಿರಬೇಕು ) , ಅದಕ್ಕೇನಂತೆ ಮಾನಸಿಕವಾಗಿ ಸದಾ ನಾನ್ ನಿನ್ ಜೋತೆಗಿರ್ತೀನಿ, ನೀ ಎಲ್ಲೇ ಇರು , ಹೇಗೆ ಇರು , ಈ  ಅನಂತ್ ನ ಹೃದಯ ನಿನ್ನ ಒಳಿತಿಗೋಸ್ಕರ  ಸದಾ ಮಿಡಿಯುತ್ತಿರುತ್ತದೆ...ಅದ್ ಸರಿ ಮಾರಾಯ್ತಿ , ಮದ್ವೆ ಆದ್ ಮೇಲೆ ನನ್ನ ಮರೆತ ಬಿಡ್ತಿಯೇನು?!  ಹಂಗೆನಾದ್ರು ಮಾಡಿದ್ರೆ ಈ ಅನಂತ ಹುಚ್ಚ ಆಗಿಬಿಡ್ತಾನೆ   ( ಈಗ ಆಗಿರೋದಾದ್ರೂ   ಏನು , ನನಗರ್ಥ ಆಗ್ತಿಲ್ಲ ) . ಮದುವೆ ಅನ್ನೋದು ಒಂದು ಕಮಿಟ್ಮೆಂಟು, ಅಂದೊಂದು ಅಗ್ರಿಮೆಂಟು  , ನಿಜವಾಗಿ ಪ್ರೀತಿಸೋ ಹೃದಯಗಳಿಗೆ ಇಂತ ಯಾವ ಬೆಸುಗೆಯು ಬೇಕಾಗಿಲ್ಲ , ಅದು ಬೇಕಾಗಿರೋದು  ಹೃದಯವಿಲ್ಲದ ಈ ಸಮಾಜಕ್ಕೆ ... ( That is blind and worst ) . ಆದ್ರೆ ಸತ್ಯ ಹೇಳ್ತೀನಿ ಕೇಳು, ನನ್ನ ಪ್ರೀತಿ ನಿನ್ನಿಂದ ಯಾವತ್ತೂ , ಏನನ್ನೂ ಬಯಸೋದಿಲ್ಲ , ಅಂಗೈ ಅಗಲ ಪ್ರೀತಿ ಹೊರತು..! ,  ಅದು ಕೂಡ ಯಾವಾಗಲು ಇದ್ದೆ ಇರುತ್ತದೆ ಅಂದುಕೊಂಡು ಉಸಿರಾಡ್ತಾ ಇರ್ತೀನಿ. ನನ್ನ ನಂಬಿಕೆ ಸದಾ ಚಾಲ್ತಿಯಲ್ಲಿರಲಿ ಹುಡುಗಿ....

                                 ಇಂದು ನನಗೆ ನನ್ನ ಬಗ್ಗೆ ಯೇ ಗುರುತು ಇಲ್ಲದ   ಹಾಗೆ ಮಾಡಿ ಬಿಟ್ಟಿದೆ ಈ ಬದುಕು! ಗೊತ್ತಿಲ್ಲದೇ ಇರೋ ಊರಿನಲ್ಲಿ, ಪುಟ್ಟದೊಂದು ಗೂಡು  ಮಾಡಿ ಕೊಂಡು , ಜೊತೆಗೆ ನಿನ್ನ ಪ್ರೀತಿಯನ್ನು ಬೆನ್ನಿಗೆ ಕಟ್ಟಿಕೊಂಡು ಬದುಕ್ತಿದ್ದೀನಿ . ಬಿಡುವು ಇಲ್ಲದ ಬದುಕು . ನಿನ್ನ  ಮದುವೆ ಶಾಸ್ತ್ರಕ್ಕೆ ಶುಭ ಹಾರೈಸಲು ಚೆಂದದೊಂದು ಉಡುಗೊರೆ ತರಲಿಕ್ಕೂ ಸಮಯ ಇಲ್ಲದಿರುವಸ್ಟು ಜಂಜಾಟ. ಇರೋದ್ರಲ್ಲೇ ಚೆಂದದೊಂದು ಗಿಪ್ಟ್  ಕಲಿಸಿದ್ದೀನಿ, ಬೇಜಾರು ಮಾಡ್ಕೋಬ್ಯಾಡ. ( ನೀ ನನ್ನೊಟ್ಟಿಗಿದ್ದಿದ್ದರೆ ನನ್ನ ಇಡೀ ಬದುಕನ್ನೇ ನಿನಗೆ ಉಡುಗೊರೆ ಯಾಗಿ ಕೊಡುತ್ತಿದ್ದೆ ) ನೆನಪಿನ ಮನೆಗೆ ಈ ಗಿಫ್ಟ್ ಗಳು ಅಲಂಕಾರ ಸಾಮಗ್ರಿಗಳು.

    ಈ ಬದುಕೇ ಹೀಗೆ  ಜೀವವೇ, ಅನಿವಾರ್ಯತೆಗಳ ಸಂತೆ. ಬದುಕಿನ ಹೊಟ್ಟೆ ಯಲ್ಲಿಯ ಅನವರತವಾದ ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕು. " ಕಾಲದಲ್ಲಿ ಯಾರೂ, ಯಾವುದು ಶಾಶ್ವತವಲ್ಲ", ಗುಲ್ಜಾರ್ ಒಂದು ಕಡೆ ಹೇಳ್ತಾನೆ ," ಬರುತ್ತಿರುವ ಕಾಲ ಹೋಗುವುದರಲ್ಲಿದೆ, ಇದರಲ್ಲಿ ಜೀವನ ಕಳೆದು ಬಿಡು, ಈ ಕ್ಷಣ ಹೋಗಿಬಿದುವುದರಲ್ಲಿದೆ ", ಎಷ್ಟು ಸತ್ಯ ಅಲ್ವಾ ?! ನಾವಿಬ್ಬರು ಕಳೆದ ಭೂತಕಾಲವನ್ನು ಮೆಟ್ಟಿ  ಭವಿಷ್ಯದ  ಕನಸುಗಳೊಂದಿಗೆ ಬೆಳೆಯಬೇಕು.   ಆಗಿ ಹೋದ ಘಟನೆಗಳಿಗೆ ಹಲುಬಿ ಏನು ಪ್ರಯೋಜನ ಅಲ್ವಾ ?! ನಿನ್ನದು ಮಗುವಿನಂತಹ ಮನಸ್ಸು , ಅದಕ್ಕೆ ನಾನು ನಿನ್ನನ್ನು " ಪ್ರಭುದ್ದ ಮಗು " ಎಂದು ಕರೆಯುತ್ತಿದ್ದುದು . ಯಾವುದೇ ಮುಖವಾಡ ಇಲ್ಲದ ನಿಷ್ಕಲ್ಮಶ ಮನಸ್ಸು ನಿನ್ನದು. ನಿನಗೆ ಅಮ್ಮಳಂತಹ ಸಂಗಾತಿ ಬೇಕು. ಆತ ಅಪ್ಪ , ಅಮ್ಮ  ,ಗೆಳೆಯ,ಇನಿಯ   ಎಲ್ಲಾ ಆಗಿರಬೇಕು. ಅನೂಪ್ ಬಗ್ಗೆ ನನಗೆ ಏನು ಗೊತ್ತಿಲ್ಲ . ಆತ ನಿನ್ನ ಭಾಳ ಸಂಗಾತಿ  ಆಗುತ್ತಿದ್ದಾನೆ ಅನ್ನೋ ಒಂದೇ ಕಾರಣಕ್ಕೆ  ನಾನು ಅವನನ್ನು ಗೌರವಿಸುತ್ತೇನೆ. ಆತ ನಿನ್ನನ್ನು ಈ ಅನಂತ್ ನ ಹಾಗೆ ನೋಡಿಕೊಂಡರೆ ಅದೇ ನನಗೆ ನೆಮ್ಮದಿ ಯ ವಿಷಯ.

                ಎಲ್ಲಾ ಒಳ್ಳೆಯದಾಗಲಿ. ಚೆನ್ನಾಗಿರು ಜೀವವೇ , ಬದುಕು ನಿನ್ನನ್ನು ಪ್ರೀತಿಸಲಿ...
    ನಿನ್ನ ನಗುವಿನ ಹಿಂದೆ ನನ್ನ ಬದುಕಿನ ಪಯಣವಿದೆ  , ನನ್ನ ಸಂತೋಷದ ಹಿಂದೆ ನಿನ್ನ ನಗುವಿದೆ. ಯಾಕಂದ್ರೆ ಅನಂದ್ಯ , ನನ್ನ ಸಂತೋಷಕ್ಕಿರುವ   ಒಂದೇ ಒಂದು ಕಾರಣ..ಹಿಂದೆ , ಇಂದು , ಎಂದೆಂದೂ.....

    " ಪ್ರೀತಿಯ ಕಡಲಿನಲಿ,
    ನಂಬಿಕೆಯ  ದೋಣಿಯಲಿ,
    ಗೆಳೆತನದ ಸಿಂಚನದಲಿ....
    ಸಾಗೋಣ ಸುಮ್ಮಾನೆ ಹೀಗೆ..............."

    ನಿನ್ನವನೇ ಆಗಿದ್ದ,
    ಸದಾ ನಿನ್ನ ಒಳಿತು ಬಯಸುವ........

    ಅನಂತ್ ..............
    .......................................................
    .........................................................................
    ...........................................................................................!!...!