ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Tuesday, December 31, 2013

ಹೊಸ ವರ್ಷದ ಶುಭಾಷಯಗಳು

ಡಿಯರೆಸ್ಟ್/ಆತ್ಮೀಯ/ಅಭಿಮಾನದ /ಅಕ್ಕರೆಯ ಗೆಳೆಯರೆ, ತಮ್ಮೆಲ್ಲರಿಗು ಹೊಸ ವರ್ಷದ ಶುಭಾಷಯಗಳು.

ತಮ್ಮೆಲ್ಲರ ಬದುಕಿನಲ್ಲಿ ಸಂತಸ,ಸಮೃದ್ದಿ,ಸೌಖ್ಯ,ನೆಮ್ಮದಿ, ಅಭಿವೃದ್ದಿ ನೆಲೆಯೂರಲಿ. 
ಹೊಸ ಕನಸುಗಳು ಅರಳಲಿ.
ಗೆಳೆತನ ಚಿಗುರೊಡೆಯಲಿ.
ಗೆಲುವು ನಿಮಗೊಲಿಯಲಿ.
ನೀವು ಇಡುವ ಪ್ರತಿ ಹೆಜ್ಜೆಯೂ ಸಾಧನೆಯಾಗಲಿ.

ಹೀಗೆ ಪ್ರತಿ ಕ್ಷಣವೂ ಹೊಸ ವರ್ಷದ ಹೊಸ ದಿನಗಳಲ್ಲಿ ನಿಮಗಾಗಿ ಪ್ರಾರ್ಥಿಸುತ್ತೇನೆ.


ಅಪಾರ ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು (ಚುಕ್ಕಿ)
ಬಿಂದುವಿನಿಂದ ಅನಂತದೆಡೆಗೆ..............

Tuesday, December 24, 2013

ಕಾಣದ ಕಡಲಿಗೆ ಹಂಬಲಿಸಿದೆ ಮನ...... ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಶ್ರದ್ದಾಂಜಲಿ


ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರ ಭಾವಗೀತೆಗಳು ಬೆಳಗ್ಗಿನಿಂದಲೂ ಮನದಲ್ಲಿ ಜಿನುಗುಡುತ್ತಿವೆ.  

ಮೈಸೂರಿನ ಮಹಾರಾಜ ಕಾಲೇಜಿನ ಅಂಗಳದಲ್ಲಿ ಸಾಹಿತ್ಯದ ಕಂಪಿದೆ. ಕನ್ನಡ ನಾಡಿನ ಹಲವಾರು ಸಾಹಿತ್ಯ ಬ್ರಹ್ಮರು ಓದಿದ, ಅಧ್ಯಾಪಕರಾಗಿದ್ದ ಕಾಲೇಜು ಅದು. ಸಾಹಿತ್ಯ-ಸಂಸ್ಕೃತಿ-ಕಲೆ ಗಳು ಮೇಳೈಸುವ ಸಕಲ ಕಲಾ ವಲ್ಲಭರು ಇರುವಂತಹ ನೆಲೆ ಅದು. ಅಂತಹ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಭಾಗ್ಯ ನನ್ನದು. ಹಾಗಾಗಿಯೆ ನನ್ನ ಭಾವಲೋಕದ ಜೊತೆಗೆ ಸಾಹಿತ್ಯದ ನಂಟು ಅವಿನಾಭವವಾಗಿದೆ.

ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಿ ನಾನು ನನ್ನ ಗೆಳೆಯ ದೇವರಾಜು ಕಪ್ಪಸೋಗೆ (ಚಾಮರಾಜನಗರ ಜಿಲ್ಲೆ ಕನ್ನಡಪ್ರಭದಲ್ಲಿ ಈಗ ವೃತ್ತಿ) ಅಭಿಲಾಷೆಯ ಮೇರೆಗೆ ಜೆ.ಎಸ್.ಎಸ್ ಆಸ್ಪತ್ರೆ ಬಳಿ ಅಗ್ರಹಾರ ದಲ್ಲಿ , ನೇ ಕ್ರಾಸ್ ನಲ್ಲಿ ೧೦*೧೦ ಅಳತೆಯ ರೂಂ ನಲ್ಲಿ ಬಾಡಿಗೆ ಯಲ್ಲಿದ್ದೆ. ಮನೆಯ ಮುಂದೆ ವಿಶಾಲವಾದ ಜಾಗ. " ಕನಸು" ಅಂತ ಗೂಡಿಗೆ ಹೆಸರಿಟ್ಟಿದ್ದೆ. ತದನಂತರ ಗೂಡಿಗೆ ರಾಘವೇಂದ್ರ (ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಗಳ ರೂವಾರಿ) ಎಂಬ ನನ್ನ ಊರಿನ ದೋಸ್ತಿ, ಹೈಸ್ಕೂಲ್ ನಲ್ಲಿ, ಪಿ.ಯು.ಸಿ ಯಲ್ಲಿ ನನ್ನ ಜೂನಿಯರ್, ಹೃದಯದ ಗೆಳೆಯ ಬಂದು ಸೇರಿಕೊಂಡ. ಅಲ್ಲಿಂದಾಚೆಗೆ ನಮ್ಮ ಪಯಣ ಭಾವಗೀತೆಗಳೋಂದಿಗೆ ಸಾಗಿತು.  ನಾವು ಬಹುತೇಕ ಇಸ್ಟಪಡುತ್ತಿದ್ದ, ಆಗಾಗ್ಗೆ ಜಿನುಗುಡುತ್ತಿದ್ದ ಹಾಡುಗಳು, ಜಿ.ಎಸ್.ಎಸ್ ರದ್ದಾಗಿತ್ತು. ಕಾಣದ ಕಡಲಿಗೆ ನಮ್ಮ ಮನ ಹಂಬಲಿಸುತ್ತಿತ್ತು. ಆದರೂ ಹಣತೆ ಹಚ್ಚಬೇಕು
ಅನಿಸುತ್ತಿತ್ತು. ಯಾರು ಕೇಳದಿದ್ದರೂ ಎದೆ ತುಂಬಿ ಹಾಡಬೇಕು ಅನಿಸುತ್ತಿತ್ತು.ಹಾಡು ಹಳೆಯದಾದರೇನು ಭಾವ ನವನವೀನ ಅನಿಸುತ್ತಿತ್ತು. ಅನಿಸುತ್ತಿದ್ದ ಭಾವಗಳಿಗೆ ಜಿ.ಎಸ್. ಎಸ್. ತಮ್ಮ ಭಾವಗೀತೆಗಳ ಮೂಲಕ ರೂಪ ಕೊಟ್ಟಿದ್ದರು. ಅವೇ ನಮ್ಮ ಏಕಾಂತದ  ಸಂಗಾತಿಗಳು. ಸಂಜೆಯ ನಡಿಗೆಯ ಸಾಥಿಗಳು. ರಾತ್ರಿ ಕನಸುಗಳಿಗೆ ಕಾಡುವ ಭಾವಗಳು. ಆಗಿನ ದಿನಗಳಲ್ಲಿ ತಂತ್ರಜ್ಣಾನ ಅಸ್ಟೊಂದು ಮುಂದುವರೆದಿರಲ್ಲಿಲ್ಲ. ವಾಲ್ಕ್ ಮನ್ ಮಾತ್ರ ನಮ್ಮ ಬಳಿಯಿತ್ತು. ಹೊಸ ಭಾವಗೀತೆಯ ಕ್ಯಾಸೆಟ್ ತಂದರೆ ದಿನ ನಮಗೆ ಸಂಭ್ರಮ ನಾನು , ರಾಘು ಸ್ಪರ್ದೆಯ ಮೇಲೆ ಹಾಡುಗಳನ್ನು ಕೇಳುತ್ತಿದ್ದೇವು. ಈಗ ಎಲ್ಲಾ ಬದಲಾಗಿದೆ. ನಾವು ದೊಡ್ದವರಾಗಿದ್ದೇವೆ. ಅವೇ ಸಾಲುಗಳು ಮನದಲ್ಲಿ ಜಿನುಗುಡುತ್ತಿವೆ. ರಾಘು ದೊಡ್ದ ಹೆಸರು ಮಾಡಿದ್ದಾನೆ. ಜಿ.ಎಸ್.ಎಸ್. ಅಗಲಿದ್ದಾರೆ. ಮನದಲ್ಲಿ ಶೂನ್ಯ ಭಾವ. ಕಾಣದ ಕಡಲು ಕಾಡುತ್ತಿದೆ.

ಅವರ ಪ್ರತಿಯೊಂದು ಕವಿತೆಗಳು ಜೀವನ ಸ್ಪೂರ್ತಿ-ಪ್ರೀತಿಯನ್ನು ಒಳಗೊಂಡಿವೆ. ಅವಲ್ಲಾ ಎಂದೂ ಹಳೆಯದಾಗದ ಹಾಡುಗಳು, ಮತ್ತೆ ಮತ್ತೆ ಕೇಳಬೇಕಿನಿಸುವ ನವನವೀನ ಭಾವಗಳು. ಅವರ ಆತ್ಮಕ್ಕೆ ನನ್ನ ಶ್ರದ್ದಾಂಜಲಿ.

