ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, March 31, 2016

ಚುಟುಕಗಳು

ಚುಟುಕಗಳು
                                - ಲಿಂಗೇಶ್ ಹುಣಸೂರು


೦೧. ಹಾರೈಕೆ

ಹರಸುವವರು ಹಲವರಿರಲಿ ,
ಹಾರೈಕೆ ಶುಭವ ತರಲಿ ,
ಪ್ರಾರ್ಥನೆ ಫಲಿಸುವುದು ಕಾಣ
ಒಳಗಿನ ಕಣ್ತೆರೆದು ನೋಡಾ
                               

೦೨. ಬೋನಸ್ಸು

ನಮಗೆ ಕೊಡದಿದ್ದರೂ
ನೀವು ಬೋನಸ್ಸು
ಮಾಡಬೇಡಿ ಬರುವ
ಸಂಬಳದಲಿ ಮೈನಸ್ಸು

೦೩. ಹೂ ಮಾರುವ ಹುಡುಗಿ

ಮಾರು ಮಾರು
ಹೂ ಮಾರುವ
ಹುಡುಗಿಯ ಮುಡಿಯಲ್ಲಿ
ಮಲ್ಲಿಗೆ ಗಾತ್ರದ ಹೂ  ಮಾಲೆಯಿಲ್ಲ .

೪. ಕನ್ನಡಿ ಸತ್ಯ

ಅಂತರಂಗದ ಸೌಂದರ್ಯ
ಬಚ್ಚಿಟ್ಟು  , ಹೊರಗಿನ
ನಗು ಮುಖ ತೋರಿಸಿ
ಕನ್ನಡಿ ನಿಜವನ್ನು ನುಂಗಿದೆ .

೫. ಮುತ್ತು -ಮತ್ತು -ಅಪತ್ತು

ಸಾರಾಯಿಯ ಮತ್ತು
ಆರೋಗ್ಯಕ್ಕೆ ತರುವುದು ಕುತ್ತು ,
ಮಡದಿಯ ಮುತ್ತು ,
ದೂರವಾಗಿಸುವುದು ಎಲ್ಲಾ ಅಪತ್ತು.

೬. ಮಧ್ಯಮ ವರ್ಗ

ಆರಕ್ಕೇರದೆ , ಮೂರಕ್ಕಿಳಿಯದೆ
ಅರವತ್ತರ ಆಚೆಗೆ
ಕನಸು ಕಾಣೋ
ಬಹುಸಂಖ್ಯಾತರ ವರ್ಗ

೭. ಕೈ ಕೊಡು

ಕೆಲವರಿಗೆ ಸಮಯವಿಲ್ಲ
ಮನಪುರ್ತಿ ಮಾತನಾಡಲು
ಹಾಗಾಗಿ ಕೊಡುತ್ತಾರೆ
ಕೈಯನ್ನು ಬರಿ ಕುಲುಕಲು

೮. ಪ್ರೀತಿ

ಆಶಿರ್ವದಿಸಿದ
ಎರಡು ಆತ್ಮಗಳು
ಹಂಚಿಕೊಳ್ಳುವ
ಅಧ್ಬುತ ಉಡುಗೊರೆ

೯. ಬಗೆ -ನಗೆ

ಯುಗ ಯುಗ ಕಳೆದರು
ಯುಗಾದಿ  ಮಾತ್ರ ಹೊಸ ಬಗೆ ,
ತರುವುದು ಅನುದಿನ
 ಮಾಸದ ಹೊಸ ನಗೆ

೧೦. ಶಿರಸ್ತ್ರಾಣ

 ತಲೆ ಕುತ್ತಿಗೆಯ ಮೇಲಿದ್ದರೆ
ಜೀವಕ್ಕೆ ತ್ರಾಣ
ಹಾಗಿರಲು ಧರಿಸಬೇಕು ಸದಾ
ಸವಾರಿಯಲ್ಲಿ ಶಿರ ಸ್ತ್ರಾಣ.

೧೧. ವರ್ಕ್ ಲೋಡ್

ಮನೆಯಲ್ಲಿ ಗೃಹಿಣಿಯ
ಕೆಲಸದ ವರ್ಕ್ ಲೋಡು ,
ಎಂದೂ ಮುಗಿಯದ
ಧಾರಾವಾಹಿಯ ಎಪಿಸೋಡು

೧೨. ಬೆಳೆ

ರೈತ
ಬೆಳೆ (ಕೃಷಿ )ದರೆ ,
ದೇಶ
ಬೆಳೆ (ಏಳ್ಗೆ )ಯುತ್ತದೆ

೧೩. ಸಹೃದಯವಂತರು

ಉದ್ಘಾಟನೆಗೆ
ಸಾಲು  ಸಾಲು ಜನರು ,
ಮಧ್ಯ ದಲ್ಲೇ ಕಾಲ್ಕಿತ್ತರು
ಗಣ್ಯ ಮಹಾಶಯರು
ಕೊನೆಯಲ್ಲಿ  ಉಳಿದವರೇ
ಸಹೃದಯವಂತರು

                                - ಲಿಂಗೇಶ್ ಹುಣಸೂರು


*********************************

No comments: