- ಅಂದು 1947 ರಲ್ಲಿ, ಗಾಂಧೀಜಿ ದುಡಿದಿದ್ದರು ದೇಶಕ್ಕಾಗಿ, ಇಂದು 2010 ಎಲ್ಲರೂ ದುಡಿಯುವರು ಗಾಂಧೀಜಿ ನೋಟಿಗಾಗಿ.!
- ನೀನು ಎಷ್ಟು ಶ್ರೀಮಂತ ಎಂಬುದನ್ನು ಪರೀಕ್ಷಿಸಬೇಕಾದರೆ, ನೀನು ನಿನ್ನ ಬಳಿ ಇರುವ ಹಣವನ್ನು ಎಣಿಸಬೇಡ, ಬದಲಿಗೆ ಒಂದು ಹನಿ ಕಣ್ಣೀರು ಹೊರ ಹಾಕು ಮತ್ತು ಎಷ್ಟು ಮಂದಿ ಆ ಕಣ್ಣೀರನ್ನು ಒರೆಸಲು ತಮ್ಮ ಹಸ್ತ ಚಾಚುತ್ತವೆ ಎಂಬುದನ್ನು ಏಣಿಸು.
ಬಿಂದುವಿನಿಂದ ಅನಂತದೆಡೆಗೆ...
"ಸರಸವೇ ಜೀವನ, ವಿರಸವೆ ಮರಣ "
Monday, August 30, 2010
ಅರ್ಥಪೂರ್ಣ ಸಂದೇಶಗಳು
ನನ್ನುಸಿರೇ ......>>>>>
ಉಸಿರೇ, ನೀನೆ ನನ್ನುಸಿರು,
ಉಸಿರೇ , ನೀನೆ ಒಲವಿನ ತವರು/
ನಲಿವಿನ ನಾಯಕಿ ನೀನು,
ಗೆಲುವಿನ ದಿಕ್ಸೂಚಿ ನೀನು/
ಭಾವಯಾನದ ಜೊತೆಗಾತಿ,
ಮಧುರ ಪ್ರಣಯದ ಸಂಗಾತಿ/
ಸದಾ ಹದಿನೆಂಟರ ಹರೆಯ,
ಮುಪ್ಪೆನ್ನುವುದೇ ಇಲ್ಲ ನಮ್ಮೊಲವಿಗೆ/
ಇದು ಅಮರ, ಮಧುರ,
ಅನಂತ ಪ್ರೇಮ ಕಾವ್ಯ/
ಉಸಿರು, ಉಸಿರಿನಾಚೆಗಿನ ಬಂಧನ,
ಇದು ನನ್ನುಸಿರಿನ ಕಥನ/
ಉಸಿರೇ , ನೀನೆ ಒಲವಿನ ತವರು/
ನಲಿವಿನ ನಾಯಕಿ ನೀನು,
ಗೆಲುವಿನ ದಿಕ್ಸೂಚಿ ನೀನು/
ಭಾವಯಾನದ ಜೊತೆಗಾತಿ,
ಮಧುರ ಪ್ರಣಯದ ಸಂಗಾತಿ/
ಸದಾ ಹದಿನೆಂಟರ ಹರೆಯ,
ಮುಪ್ಪೆನ್ನುವುದೇ ಇಲ್ಲ ನಮ್ಮೊಲವಿಗೆ/
ಇದು ಅಮರ, ಮಧುರ,
ಅನಂತ ಪ್ರೇಮ ಕಾವ್ಯ/
ಉಸಿರು, ಉಸಿರಿನಾಚೆಗಿನ ಬಂಧನ,
ಇದು ನನ್ನುಸಿರಿನ ಕಥನ/
Friday, August 20, 2010
ಅಂಚೆ ಇಲಾಖೆಯಲ್ಲಿ ಕೆಲಸ
ಕರ್ನಾಟಕ ಅಂಚೆ ವಲಯ ವು ಪೋಸ್ಟಲ್ ಹಾಗು ಸಾರ್ಟಿಂಗ್ ಸಹಾಯಕರ ಹುದ್ದೆಗೆ ಅರ್ಜಿ ಗಳನ್ನು ಕರೆದಿದೆ. ಕರ್ನಾಟಕದ ಎಲ್ಲಾ ಪ್ರಧಾನ ಅಂಚೆ ಕಛೇರಿಗಳು ಹಾಗು ಮುಖ್ಯ ವಾದ ತಾಲೂಕು ಕೇಂದ್ರ ಗಳ ಉಪ ಅಂಚೆ ಕಛೇರಿಗಳಲ್ಲಿ ಆಗಸ್ಟ್ 20 ,2010 ರಂದು ಅರ್ಜಿಗಳು ದೊರೆಯುತ್ತವೆ. ಕೊನೆಯ ದಿನಾಂಕ : ಅಕ್ಟೋಬರ್ 5 ,2010.
ಹೆಚ್ಚಿನ ಮಾಹಿತಿಗೆ http ://chukkisamsthe.blogspot.com ನೋಡಿ .
ಹೆಚ್ಚಿನ ಮಾಹಿತಿಗೆ http ://chukkisamsthe.blogspot.com ನೋಡಿ .
Monday, August 16, 2010
ದಿನದ ಸಂದೇಶಗಳು
೦೧.ಅದ್ಭುತವಾದ ಗಾಳಿ , ಸುಂದರವಾದ ಸೂರ್ಯ, ಹಾಡುತ್ತಿರುವ ಪಕ್ಷಿಗಳು, ಉತ್ತಮವಾದ ದಿನ. ಇವೆಲ್ಲ ನಿಮ್ಮ ಮನೆ ಬಾಗಿಲಿನಲ್ಲಿ ಕಾಯುತ್ತಿವೆ. ನಿಮಗೆ "ಸಂತೋಷದ ಶುಭದಿನ " ಹೇಳಲು, ದಯವಿಟ್ಟು ಬಾಗಿಲು ತೆಗೆಯಿರಿ.
ದುಃಖದ ಸಂದೇಶಗಳು
01 . ಹೊರಗೆ ಅಳುವುದಕ್ಕಿಂತ ಹೃದಯದ ಒಳಗೆ ಅಳುವುದು ತುಂಬಾ ಅಪಾಯಕಾರಿ. ಕೆನ್ನೆ ಮೇಲೆ ಸುರಿಸುವ ಕಣ್ಣೀರನ್ನು ಅಳಿಸಬಹುದು. ಆದರೆ ಕೆಲವು ಗುಪ್ತವಾದ ಕಣ್ಣೀರುಗಳು ಎಂದೂ ಕೊನೆ ಗೊಳ್ಳದ ಗಾಯಗಳನ್ನು ಮಾಡುತ್ತವೆ.
02. ಕೆಲವರನ್ನ ಕಾಯುವುದು ಕಷ್ಟ , ಹಾಗೆ ಕೆಲವರನ್ನ ಮರೆಯುವುದು ಕೂಡ ಕಷ್ಟ . ಆದರೆ ತುಂಬಾ ಕಷ್ಟದ ಕೆಲಸ ಎಂದರೆ, ಆ ಕೆಲವರನ್ನು ಮರೆಯುವುದೋ ಅಥವಾ ಕಾಯುವುದೋ ಎಂಬ ನಿರ್ದಾರ ತೆಗೆದುಕೊಳ್ಳುವುದು.
02. ಕೆಲವರನ್ನ ಕಾಯುವುದು ಕಷ್ಟ , ಹಾಗೆ ಕೆಲವರನ್ನ ಮರೆಯುವುದು ಕೂಡ ಕಷ್ಟ . ಆದರೆ ತುಂಬಾ ಕಷ್ಟದ ಕೆಲಸ ಎಂದರೆ, ಆ ಕೆಲವರನ್ನು ಮರೆಯುವುದೋ ಅಥವಾ ಕಾಯುವುದೋ ಎಂಬ ನಿರ್ದಾರ ತೆಗೆದುಕೊಳ್ಳುವುದು.
ಪ್ರೀತಿ ಸಂದೇಶಗಳು
೦೧. ಬಂಗಾರದ ಬೆಲೆ ದಿನದಿಂದ ದಿನಕ್ಕೆ , ಏರುತ್ತಿದೆ ಕಣೆ. ನನಗೆ ಯಾಕೋ ನಿನ್ನದೇ ಚಿಂತೆ. ನಿನ್ನನ್ನು ಯಾರಾದರು ಅಪಹರಿಸಿಕೊಂಡು ಹೋದಾರು ಎಂದು. ಯಾಕೆಂದರೆ ನಾಳೆ ನಿನ್ನಲ್ಲಿ " ಚಿನ್ನದಂತ ಹೃದಯ " ಇದೆ.
