ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, March 31, 2016

ಸಾರ್ಥಕ ಜನ ಸೇವೆಯ ಪ್ರತಿನಿಧಿ ಅಂಚೆ ಇಲಾಖೆ

ಸಾರ್ಥಕ ಜನ ಸೇವೆಯ ಪ್ರತಿನಿಧಿ ಅಂಚೆ ಇಲಾಖೆ

ಭಾರತೀಯ ಅಂಚೆ , ಭಾರತ ಸರ್ಕಾರ ನಿರ್ವಹಿಸುತ್ತಿರುವ ಅಂಚೆ ವ್ಯವಸ್ಥೆ ಯಾಗಿದ್ದು , ಇಡೀ ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಅಂಚೆ ಜಾಲ ವನ್ನು ಹೊಂದಿದೆ   ಭಾರತಲ್ಲಿ ಸಾಮಾನ್ಯವಾಗಿ "ಅಂಚೆ ಕಚೇರಿ " ಎಂದೇ ಇಲಾಖೆ ಜನರ ಬಾಯಿಯಲ್ಲಿ ಮನೆಮಾತಾಗಿದೆ . ಭಾರತದಲ್ಲಿ  1 , 54.882 ಅಂಚೆ ಕಚೇರಿಗಳಿದ್ದು  ( 31.03.2014 ಮಾಹಿತಿ ಪ್ರಕಾರ ) , ಇದರಲ್ಲಿ  1, 39,182 ( 89.86 %) ಗ್ರಾಮೀಣ ಪ್ರದೇಶಗಳಲ್ಲಿ   ನಿರ್ವಹಿಸುತ್ತಿದ್ದು ವಿಶ್ವದ ದೊಡ್ಡ ಅಂಚೆ ನೆಟ್ವರ್ಕ್ ಹೊಂದಿದೆಸ್ವಾತಂತ್ರ್ಯ ಸಮಯದಲ್ಲಿಪ್ರಾಥಮಿಕವಾಗಿ ಇವು ನಗರ ಪ್ರದೇಶಗಳಲ್ಲಿದ್ದವು, ಅದರ ಸಂಖ್ಯೆ  23.344 ಮಾತ್ರಸ್ವಾತಂತ್ರ್ಯನಂತರ  ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್  ವಿಸ್ತರಣೆಯಾಗಿದ್ದು    ಏಳು ಪಟ್ಟು ಬೆಳವಣಿಗೆಯಾಗಿದೆ  . ಸರಾಸರಿ, ಒಂದು ಪೋಸ್ಟ್ ಆಫೀಸ್ 21. 22 ಚದರ ಕಿ. ಮೀ . ಪ್ರದೇಶದಲ್ಲಿ  ಮತ್ತು 8221 ಜನಸಂಖ್ಯೆಗೆ  ಅಂಚೆ ಸೇವೆ ಒದಗಿಸುತ್ತಿದೆ . ಅದು ದೂರದ ಊರಿರಲಿ , ಊರಿಗೆ ರಸ್ತೆ ಸಂಪರ್ಕ ಇಲ್ಲದೇ ಇರಲಿ  , ಊರಿನ ನದಿಗೆ  ಸೇತುವೆಯೇ ಇರದಿರಲಿ  , ಯಾವುದೋ ಕಾಡಿನ ಒಂಟಿ ಮನೆಯೇ ಆಗಿರಲಿ , ಬೆಟ್ಟದ  ಮೇಲಿನ ಊರು ,ಪರ್ವತದಂಚಿನ ಮನೆ...  ಒಟ್ಟಿನಲ್ಲಿ ಅಂಚೆ ಸೇವೆ ಎಟುಕದ ಯಾವ ಜಾಗವೂ  ಭಾರತ ದಲ್ಲಿಲ್ಲ . ಭಾರತದ ಮೂಲೆ ಮೂಲೆ ಗಳಿಗೆ  ಯಶಸ್ವಿ , ಸಮರ್ಪಕ ಸಂವಹನ ಮಾಧ್ಯಮವಾಗಿ ಅಂಚೆ ಇಲಾಖೆ ತನ್ನ ಸೇವೆಯ ಬೇರುಗಳನ್ನು ವಿಸ್ತರಿಸಿದೆ . ಅದು ೨೫ ಪೈಸೆಯ ಅಂಚೆ ಪತ್ರವಾದರೂ  ಸರಿಯೇ  ಸರಿಯಾದ ಜಾಗಕ್ಕೆ ತಲುಪಿಸುವ ಕೆಲಸವನ್ನು ನೌಕರರು ನಿರ್ವಹಿಸುತ್ತಿದ್ದಾರೆ .   15,500 ಅಡಿ (4,700 ಮೀಎತ್ತರದಲ್ಲೂ    ಕೂಡ  ಇಲಾಖೆ ತನ್ನ ಕಾರ್ಯ ನಿರ್ವಹಿಸುತ್ತಿದೆ . ವಿಶ್ವದ ಅತಿ ಎತ್ತರದ ಪೋಸ್ಟ್ ಆಫೀಸ್  ಇದಾಗಿದ್ದು , ಹಿಮಾಚಲ ಪ್ರದೇಶದಲ್ಲಿನ ಹಿಕ್ಕಿಂ (Hikkim) ನಲ್ಲಿದೆ . ಇದು ಅಂಚೆ ಇಲಾಖೆಯ ಸಾರ್ಥಕ ಸೇವೆಗೆ ಹಿಡಿದ ಹಿಡಿದ ಕನ್ನಡಿ ಮತ್ತು ಭಾರತದ ಹೆಮ್ಮೆ . ಮೂಲಕ ಭಾರತೀಯ ಭಾರತೀಯ ಅಂಚೆಯ ಸರಕು ಮತ್ತು ಸೇವೆಗಳು ಗ್ರಾಹಕರ ಪ್ರಥಮ ಆಯ್ಕೆ ಯಾಗಬೇಕು ಎನ್ನುವ ಇಲಾಖೆಯ ದೃಷ್ಟಿಕೋನ ಕ್ಕೆ ಪೂರಕವಾಗಿ ಅಂಚೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ .

ಭಾರತವನ್ನು ಇಲಾಖೆ ಆಡಳಿತ , ಸೇವೆ ದೃಷ್ಟಿ ಯಿಂದ  22 ಅಂಚೆ ವಲಯಗಳನ್ನಾಗಿ (ಸರ್ಕಲ್ ) ವಿಭಾಗಿಸಿದ್ದು , ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿ ಪಿ ಎಂ ಜಿ) ಪ್ರತಿ ವಲಯಕ್ಕೆ ಮುಖ್ಯಸ್ಥ ರಾಗಿರುತ್ತಾರೆ . ಪ್ರತಿ ವಲಯವನ್ನು ಕೆಲವಾರು ಕ್ಷೇತ್ರಗಳಾಗಿ (ರೀಜನ್)ವಿಭಾಗಿಸಲಾಗಿದ್ದು , ಅಂಚೆ ಸೇವೆ  ನಿರ್ದೇಶಕರು (ಡಿ.ಫೀ.ಎಸ ) ಇದರ ಮುಖ್ಯಸ್ಥರಾಗಿರುತ್ತಾರೆ . ಪ್ರತಿ ಕ್ಷೇತ್ರ ಗಳ ಕೆಳಗೆ ಹಲವಾರು ವಿಭಾಗಗಳಿದ್ದು,( ಡಿವಿಷನ್ವಿಭಾಗೀಯ ಅಂಚೆ ಹಿರಿಯ ಅಧೀಕ್ಷಕರು / ಅಧೀಕ್ಷಕರು ಇದರ ಮುಖ್ಯಸ್ಥರು . ವಿಭಾಗಗಳು  ಉಪ ಅಂಚೆ ಅಧೀಕ್ಷಕರು  ಮತ್ತು ಅಂಚೆ  ನಿರೀಕ್ಷಕ    ನೇತೃತ್ವದ ಉಪವಿಭಾಗಗಳನ್ನು  ಒಳಗೊಂಡಿವೆ . ಇತರ ಕ್ರಿಯಾತ್ಮಕ ಘಟಕಗಳು   (ಉದಾಹರಣೆಗೆ ವೃತ್ತ ಸ್ಟಾಂಪ್ ಡಿಪೊಗಳು (CSD ), ಅಂಚೆ ಸ್ಟೋರ್  ಡಿಪೊಗಳು (PSD)  ಮತ್ತು ಮೇಲ್ ಮೋಟಾರ್ ಸೇವೆ(ಏಂ. ಎಂ . ಎಸ ) , ರೈಲ್ವೆ ಮೇಲ್ ಸೇವೆ (ಆರ್ .ಏಂ . ಎಸ ) , ಮಹಾ ಪ್ರಧಾನ ಅಂಚೆ ಕಚೇರಿ (ಜಿ .ಫ್ .ಓ ) ಸಹ  ವಲಯಗಳು ಮತ್ತು ವಿಭಾಗ ಪ್ರದೇಶಗಳಲ್ಲಿ ಇರಬಹುದು.   22 ವಲಯಗಳಿಗೆ ಜೊತೆಗೆ, ಭಾರತದ ಸಶಸ್ತ್ರ ಪಡೆಗಳಿಗೆ ಅಂಚೆ ಸೇವೆಗಳನ್ನು ಒದಗಿಸಲು "ಬೇಸ್ ವೃತ್ತಇದೆ  . ಬೇಸ್ ವೃತ್ತಕ್ಕೆ  ಡೈರೆಕ್ಟರ್ ಜನರಲ್, ಸೇನಾ ಅಂಚೆ ಸೇವೆ ಮುಖ್ಯಸ್ಥರಾಗಿರುತ್ತಾರೆ.