ನನಗೆ ಮೈಸೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅರ್ಥಶಾಸ್ತ್ರದಲ್ಲಿ ೦೨ ಚಿನ್ನದ ಪದಕಗಳನ್ನು ನೀಡಿದೆ. ಆ ಘಟಿಕೋತ್ಸವದ ಮುಖ್ಯ ಅಥಿತಿಯಾಗಿ ಜಿ.ಎಸ್. ಎಸ್ ಬಂದಿದ್ದರು. ಅವರ ಸಮ್ಮುಖದಲ್ಲಿ ಚಿನ್ನದ ಪದಕಳನ್ನು ಪಡೆದೆ. ಇದು ನನ್ನ ಬದುಕಿನಲ್ಲಿ ಮರೆಯಲಾಗದ ಅವಿಸ್ಮರಣೀಯ ಘಟನೆ.


ಜಿ.ಎಸ್.ಎಸ್ ರವರ ಹಣತೆ ಹಚ್ಚುತ್ತೇನೆ ಎಂಬ ಕವಿತೆಯ ಸ್ಪೂರ್ತಿಯಿಂದ ನನ್ನಲ್ಲಿ ಈ ಕವಿತೆ ಮೂಡಿದೆ. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಈ ಕವಿತೆಯನ್ನು ಶ್ರದ್ದಾಂಜಲಿಯಾಗಿ ಸಮರ್ಪಿಸುತ್ತಿದ್ದೇನೆ.

ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//
ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//

ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/
ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//

Wednesday, July 10, 2013

ನನ್ನ ಮನಸ್ಸಿನ ಪುಟಗಳು

ಹಾಯ್ ಪ್ರೆಂಡ್ಸ್ , ಶರಣು ಶರಣಾರ್ಥಿ,

ಫೇಸ್ ಬುಕ್ ನ ಅತಿಯಾದ ಅವಲಂಬನೆಯಿಂದಾಗಿ ನನ್ನ ಅಂತರ್ಜಾಲ ಗೆಳೆತನ ದ ಪಯಣದ ಮೊದಲ ಮನೆ ಆರ್ಕುಟ್ ಗೆ ಬರುವುದು ಇತ್ತೀಚೆಗೆ ಬರುವುದು ಬಹಳ ವಿರಳವಾಗಿದೆ. ಆರ್ಕುಟ್ ಕೂಡ ನವೀನ ತಂತ್ರಜ್ಣಾನದ ಪ್ರಯೋಗಶೀಲತೆ ಇಂದಾಗಿ ಬಹಳ ಸೊಗಸಾಗಿದೆ. ಹಾಗಾಗಿ ಇಲ್ಲಿಗೆ ಬರುತ್ತಿರಲೆಬೇಕು ಎಂಬ ಮನಸ್ಸಾಗಿದೆ.

ಸುಮಾರು 2007 ನೆ ವರ್ಷದಿಂದ ನಾನು ಆರ್ಕುಟ್ / ಅಂತರ್ಜಾಲ ವೆಬ್ ತಾಣ/ಬ್ಲಾಗ್ ಗಳಲ್ಲಿ ಸಕ್ರೀಯ ವಾಗಿ ನನ್ನ ಭಾವ ಲಹರಿ/ಚಿಂತನೆ/ಕನಸುಗಳನ್ನು ನಿಮ್ಮೊಟ್ಟಿಗೆ ಹಂಚಿಕೊಂಡು ಬರುತ್ತಿದ್ದೇನೆ. ಇತ್ತೀಚೆಗೆ ನನ್ನ ಮನಸ್ಸಿಗೆ ಬಂದ ಯೊಚನೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ , ಅದು ಕೂಡ ನಿಮ್ಮ ಸಹಕಾರದಿಂದಲೆ ಆಗಬೇಕಾದ ಕೆಲಸ. ಏನಂತೀರಾ ?