ಸ್ನೇಹ ಸಂದೇಶಗಳು
01. ನಾವು ಕೆಲವು ವೇಳೆ ಉತ್ತಮ ಸ್ನೇಹಿತರನ್ನು ಕಳೆದುಕೊಳ್ಳುತ್ತೇವೆ. ಯಾಕೆಂದರೆ ಅವರು ನಮಗೆ ಎಷ್ಟು ವಿಶೇಷ ಎಂಬುದನ್ನು ವ್ಯಕ್ತಪಡಿಸಲು ನಾವು ವಿಫಲರಾಗಿರುತ್ತೇವೆ. ಅಂತ ಸ್ನೇಹಿತರಿಗಾಗಿ ಈ ಸಂದೇಶ, ಯಾಕೆಂದರೆ ನಾನು ಅವರನ್ನು ಯಾವಾಗಲು ಕಳೆದುಕೊಳ್ಳಲು ಬಯಸುವುದಿಲ್ಲ.
02. ಮನಸ್ಸು ಎಂಬ ಮಂದಿರದಲ್ಲಿ, ಕನಸು ಎಂಬ ಸಾಗರದಲ್ಲಿ, ನೆನಪು ಎಂಬ ಅಲೆಗಳಲಿ, ಕತ್ತಲೆಯ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ನನ್ನ ಸ್ನೇಹ.
02. ಮನಸ್ಸು ಎಂಬ ಮಂದಿರದಲ್ಲಿ, ಕನಸು ಎಂಬ ಸಾಗರದಲ್ಲಿ, ನೆನಪು ಎಂಬ ಅಲೆಗಳಲಿ, ಕತ್ತಲೆಯ ನಕ್ಷತ್ರದಂತೆ ಮಿನುಗುತಿರಲಿ ನಿಮ್ಮ ನನ್ನ ಸ್ನೇಹ.
Saturday, August 14, 2010
++++ಸ್ವಾತಂತ್ರ ದಿನ ++++
ಸುಭಾಶ್ , ಭಗತ್ , ಆಜಾದ್ ,
ಹಲವು ವೀರರ, ಛಲದಂಕಮಲ್ಲರ,
ತೋಳ ಬಲಗಳು...../
ತೋಳ ಬಲಗಳು...../
ಗಾಂಧಿ , ನೆಹರು, ತಿಲಕರು ,
ಹಲವರನೇಕರ, ಶಾಂತಿ ಧೂತರ,
ಸ್ನೇಹ ಫಲಗಳು..../
ಹಲವರನೇಕರ, ಶಾಂತಿ ಧೂತರ,
ಸ್ನೇಹ ಫಲಗಳು..../
![]() |
ನಾವೆಲ್ಲರೂ ಒಂದೇ ಭಾರತೀಯರು |
ಪ್ರತಿ ಭಾರತೀಯನ,
ದೇಶ ಭಕ್ತಿಯ ಮಿಡಿತ..../
ಸ್ವಾತಂತ್ರಕಾಗಿ ಹಂಬಲಿಸಿದ,
ಹೃದಯಗಳ ತುಡಿತ....../
ಹೋರಾಟಗಳಿಗೆ ಸಿಕ್ಕ ಜಯ,
ಚಳುವಳಿಗಳಿಗೆ ದೊರೆತ ನ್ಯಾಯ ../
ಮಾನವತೆಯ ಕಿರೀಟ ಪ್ರಾಯ,
ಸ್ವತಂತ್ರ ಭಾರತದ ಪುಣ್ಯ ದಿನವಿದು /
ಸ್ವತಂತ್ರ ಭಾರತದ ಪುಣ್ಯ ದಿನವಿದು /
ಸ್ವಾತಂತ್ರ ದಿನವಿದು,
ಜನರ ದೇಶದ ಹಿರೆಮೆ ಗರಿಯಿದು/
ಜನರ ದೇಶದ ಹಿರೆಮೆ ಗರಿಯಿದು/
ಪ್ರಜಾ ರಾಜ್ಯದ
ಚೈತನ್ಯ ಚಿಲುಮೆಯಿದು/
- ಚುಕ್ಕಿ ಹುಣಸೂರು .
**** ಸ್ವಾತಂತ್ರ ದಿನದ ಶುಭಾಶಯಗಳು ****
Sunday, August 8, 2010
ಹಾಸ್ಯ ಸಂದೇಶಗಳು

"ನಗು ಎಂದಿದೆ ಮಂಜಿನ ಬಿಂದು.........",
"ನಕ್ಕರೆ ಅದೇ ಸ್ವರ್ಗ",
"ನಗುವವರು ಹೆಚ್ಚು ವರ್ಷ ಬದುಕುತ್ತಾರೆ",
"ಎಲ್ಲವನ್ನು ಮರೆತೊಮ್ಮೆ ನಕ್ಕುಬಿಡು" ....................................
