ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, March 31, 2016

ಸಾರ್ಥಕ ಜನ ಸೇವೆಯ ಪ್ರತಿನಿಧಿ ಅಂಚೆ ಇಲಾಖೆ

ಸಾರ್ಥಕ ಜನ ಸೇವೆಯ ಪ್ರತಿನಿಧಿ ಅಂಚೆ ಇಲಾಖೆ

ಭಾರತೀಯ ಅಂಚೆ , ಭಾರತ ಸರ್ಕಾರ ನಿರ್ವಹಿಸುತ್ತಿರುವ ಅಂಚೆ ವ್ಯವಸ್ಥೆ ಯಾಗಿದ್ದು , ಇಡೀ ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಅಂಚೆ ಜಾಲ ವನ್ನು ಹೊಂದಿದೆ   ಭಾರತಲ್ಲಿ ಸಾಮಾನ್ಯವಾಗಿ "ಅಂಚೆ ಕಚೇರಿ " ಎಂದೇ ಇಲಾಖೆ ಜನರ ಬಾಯಿಯಲ್ಲಿ ಮನೆಮಾತಾಗಿದೆ . ಭಾರತದಲ್ಲಿ  1 , 54.882 ಅಂಚೆ ಕಚೇರಿಗಳಿದ್ದು  ( 31.03.2014 ಮಾಹಿತಿ ಪ್ರಕಾರ ) , ಇದರಲ್ಲಿ  1, 39,182 ( 89.86 %) ಗ್ರಾಮೀಣ ಪ್ರದೇಶಗಳಲ್ಲಿ   ನಿರ್ವಹಿಸುತ್ತಿದ್ದು ವಿಶ್ವದ ದೊಡ್ಡ ಅಂಚೆ ನೆಟ್ವರ್ಕ್ ಹೊಂದಿದೆಸ್ವಾತಂತ್ರ್ಯ ಸಮಯದಲ್ಲಿಪ್ರಾಥಮಿಕವಾಗಿ ಇವು ನಗರ ಪ್ರದೇಶಗಳಲ್ಲಿದ್ದವು, ಅದರ ಸಂಖ್ಯೆ  23.344 ಮಾತ್ರಸ್ವಾತಂತ್ರ್ಯನಂತರ  ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್  ವಿಸ್ತರಣೆಯಾಗಿದ್ದು    ಏಳು ಪಟ್ಟು ಬೆಳವಣಿಗೆಯಾಗಿದೆ  . ಸರಾಸರಿ, ಒಂದು ಪೋಸ್ಟ್ ಆಫೀಸ್ 21. 22 ಚದರ ಕಿ. ಮೀ . ಪ್ರದೇಶದಲ್ಲಿ  ಮತ್ತು 8221 ಜನಸಂಖ್ಯೆಗೆ  ಅಂಚೆ ಸೇವೆ ಒದಗಿಸುತ್ತಿದೆ . ಅದು ದೂರದ ಊರಿರಲಿ , ಊರಿಗೆ ರಸ್ತೆ ಸಂಪರ್ಕ ಇಲ್ಲದೇ ಇರಲಿ  , ಊರಿನ ನದಿಗೆ  ಸೇತುವೆಯೇ ಇರದಿರಲಿ  , ಯಾವುದೋ ಕಾಡಿನ ಒಂಟಿ ಮನೆಯೇ ಆಗಿರಲಿ , ಬೆಟ್ಟದ  ಮೇಲಿನ ಊರು ,ಪರ್ವತದಂಚಿನ ಮನೆ...  ಒಟ್ಟಿನಲ್ಲಿ ಅಂಚೆ ಸೇವೆ ಎಟುಕದ ಯಾವ ಜಾಗವೂ  ಭಾರತ ದಲ್ಲಿಲ್ಲ . ಭಾರತದ ಮೂಲೆ ಮೂಲೆ ಗಳಿಗೆ  ಯಶಸ್ವಿ , ಸಮರ್ಪಕ ಸಂವಹನ ಮಾಧ್ಯಮವಾಗಿ ಅಂಚೆ ಇಲಾಖೆ ತನ್ನ ಸೇವೆಯ ಬೇರುಗಳನ್ನು ವಿಸ್ತರಿಸಿದೆ . ಅದು ೨೫ ಪೈಸೆಯ ಅಂಚೆ ಪತ್ರವಾದರೂ  ಸರಿಯೇ  ಸರಿಯಾದ ಜಾಗಕ್ಕೆ ತಲುಪಿಸುವ ಕೆಲಸವನ್ನು ನೌಕರರು ನಿರ್ವಹಿಸುತ್ತಿದ್ದಾರೆ .   15,500 ಅಡಿ (4,700 ಮೀಎತ್ತರದಲ್ಲೂ    ಕೂಡ  ಇಲಾಖೆ ತನ್ನ ಕಾರ್ಯ ನಿರ್ವಹಿಸುತ್ತಿದೆ . ವಿಶ್ವದ ಅತಿ ಎತ್ತರದ ಪೋಸ್ಟ್ ಆಫೀಸ್  ಇದಾಗಿದ್ದು , ಹಿಮಾಚಲ ಪ್ರದೇಶದಲ್ಲಿನ ಹಿಕ್ಕಿಂ (Hikkim) ನಲ್ಲಿದೆ . ಇದು ಅಂಚೆ ಇಲಾಖೆಯ ಸಾರ್ಥಕ ಸೇವೆಗೆ ಹಿಡಿದ ಹಿಡಿದ ಕನ್ನಡಿ ಮತ್ತು ಭಾರತದ ಹೆಮ್ಮೆ . ಮೂಲಕ ಭಾರತೀಯ ಭಾರತೀಯ ಅಂಚೆಯ ಸರಕು ಮತ್ತು ಸೇವೆಗಳು ಗ್ರಾಹಕರ ಪ್ರಥಮ ಆಯ್ಕೆ ಯಾಗಬೇಕು ಎನ್ನುವ ಇಲಾಖೆಯ ದೃಷ್ಟಿಕೋನ ಕ್ಕೆ ಪೂರಕವಾಗಿ ಅಂಚೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ .

ಭಾರತವನ್ನು ಇಲಾಖೆ ಆಡಳಿತ , ಸೇವೆ ದೃಷ್ಟಿ ಯಿಂದ  22 ಅಂಚೆ ವಲಯಗಳನ್ನಾಗಿ (ಸರ್ಕಲ್ ) ವಿಭಾಗಿಸಿದ್ದು , ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಸಿ ಪಿ ಎಂ ಜಿ) ಪ್ರತಿ ವಲಯಕ್ಕೆ ಮುಖ್ಯಸ್ಥ ರಾಗಿರುತ್ತಾರೆ . ಪ್ರತಿ ವಲಯವನ್ನು ಕೆಲವಾರು ಕ್ಷೇತ್ರಗಳಾಗಿ (ರೀಜನ್)ವಿಭಾಗಿಸಲಾಗಿದ್ದು , ಅಂಚೆ ಸೇವೆ  ನಿರ್ದೇಶಕರು (ಡಿ.ಫೀ.ಎಸ ) ಇದರ ಮುಖ್ಯಸ್ಥರಾಗಿರುತ್ತಾರೆ . ಪ್ರತಿ ಕ್ಷೇತ್ರ ಗಳ ಕೆಳಗೆ ಹಲವಾರು ವಿಭಾಗಗಳಿದ್ದು,( ಡಿವಿಷನ್ವಿಭಾಗೀಯ ಅಂಚೆ ಹಿರಿಯ ಅಧೀಕ್ಷಕರು / ಅಧೀಕ್ಷಕರು ಇದರ ಮುಖ್ಯಸ್ಥರು . ವಿಭಾಗಗಳು  ಉಪ ಅಂಚೆ ಅಧೀಕ್ಷಕರು  ಮತ್ತು ಅಂಚೆ  ನಿರೀಕ್ಷಕ    ನೇತೃತ್ವದ ಉಪವಿಭಾಗಗಳನ್ನು  ಒಳಗೊಂಡಿವೆ . ಇತರ ಕ್ರಿಯಾತ್ಮಕ ಘಟಕಗಳು   (ಉದಾಹರಣೆಗೆ ವೃತ್ತ ಸ್ಟಾಂಪ್ ಡಿಪೊಗಳು (CSD ), ಅಂಚೆ ಸ್ಟೋರ್  ಡಿಪೊಗಳು (PSD)  ಮತ್ತು ಮೇಲ್ ಮೋಟಾರ್ ಸೇವೆ(ಏಂ. ಎಂ . ಎಸ ) , ರೈಲ್ವೆ ಮೇಲ್ ಸೇವೆ (ಆರ್ .ಏಂ . ಎಸ ) , ಮಹಾ ಪ್ರಧಾನ ಅಂಚೆ ಕಚೇರಿ (ಜಿ .ಫ್ .ಓ ) ಸಹ  ವಲಯಗಳು ಮತ್ತು ವಿಭಾಗ ಪ್ರದೇಶಗಳಲ್ಲಿ ಇರಬಹುದು.   22 ವಲಯಗಳಿಗೆ ಜೊತೆಗೆ, ಭಾರತದ ಸಶಸ್ತ್ರ ಪಡೆಗಳಿಗೆ ಅಂಚೆ ಸೇವೆಗಳನ್ನು ಒದಗಿಸಲು "ಬೇಸ್ ವೃತ್ತಇದೆ  . ಬೇಸ್ ವೃತ್ತಕ್ಕೆ  ಡೈರೆಕ್ಟರ್ ಜನರಲ್, ಸೇನಾ ಅಂಚೆ ಸೇವೆ ಮುಖ್ಯಸ್ಥರಾಗಿರುತ್ತಾರೆ.

ಭಾರತೀಯ ಅಂಚೆ ಇಂದು   ಜಾಗತೀಕರಣದ ಹಿನ್ನಲೆಯಲ್ಲಿ   ಸ್ಪರ್ಧೆ ಮತ್ತು ತಾಂತ್ರಿಕತೆ  ಬೆಳವಣಿಗೆ ದೃಷ್ಟಿಯಿಂದ   ರೂಪಾಂತರದ  ಪ್ರಕ್ರಿಯೆಯಲ್ಲಿದೆ. ಇಲಾಖೆಯ  ಚಟುವಟಿಕೆಗಳಲ್ಲಿ ಬದಲಾವಣೆ ನಿರ್ವಹಣೆ ಸವಾಲು ಬಹಳ ಮುಖ್ಯವಾಗಿದೆ  . ನಿಟ್ಟಿನಲ್ಲೂ ಅಂಚೆ ಇಲಾಖೆ ಹೊಸ ಪ್ರಗತಿ ಯತ್ತ ಸಾಗುತ್ತಿದೆಹಾಗಾಗಿ ಅಂಚೆ ಇಲಾಖೆಯ ಸರಕು  ಮತ್ತು ಸೇವೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ , ಗ್ರಾಹಕ ಸ್ನೇಹಿಯಾಗಿ ರೂಪುಗೊಳ್ಳುತ್ತಿವೆ . ಅಂಚೆ ಇಲಾಖೆ ಹಲವಾರು ರೀತಿಯ   ಸರಕು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ . ಪ್ರಧಾನವಾಗಿ ಅವುಗಳನ್ನು ಕೆಳಕಂಡಂತೆ ವರ್ಗೆಕರಿಸಬಹುದು .
. ಅಂಚೆ ಸೇವೆಗಳು
. ಪ್ರೀಮಿಯಂ ಸರಕುಗಳು
. ಹಣಕಾಸು ಸೇವೆಗಳು
. ವಿಮೆ ಸೇವೆಗಳು
. ರಿಟೇಲ್ ಸೇವೆಗಳು

ಅಂಚೆ ಸೇವೆಗಳಲ್ಲಿ ಪ್ರಮುಖವಾಗಿ ವಿವಿದ ರೀತಿಯ ಪತ್ರ ರವಾನೆ , ಪೋಸ್ಟ್ ಕಾರ್ಡ್ , ಮೇಘದೂತ ಪತ್ರಗಳು , ನೊಂದಾಯಿಸಿದ ಅಂಚೆ ಪತ್ರಗಳು , ಪಾರ್ಸೆಲ್ ಗಳು  , ವಿಮೆ ಮಾಡುವ ಪತ್ರಗಳು , ಮೌಲ್ಯ ಪಾವತಿಸುವ ಪತ್ರಗಳು , ಮುದ್ರಿಸಿದ ಪುಸ್ತಕಗಳು , ಅಂದರ ಅಂಚೆ ಸಾಮಗ್ರಿಗಳು , ನೊಂದಾಯಿಸಿದ ಪತ್ರಿಕೆಗಳು ಇವೆ ಮುಂತಾದ ಪ್ರಾಥಮಿಕ ಸೇವೆಗಳನ್ನು ಅಂಚೆ ಇಲಾಖೆ ಒದಗಿಸುತ್ತಿದೆ. ಇವುಗಳೇ  ಅಂಚೆ ಇಲಾಖೆ ಒದಗಿಸುವ ಮೂಲಸೇವೆಗಳು .
ಪ್ರೀಮಿಯಂ ಸರಕುಗಳು ,ಪ್ರಾಥಮಿಕ ಸೇವೆಗಳ  ಮುಂದುವರೆದ ಭಾಗವಾಗಿದ್ದು  ಅಧುನಿಕ ಗ್ರಾಹಕರನ್ನು  ಬೆಲೆ , ಸಮಯ, ಸುರಕ್ಷತೆ ದೃಷ್ಟಿ ಯಿಂದ   ಆಕರ್ಷಿಸುವ ಉತ್ತಮ ಸರಕುಗಳಾಗಿವೆ . ಇದರಲ್ಲಿ ಸ್ಪೀಡ್ ಪೋಸ್ಟ್, ಎಕ್ಸ್ ಪ್ರೆಸ್ ಪಾರ್ಸೆಲ್ , ಬಿಸಿನೆಸ್ ಪೋಸ್ಟ್, ಮೀಡಿಯ ಪೋಸ್ಟ್ , ಗ್ರೀಟಿಂಗ್ ಪೋಸ್ಟ್ , ಲಾಜಿ ಸ್ಟಿಕ್ ಪೋಸ್ಟ್  ಗಳು ಗ್ರಾಹಕರಿಗೆ   ಅನುಕೂಲಕಾರಿಯಾದ ಸಂವಹನ ಸರಕುಗಳಾಗಿವೆ . ಮೂಲಕ ಅಧುನಿಕ ಸ್ಪರ್ಧಾ ಜಗತ್ತಿನಲ್ಲಿ ಅಂಚೆ ಇಲಾಕೆಯ ಸ್ಪರ್ಧೆ ಸೇವೆಯೂಟ್ಟಿಗೆ ಲಾಭ ಗಳಿಕೆಗೂ ಸಹಕಾರಿಯಾಗಿದೆ .
ಹಣಕಾಸು ಸೇವೆಗಳು  ಮುಖ್ಯವಾಗಿ ಬ್ಯಾಂಕಿಂಗ್ ವಲಯ ವನ್ನು ಒಳಗೊಂಡಿದ್ದು  ಹಲವು ರೀತಿಯ  ಉಳಿತಾಯ ಯೋಜನೆ ಗಳ ಖಾತೆ ಗಳು   ಹಾಗು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಒದಗಿಸುವ    ಹಣಕಾಸು ಯೋಜನೆ ಗಳನ್ನು , ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಜನಸಾಮಾನ್ಯರಿಗೆ ಬಹಳ   ಪಾರದರ್ಶಕ ವಾಗಿ  ತಲುಪಿಸುತ್ತಿದೆಪ್ರತಿ ತಿಂಗಳು ನಿರ್ದಿಷ್ಟ ಹಣ ಪಡೆಯುವ   ಮಾಸಿಕ ಉಳಿತಾಯ ಯೋಜನೆ( ಎಂ ಅಯಿ . ಎಸ )  , ಪ್ರತಿ ತಿಂಗಳು ಹಣ ಕಟ್ಟುವ ಆವರ್ಥಿತ ಟೇವಣಿ (ಆರ್ ಡಿ ), ಹಿರಿಯ ನಾಗರೀಕರ ಉಳಿತಾಯ ಯೋಜನೆ ( ಎಸ ಸಿ ಎಸ ಎಸ ), ರಾಷ್ಟ್ರೀಯ ಉಳಿತಾಯ ಪತ್ರಗಳು (ಏನ್ ಎಸ ಸಿ ), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿ ಪಿ ಎಫ್ ), ನಿಗದಿತ ಸಮಯದ ಹೂಡಿಕೆ ಖಾತೆ (ಟಿ ಡಿ ) ಗಳು ಸಾಮಾನ್ಯ ನಾಗರೀಕರು  ಹಣ ತೊಡಗಿಸಬಹುದಾದ ಉಳಿತಾಯ ಯೋಜನೆಗಳಾಗಿವೆ.  ಪಿಪಿಫ್ ಖಾತೆ , ಏನ್ ಎಸ ಸಿ  ,5 ವರ್ಷದ ಟಿಡಿ ಖಾತೆಗಳಿಗೆ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿದ್ದು  ಸಂಬಳಗಾರರು , ದೊಡ್ಡ  ಹೂಡಿಕೆದಾರರಿಗೆ ಅನುಕೂಲಕರವಾಗಿದೆ . ಅಂಚೆ  ಬ್ಯಾಂಕಿಂಗ್ ವ್ಯವಸ್ಥೆ   ಗಣಕೀಕರಣ ಗೊಂಡಿದ್ದು  , ಆನ್ ಲೈನ್  ಬ್ಯಾಂಕಿಂಗ್ ವ್ಯವಸ್ಥೆ   ಕಲ್ಪಿಸಲಾಗಿದೆ , ಜೊತೆಗೆ ಎ. ಟಿ . ಎಂ  ಸೌಲಭ್ಯಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ದಲ್ಲಿ  ಗ್ರಾಹಕರನ್ನು ಸುಲಭವಾಗಿ ತಲುಪುವ ಅತ್ಯುತ್ತಮ ಆಯ್ಕೆ ಭಾರತೀಯ ಅಂಚೆಯಾಗುವುದರಲ್ಲಿ ಯಾವುದೇ  ಸಂಶಯವಿಲ್ಲ .  ಇಸ್ಟೇ  ಅಲ್ಲದೆ ಹಣವನ್ನು ವರ್ಗಾಯಿಸುವ   ಮನಿ   ಆರ್ಡರ್(MO) , ಇನ್ಸ್ಟಂಟ್ ಮನಿ ಆರ್ಡರ್(IMO ) , ಅಂತರಾಷ್ಟ್ರೀಯ  ಹಣ ವರ್ಗಾವಣೆ (IMT )  , ಮನಿಗ್ರ್ಯಾಂ  , ಮೊಬೈಲ್ ಮೂಲಕ ಹಣ ವರ್ಗಾವಣೆ (MMT ) , ಎಲೆಕ್ಟ್ರಾನಿಕ್ ಕ್ಲಿಯರೆನ್ಸ್  ಸೇವೆ (ECS), ಯೋಜನೆಗಳ ಮೂಲಕ ಸುರಕ್ಷಿತ ಹಾಗು ಶೀಘ್ರ  ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ . ಇದರ ಜೊತೆಗೆ ಫಾರೆಕ್ಸ್ ಸೇವೆಗಳು , ಮ್ಯುಚುಯಲ್ ಫಂಡ್  ಗಳ ವ್ಯಾಪಾರ ಸೇವೆಯನ್ನು ಒದಗಿಸಲಾಗುತ್ತಿದೆ
ಅಂಚೆ ಜೀವ ವಿಮೆ (ಪಿ ಎಲ್ ಯಿ )ಬಹಳ ಮುಖ್ಯವಾದ ಹಣಕಾಸು ಸೇವೆಯಾಗಿದ್ದು , 1 ಫೆಬ್ರವರಿ 1884 ಪರಿಚಯಿಸಲಾಗಿದ್ದು , ಮೊದಲಿಗೆ ಅಂಚೆ ನೌಕರರು ಮತ್ತು ಟೆಲಿಗ್ರಾಪ್ ನೌಕರರಿಗೆ ಈ ವಿಮಾ ಸೌಲಭ್ಯ ನೀಡಿದ್ದು , ತದ ನಂತರ ರಾಜ್ಯ , ಕೇಂದ್ರ ಸರ್ಕಾರ ನೌಕರರು , ಅಧೀನ ಸಂಸ್ಥೆಗಳ ನೌಕರರನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಯಿತು . ಅತ್ಯಂತ ಕಡಿಮೆ ಪ್ರೀಮಿಯಂ ಅನುಕೂಲ ಹೊಂದಿದ್ದು , ಹೆಚ್ಚಿನ ಬೋನಸ್ ಈ ವಿಮೆಗಳಲ್ಲಿ ಸಿಗುತ್ತದೆ . ಇತ್ತೀಚಿಗೆ ಇದನ್ನು ಕೂಡ ಗಣಕೀಕರಣ ಗೊಳಿಸಿದ್ದು ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಇ ಸಿ ಎಸ ಮೂಲಕ  ಪ್ರೀಮಿಯಂ  ಪಾವತಿಸಬಹುದು . ಅಲ್ಲದೆ ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ . ಸರ್ಕಾರಿ ನೌಕರರಿಗೆ ಭವಿಷ್ಯದ ರಕ್ಷಣೆಗೆ , ಹೂಡಿಕೆಗೆ  ಸೂಕ್ತವಾದ ಯೋಜನೆಯಾಗಿದೆ .
ಹಲವು ರೀತಿಯ ಜೀವ ವಿಮೆ ಗಳಿವೆ .
೧. ನಿಗದಿತ ವಯೋಮಿತಿ ವಿಮೆ (ಸಂತೋಷ ಎಂಡೋಮೆಂಟ್ ಅಶೋರ್ಡ್ )
೨. ಸುರಕ್ಷಾ (ಅಜೀವ ವಿಮಾ ಪಾಲಿಸಿ )
೩. ಸುವಿಧ (ಪರಿವರ್ತನೀಯ ಅಜೀವ ವಿಮೆ )
೪. ಸುಮಂಗಲ್ (ನಿಗದಿತ ಅವಧಿಯ ನಿರೀಕ್ಷಿತ ವಯೋಮಿತಿ ವಿಮೆ )
೫. ಯುಗಲ್ ಸುರಕ್ಷಾ (ಜೋಡಿ ಜೀವ ವಿಮೆ , ದಂಪತಿಗಳಿಗೆ )