ಅಸ್ಟು ವರ್ಶಗಳಿಂದ ನಾನು ಬರೆದ /ಕಳುಹಿಸಿದ ಸಂದೇಶ/ಸ್ಕ್ರಾಪ್ಸ್/ಹಿತನುಡಿ/ಮನಸ್ಸಿನ ಮಾತು ಗಳನ್ನೆಲ್ಲಾ ಒಂದೆಡೆ ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬುದು ನನ್ನ ಚಿಂತನೆ. ನನ್ನ ಹಲವಾರು ಬರಹ/ಸಂದೇಶ ಗಳನ್ನು ನನ್ನ ಹಲವು ಸ್ನೇಹಿತರು ತಮ್ಮ ಪ್ರೊಪೈಲ್ ನಲ್ಲಿ, ಅವರ ಹೆಸರ ಮುಂದಿನ ಕ್ಯಾಪ್ಶನ್ ನಲ್ಲಿ ಈಗಲು ಬರೆದುಕೊಂಡಿರುವುದು ಸುಳ್ಳಳ್ಳ. ಅಂತಹ ಗೆಳೆಯರಿಗೆ ನಾನು ಹೇಳ ಬಯಸುವುದು," ನನ್ನ ವಾಕ್ಯಗಳನ್ನು ನೀವು ಬಳಸಿಕೊಳ್ಳಿ. ಅದು ತಪ್ಪಲ್ಲ,ನಾನು ನಿಮ್ಮವನು, ನನ್ನ ಆಲೋಚನೆ/ಭಾವನೆಗಳ ಜೊತೆಗಾರರು ನೀವು. ಆದರೆ ಅದಕ್ಕೂ ಮುಂಚೆ ನೈತಿಕವಾಗಿ ನನ್ನ ಬಳಿ ಆ ಬಗ್ಗೆ ಹೇಳಿ, ನಾನು ಬೇಡ ಎನ್ನುವುದಿಲ್ಲ."

ಒಕೆ...ಈಗ ಹೇಳಿ ನನ್ನ ಈ ಆಲೋಚನೆಗೆ ನೀವು ಸಾಥ್ ಕೊಡುವುದಾದರೆ, ಶೀಘ್ರದಲ್ಲೆ ನನ್ನ ಮನಸ್ಸಿನ ಪುಟಗಳು ನಿಮ್ಮ ಕೈ ಸೇರಲಿದೆ.

ನಿಮ್ಮವ,

ಲಿಂಗೇಶ್ ಹುಣಸೂರು,
E-mail me@: lingeshkc9@gmail.com, lingesh_dhanya@yahoo.co.in

Wednesday, June 12, 2013

ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?

ನಾನು ಬರೆಯುತ್ತೇನೆ,
ಕವಿತೆ...../

ಕಾಡುವ ನೆನಪುಗಳ ಪೋಣಿಸಿ,
ಅನುಭವ ಕುಲುಮೆಯಲಿ ಹದಗೊಳಿಸಿ,
ಕನಸು-ಕಲ್ಪನೆಗಳಲಿ ಸಂಭ್ರಮಿಸಿ,
ಎದೆಯ ಗೂಡಿನಲಿ ಆರಾಧಿಸಿ,
ಭಾವಗಳನು ಭಟ್ಟಿ ಇಳಿಸಿ,
ಅಕ್ಷರಗಳಲಿ ಚಿತ್ರಿಸುತ್ತೇನೆ...../

ನೀವು ಕರೆಯುವಿರಿ ಇದನು
ಕವಿತೆ ಎಂದು,

ಪ್ರತಿ ಸಾಲುಗಳಲಿ ಇದೆ ಒಂದೊಂದು ಕಥೆ..../

ಬರೆದು ಹಗುರಾಗುತ್ತೇನೆ,
ಮತ್ತೆ ಸಿದ್ದಗೊಳ್ಳುತ್ತೇನೆ,
ಮತ್ತೊಂದು ಕವಿತೆಗೆ, ನೆನಪಿಗೆ, ಕಲ್ಪನೆಗೆ.../

ಆದರೂ ಉತ್ತರೆ ಸಿಕ್ಕಿಲ್ಲ,
ನಾನೇಕೆ ಬರೆಯುತ್ತೇನೆ..?

Monday, June 10, 2013

ನಾನೇಕೆ ಬರೆಯುತ್ತೇನೆ?



"ನಮಸ್ಕಾರ ಕರುನಾಡಿಗೆ

ನಾನೇಕೆ ಬರೆಯುತ್ತೇನೆ?

ಗೆಳೆಯರೊಬ್ಬರು ಕರೆ ಮಾಡಿ ಹೇಳಿದರು. ಬ್ಲಾಗ್ ನಲ್ಲಿ ನಿಮ್ಮ ಕವಿತೆ ಓದಿದೆ. ಬಹಳ ಖುಷಿಯಾಯಿತು. ಹೀಗೆ ಬರೆಯುತ್ತಿರಿ ಮತ್ತು ಪತ್ರಿಕೆ, ಮ್ಯೆಗಾಜಿನ್ ಗಳೀಗೂ ಕಳುಹಿಸಿ ಅಂತ. ನಿಮ್ಮ ಅಭಿಮಾನಕ್ಕೆ , ಅಕ್ಕರೆಗೆ ಥ್ಯಾಂಕ್ಸ್ ಅಂದೆ.

ತಕ್ಷಣ ನೆನಪಾದದ್ದು ಅಂತರ್ಜಾಲದ ಅನೇಕ ಕವಿ ಮನಸ್ಸುಗಳು. ಮೆಚ್ಚುಗೆ,ಪ್ರತಿಕ್ರಿಯೆ, ವಿಮರ್ಶಿಸುವ ಅನೇಕ ಗೆಳೆಯರು. ನಿಮ್ಮೆಲ್ಲರಿಗು ನನ್ನ ಬಿಗ್ ಥ್ಯಾಂಕ್ಸ್.

ತದನಂತರ ನನಗೆ ಕಾಡಿದ ಪ್ರಶ್ನೆ...ನಾನೇಕೆ ಬರೆಯುತ್ತೇನೆ?

ಉತ್ತರ ಹುಡುಕಿದಾಗ ಮನದಲ್ಲಿ ದಿವ್ಯ ಮೌನ...

ನಿಮ್ಮಿಂದ ಸಿಗಬಹುದೇ ನನ್ನ ಮನದ ಪ್ರಶ್ನೆಗೆ ಉತ್ತರ...

ಶುಭ ದಿನ.

ನಿಮ್ಮವ,

ಚುಕ್ಕಿ



Thursday, June 6, 2013

//ಕನಸಿನ ಗೆಳತಿ//

//ಕನಸಿನ ಗೆಳತಿ//




ಗೆಳತಿ ಹೇಗೆ ಮುದ್ದಿಸಲಿ ನಿನ್ನ,
ನೂರಾರು ಮೈಲು ದೂರದ ಪಯಣ,
ಕಛೇರಿಯಲಿ ರಜೆ ಇಲ್ಲ,
ಕೆಲಸಗಳಿಗೆ ಬಿಡುವಿಲ್ಲ,
ಕನಸೊಂದೆ ದಾರಿ ನಿನ್ನ ಸಮೀಪಿಸಲು,
ಮನದ ಕಿಟಕಿ ತೆರೆದಿಡು,
ರಾತ್ರಿಯ ಬೆಳದಿಂಗಳಲಿ,
ಕನಸ ದಾರಿ ಹಿಡಿದು ಬರುವೆ,
ಮನ ಒಂದಾಗಿರೆ,
ಒಲವಿಗಿಲ್ಲ , ಮೈಲು ದೂರದ ಚಿಂತೆ.

Monday, May 27, 2013

ಆದರೂ ಹಣತೆ ಹಚ್ಚಬೇಕು,


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//





ಎಲ್ಲಾ ಮನಸ್ಸುಗಳು ಬೆತ್ತಲಾಗಬೇಕು,
ನಟನೆಯ ಮುಖವಾಡಗಳು ಕಳಚಬೇಕು,
ನಿಜವು ಸಂಚುಗಳ ಗೆಲ್ಲಬೇಕು,
ನ್ಯಾಯ ಉಳಿಯಬೇಕು,ಮಾನವಿಯತೆ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//



ಅಜ್ಣ್ನಾನದ ಕತ್ತಲೆ ಸರಿಯಬೇಕು,
ಜಾಗೃತಿಯ ಪ್ರಜ್ಣೆ ಅರಳಬೇಕು,
ಎಲ್ಲರ ಕನಸುಗಳು ನನಸಾಗಬೇಕು,
ಸ್ವಾರ್ಥಗಳು ಅಳಿಯಬೇಕು, ಸಂಸ್ಕೃತಿ ಮೆರೆಯಬೇಕು/


ಆದರೂ ಹಣತೆ ಹಚ್ಚಬೇಕು,
ಏನಾದರೂ ಆಗಲಿ,
ಬೆಳಕ ಬೀಜ ಬಿತ್ತಬೇಕು,
ಜ್ಣಾನ ಫಸಲು ಬೆಳೆಯಬೇಕು//