ಹೀಗೆ ನಗುವಿನ ಬಗ್ಗೆ ಹಲವರು ಬರೆದಿದ್ದಾರೆ, ಹಾಡಿದ್ದಾರೆ, ಸಲಹೆ ನೀಡಿದ್ದಾರೆ, ನಗು
ಗೋಸ್ಟಿ ಗಳನ್ನೇ ನಡೆಸಿ ಕೊಡುವವರು ಇದ್ದಾರೆ.ಡಾಕ್ಟರು "ನಗಿ" ಎಂದು ಚಿಕಿತ್ಸೆ ಸೂಚಿಸುತ್ತಾರೆ.
ದಿನನಿತ್ಯದಲ್ಲಿ ನಮ್ಮ "ಜಂಘಮ ಘಂಟೆಗೆ" ಹಲವು ಮೇಘ ಸಂದೇಶಗಳು ನಗುವನ್ನು ಹೊತ್ತು ತರುತ್ತವೆ. ಅವೆಲ್ಲವನ್ನು ಕ್ರೋಡಿಕರಿಸಿ, ಕೆಲವನ್ನು ಕನ್ನಡಕ್ಕೆ ಅನುವಾದಿಸಿ, ನಿಮ್ಮ ಮುಂದಿಟ್ಟಿದ್ದೇನೆ.
ಕೆಲವು ಹಾಸ್ಯಗಳಲ್ಲಿ "ಸರ್ದಾರ್ಜಿ" ಎಂಬ ನಾಮಧೇಯವನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಭಾರತೀಯರನ್ನು ಅವಮಾನ ಮಾಡಲು ಆಂಗ್ಲಿಗಳು ಬಳಸಿದ ತಂತ್ರ. ಅದನ್ನೇ ನಾವು ಅನುಕರಿಸುತ್ತಿರುವುದು ತರವಲ್ಲ. ನಮ್ಮ ದೇಶ ವನ್ನ ಕಾಯುತ್ತಿರುವ ಹೆಚ್ಚಿನ ಯೋಧರು ಸರ್ದಾರ್ಜಿ ಗಳು . ಹಾಸ್ಯ ಗಳಿಗೆ ಅವರ ಹೆಸರನ್ನು ಬಳಸುವುದು , ಅವರಿಗೆ ಮಾಡಿದ ಅವಮಾನ. ಇದು ತರವಲ್ಲ. ಹಾಗಾಗಿ ನಾನು ಸರ್ದಾರ್ಜಿ ಎಂಬ ಹೆಸರಿನ ಬದಲು " ಆಂಗ್ಲಿಗ " ಎಂಬ ಪದ ಬಳಸಿದ್ದೇನೆ. ಬುದ್ದಿಯಲ್ಲಿ ನಮ್ಮ ಭಾರತೀಯರಿಗಿಂತ ಬುದ್ದಿವಂತರು ಯಾರಿಹರು ಜಗದಲ್ಲಿ ?!
ಎಲ್ಲರು ನಗು ನಗುತ ಬಾಳಿ. ..ಎಲ್ಲರಿಗೂ ಒಳ್ಳೆಯದಾಗಲಿ...ಬದುಕಿನಲ್ಲಿ ನಗುವಿರಲಿ.....ನಗುವಿನೊಟ್ಟಿಗೆ ನಲಿವಿರಲಿ...

ನಿಮ್ಮ ಪ್ರೀತಿಯ
ಲಿಂಗೆಶ್ ಹುಣಸೂರು.
ನಿಮ್ಮ ಅನಿಸಿಕೆಗಳಿಗೆ ಸ್ವಾಗತ ...
01. ನೀವು ನಿದ್ರೆ ಮಾಡಲು ಹೋಗ್ತಿದ್ದೀರ ? ಅದಕ್ಕೂ ಮುಂಚೆ ನಾನು ನಿಮಗೆ ಒಂದು ತುಂಬಾ ಮಹತ್ವದ ವಿಷಯ ಹೇಳಬೇಕಿತ್ತು . ನಾನು ಕೂಡ ನಿದ್ರೆ ಮಾಡಲು ಹೋಗ್ತಿದ್ದೀನಿ . ಶುಭ ರಾತ್ರಿ.
ಹುಡುಗಿ : ಐ ಲವ್ ಯೂ .......ಅಣ್ಣ.....!!
03. ಹುಡ್ಗಿಗೆ ಗಿಫ್ಟ್ ಕೊಡು ,ಸ್ಮೈಲ್ ಕೊಡು , ಹಾರ್ಟ್ ಕೊಡು, ಪ್ರೀತಿ ಕೊಡು,ಮನಸ್ಸು ಕೊಡು, ಚಾಕ್ಲೆಟ್ ಕೊಡು, ಆದ್ರೆ ಆಗಸ್ಟ್ 24 ರಂದು ಕೈ ಕೊಡಬೇಡ . ಯಾಕಂದ್ರೆ ರಾಖಿ ಕಟ್ತಾರೆ.
04 ಯಮ: ಚಿತ್ರಗುಪ್ತ ಇವರು ಏನು ಕೆಲಸ ಮಾಡ್ತಿದ್ದರು ?
ಚಿತ್ರಗುಪ್ತ :ಮಹಾ ಪ್ರಭುಗಳೇ ಇವರು ಅಂಚೆ ಕಚೇರಿ ಯಲ್ಲಿ ಕೆಲಸ ಮಾಡುತ್ತಿದ್ದರು .
ಯಮ : ಹಾಗಿದ್ರೆ ಇವರನ್ನು ನೇರ ಸ್ವರ್ಗಕ್ಕೆ ಕಳುಹಿಸು. ಇವರು ಈಗಾಗಲೇ ನರಕ ಅನುಭವಿಸಿ ಆಗಿದೆ.
05. ಒಳ್ಳೆಯ ಜನರಿಗಾಗಿ ಪ್ರಪಂಚಾದಾದ್ಯಂತ ಹುಡುಕಬೇಡ . ಯಾಕಂದ್ರೆ ...........ನಾನು ಮನೆಯಲ್ಲಿ ಇದ್ದೇನೆ.
06. ಎಷ್ಟು ಸಲ ಹೇಳಬೇಕು. ಇಂತ ಸಂದೇಶ ಕಳುಹಿಸಬೇಡಿ ಅಂತ. ಈಗ ನೋಡಿ ನನ್ನ ಮೊಬೈಲ್ ನ ಇರುವೆ ಎತ್ತಿಕೊಂಡು ಹೋಗ್ತಿದೆ. ಯಾಕಂದ್ರೆ ನಿಮ್ಮ ಸಂದೇಶ ಅಸ್ಟು ಸ್ವೀಟ್ ಆಗಿದೆ ಕಣ್ರೀ.
07. ಆಂಗ್ಲಿಗ : ನಮ್ಮ ಆಜ್ಜ ಯುದ್ದದಲ್ಲಿ 50 ಜನರ ಕಾಲು ಕಡಿದಿದ್ದಾರೆ.
ಗುಂಡ : ತಲೆ ಯಾಕೆ ಕಡಿಯಲಿಲ್ಲ .
ಆಂಗ್ಲಿಗ : ಅದನ್ನು ಮೊದಲೇ ಯಾರೋ ಕಡಿದಿದ್ದರು.
08. "ನೀವು ಪ್ರತಿನಿತ್ಯ "CHANGE" ತರಬೇಕು". ಈ ಮಹತ್ವದ ಸಾಲನ್ನು ಹೇಳಿದವರು , ನಮ್ಮೂರ ಬಸ್ ಕಂಡಕ್ಟರ್ರು.
09 . ಕುತುಬ್ ಮಿನಾರ್ ನ ಉದ್ದ ಎಷ್ಟು ?
?
?
?
?
?
?
ನಾನ್ ಹೇಳಲ್ಲ , ಏನ್ ಮಾಡ್ತೀರ ?
10 . ಅಮೃತ ಬಳ್ಳಿ ಮತ್ತು ತುಳಸಿ ರಸ ಒಟ್ಟಿಗೆ ಮಾಡಿ , ಪ್ರತಿ ನಿತ್ಯ 3 ಸಲ ಕುಡಿದರೆ, ಕಂಜೂಸ್ ರೋಗ ದೂರ ಆಗುತ್ತೆ, ಸಂದೇಶ ಕಳುಹಿಸಬೇಕು ಅನಿಸುತ್ತದೆ. (100 % ಆಯುರ್ವೇದಿಕ್, ಅಡ್ಡ ಪರಿಣಾಮಗಳಿಲ್ಲ )
11 . ಬಾಸ್: ಯಾಕೋ ದಿನಾಲೂ ಆಫಿಸ್ ಗೆ ತಡವಾಗಿ ಬರ್ತೀಯ ?
ಗುಮಾಸ್ತ: ಅಡುಗೆ ಮಾಡಿ ಹೆಂಡತಿಗೆ ತಿಂಡಿ ಕೊಟ್ಟು ಬಂದೆ ಸರ್.
ಬಾಸ್: ನಾಚಿಕೆ ಆಗಲ್ವಾ?ನಾನು ಕೂಡ ಅಡುಗೆ ಮಾಡಿ , ಪಾತ್ರೆ ತೊಳೆದು ಬೇಗ ಬರಲ್ವ ?!!!!!
12 . 100 ಮೀಟರ್ ಓಡುವ ಸ್ಪರ್ಧೆ. ಸಿದ್ದರಾಗಿ...ಒಂದು, ಎರಡು , ಮೂರು......ಓಡಿ.
ಎಲ್ಲರೂ ಓಡಿದರು. ಆದರೆ ಆಂಗ್ಲಿಗ ಮಾತ್ರ ಅಲ್ಲೇ ನಿಂತಿದ್ದ. ಶಿಕ್ಷಕರು ಕೇಳಿದರು , ಯಾಕೆ ನೀನು ಓಡ್ಲಿಲ್ಲ ?!,ಆಂಗ್ಲಿಗ ಹೇಳಿದ , " ನಂದು ನಂಬರ್ರು ನಾಲ್ಕು ಸರ್.
13 . ಡಾಕ್ಟ್ರು: ನಿಮಗೆ ಮಂಡೆ (ಮಂಡೇ, ಸೋಮವಾರ ) ಶಸ್ತ್ರಚಿಕಿತ್ಸೆ ಮಾಡ್ತೇನೆ .
ಉಡುಪಿ ಭಟ್ರು :ಇದು ಎಂತದು ಮಾರಾಯ್ರೇ. ನನ್ನ ಹೊತ್ತಿ ನೋವಿಗೆ ನೀವು ನನ್ನ ಮಂಡೆ (ತಲೆ ) ಶಸ್ತ್ರಚಿಕಿತ್ಸೆ ಮಾಡುವುದಾ?!!
14 . ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಬ್ಬಳು ಚಿಕ್ಕ ಹುಡುಗಿ ಭಾರತದ ಭಾವುಟವನ್ನು ತನ್ನ ಗಲ್ಲದ ಮೇಲೆ ಬಿಡಿಸಿಕೊಂಡಿದ್ದಳು. ಒಬ್ಬ ಹುಡುಗ ಅವಳ ಗಲ್ಲಕ್ಕೆ ಮುತ್ತು ಕೊಟ್ಟು ಹೇಳಿದ ," ನಾನು ಭಾರತವನ್ನು ಪ್ರೀತಿಸುತ್ತೇನೆ".
15. ಎಲ್ಲಾ ಹುಡುಗಿಯರು ನಿಮ್ಮನ್ನೇ ನೋಡುತ್ತಾರೆ. ಎಲ್ಲಾ ಹುಡುಗಿಯರು ನಿಮಗೆ ಕರೆಯುತ್ತಾರೆ. ಎಲ್ಲಾ ಹುಡುಗಿಯರಲ್ಲಿ ನಿಮ್ಮದೇ ನೆನಪು. ಯಾಕಂದ್ರೆ ಇವತ್ತು " ರಕ್ಷಾ ಬಂಧನ " .
16 . ಪೋಲಿಸ್ : ಸಾರ್ ನೆನ್ನೆ ಜೈಲ್ನಲ್ಲಿ ಕೈದಿಗಳು " ರಾಮಾಯಣ" ನಾಟಕ ಮಾಡ್ತಿದ್ದರು.
ಎಸ. ಪಿ. : ಅದಕ್ಕೇನು?
ಪೋಲಿಸ್: ಹನುಮಂತ ಸಂಜೀವಿನಿ ತರೋಕೆ ಕಾಂಪೌಂಡ್ ಹಾರಿ ಹೋದವನು ಇನ್ನು ಬಂದಿಲ್ಲ.
17 .ಆಂಗ್ಲಿಗ: ನೀರಿನಿಂದ ಕರೆಂಟ್ ಯಾಕೆ ತೆಗಿತಾರೆ ?
ಮತ್ತೊಬ್ಬ ಆಂಗ್ಲಿಗ: ಮಗನೆ , ನೀರಿನಿಂದ ಕರೆಂಟ್ ತೆಗಿಯದೆ ಇದ್ದರೆ , ನೀರು ಕುಡಿವಾಗ ಶಾಕ್ ಹೊಡೆದು ಸತ್ತು ಹೋಗ್ತೀವಿ, ಅದಕ್ಕೆ!!!
18 . ಹಾರ್ಟ್ ಅಟ್ಟಾಕ್ ಅಂದ್ರೆ ಏನು ಗೊತ್ತಾ?
ಸುಂದರವಾದ ಅಪ್ಸರೆಯಂತ ಹುಡುಗಿ, ನಿಮ್ಮ ನೋಡಿ, ಪಕ್ಕ ಬಂದು " ಬ್ರದರ್ , ಈ ಲವ್ ಲೆಟರ್ ನಾ ನಿಮ್ ಪ್ರೆಂಡ್ ಗೆ ಕೊಡಿ "
ಅಂದಾಗ ಆಗುತ್ತದಲ್ಲ ಅದೇ ....!
19 . ಹಿಂದೆ ಒಳ್ಳೆಯ ಹಳೆಯ ದಿನಗಳಲ್ಲಿ, ಹುಡುಗಿಯರು ಅವರ ಅಮ್ಮನ ಹಾಗೆ ಅಡುಗೆ ಮಾಡುತ್ತಿದ್ದರು. ಆದರೆ ಈಗ..............................................................................................
.....................
....................................
.......................
.....................................................ಅವರು ಕುಡಿಯುತ್ತಾರೆ, ಅವರ ಅಪ್ಪನ ಹಾಗೆ ! ಎಂತ ಬೆಳವಣಿಗೆ....???!!!
20 . ಹುಡುಗ: ಬಾ ಮನೆ ಬಿಟ್ಟು ದೂರ ಓಡಿ ಹೋಗೋಣ..
ಹುಡುಗಿ: ಒಬ್ಬಳೇ ಓಡಿ ಬರೋಕೆ ಭಯ ಆಗ್ತಿದೆ.
ಹುಡುಗ: ಭಯ ಆದ್ರೆ, ಜೊತೇಲಿ ನಿನ್ ತಂಗಿನೂ ಕರ್ಕೊಂಡ್ ಬಾ...!!!!
ಸ್ಪೂರ್ತಿ ಸಂದೇಶಗಳು

02 . ನೀವು ಏನನ್ನಾದರೂ ಉಡುಗೊರೆ ಕೊಡಬೇಕು ಎನಿಸಿದರೆ , ನಿಮ್ಮ ಸಮಯ , ಗಮನ, ಗಮ್ಯ ವನ್ನು ಕೊಡಿ. ಪ್ರೀತಿಸುವ ಹೃದಯ ಇದಕ್ಕಿಂತ ಹೆಚ್ಚಿನದನ್ನು ಏನನ್ನೂ ಬಯಸುವುದಿಲ್ಲ .

03 . ನನಗೊಂದು ಉಡುಗೊರೆ ಬೇಕೆಂದು ಎಲ್ಲಾ ಕಡೆ ಹುಡುಕಿದೆ. ಎಲ್ಲಾ ಅಂಗಡಿಯವರು ಒಂದೇ ಉತ್ತರ: ಅದಿಲ್ಲ,ಅದಿಲ್ಲ . ಏನಂತ ಗೊತ್ತಾ? ಅದು ನಿಮ್ಮ "ಮುದ್ದಿನ ನಗು" ಗೆಳೆಯ .
04 . ಸಾಧನೆ ಎಂದರೆ ಏನು? 1988 ನೇ ವರ್ಷದಲ್ಲಿ ಸಚಿನ್ ತೆನ್ದೊಲ್ಕರ್ ಎಸ.ಎಸ.ಎಲ್ .ಸಿ. ಪರೀಕ್ಷೆಯಲ್ಲಿ ಅನುತೀರ್ಣರಾಗಿದ್ದರು. ಆದರೆ 2009 ನೇ ಇಸವಿಯಲ್ಲಿ ಮಹಾರಾಷ್ಟ್ರ ರಾಜ್ಯದ ಎಸ. ಎಸ. ಎಲ್. ಸಿ. ತರಗತಿಯ ಮೊದಲ ಪಾಠ ತೆಂಡೂಲ್ಕರ್ ಅವರನ್ನ ಕುರಿತಿದ್ದಾಗಿದೆ. ಇದು ಜೀವನ ,ಸಾಧನೆ .
05 . ಜಗತ್ತಿನ ಅತ್ಯಂತ ಮಹತ್ವದ ವಿಷಯ ಎಂದರೆ " ನಾವು ಎಲ್ಲಿ ನಿಂತಿದ್ದೇವೆ " ಎನ್ನುವುದಲ್ಲ, "ನಾವು ಯಾವ ದಿಕ್ಕಿನೆಡೆಗೆ ಚಲಿಸುತ್ತಿದ್ದಿವಿ " ಎಂಬುದು. ನಿನಂತರ ಚಲನೆಯಿರಲಿ.
06 . ಬದುಕು ಎನ್ನುವುದು , ಹಲವು ಬದಲಾವಣೆಗಳ ಸಂಗ್ರಹ. ಹಾಗಾಗಿ ಬದಲಾವಣೆಗಳನ್ನು ತಪ್ಪಿಸಿಕೊಳ್ಳಬೇಡಿ . ಪ್ರತಿ ಬದಲಾವಣೆಯನ್ನು ಸವಾಲಾಗಿ ಸ್ವೀಕರಿಸಿ. ಕೆಲವು ಯಶಸ್ಸನ್ನು ನೀಡಿದರೆ ಮತ್ತು ಕೆಲವು ಯಶಸ್ಸಿಗೆ ಅಡಿಗಲ್ಲಾಗಬಹುದು.
07 . ಒಬ್ಬ ಸಾಮಾನ್ಯ ವ್ಯಕ್ತಿ ಪುಸ್ತಕದೊಟ್ಟಿಗೆ ಇರುತ್ತಾನೆ. ಒಬ್ಬ ಅತಿ ಸಾಮಾನ್ಯ ವ್ಯಕ್ತಿ ಆ ಪುಸ್ತಕದಲ್ಲಿ ಇರುತ್ತಾನೆ. ಯಶಸ್ಸು ನಿಮ್ಮದಾಗಲಿ.

08 . ಪ್ರತಿ ಹೃದಯದಲ್ಲೂ ದುಃಖ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ಮಾತ್ರ ಬೇರೆ ಬೇರೆ ಆಗಿರುತ್ತದೆ. ಕೆಲವರು ಅದನ್ನು ಕಣ್ಣಿನಲ್ಲಿ ಅದಗಿಸಿಕೊಂಡರೆ , ಮತ್ತೆ ಕೆಲವರು ಮಂದಸ್ಮಿತ ನಗುವಿನಲ್ಲಿ ಅಡಗಿಸುತ್ತಾರೆ. ಇದೆ ಜೀವನ .
09 . ಚಾರ್ಲಿ ಚಾಪ್ಲಿನ್ ರ ಮುತ್ತಿನ ಹನಿಗಳು.
" ನೀವು ಅಸಂತೋಷ ದಲ್ಲಿದ್ದಾಗ , ಬದುಕು ನಿಮ್ಮನ್ನು ನೋಡಿ ನಗುತ್ತದೆ. ನೀವು ಖುಷಿಯಲ್ಲಿದ್ದಾಗ ಬದುಕು ನಿಮ್ಮತ್ತ ಕಿರುನಗೆ ಬೀರುತ್ತದೆ. ಆದರೆ ನೀವು ಬೇರೆಯವರ ಸಂತೋಷಕ್ಕೆ ಕಾರಣರಾದಾಗ ಬದುಕು ನಿಮಗೆ ನಮಸ್ಕರಿಸುತ್ತದೆ.

10 . ಬದುಕಿನಲ್ಲಿ ನೀವು ಗಿಳಿಯಾಗಬೆಡಿ, ಹದ್ದಾಗಿ. ಗಿಳಿ ಮಾತನಾಡುತ್ತದೆ, ಆದರೆ ಎತ್ತರಕ್ಕೆ ಹಾರುವ ಶಕ್ತಿ ಇಲ್ಲ. ಆದರೆ ಹದ್ದು ಮೌನಿ ಆದರೆ ಅದಕ್ಕೆ ನೀಲಿ ಆಗಸವನ್ನು ಮುಟ್ಟುವ ಆತ್ಮಶಕ್ತಿ ಇದೆ.
12. ಈ ದಿನ ಒಳ್ಳೆಯ ಕೆಲಸ ಮಾಡುವ ವ್ಯಕ್ತಿ ನಾಳಿನ ಸಂತೋಷವನ್ನು ಖಾತರಿಗೊಳಿಸುತ್ತಿರುತ್ತಾನೆ.
13 . ಬದುಕುವುದು ಬಹಳ ಸರಳ, ಪ್ರೀತಿಸುವುದು ಬಹಳ ಸರಳ, ನಗುವುದು, ಗೆಲ್ಲುವುದು, ಎಲ್ಲವೂ ಸರಳ , ಆದರೆ ಕಷ್ಟದ ಕೆಲಸ ಎಂದರೆ , ಸರಳ ವಾಗಿರುವುದು.
Subscribe to:
Posts (Atom)