ಗ್ರಾಮೀಣ ಅಂಚೆ ಜೀವ ವಿಮಾ (ಆರ್ ಪಿ ಎಲ್ ಯಿ) ಮಲ್ಹೋತ್ರಾ ಸಮಿತಿ ಶಿಪಾರಸ್ಸಿನ ಮೇರೆಗೆ ಗ್ರಾಮೀಣ ಸಾರ್ವಜನಿಕರಿಗೆ ವಿಮಾ ಸೇವೆ ಒದಗಿಸಲು ಮತ್ತು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದುರ್ಬಲ ವರ್ಗಗಳ ಮತ್ತು ಮಹಿಳೆಯರ ಸಬಲೀಕರಣ  ಸಹಾಯಾರ್ಥವಾಗಿ  ಜಾರಿಗೆ ಬಂದಿತು . ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಹಣದ ಭದ್ರತೆ , ತೊಡಗಿಸಿದ ಹಣಕ್ಕೆ ಹೆಚ್ಚು ಪ್ರತಿಫಲ , ಕಡಿಮೆ ವಿಮಾ ಕಂತು , ತ್ವರಿತ ಕಾರ್ಯ ನಿರ್ವಹಣೆ , ಉತ್ಕ್ರಷ್ಟ ಸೇವೆ  ಇವೇ ಮುಂತಾದ ಗುಣಗಳಿಂದಾಗಿ ಜೀವ ವಿಮೆ ಕ್ಷೇತ್ರದಲ್ಲಿ ಅಂಚೆ ಇಲಾಖೆ ತನ್ನ ಕ್ಷೇತ್ರ ಹೊಣೆಗಾರಿಕೆ ಯನ್ನು ವಿಸ್ತರಿಸಿಕೊಳ್ಳುತ್ತಿದೆ .
  ಪ್ರಧಾನ ಮಂತ್ರಿಯವರ ಜನ ಸುರಕ್ಷಾ ಯೋಜನೆಗಳ  ವಿತರಣೆಗೆ ಅಂಚೆ ಇಲಾಖೆ ಸೂಕ್ತವಾದ ಮಾಧ್ಯಮ ವಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (PMSBY) ಗಳನ್ನು ಅಂಚೆ ಇಲಾಖೆ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ .
ರೀಟೇಲ್ ಸೇವೆಗಳ ಅಡಿಯಲ್ಲಿ ಬಿಲ್ ಮೇಲ್ , ಡೈರೆಕ್ಟ್ ಪೋಸ್ಟ್ , ಈ - ಪೇಮೆಂಟ್ , ರೀಟೇಲ್ ಪೋಸ್ಟ್ ಸೇವೆಗಳನ್ನು   ದೊಡ್ಡ ದೊಡ್ಡ ಕಂಪನಿಗಳು  ಅಥವಾ ಹೆಚ್ಚಿನ ಸಂಖ್ಯೆಯ ಪತ್ರ , ಪಾರ್ಸೆಲ್ ರವಾನೆ ಮಾಡುವವರಿಗೆ ಒದಗಿಸಲಾಗುತ್ತದೆ .  ಸರಕು ತಲುಪಿದಾಗ ಹಣ ಪಾವತಿಸುವ ವ್ಯವಸ್ಥೆ , ಕ್ಯಾಶ್ ಆನ್ ಡಿಲಿವರಿ  ವ್ಯವಸ್ಥೆ ಹೆಚ್ಚು ಪ್ರಸಿದ್ದಿಯಾಗಿದ್ದು , ಗ್ರಾಹಕ ಸ್ನೇಹಿ ಯಾಗಿ  ಇಲಾಖೆಗೆ ಹೆಚ್ಚಿನ ಲಾಭ ತರುವ ಸೇವೆ ಯಾಗಿದೆ . ಈ ರೀಟೇಲ್ ಸೇವೆ ಗಳಲ್ಲಿ ಗ್ರಾಹಕರಿಗೆ ಅವರು ಪಾವತಿಸುವ ಹಣಕ್ಕೆ ವಿನಾಯಿತಿ ಯನ್ನು ಸಹ ಕೊಡಲಾಗುತ್ತದೆ . ಆಧುನಿಕ ಜಗತ್ತಿನ ಅಂಚೆ ವಹಿವಾಟಿಗೆ ಈ ಸೇವೆಗಳು ಉಪಯುಕ್ತವಾಗಿವೆ .

ಒಟ್ಟಿನಲ್ಲಿ ಯಾವುದೇ ದೃಷ್ಟಿ ಕೋನದಿಂದ ನೋಡಿದರೂ "ಅಂಚೆ ಸೇವೆ " ಜನರ ಸೇವೆಯಾಗಿ ಪಾರದರ್ಶಕ ವಾಗಿ ಕಾರ್ಯನಿರ್ವಹಿಸುತ್ತಾ ತನ್ನ ಮಹತ್ವವನ್ನು , ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಮುನ್ನಡೆಯುತ್ತಿದೆ . ಜಾಗತೀಕರಣ  ಖಾಸಗೀಕರಣ ಗಳ ಅಬ್ಬರದಿಂದಾಗಿ ಹೊಸ ಹೊಸ ತಂತ್ರಜ್ಞಾನ ವನ್ನು ಅಳವಡಿಸಿಕೊಂಡು , ನವೀನ ಕೌಶಲ್ಯಗಳ ತರಭೇತಿ ಪಡೆದು , ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ .  ಬಿಸಿಲಿರಲಿ , ಮಳೆಯಿರಲಿ, ಚಳಿಯಿರಲಿ , ಯಾವುದಕ್ಕೂ ಹೆದರದೆ , ಯಾವುದೇ ಅಸೆ - ಅಮೀಶಗಳಿಗೆ ಒಡ್ಡಿಕೊಳ್ಳದೆ , ಪ್ರಾಮಾಣಿಕ ವಾಗಿ ಇಲ್ಲಿನ ನೌಕರರು  ಮಾಡುತ್ತಿರುವ  ಕೆಲಸ , ಸಂಬಳಕ್ಕೆ ದುಡಿಯುವ ಕಾಯಕವಾಗಿದ್ದರೂ ಕೂಡ , ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ .  ಕಾಲ  ಬದಲಾದಂತೆ ಹೊಸ ಹೊಸ ಸವಾಲುಗಳನ್ನು  ಎದುರಿಸುತ್ತಾ , ಜನರ ಭಾವನೆಗಳಿಗೆ ಸ್ಪಂದಿಸುತ್ತಾ ಉತ್ತಮ ಸೇವೆ ನೀಡುತ್ತಿರುವ ಅಂಚೆ ಸೇವೆ ನಿಜಕ್ಕೂ ಸಾರ್ಥಕವಾದ ಜನ ಸೇವೆ . ಇಂತಹ ಇಲಾಖೆಗೆ , ಸರ್ಕಾರಿ ಸೇವೆ ಗೆ ನಮ್ಮದೊಂದು ಧನ್ಯತಾಭಾವದ ನಮಸ್ಕಾರವಿರಲಿ .

ಲಿಂಗೇಶ್ ಹುಣಸೂರ್
ಹವ್ಯಾಸಿ ಲೇಖಕ /ಕವಿ , ಕನ್ನಡ ಬ್ಲಾಗರ್ .
9964438393

Lingeshkc9@gmail.com

ಚುಟುಕಗಳು

ಚುಟುಕಗಳು
                                - ಲಿಂಗೇಶ್ ಹುಣಸೂರು


೦೧. ಹಾರೈಕೆ

ಹರಸುವವರು ಹಲವರಿರಲಿ ,
ಹಾರೈಕೆ ಶುಭವ ತರಲಿ ,
ಪ್ರಾರ್ಥನೆ ಫಲಿಸುವುದು ಕಾಣ
ಒಳಗಿನ ಕಣ್ತೆರೆದು ನೋಡಾ
                               

೦೨. ಬೋನಸ್ಸು

ನಮಗೆ ಕೊಡದಿದ್ದರೂ
ನೀವು ಬೋನಸ್ಸು
ಮಾಡಬೇಡಿ ಬರುವ
ಸಂಬಳದಲಿ ಮೈನಸ್ಸು

೦೩. ಹೂ ಮಾರುವ ಹುಡುಗಿ

ಮಾರು ಮಾರು
ಹೂ ಮಾರುವ
ಹುಡುಗಿಯ ಮುಡಿಯಲ್ಲಿ
ಮಲ್ಲಿಗೆ ಗಾತ್ರದ ಹೂ  ಮಾಲೆಯಿಲ್ಲ .

೪. ಕನ್ನಡಿ ಸತ್ಯ

ಅಂತರಂಗದ ಸೌಂದರ್ಯ
ಬಚ್ಚಿಟ್ಟು  , ಹೊರಗಿನ
ನಗು ಮುಖ ತೋರಿಸಿ
ಕನ್ನಡಿ ನಿಜವನ್ನು ನುಂಗಿದೆ .

೫. ಮುತ್ತು -ಮತ್ತು -ಅಪತ್ತು

ಸಾರಾಯಿಯ ಮತ್ತು
ಆರೋಗ್ಯಕ್ಕೆ ತರುವುದು ಕುತ್ತು ,
ಮಡದಿಯ ಮುತ್ತು ,
ದೂರವಾಗಿಸುವುದು ಎಲ್ಲಾ ಅಪತ್ತು.

೬. ಮಧ್ಯಮ ವರ್ಗ

ಆರಕ್ಕೇರದೆ , ಮೂರಕ್ಕಿಳಿಯದೆ
ಅರವತ್ತರ ಆಚೆಗೆ
ಕನಸು ಕಾಣೋ
ಬಹುಸಂಖ್ಯಾತರ ವರ್ಗ

೭. ಕೈ ಕೊಡು

ಕೆಲವರಿಗೆ ಸಮಯವಿಲ್ಲ
ಮನಪುರ್ತಿ ಮಾತನಾಡಲು
ಹಾಗಾಗಿ ಕೊಡುತ್ತಾರೆ
ಕೈಯನ್ನು ಬರಿ ಕುಲುಕಲು

೮. ಪ್ರೀತಿ

ಆಶಿರ್ವದಿಸಿದ
ಎರಡು ಆತ್ಮಗಳು
ಹಂಚಿಕೊಳ್ಳುವ
ಅಧ್ಬುತ ಉಡುಗೊರೆ

೯. ಬಗೆ -ನಗೆ

ಯುಗ ಯುಗ ಕಳೆದರು
ಯುಗಾದಿ  ಮಾತ್ರ ಹೊಸ ಬಗೆ ,
ತರುವುದು ಅನುದಿನ
 ಮಾಸದ ಹೊಸ ನಗೆ

೧೦. ಶಿರಸ್ತ್ರಾಣ

 ತಲೆ ಕುತ್ತಿಗೆಯ ಮೇಲಿದ್ದರೆ
ಜೀವಕ್ಕೆ ತ್ರಾಣ
ಹಾಗಿರಲು ಧರಿಸಬೇಕು ಸದಾ
ಸವಾರಿಯಲ್ಲಿ ಶಿರ ಸ್ತ್ರಾಣ.

೧೧. ವರ್ಕ್ ಲೋಡ್

ಮನೆಯಲ್ಲಿ ಗೃಹಿಣಿಯ
ಕೆಲಸದ ವರ್ಕ್ ಲೋಡು ,
ಎಂದೂ ಮುಗಿಯದ
ಧಾರಾವಾಹಿಯ ಎಪಿಸೋಡು

೧೨. ಬೆಳೆ

ರೈತ
ಬೆಳೆ (ಕೃಷಿ )ದರೆ ,
ದೇಶ
ಬೆಳೆ (ಏಳ್ಗೆ )ಯುತ್ತದೆ

೧೩. ಸಹೃದಯವಂತರು

ಉದ್ಘಾಟನೆಗೆ
ಸಾಲು  ಸಾಲು ಜನರು ,
ಮಧ್ಯ ದಲ್ಲೇ ಕಾಲ್ಕಿತ್ತರು
ಗಣ್ಯ ಮಹಾಶಯರು
ಕೊನೆಯಲ್ಲಿ  ಉಳಿದವರೇ
ಸಹೃದಯವಂತರು

                                - ಲಿಂಗೇಶ್ ಹುಣಸೂರು


*********************************

Thursday, January 22, 2015

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಈ ಕಡೆ ಕೇಳಿ.......

ಪ್ರೀತಿಸ್ತಿದ್ದೀರಾ, ಒದ್ನಿಮಿಷ ಕಡೆ ಕೇಳಿ.......

ಪ್ರಿಯರೇ, ವರ್ಷದ ಪ್ರೀತಿದಿನ ಅಕ್ಕರೆಯಿಂದ ಅಪ್ಪಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಪ್ರೀತಿ ಅನ್ನೋದು ವ್ಯಾಖ್ಯಾನಗಳಿಗೆ ನಿಲುಕದ ವಿಶಿಸ್ಟ ಭಾವನೆ. ಅದು ಎಸ್ಟು ವಿಶಿಸ್ಟವೋ ಅಸ್ಟೇ ವಿಚಿತ್ರ. ಅದು ವಿಭಿನ್ನ ಮುಖಗಳನ್ನು ವಿಭಿನ್ನ ಆಯಾಮಗಳನ್ನು ಒಳಗೊಂಡಿದೆ. ಇವೆಲ್ಲದರ ನಡುವೆ ನಮ್ಮ ನಿಜವಾದ ಮುಖವನ್ನು/ವ್ಯಕ್ತಿತ್ವವನ್ನು ಮರೆಯಬಾರದು. ಹಾಗಾಗಿ ಪ್ರೀತ್ಸೊರಿಗಾಗಿ ಪ್ರೀತಿಯಿಂದ ಒಂದೆರಡು ಮಾತ್ಗಳು. ಹೃದಯ ತೆರೆದು ಕೇಳಿಸ್ಕೊಳ್ಳಿ.....

1. ಪ್ರಾಮಾಣಿಕವಾಗಿ ಪ್ರೀತಿಸಿ. ಉಸಿರಿರೊವರೆಗು ಅದನ್ನು ಉಳಿಸಿಕೊಳ್ಳಿ. ಇಲ್ಲಾ ಅಂದ್ರೆ ಉಸಿರಾಟದ ತೊಂದರೆಗಳು ಕಾಣಿಸ್ಕೊಳ್ತಾವೆ.

2. ಅವಶ್ಯಕತೆ ಅಥವಾ ಅನಿವಾರ್ಯತೆಗಾಗಿ  ದಯವಿಟ್ಟು ಪ್ರೀತಿಸ್ಬೇಡಿ ಅಥವಾ ಅವಶ್ಯಕತೆ-ಅನಿವಾರ್ಯತೆಯನ್ನು ಪ್ರೀತಿಯಾಗಿ ಮಾರ್ಪಡಿಸಿಕೊಳ್ಳಬೇಡಿ. ಹಾಗಾದರೆ ಅದು ನೀವು ನಿಮಗೆ ಪರಸ್ಪರ ಮಾಡಿಕೊಳ್ಳುವ ಮೋಸ.

3.ಪ್ರೀತಿ ಎನ್ನುವುದು ಜಾತಿ-ಮತ, ಚೆಲುವು-ನಲಿವು,ಭಾಷೆ-ಪ್ರ್ರಾಂತ್ಯ-ಪ್ರಬುದ್ದತೆ-ಬುದ್ದಿವಂತಿಕೆ-ಸೌಂದರ್ಯ-ಸಿರಿತನ ಇವೆಲ್ಲದರಾಚೆಗಿನ ಮಧುರ-ಅಮರ ಭಾವನೆ. ಯಾರೂ ಯೋಚಿಸಿ ಪ್ರೀತಿಸುವುದಕ್ಕಾಗೋದಿಲ್ಲ. ಆದ್ರೆ ಪೀತಿಸಿದ ಮೇಲೆ ಇವೆಲ್ಲದರ ಬಗ್ಗೆ ಖಂಡಿತ ಯೋಚಿಸ್ಭೇಡಿ. ನೆಮ್ಮದಿ ಹಾಳಾಗುತ್ತದೆ.

4.ಪ್ರೀತಿಗೆ ಎಲ್ಲಾ ಅಡೆತಡೆಗಳನ್ನು ಮೀರುವ ಶಕ್ತಿ ಇರುತ್ತದೆ. ಜೊತೆಗೆ ಆರ್ಥಿಕ ಸ್ವಾತಂತ್ರ ಗಳಿಸ್ಕೊಳ್ಳಿ. ಆಗ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಶಕ್ತರಾಗ್ತೀರಿ.ಆದ್ರೆ ಅಡೆ ತಡೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ನಿಮ್ಮ ಪ್ರೀತಿಯನ್ನು ಬಲಿಕೊಡಬೇಡಿ.

5.ಕಾಮವಿಲ್ಲದ ಪ್ರೇಮ ಪರಿಪೂರ್ಣವಾಗಲಾರದು ಎಂಬ ಮಾತಿದೆ. ಆದರೆ ಒದುವ ದಿನಗಳಲ್ಲಿ ಅದಕ್ಕೆ ಆಸ್ಪದ ಕೊಡಬೇಡಿ.

6.ಪ್ರೀತಿ ಯಾರನ್ನು ಮುಳುಗಲು ಬಿಡುವುದಿಲ್ಲ. ಪಾರ್ಕು,ಗಿಪ್ಟು,ಕಾಡುಹರಟೆ,ಹೊಟೆಲ್ಲು,ಪಿಕ್ನಿಕ್,ಕಿಕ್ಕು ಗಳೆಂಬ ಮಾಯೆಗಳಲ್ಲಿ ಮುಳುಗಿಹೋಗಬೇಡಿ. ಎಲ್ಲವೂ ಹಿತಮಿತವಾಗಿದ್ದರೆ ಪ್ರೀತಿ ನಿಮಗೆ ಹಿತನೀಡುತ್ತದೆ.

7. ತಮ್ಮ ಪ್ರೀತಿಪಾತ್ರರ ಬಗ್ಗೆ ಅತಿಯಾದ ಪೊಸೆಸಿವ್ ಆಗಿಬಿಡಬೇಡಿ. ಅದು ಬಂಧನವಾಗಿ ನಿಮ್ಮ ಭಾಂದವ್ಯಕ್ಕೆ ಕುತ್ತು ಬರಬಹುದು.

8. ಪ್ರೀತಿ ಅನ್ನೋದು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಆದ್ರೆ ಬಂದ್ಮೇಲೆ ನಿಮ್ಮ ಜವಾಬ್ದಾರಿಗಳನ್ನ/ಕರ್ತವ್ಯಗಳನ್ನ ನಿರ್ಲಕ್ಷಿಸಬೇಡಿ.

9. ನೀವು ನಿಜಕ್ಕೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ , ಪ್ರೀತಿಯ ಭಾವ ಗಟ್ಟಿಯಾಗಿದ್ದರೆ ಬಿಗುಮಾನ ಬಿಟ್ಟು ಅವರಿಗೆ ಹೇಳಿಬಿಡಿ. ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡಿ. ಇಲ್ಲಾಂದ್ರೆ 'ಪ್ರಯಾಣದ ನಂತರ ಟಿಕೇಟು' ಖರೀದಿಸಿದ ಹಾಗೆ ಆಗುತ್ತೆ.

10.ಪ್ರೀತಿಸಿದ ಮೇಲೆ ನಂಬಿಕೆ,ಧ್ಯರ್ಯ,ಸಹನೆಗಳನ್ನು ಸದಾ ನಿಮ್ಮೊಟ್ಟಿಗೆ ಇಟ್ಟುಕೊಳ್ಳಿ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಇವು ಬಹಳ ಮುಖ್ಯ.

11. ಒಂದು ವೇಳೆ ನಿಮ್ಮನ್ನು ಪ್ರೀತಿಸಿದ ಜೀವ ಬಿಟ್ಟುಹೋದರೆ ನೀವು ಜೀವ ಬಿಡಬೇಡಿ. 'ನಮ್ಮ ಬದುಕಿನಲ್ಲಿ ಅವರ ಪಾತ್ರ ಅಸ್ಟೆ' ಅಂತಾ ಅಂದುಕೊಳ್ಳಿ.ವಿಧಿಯನ್ನು ಹಳಿಯುತ್ತಾ ನೀವು ಕಳೇಬರ ವಾಗಬೇಡಿ. 'ಭಗ್ನ ಪ್ರೇಮವು ಸಾಧನೆಗೆ  ಸ್ಪೂರ್ತಿಯಾಗಬಲ್ಲದು'.

12.ಪ್ರೀತಿಸಿದ ಹುಡುಗ/ಗಿ ಮೋಸ ಮಾಡಿದ ತಕ್ಷಣ ಅವರನ್ನು ದ್ವೇಷಿಸಬೇಡಿ. ಅವರ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಮಾಡಬೇಡಿ. ನೀವು ನಿಜವಾಗಿ ಪ್ರೀತಿಸಿದ್ದೇ ಆದರೆ 'ಪ್ರೀತಿಸಿದ ಜೀವ ಚೆನ್ನಾಗಿರಲಿ' ಎಂದು ಹಾರೈಸಿ ನಿಮ್ಮ ದೊಡ್ಡತನ ಮೆರೆಯಿರಿ. ಕಹಿಯೋ, ಸಿಹಿಯೋ ಅಧ್ಯಾಯವನ್ನು ನಿಮ್ಮ ಬದುಕಿನ ಪುಸ್ತಕದಿಂದ ಡಿಲೀಟ್ ಮಾಡಿ ಮಸ್ತಕವನ್ನು ಸುಸ್ತಿತಿಯಲ್ಲಿಟ್ಟುಕೊಳ್ಳಿ.

13.ಪ್ರೀತಿಯ ಹೆಸರಲ್ಲಿ ಒಂದು ಮುಗ್ಧ ನಂಬಿಕೆಯನ್ನು ಬಲಿಕೊಡಬೇಡಿ.ಪ್ರೀತಿಯನ್ನು ಗೌರವಿಸಿ,ಅಕ್ಕರೆಯಿಂದ ಪೋಷಿಸಿ.
14. ಬದುಕಿನಲ್ಲಿ ಕೆಲವು 'ಯಾಕೆ' ಗಳಿಗೆ ಉತ್ತರ ಸಿಗೋದಿಲ್ಲ. ಉತ್ತರ ಹುಡುಕುವ ಪ್ರಯತ್ನ ಮಾಡದೆ, ಬದುಕು ಬಂದಂತೆ ಸ್ವೀಕರಿಸಬೇಕು. ಪ್ರೀತಿಸಿದ ಮೇಲೆ ಪ್ರತೀ ಕ್ಷಣದ ಬದಲಾವಣೆಗಳನ್ನು ಎದುರಿಸಲು ಸಿದ್ದರಾಗಿರಬೇಕು.

ಸದ್ಯಕ್ಕೆ ಸಾಕು ಇಸ್ಟು. ನಿಮ್ಮಗಳ ಪ್ರೀತಿಗೆ ನಮ್ಮ ಶುಭಾಷಯಗಳು. ಪ್ರೀತಿಯ ಬಗೆಗೆ ಮತ್ತಸ್ಟು ಟಿಪ್ಸ್ ಬೇಕೆಂದ್ರೆ ಪ್ರೀತಿಯಂದ ಪತ್ರ ಬರೆಯಿರಿ. ಪ್ರೀತಿಯ ಟ್ರಿಪ್ ಗೆ ನಿಮ್ಮನ್ನ ನಮ್ಮ ಅಕ್ಕರೆಯ ಲೇಖನಗಳ ಮೂಲಕ ಕರ್ಕೊಂಡ್ ಹೋಗ್ತೀವಿ.ಅಲ್ಲಿಯವರೆಗೆ ನಿಮ್ಮ ಪ್ರೀತಿಯಿರಲಿ..


ಎಲ್ಲರಿಗೂ ಪ್ರೀತಿ ದಿನದ ಶುಭಾಷಯಗಳು.


ಲಿಂಗೇಶ್ ಹುಣಸೂರು

Saturday, March 22, 2014

30 ನೇ ವರ್ಷದ ಹೊಸ ಮುಂಜಾವಿಗೆ ನನ್ನ ಬದುಕಿನ ಪುಟಗಳು...

ಡಿಯರ್ ಪ್ರೆಂಡ್ಸ್ ನಮಸ್ತೆ,

ಮಾರ್ಚ್ 24,  ಸಾವಿರದ ಎಂಬತೈದನೆ ಯ ಇಸವಿ(1985). ಅಂದು 23 ಕ್ಕೆ ಯುಗಾದಿ ಹಬ್ಬ ಬಂದಿತ್ತು. ಮಾರನೆಯ ದಿನ ಸಾಮಾನ್ಯವಾಗಿ ವಿಶೇಷ ಅಡುಗೆ ಮಾಡುತ್ತಾರೆ. ಆ ವರ್ಶದ ಆ ದಿನ ನಮ್ಮ ಮನೆಯಲ್ಲಿ ವಿಶೇಷ ಸಂಭ್ರಮ. ಆ ವಿಶೇಷವೆ    " ನಾನು". ಲಿಂಗೇಶ್ ಅಂತ ಅಪ್ಪ ಇಟ್ಟ ಹೆಸರು ಮತ್ತು "ಚುಕ್ಕಿ...ಬಿಂದುವಿನಿಂದ ಅನಂತದೆಡೆಗೆ..." ಅಂತಾ ನನಗೆ ನಾನೆ ಇಟ್ಟುಕೊಂಡ ಹೆಸರು.

2014 ಮಾರ್ಚ್ ಮಾಸಕ್ಕೆ ಸರಿಯಾಗಿ ಬರೊಬ್ಬರಿ ನನ್ನ ಬದುಕಿನ 29 ವರ್ಶಗಳು ಕಳೆದುಹೋಗುತ್ತವೆ . ಮುವತ್ತರ ಹೊಸ ಸೂರ್ಯ ಮಾರ್ಚ್24 ಕ್ಕೆ ಉದಯಿಸುತ್ತಾನೆ, ಕಳೆದ ಬದುಕಿನ ಹಗಲು-ರಾತ್ರಿಗಳ ನೆನಪಿಸಿಕೊಂಡು, ಹೊಸ  ದಿನ, ಹೊಸ ಭಾವ, ಹೊಸಕನಸು, ಹೊಸ ಕನವರಿಕೆಗಳಿಗೆ ಬದುಕನ್ನ ತೆರೆದುಕೊಳ್ಳಲು ಮೌನವಾಗಿ ನಾನು ಆ ದಿನವನ್ನು ಬರಮಾಡಿಕೊಳ್ಳುತ್ತೇನೆ ಮತ್ತು ನೀವು ಕರೆ ಮಾಡಿ ಹೇಳುತ್ತೀರಿ, ಸಂದೇಶ ಕಳುಹಿಸುತ್ತೀರಿ. "ಹುಟ್ಟು ಹಬ್ಬದ ಶುಭಾಷಯಗಳು ಗೆಳೆಯ" ಮತ್ತು ನಾನು ತಿಳಿಸುತ್ತೇನೆ , ನನ್ನ ಮೌನ ಕೃತಘ್ಜ್ನತೆಗಳು ಎಲ್ಲರಿಗೂ , ಎಲ್ಲವಕ್ಕೂ ..., ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.

ಇನ್ನೇನೊ  ಕೆಲವೇ ದಿನಗಳಲ್ಲಿ ಯುಗಾದಿ ಅರಸಿ ಬರುತ್ತಿದೆ ನಮ್ಮಗಳ ನಲಿವಿಗೆ...


ಯುಗ ಯುಗಗಳು ಕಳೆದರು ಯುಗಾದಿ ಮರಳಿ ಬರುತಿದೆ, ಹೊಸ ವರ್ಷ, ಹೊಸ ಸಂತಸ, ಉಲ್ಲಾಸ, ಉತ್ಸಾಹ, ಹೊಸ ಕನಸು, ಹೊಸ ವಸಂತ. ಎಲ್ಲವು ಹೊಸತು, ನಿತ್ಯ ನೂತನ ವಿನೂತನ ಸಂತಸದ ಹೂರಣ, ಜೊತೆಗೆ ನೋವು- ನಲಿವುಗಳ ಸಮ್ಮಿಲನ, ಬೇವು - ಬೆಲ್ಲದ ಸವಿಗಾನ.



ಆತ್ಮಿಯರೇ, ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.



ಜೊತೆಗೆ ಯುಗಾದಿಯ ಬೆನ್ನಲ್ಲೇ ನನ್ನ ಬದುಕಿನ ಹೊಸ ವರ್ಷ ಪ್ರಾರಂಭ . ಮಾರ್ಚ್ ೨೪ ರಂದು  ನನ್ನ ಬದುಕಿನ ಮತ್ತೊಂದು ಹೊಸ ವಸಂತ ನನ್ನ ಬದುಕಿನ ಅಂಗಳಕ್ಕೆ ಬಂದು ನಿಂತಿದೆ.

ದಿನಗಳು, ವರ್ಷಗಳು ಅದೆಷ್ಟು ಬೇಗ ಸರಿದುಹೊಗುತ್ತಿವೆ ಅನ್ನಿಸುತ್ತಿದೆ.

ನನಗೀಗ ಬರೋಬ್ಬರಿ ೨೯ ವರ್ಷಗಳು, ಜೊತೆಗೆ ಒಬ್ಬಳು ಮಡದಿ, ಮುದ್ದಾದ ಈರ್ವರು ಮಕ್ಕಳು, ವೃತ್ತಿಗೆ ಅಂಚೆ ಇಲಾಖೆ, ಪ್ರವೃತ್ತಿಗೆ ಸಾಹಿತ್ಯ, ಸಮಾಜಮುಖಿಯಾದ ಕೆಲವೊಂದಿಷ್ಟು ಕೆಲಸಗಳು, ಅಪ್ಪ , ಅಮ್ಮ, ತಮ್ಮ, ಗೆಳೆತನಕ್ಕೆ ನಿಮ್ಮಂತ ಸಾವಿರಾರು ಸಹೃದಯ ಹೃದಯಗಳು.



 ಬದುಕು ಧನ್ಯ. ಜೊತಗೆ ಅನಂತದೆಡೆಗೆ ನನ್ನ ಹೆಜ್ಜೆಗಳು.....


ಈ ಸಂದರ್ಭದಲ್ಲಿ ನನ್ನ ಇಷ್ಟು ವರ್ಷದ ಬದುಕಿನ ಅಂಗಳಕ್ಕೆ ಕಾಲಿರಿಸಿದ , ನನ್ನ ಬದುಕಿನ ಹಾದಿಯಲ್ಲಿ ಎದುರಾದ ಎಲ್ಲಾ ಸಹೃದಯರನ್ನು, ಘಟನೆಗಳನ್ನು ನೆನೆಸಿಕೊಳ್ಳುವುದು ನನ್ನ ಕರ್ತವ್ಯ.

ಎಲ್ಲರಿಗೂ , ಎಲ್ಲವಕ್ಕೂ ನನ್ನ ಕೃತಜ್ಞತೆಗಳು, ಸಿಹಿ ನೆನಕೆಗಳು, ಅನಂತ ಧನ್ಯವಾದಗಳು.

ಮುಂದಿನ ದಿನಗಳಲ್ಲೂ ನನ್ನ ಕನಸುಗಳೊಟ್ಟಿಗೆ ನೀವಿರುತ್ತೀರೆಂಬ ಆಶಯದೊಂದಿಗೆ ನಿಮ್ಮೆಲ್ಲರಿಗೂ ಹೊಸ ವಸಂತದ ಶುಭಾಶಯಗಳು.

ಕನಸುಗಳೋಟ್ಟಿಗೆ ಕೈ ಜೋಡಿಸಿ ,
       ತಾರೆಗಳನ್ನು ಎಟುಕಿಸೋಣ....................

ನಿಮ್ಮವ ,ನಿಮ್ಮಲ್ಲೊಬ್ಬ,
--
* ಚುಕ್ಕಿ*
ಬಿಂದುವಿನಿಂದ ಅನಂತದೆಡೆಗೆ..........
(ಕನ್ನಡ ಉಸಿರಾಗಲಿ..ಕರುನಾಡು ಹಸಿರಾಗಲಿ)

Thursday, February 13, 2014

ಪ್ರೀತಿ.....ಕನಸು.....ಕನವರಿಕೆ....ಮತ್ತು ಇನ್ನು ಹಲವು........!!!

ಆತ್ಮೀಯ ಪ್ರೀತಿ ಪಾತ್ರ ಎಲ್ಲಾ  ಗೆಳೆಯರ ಬಳಗಕ್ಕೆ ಪ್ರೀತಿ ದಿನದ ಶುಭಾಷಯಗಳು.


ನಾನು ಪ್ರೀತಿಸಿದ್ದೆ................!!!

ಎಂದು ನನ್ನ ಮಡದಿಯ ಮುಂದೆ ಆತ್ಮನಿವೇದನೆ ಮಾಡಿಕೊಳ್ಳುವಾಗ ನನ್ನಲ್ಲಿ ದೀರ್ಘ ನಿಟ್ಟುಸಿರು. ಎಲ್ಲವನ್ನು ಕೇಳಿದೆ ಆಕೆ ಹೇಳಿದ್ದು. " ರೀ ನೀವು ನನಗೆ ೬ ವರ್ಷದ ಕೆಳಗೆ ಸಿಗಬೇಕಿತ್ತು. ನೀವು ಪ್ರೀತಿಸುತ್ತಿದ್ದ ಆ ಹುಡುಗಿ ಗ ಜಾಗದಲ್ಲಿ ನಾನಿರಬೇಕಿತ್ತು. ಆದರೆ ಆಕೆಯ ಹಾಗೆ ನಿಮ್ಮನ್ನ ನಾನು ಬಿಟ್ಟುಹೋಗ್ತಿರಲಿಲ್ಲ. ಎನೇ ಬಂದರು ಎದುರಿಸಿ ನಿಮ್ಮನ್ನೆ ಮದುವೆ ಆಗುತ್ತಿದ್ದೆ". ಅವಳ ಮಾತು ಕೇಳುತ್ತಿದ್ದ ಹಾಗೆ ನನ್ನ ಕಣ್ಣಂಚುಗಳು ಒದ್ದೆಯಾದವು. ಆಕೆಯ ಹಣೆಗೊಂದು ಹೂ ಮುತ್ತು ಕೋಟ್ಟೆ. ಕಣ್ಣೀರು ಕೆನ್ನೆಗಿಳಿಯುತ್ತಿತ್ತು. ಹರೆಯದ ದಿವ್ಯವಾದ ನೆನಪುಗಳು ಮೌನದ ಮೊರೆ ಹೋಗಿದ್ದವು. ಕಣ್ಣೆದುರಿಗಿನ ಪ್ರೀತಿ ಧನ್ಯತೆ ಮೆರೆದಿತ್ತು.


ಮುದ್ದಿನ ಮಡದಿಯ ವಿಶಾಲ ಮನೋಭಾವ, ಪರಸ್ಪರ ಅರ್ಥಮಾಡಿಕೊಳ್ಳುವ, ಆಗಿ ಹೋದ ಘಟನೆಗಳನ್ನು ಕ್ಷಮಿಸುವ ಉದಾರ ಮನಸ್ಸು, ಇರುವುದನ್ನು ಇರುವ ಹಾಗೆ ಒಪ್ಪಿಕೋಳ್ಳುವ ಹೃದಯ ವೈಶಾಲ್ಯ, ಮಗುವಿನ ಮುಗ್ಢತೆ, ಪ್ರೀತಿಯಲ್ಲಿನ ನಂಬಿಕೆ ಇವೆಲ್ಲವು ಗಳು ನಮ್ಮ ಒಲವನ್ನು ಗಟ್ಟಿಗೊಳಿಸಿವೆ. ನಮ್ಮ ಬದುಕಿನಲ್ಲಿ ಧನ್ಯತೆ ಮೂಡಿಸಿದೆ.


ಹರೆಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿ ಪ್ರೀತಿಯ ಸಿಹಿ ಗಾಳಿ ಬೀಸಿಯೆ ಇರುತ್ತದೆ. ಅದು ಹೃದಯದಿಂದ ಮೊಡಿದ್ದೆ ಆಗಿದ್ದರೆ ಸುಂದರ ಬದುಕಿಗೆ ಮುನ್ನುಡಿಯಾಗುತ್ತದೆ. ಕೆಲವು ವೇಳೆ ಇನ್ಪ್ಯಾಚುಯೇಶನ್, ಜಾತಿಯ ಒಳಸುಳಿ, ಪೋಷಕರ ಮೇಲಿನ ವ್ಯಾಮೋಹ , ನಮ್ಮಗಳ ಅಹಂಕಾರ ಇತ್ಯಾದಿ ಕಾರಣಗಳಿಗೆ ಬಿರುಗಾಳಿಯಾಗಿ ಪರಿವರ್ತನೆಯಾಗಿಬಿಡುತ್ತದೆ.

ನನ್ನ ಬದುಕಿನಲ್ಲಿ ಪ್ರೀತಿಯ ವಿವಿಧ ಮಜಲುಗಳನ್ನು ಅನುಭವಿಸಿದ್ದೇನೆ. ಹಲವು ಗೆಳೆಯರ ಬದುಕಿನ ಪ್ರೀತಿ ಚಿತ್ರಣಗಳನ್ನು ಕಣ್ಣಾರೆ ಕಂಡಿದ್ದೇನೆ. ಇವೆಲ್ಲದರ ಆಸರೆಯಿಂದಲೆ ಒಂದು ಕಾದಂಬರಿ ಬರೆಯಹೊರಟಿದ್ದೇನೆ. ಅದುವೇ " ಬಿಟ್ಟುಹೋದವಳಿಗೊಂದು ಥ್ಯಾಂಕ್ಸ್ ".  ಅವಳು ಬಿಟ್ಟು ಹೋಗಿದ್ದರಿಂಗಲೇ ನನಗೆ ನನ್ನ ಬದುಕಿನ ಸ್ಪೂರ್ಥಿಸೆಲೆ, ಜೀವ ಸಖಿ ಮಡದಿ ಲಕ್ಶ್ಮಿ ಸಿಕ್ಕಿದ್ದು. ಅದು ಕೂಡ ಪ್ರೀತಿಯಿಂದಲೆ ಅದಂತದ್ದು. ಬಹಶ: ಎಲ್ಲಾ ಪ್ರೀತಿಸುವ ಹುಡುಗಿ/ಹುಡುಗರು ಬಿಟ್ಟು ಹೋಗುವಾಗ " ನನಗಿಂದ ಒಳ್ಳೆಯ ಹುಡುಗ/ಹುಡುಗಿ ಸಿಗುತ್ತಾರೆ, ನನ್ನನ್ನು ಮರೆತುಬಿಡು " ಅಂತಲೇ ವಿಧಾಯದ ಬೀಳ್ಕ್ಕೊಡುಗೆ ಮಾತುಗಳನ್ನಾಡುತ್ತಾರೆ. ಬಹುಷ: ಆ ಹಾರೈಕೆ ನನ್ನ ಬದುಕಿನಲ್ಲಿ ನಿಜವಾಗಿದೆ. ಅದಕ್ಕೆ ಅವಳಿಗೆ ಥ್ಯಾಂಕ್ಸ್.


ವಿಪರ್ಯಾಸ ಎಂದರೆ ಪ್ರೀತಿಸುತ್ತಿದ್ದ ದಿನಗಳಲ್ಲಿ ಇದ್ದ ಇಲ್ಲಾ ಪಾತ್ರಗಳು ಬೆಂಗಳೂರಿನಲ್ಲಿಯೆ ನೆಲೆಸಿವೆ. ಪ್ರೀತಿಸಿದ್ದ ಹುಡುಗಿಗೆ ಮಧುವೆಯೂ ಆಗಿದೆ. ಮಕ್ಕಳೂ ಕೂಡ. ಆದರೆ ಆಕೆ ತಾನು ಪ್ರೀತಿಸಿದ್ದ ಹುಡುಗನನ್ನೆ ಅವಳ ಮಧುವೆಗೆ ಕರೆಯಲಿಲ್ಲ. ನಾನು ಕೂಡ ಅವಳು ಮಧುವೆಯಾದ ಕೆಲವೆ ದಿನಗಳಲ್ಲಿ ಸ್ಪರ್ಧೆಗೆ ಬಿದ್ದವನಂತೆ ಪ್ರೀತಿಸಿಯೆ ಮಧುವೆಯಾದೆ. ಅದು ಕೆಲವೇ ಕ್ಷಣಗಳ ಪ್ರೀತಿ, ಕೆಲವೆ ದಿನಗಳಲ್ಲಿ ಸಿಂಧು ವಾಯಿತು. ಈಗ ನನಗೆ ಇಬ್ಬರು ಮಕ್ಕಳು. ಸುಂದರ ಸಂಸಾರ. ಆದರೆ ನೆನಪುಗಳು ಸಾಗರ.


ಇನ್ನೋ ಹೇಳುವ ಭಾವಗಳು , ಆಡದ ಮಾತುಗಳು ಬಹಳಸ್ಟಿವೆ. ಬಟ್ ನಿಮಗು ಕೆಲವು ಸುಂದರ ನೆನಪುಗಳಿವೆ.ಪ್ರೀತಿಯ ಒಡನಾಟವಿದೆ. ಅವನ್ನು ಭಾವಿಸಿಕೊಳ್ಳಿ. ಮತ್ತೆ ಸಿಗುವ.

ನಿಮ್ಮ ಪ್ರೀತಿ ನಿಮ್ಮನ್ನು ಸದಾ ಸಂತಸದಿಂದಿರಿಸಲಿ.
ನಿಮ್ಮ ಒಲವು ನಗುವ ಪ್ರತಿ ದಿನವು ಪ್ರೀತಿ ದಿನವಾಗಲಿ.
ಸುಂದರ ಕ್ಷಣಗಳು ನಿಮ್ಮ ಬದುಕಿನಲ್ಲಿ ಸದಾ ತುಂಬಿರಲಿ.

ನಿಮ್ಮವ...

ಚುಕ್ಕಿ.....
ಬಿಂದುವಿನಿಂದ ಅನಂತದೆಡೆಗೆ......


Wednesday, February 5, 2014

ಒಲವಿನ ಯಾತ್ರೆಗೆ ಒಪ್ಪಂದವಾಗಿ ಐದು ವರ್ಷಗಳು.....



ಆತ್ಮಿಯರೆ,
ಬ್ರಹ್ಮಚರ್ಯದಿಂದ ಗೃಹಸ್ಠಾಶ್ರಮಕ್ಕೆ ಕಾಲಿರಿಸಲು, ಹೊಸಬದುಕಿಗೆ ಅಣಿಯಾಗಲು "ಒಪ್ಪಂದ ಶಾಸ್ತ್ರ" ಮಾಡಿಕೊಂಡು ಇಂದಿಗೆ ೫ ವರ್ಷಗಳು. ಈ ಐದು ವರ್ಷಗಳಲ್ಲಿ ಪ್ರಾಮಾಣಿಕ ವಾಗಿ ನನ್ನ ಮಡದಿ/ಮನದನ್ನೆ "ಲಕ್ಷ್ಮಿ" ಯನ್ನು ಪ್ರೀತಿಸಿದ್ದೇನೆ. ಸುಗುಣಶೀಲೆ ನನ್ನವಳು. ಮಲ್ಲಿಗೆ ಹೂವಿನ ಮನಸಿನಂತವಳು. ಎಲ್ಲಿ ಅತಿಯಾದ ಒಲವಿರುತ್ತದೆಯೋ ಅಲ್ಲಿ ಮುನಿಸು/ಕೋಪ/ಸಣ್ಣ ಜಗಳ ಇದ್ದೇ ಇರುತ್ತದೆ. ಅವೆಲ್ಲವನ್ನು ಮೀರಿ ಪ್ರೀತಿ ನಮ್ಮ ಕೈ ಹಿಡಿದು ಈ ೫ ವರ್ಷಗಳು  ನಡೆಸಿದೆ. ಮುಂದೆಯೂ ಕೂಡ. ಜೊತೆಗೆ ಮಗ ಹಿಮಘನ ತೇಜಸ್ಸ್ ಮತ್ತು ಇನ್ನೂ ಹೆಸರಿಡದ ನನ್ನ ಎರಡನೆ ಕನಸು/ಹಸುಗೂಸು, ಚಂದದ ಬಂಧು ಬಳಗ, ಅಪಾರ ಮಿತ್ರ ವರ್ಗ, ಸಾಹಿತ್ಯ ಪ್ರೀತಿ ಇವೆಲ್ಲದರ ಜೊತೆಗೆ ನನ್ನ ಬದುಕಿನ ರಥ ಮುಂದೆ ಸಾಗುತ್ತಿದೆ.


ಅಂದು ನನ್ನ ಬದುಕಿನ ಅಂಗಳಕ್ಕೆಕಾಲಿರಿಸಿದ ಹುಡುಗೆ, ಇಂದು ನನ್ನ ಮನೆ-ಮನದ ಬೆಳಕಾಗಿ, ಬದುಕನ್ನು ಸುಂದರಗೋಳಿಸಿದ್ದಾಳೆ. ನನ್ನ ಬದುಕು ಆಕೆಯಿಂದ ಪರಿಪೂರ್ಣ.

ನನ್ನ ಕನಸುಗಳೆಲ್ಲಾ ಕೈಗೂಡುವ ಯಾತ್ರೆಯಲಿ ಸಿದ್ದಿಸುವ ಧನ್ಯತೆಯೂ ನನ್ನಾಕೆ.

ನಮ್ಮ ಒಲವಿಗೆ ನಿಮ್ಮ ಆಶಿರ್ವಾದ ಶ್ರೀರಕ್ಷೆಯಿರಲಿ ಮತ್ತು ನಿಮ್ಮಗಳ ಪ್ರೀತಿಯಿರಲಿ.

ನಿಮ್ಮವ

ಚುಕ್ಕಿ...........

Tuesday, December 31, 2013

ಹೊಸ ವರ್ಷದ ಶುಭಾಷಯಗಳು

ಡಿಯರೆಸ್ಟ್/ಆತ್ಮೀಯ/ಅಭಿಮಾನದ /ಅಕ್ಕರೆಯ ಗೆಳೆಯರೆ, ತಮ್ಮೆಲ್ಲರಿಗು ಹೊಸ ವರ್ಷದ ಶುಭಾಷಯಗಳು.

ತಮ್ಮೆಲ್ಲರ ಬದುಕಿನಲ್ಲಿ ಸಂತಸ,ಸಮೃದ್ದಿ,ಸೌಖ್ಯ,ನೆಮ್ಮದಿ, ಅಭಿವೃದ್ದಿ ನೆಲೆಯೂರಲಿ. 
ಹೊಸ ಕನಸುಗಳು ಅರಳಲಿ.
ಗೆಳೆತನ ಚಿಗುರೊಡೆಯಲಿ.
ಗೆಲುವು ನಿಮಗೊಲಿಯಲಿ.
ನೀವು ಇಡುವ ಪ್ರತಿ ಹೆಜ್ಜೆಯೂ ಸಾಧನೆಯಾಗಲಿ.

ಹೀಗೆ ಪ್ರತಿ ಕ್ಷಣವೂ ಹೊಸ ವರ್ಷದ ಹೊಸ ದಿನಗಳಲ್ಲಿ ನಿಮಗಾಗಿ ಪ್ರಾರ್ಥಿಸುತ್ತೇನೆ.


ಅಪಾರ ಪ್ರೀತಿಯಿಂದ ನಿಮ್ಮವ,

ಲಿಂಗೇಶ್ ಹುಣಸೂರು (ಚುಕ್ಕಿ)
ಬಿಂದುವಿನಿಂದ ಅನಂತದೆಡೆಗೆ..............