ಭಾರತೀಯ ಅಂಚೆ ಇಂದು   ಜಾಗತೀಕರಣದ ಹಿನ್ನಲೆಯಲ್ಲಿ   ಸ್ಪರ್ಧೆ ಮತ್ತು ತಾಂತ್ರಿಕತೆ  ಬೆಳವಣಿಗೆ ದೃಷ್ಟಿಯಿಂದ   ರೂಪಾಂತರದ  ಪ್ರಕ್ರಿಯೆಯಲ್ಲಿದೆ. ಇಲಾಖೆಯ  ಚಟುವಟಿಕೆಗಳಲ್ಲಿ ಬದಲಾವಣೆ ನಿರ್ವಹಣೆ ಸವಾಲು ಬಹಳ ಮುಖ್ಯವಾಗಿದೆ  . ನಿಟ್ಟಿನಲ್ಲೂ ಅಂಚೆ ಇಲಾಖೆ ಹೊಸ ಪ್ರಗತಿ ಯತ್ತ ಸಾಗುತ್ತಿದೆಹಾಗಾಗಿ ಅಂಚೆ ಇಲಾಖೆಯ ಸರಕು  ಮತ್ತು ಸೇವೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ , ಗ್ರಾಹಕ ಸ್ನೇಹಿಯಾಗಿ ರೂಪುಗೊಳ್ಳುತ್ತಿವೆ . ಅಂಚೆ ಇಲಾಖೆ ಹಲವಾರು ರೀತಿಯ   ಸರಕು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ . ಪ್ರಧಾನವಾಗಿ ಅವುಗಳನ್ನು ಕೆಳಕಂಡಂತೆ ವರ್ಗೆಕರಿಸಬಹುದು .
. ಅಂಚೆ ಸೇವೆಗಳು
. ಪ್ರೀಮಿಯಂ ಸರಕುಗಳು
. ಹಣಕಾಸು ಸೇವೆಗಳು
. ವಿಮೆ ಸೇವೆಗಳು
. ರಿಟೇಲ್ ಸೇವೆಗಳು

ಅಂಚೆ ಸೇವೆಗಳಲ್ಲಿ ಪ್ರಮುಖವಾಗಿ ವಿವಿದ ರೀತಿಯ ಪತ್ರ ರವಾನೆ , ಪೋಸ್ಟ್ ಕಾರ್ಡ್ , ಮೇಘದೂತ ಪತ್ರಗಳು , ನೊಂದಾಯಿಸಿದ ಅಂಚೆ ಪತ್ರಗಳು , ಪಾರ್ಸೆಲ್ ಗಳು  , ವಿಮೆ ಮಾಡುವ ಪತ್ರಗಳು , ಮೌಲ್ಯ ಪಾವತಿಸುವ ಪತ್ರಗಳು , ಮುದ್ರಿಸಿದ ಪುಸ್ತಕಗಳು , ಅಂದರ ಅಂಚೆ ಸಾಮಗ್ರಿಗಳು , ನೊಂದಾಯಿಸಿದ ಪತ್ರಿಕೆಗಳು ಇವೆ ಮುಂತಾದ ಪ್ರಾಥಮಿಕ ಸೇವೆಗಳನ್ನು ಅಂಚೆ ಇಲಾಖೆ ಒದಗಿಸುತ್ತಿದೆ. ಇವುಗಳೇ  ಅಂಚೆ ಇಲಾಖೆ ಒದಗಿಸುವ ಮೂಲಸೇವೆಗಳು .
ಪ್ರೀಮಿಯಂ ಸರಕುಗಳು ,ಪ್ರಾಥಮಿಕ ಸೇವೆಗಳ  ಮುಂದುವರೆದ ಭಾಗವಾಗಿದ್ದು  ಅಧುನಿಕ ಗ್ರಾಹಕರನ್ನು  ಬೆಲೆ , ಸಮಯ, ಸುರಕ್ಷತೆ ದೃಷ್ಟಿ ಯಿಂದ   ಆಕರ್ಷಿಸುವ ಉತ್ತಮ ಸರಕುಗಳಾಗಿವೆ . ಇದರಲ್ಲಿ ಸ್ಪೀಡ್ ಪೋಸ್ಟ್, ಎಕ್ಸ್ ಪ್ರೆಸ್ ಪಾರ್ಸೆಲ್ , ಬಿಸಿನೆಸ್ ಪೋಸ್ಟ್, ಮೀಡಿಯ ಪೋಸ್ಟ್ , ಗ್ರೀಟಿಂಗ್ ಪೋಸ್ಟ್ , ಲಾಜಿ ಸ್ಟಿಕ್ ಪೋಸ್ಟ್  ಗಳು ಗ್ರಾಹಕರಿಗೆ   ಅನುಕೂಲಕಾರಿಯಾದ ಸಂವಹನ ಸರಕುಗಳಾಗಿವೆ . ಮೂಲಕ ಅಧುನಿಕ ಸ್ಪರ್ಧಾ ಜಗತ್ತಿನಲ್ಲಿ ಅಂಚೆ ಇಲಾಕೆಯ ಸ್ಪರ್ಧೆ ಸೇವೆಯೂಟ್ಟಿಗೆ ಲಾಭ ಗಳಿಕೆಗೂ ಸಹಕಾರಿಯಾಗಿದೆ .
ಹಣಕಾಸು ಸೇವೆಗಳು  ಮುಖ್ಯವಾಗಿ ಬ್ಯಾಂಕಿಂಗ್ ವಲಯ ವನ್ನು ಒಳಗೊಂಡಿದ್ದು  ಹಲವು ರೀತಿಯ  ಉಳಿತಾಯ ಯೋಜನೆ ಗಳ ಖಾತೆ ಗಳು   ಹಾಗು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಒದಗಿಸುವ    ಹಣಕಾಸು ಯೋಜನೆ ಗಳನ್ನು , ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಜನಸಾಮಾನ್ಯರಿಗೆ ಬಹಳ   ಪಾರದರ್ಶಕ ವಾಗಿ  ತಲುಪಿಸುತ್ತಿದೆಪ್ರತಿ ತಿಂಗಳು ನಿರ್ದಿಷ್ಟ ಹಣ ಪಡೆಯುವ   ಮಾಸಿಕ ಉಳಿತಾಯ ಯೋಜನೆ( ಎಂ ಅಯಿ . ಎಸ )  , ಪ್ರತಿ ತಿಂಗಳು ಹಣ ಕಟ್ಟುವ ಆವರ್ಥಿತ ಟೇವಣಿ (ಆರ್ ಡಿ ), ಹಿರಿಯ ನಾಗರೀಕರ ಉಳಿತಾಯ ಯೋಜನೆ ( ಎಸ ಸಿ ಎಸ ಎಸ ), ರಾಷ್ಟ್ರೀಯ ಉಳಿತಾಯ ಪತ್ರಗಳು (ಏನ್ ಎಸ ಸಿ ), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿ ಪಿ ಎಫ್ ), ನಿಗದಿತ ಸಮಯದ ಹೂಡಿಕೆ ಖಾತೆ (ಟಿ ಡಿ ) ಗಳು ಸಾಮಾನ್ಯ ನಾಗರೀಕರು  ಹಣ ತೊಡಗಿಸಬಹುದಾದ ಉಳಿತಾಯ ಯೋಜನೆಗಳಾಗಿವೆ.  ಪಿಪಿಫ್ ಖಾತೆ , ಏನ್ ಎಸ ಸಿ  ,5 ವರ್ಷದ ಟಿಡಿ ಖಾತೆಗಳಿಗೆ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿದ್ದು  ಸಂಬಳಗಾರರು , ದೊಡ್ಡ  ಹೂಡಿಕೆದಾರರಿಗೆ ಅನುಕೂಲಕರವಾಗಿದೆ . ಅಂಚೆ  ಬ್ಯಾಂಕಿಂಗ್ ವ್ಯವಸ್ಥೆ   ಗಣಕೀಕರಣ ಗೊಂಡಿದ್ದು  , ಆನ್ ಲೈನ್  ಬ್ಯಾಂಕಿಂಗ್ ವ್ಯವಸ್ಥೆ   ಕಲ್ಪಿಸಲಾಗಿದೆ , ಜೊತೆಗೆ ಎ. ಟಿ . ಎಂ  ಸೌಲಭ್ಯಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ದಲ್ಲಿ  ಗ್ರಾಹಕರನ್ನು ಸುಲಭವಾಗಿ ತಲುಪುವ ಅತ್ಯುತ್ತಮ ಆಯ್ಕೆ ಭಾರತೀಯ ಅಂಚೆಯಾಗುವುದರಲ್ಲಿ ಯಾವುದೇ  ಸಂಶಯವಿಲ್ಲ .  ಇಸ್ಟೇ  ಅಲ್ಲದೆ ಹಣವನ್ನು ವರ್ಗಾಯಿಸುವ   ಮನಿ   ಆರ್ಡರ್(MO) , ಇನ್ಸ್ಟಂಟ್ ಮನಿ ಆರ್ಡರ್(IMO ) , ಅಂತರಾಷ್ಟ್ರೀಯ  ಹಣ ವರ್ಗಾವಣೆ (IMT )  , ಮನಿಗ್ರ್ಯಾಂ  , ಮೊಬೈಲ್ ಮೂಲಕ ಹಣ ವರ್ಗಾವಣೆ (MMT ) , ಎಲೆಕ್ಟ್ರಾನಿಕ್ ಕ್ಲಿಯರೆನ್ಸ್  ಸೇವೆ (ECS), ಯೋಜನೆಗಳ ಮೂಲಕ ಸುರಕ್ಷಿತ ಹಾಗು ಶೀಘ್ರ  ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ . ಇದರ ಜೊತೆಗೆ ಫಾರೆಕ್ಸ್ ಸೇವೆಗಳು , ಮ್ಯುಚುಯಲ್ ಫಂಡ್  ಗಳ ವ್ಯಾಪಾರ ಸೇವೆಯನ್ನು ಒದಗಿಸಲಾಗುತ್ತಿದೆ
ಅಂಚೆ ಜೀವ ವಿಮೆ (ಪಿ ಎಲ್ ಯಿ )ಬಹಳ ಮುಖ್ಯವಾದ ಹಣಕಾಸು ಸೇವೆಯಾಗಿದ್ದು , 1 ಫೆಬ್ರವರಿ 1884 ಪರಿಚಯಿಸಲಾಗಿದ್ದು , ಮೊದಲಿಗೆ ಅಂಚೆ ನೌಕರರು ಮತ್ತು ಟೆಲಿಗ್ರಾಪ್ ನೌಕರರಿಗೆ ಈ ವಿಮಾ ಸೌಲಭ್ಯ ನೀಡಿದ್ದು , ತದ ನಂತರ ರಾಜ್ಯ , ಕೇಂದ್ರ ಸರ್ಕಾರ ನೌಕರರು , ಅಧೀನ ಸಂಸ್ಥೆಗಳ ನೌಕರರನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಯಿತು . ಅತ್ಯಂತ ಕಡಿಮೆ ಪ್ರೀಮಿಯಂ ಅನುಕೂಲ ಹೊಂದಿದ್ದು , ಹೆಚ್ಚಿನ ಬೋನಸ್ ಈ ವಿಮೆಗಳಲ್ಲಿ ಸಿಗುತ್ತದೆ . ಇತ್ತೀಚಿಗೆ ಇದನ್ನು ಕೂಡ ಗಣಕೀಕರಣ ಗೊಳಿಸಿದ್ದು ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಇ ಸಿ ಎಸ ಮೂಲಕ  ಪ್ರೀಮಿಯಂ  ಪಾವತಿಸಬಹುದು . ಅಲ್ಲದೆ ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ . ಸರ್ಕಾರಿ ನೌಕರರಿಗೆ ಭವಿಷ್ಯದ ರಕ್ಷಣೆಗೆ , ಹೂಡಿಕೆಗೆ  ಸೂಕ್ತವಾದ ಯೋಜನೆಯಾಗಿದೆ .
ಹಲವು ರೀತಿಯ ಜೀವ ವಿಮೆ ಗಳಿವೆ .
೧. ನಿಗದಿತ ವಯೋಮಿತಿ ವಿಮೆ (ಸಂತೋಷ ಎಂಡೋಮೆಂಟ್ ಅಶೋರ್ಡ್ )
೨. ಸುರಕ್ಷಾ (ಅಜೀವ ವಿಮಾ ಪಾಲಿಸಿ )
೩. ಸುವಿಧ (ಪರಿವರ್ತನೀಯ ಅಜೀವ ವಿಮೆ )
೪. ಸುಮಂಗಲ್ (ನಿಗದಿತ ಅವಧಿಯ ನಿರೀಕ್ಷಿತ ವಯೋಮಿತಿ ವಿಮೆ )
೫. ಯುಗಲ್ ಸುರಕ್ಷಾ (ಜೋಡಿ ಜೀವ ವಿಮೆ , ದಂಪತಿಗಳಿಗೆ )

ಗ್ರಾಮೀಣ ಅಂಚೆ ಜೀವ ವಿಮಾ (ಆರ್ ಪಿ ಎಲ್ ಯಿ) ಮಲ್ಹೋತ್ರಾ ಸಮಿತಿ ಶಿಪಾರಸ್ಸಿನ ಮೇರೆಗೆ ಗ್ರಾಮೀಣ ಸಾರ್ವಜನಿಕರಿಗೆ ವಿಮಾ ಸೇವೆ ಒದಗಿಸಲು ಮತ್ತು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದುರ್ಬಲ ವರ್ಗಗಳ ಮತ್ತು ಮಹಿಳೆಯರ ಸಬಲೀಕರಣ  ಸಹಾಯಾರ್ಥವಾಗಿ  ಜಾರಿಗೆ ಬಂದಿತು . ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಹಣದ ಭದ್ರತೆ , ತೊಡಗಿಸಿದ ಹಣಕ್ಕೆ ಹೆಚ್ಚು ಪ್ರತಿಫಲ , ಕಡಿಮೆ ವಿಮಾ ಕಂತು , ತ್ವರಿತ ಕಾರ್ಯ ನಿರ್ವಹಣೆ , ಉತ್ಕ್ರಷ್ಟ ಸೇವೆ  ಇವೇ ಮುಂತಾದ ಗುಣಗಳಿಂದಾಗಿ ಜೀವ ವಿಮೆ ಕ್ಷೇತ್ರದಲ್ಲಿ ಅಂಚೆ ಇಲಾಖೆ ತನ್ನ ಕ್ಷೇತ್ರ ಹೊಣೆಗಾರಿಕೆ ಯನ್ನು ವಿಸ್ತರಿಸಿಕೊಳ್ಳುತ್ತಿದೆ .
  ಪ್ರಧಾನ ಮಂತ್ರಿಯವರ ಜನ ಸುರಕ್ಷಾ ಯೋಜನೆಗಳ  ವಿತರಣೆಗೆ ಅಂಚೆ ಇಲಾಖೆ ಸೂಕ್ತವಾದ ಮಾಧ್ಯಮ ವಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಗಳನ್ನು ಅಂಚೆ ಇಲಾಖೆ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ .
ರೀಟೇಲ್ ಸೇವೆಗಳ ಅಡಿಯಲ್ಲಿ ಬಿಲ್ ಮೇಲ್ , ಡೈರೆಕ್ಟ್ ಪೋಸ್ಟ್ , ಈ - ಪೇಮೆಂಟ್ , ರೀಟೇಲ್ ಪೋಸ್ಟ್ ಸೇವೆಗಳನ್ನು   ದೊಡ್ಡ ದೊಡ್ಡ ಕಂಪನಿಗಳು  ಅಥವಾ ಹೆಚ್ಚಿನ ಸಂಖ್ಯೆಯ ಪತ್ರ , ಪಾರ್ಸೆಲ್ ರವಾನೆ ಮಾಡುವವರಿಗೆ ಒದಗಿಸಲಾಗುತ್ತದೆ .  ಸರಕು ತಲುಪಿದಾಗ ಹಣ ಪಾವತಿಸುವ ವ್ಯವಸ್ಥೆ , ಕ್ಯಾಶ್ ಆನ್ ಡಿಲಿವರಿ  ವ್ಯವಸ್ಥೆ ಹೆಚ್ಚು ಪ್ರಸಿದ್ದಿಯಾಗಿದ್ದು , ಗ್ರಾಹಕ ಸ್ನೇಹಿ ಯಾಗಿ  ಇಲಾಖೆಗೆ ಹೆಚ್ಚಿನ ಲಾಭ ತರುವ ಸೇವೆ ಯಾಗಿದೆ . ಈ ರೀಟೇಲ್ ಸೇವೆ ಗಳಲ್ಲಿ ಗ್ರಾಹಕರಿಗೆ ಅವರು ಪಾವತಿಸುವ ಹಣಕ್ಕೆ ವಿನಾಯಿತಿ ಯನ್ನು ಸಹ ಕೊಡಲಾಗುತ್ತದೆ . ಆಧುನಿಕ ಜಗತ್ತಿನ ಅಂಚೆ ವಹಿವಾಟಿಗೆ ಈ ಸೇವೆಗಳು ಉಪಯುಕ್ತವಾಗಿವೆ .

ಒಟ್ಟಿನಲ್ಲಿ ಯಾವುದೇ ದೃಷ್ಟಿ ಕೋನದಿಂದ ನೋಡಿದರೂ "ಅಂಚೆ ಸೇವೆ " ಜನರ ಸೇವೆಯಾಗಿ ಪಾರದರ್ಶಕ ವಾಗಿ ಕಾರ್ಯನಿರ್ವಹಿಸುತ್ತಾ ತನ್ನ ಮಹತ್ವವನ್ನು , ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಮುನ್ನಡೆಯುತ್ತಿದೆ . ಜಾಗತೀಕರಣ  ಖಾಸಗೀಕರಣ ಗಳ ಅಬ್ಬರದಿಂದಾಗಿ ಹೊಸ ಹೊಸ ತಂತ್ರಜ್ಞಾನ ವನ್ನು ಅಳವಡಿಸಿಕೊಂಡು , ನವೀನ ಕೌಶಲ್ಯಗಳ ತರಭೇತಿ ಪಡೆದು , ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ .  ಬಿಸಿಲಿರಲಿ , ಮಳೆಯಿರಲಿ, ಚಳಿಯಿರಲಿ , ಯಾವುದಕ್ಕೂ ಹೆದರದೆ , ಯಾವುದೇ ಅಸೆ - ಅಮೀಶಗಳಿಗೆ ಒಡ್ಡಿಕೊಳ್ಳದೆ , ಪ್ರಾಮಾಣಿಕ ವಾಗಿ ಇಲ್ಲಿನ ನೌಕರರು  ಮಾಡುತ್ತಿರುವ  ಕೆಲಸ , ಸಂಬಳಕ್ಕೆ ದುಡಿಯುವ ಕಾಯಕವಾಗಿದ್ದರೂ ಕೂಡ , ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ .  ಕಾಲ  ಬದಲಾದಂತೆ ಹೊಸ ಹೊಸ ಸವಾಲುಗಳನ್ನು  ಎದುರಿಸುತ್ತಾ , ಜನರ ಭಾವನೆಗಳಿಗೆ ಸ್ಪಂದಿಸುತ್ತಾ ಉತ್ತಮ ಸೇವೆ ನೀಡುತ್ತಿರುವ ಅಂಚೆ ಸೇವೆ ನಿಜಕ್ಕೂ ಸಾರ್ಥಕವಾದ ಜನ ಸೇವೆ . ಇಂತಹ ಇಲಾಖೆಗೆ , ಸರ್ಕಾರಿ ಸೇವೆ ಗೆ ನಮ್ಮದೊಂದು ಧನ್ಯತಾಭಾವದ ನಮಸ್ಕಾರವಿರಲಿ .

ಲಿಂಗೇಶ್ ಹುಣಸೂರ್
ಹವ್ಯಾಸಿ ಲೇಖಕ /ಕವಿ , ಕನ್ನಡ ಬ್ಲಾಗರ್ .
9964438393

Lingeshkc9@gmail.com

No comments: